Skip to main content

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರು ಶ್ರೇಷ್ಠರು ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಬೇಡ.
ಚರ್ಚೆ ವಸ್ತುನಿಷ್ಠವಾಗಿರಲಿ , ಯಾವುದೇ ವ್ಯಕಿಗತ ನಿಂದನೆಗಳು ಬೇಡ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 11/22/2009 - 11:14

nimma prashneyalle samasye ide... ahimsavaadigaLu kooDa krantikaarigale.. ahimsa krantikaari annabodu... himsaavaadigalu ahimsavaadigalu andre sookta.. ibbara paatranu gananiyavaagide..

Ullas Hindustani ಭಾನು, 11/22/2009 - 12:11

kshamisabEku anamikare nimma maathige nanna virOdhavide. naanilli kEliruvudu Bhala Gangadhar Thilak, Bhagath singh rantha kranthikarigala bagge. Bhagath singh bombannu yava british adhikariya melu yeseyallilla. avanu bayasiddu Himseyannalla , Kranthiyallu. hagantha avanannu ahimsavadi yendu kareyalaguvudilla. Bharatadalli himsavadigalu iralilla yendalla. naanilli anthavara bagge illi kelilla aste.

ಎಚ್.ಎಸ್. ಪ್ರಭಾಕರ ಸೋಮ, 11/23/2009 - 00:39

ಹೌದು! ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರೂ ಶ್ರೇಷ್ಠರೇ ನಿಜ. ಆದರೆ ಅಹಿಂಸಾ ವಾದಿಗಳ ಹಾಗೂ ಕ್ರಾಂತಿಕಾರಿಗಳ ಪಾತ್ರವೆಷ್ಟು- ಎಂದು ಕೇಳಿದಾಗ ಅದನ್ನು ವಾಚ್ಯಾರ್ಥದಲ್ಲಿ ತೆಗೆದುಕೊಂಡಾಗ ಒಬ್ಬರದು ಸಣ್ಣ ಪಾತ್ರ; ಮತ್ತೊಬ್ಬರದು ದೊಡ್ಡ ಪಾತ್ರ; ಮಗದೊಬ್ಬರದು ಮಧ್ಯಮ ಪಾತ್ರ; ಇನ್ನೊಬ್ಬರದು ಕೇವಲ ಬಂದು ಹೋಗುವ ಪಾತ್ರ- ಹೀಗೆಲ್ಲ ಅರ್ಥ ಬರುವ ಸಾಧ್ಯತೆಯಿದೆ! ಹೀಗಾಗಿ ನಾನು ಇದನ್ನು ಲಕ್ಷಣಾರ್ಥದಲ್ಲಿ ತೆಗೆದುಕೊಳ್ಳಲು ಬಯಸುತ್ತೇನೆ.
ಅಹಿಂಸಾತ್ಮಕ ಹೋರಾಟದಿಂದಲೂ ಒಂದು ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಡಬಹುದು ಎಂದು ಇಡೀ ಜಗತ್ತಿಗೆ ಮೊದಲು ತೋರಿಸಿಕೊಟ್ಟದ್ದು ಭಾರತ ಮಾತ್ರ! ಅದಕ್ಕೂ ಮುನ್ನ ಜಗತ್ತಿನಲ್ಲಿ ಸ್ವಾತಂತ್ರ್ಯ ಗಳಿಸಿದ ಎಲ್ಲ ದೇಶಗಳೂ ಅಸ್ತ್ರಕ್ಕೆ ಪ್ರತಿ ಅಸ್ತ್ರ ಹೂಡಿಯೇ (ಆಥವಾ ರಕ್ತ ಕ್ರಾಂತಿಯ ಮೂಲಕವೂ) ಸ್ವಾತಂತ್ರ್ಯ ಗಳಿಸಿಕೊಂಡವು. ಅಂದರೆ ಅದುವರೆಗೂ ಕೇವಲ ಧರ್ಮ, ಮಾನವಿಕ ಹಾಗೂ ಅಧ್ಯಾತ್ಮಗಳ ಚೌಕಟ್ಟಿನಲ್ಲಿ ಮಾತ್ರ ಇದ್ದ ಅಹಿಂಸೆ ಎಂಬುದನ್ನು ರಾಜಕೀಯವಾಗಿಯೂ ಒಂದು ಅಸ್ತ್ರವಾಗಿ ಬಳಸಿದ ಕೀರ್ತಿ (ಏನೇ ವಿವಾದಗಳಿದ್ದರೂ) ಮಹಾತ್ಮ ಗಾಂಧಿ ಅವರಿಗೆ ಮಾತ್ರ ಸಲ್ಲುತ್ತದೆ. ಏಟಿಗೆ ಎದುರೇಟು ನೀಡುವುದು ಸರ್ವೇ ಸಾಮಾನ್ಯ ಎಂಬ ಸಾಧಾರಣ ನಿಯಮವಿರುವ ಸಂದರ್ಭದಲ್ಲಿ, ಆಗಿನ ಕಾಲಕ್ಕೆ `ಇದೇನಿದು ಅಹಿಂಸಾತ್ಮಕ ಹೋರಾಟ!!? ಎಂದು ಇದು ಆಗ ಬ್ರಿಟೀಷರಿಗೆ ತಡೆದುಕೊಳ್ಳಲಾಗದಷ್ಟು ಆಘಾತಕಾರಿ ಹಾಗೂ ದಿಗ್ಬ್ರಮೆಯ ವಿಷಯವಾಗಿತ್ತು! ಏನು ಮಾಡಬೇಕೆಂದೂ ತೋಚದೆ ಕಂಗಾಲಾಗುವ ಪರಿಸ್ಥಿತಿಗಳಲ್ಲಿ ಅವರು ಜಲಿಯನ್ ವಾಲಾ ಬಾಗ್ ನಂತಹ ಹತ್ಯಾಕಾಂಡಕ್ಕೂ ಕಾರಣರಾದರು. ಆದರೆ ಕೊನೆಗೂ ಗೆದ್ದದ್ದು ಅಹಿಂಸೆ ಎಂಬ ಅಧ್ಯಾತ್ಮಿಕ ಶಕ್ತಿಯೇ! ಹೀಗಾಗಿಯೇ ಇಡೀ ಜಗತ್ತಿನಲ್ಲಿ ಭಾರತಕ್ಕೆ ಇಂದು ವಿಶಿಷ್ಟ ಸ್ಥಾನ ಹಾಗೂ ಗೌರವ ಪ್ರಾಪ್ತವಾಗಿದೆ. (ಪ್ರಸ್ತುತ ಕಾಲ ಘಟ್ಟದಿಂದ ಹೊರಬಂದು) ಈ ದೃಷ್ಟಿಯಿಂದ ನೋಡಿದಾಗ ಅಹಿಂಸಾವಾದಿಗಳ ಪಾತ್ರವೇ ಪ್ರಾಮುಖ್ಯತೆ ಪಡೆಯುತ್ತದೆ.

Ullas Hindustani ಸೋಮ, 11/23/2009 - 14:52

ನನ್ನ ಪ್ರಕಾರ ಭಾರತದ ಸ್ವಾತಂತ್ರ್ಯದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದು ಕ್ರಾಂತಿಕಾರಿಗಳು. ಭಾಲ ಗಂಗಾಧರ್ ತಿಲಕ್ , ಭಗತ್ ಸಿಂಗ್ ಮುಂತಾದವರ ಸ್ವರಾಜ್ಯದ ಕಲ್ಪನೆ, ಸ್ಪೂರ್ತಿ ತುಂಬಿದ ಧೀರತ್ವದ ಮಾತುಗಳು, ಕೆಚ್ಚೆದೆಯ ಬರವಣಿಗೆಗಳು, ಹೋರಾಟಗಳು ದೇಶದ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿತು. ಕ್ರಾಂತಿಕಾರಿಗಳು ಬಯಸಿದ್ದು ಸಂಪೂರ್ಣ ಸ್ವತಂತ್ರ ಭಾರತವನ್ನು. ಭಗತ್ ಸಿಂಗ್ ಸಂಪೂರ್ಣ ಸ್ವಾತಂತ್ರ್ಯದ ಕಹಳೆ ಮೊಳಗಿಸಿದಾಗ ಬ್ರಿಟೀಷ್ ಅಧಿಕಾರಿಗಳೇ ಅಲ್ಲ , ಅಹಿಂಸಾವಾದಿಗಳ ನೇತಾರರಾದ ಸ್ವತಃ ಗಾಂಧೀಜಿಯವರೇ ದಂಗಾಗಿ ಹೋಗಿದ್ದರು. ಏಕೆಂದರೆ ಬಹುಶಃ ಅವರದನ್ನು ಕಲ್ಪಿಸಿಕೊಂಡಿರಲು ಇಲ್ಲವೇನೊ. ನಂತರದ ದಿನಗಳಲ್ಲು ಕೂಡ ಗಾಂಧೀಜಿಯವರ ಹೋರಾಟ ಬ್ರಿಟೀಷರ ಇಬ್ಬಂದಿ ನೀತಿಗಳನ್ನು ಹಾಗು ಕೆಲವೊಂದು ದುಷ್ಟ ಕಾಯ್ದೆಗಳಿಂದ ಭಾರತಿಯರಿಗಾಗುತ್ತಿರುವ ಅನ್ಯಾಯಗಳನ್ನು ವಿರೋಧಿಸುವುದಾಗಿತ್ತೇ ಹೊರತು ಭಾರತಕ್ಕೆ ಸ್ವಾತಂತ್ರ್ಯ ಬೇಕೆಂಬುವುದಾಗಿರಲಿಲ್ಲ. ಕೊನೆವರೆಗು ಸ್ವಾತಂತ್ರ್ಯದ ಕಿಚ್ಚು ಆರದೆ ಜನರ ಮನದಲ್ಲಿ ಉಳಿದುಕೊಳ್ಳಲು ಕಾರಣ ಚಂದ್ರಶೇಖರ್ ಅಜಾದ್ , ಸುಭಾಷ್ ಚಂದ್ರ ಬೋಸ್ ಮುಂತಾದ ಕ್ರಾಂತಿಕಾರಿಗಳಿಂದಲೇ ಹೊರತು ಅಹಿಂಸಾವಾದಿಗಳಿಂದಲ್ಲ.
ಬ್ರಿಟೀಷರ ವಿರುದ್ಧ ಯಾರು ಅತಿಹೆಚ್ಚಿನ ಸಂಖ್ಯೆಯಲ್ಲಿ ಹಾಗು ಬೃಹತ್ ಹೋರಾಟ ನಡೆಸಿದ್ದು ಎಂಬ ಪ್ರಶ್ನೆಗೆ ಮಹಾತ್ಮಗಾಂಧಿ ನೇತ್ರತ್ವದ ಅಂಹಿವಾದಿಗಳು ಎಂಬ ಉತ್ತರ ನೀಡಬಹುದು. ಆದರೆ ಭಾರತದ ಸ್ವಾತಂತ್ರ್ಯಕ್ಕೆ ಅತೀ ಹೆಚ್ಚಿನ ಕೊಡುಗೆ ನೀಡಿದ್ದು ಯಾರೆಂದರೆ ಗಂಡೆದೆಯ ಕ್ರಾಂತಿಕಾರಿಗಳೇ ಹೊರತು ಅಹಿಂಸಾವಾದಿಗಳಲ್ಲ ಎನ್ನುವುದು ನನ್ನ ಅಭಿಪ್ರಾಯ.
ಕೊನೆಯ ಮಾತುಃ ಭಾರತದ ಸ್ವಾತಂತ್ರ್ಯದಲ್ಲಿ ಅಹಿಂಸಾವಾದಿಗಳ ಪಾತ್ರದ ಬಗ್ಗೆ ಕಲ್ಕತ್ತಾ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾದ ಪಿ.ವಿ. ಚಕ್ರಬರ್ತಿಯವರು ಬ್ರಿಟೀಷ್ ಪ್ರಧಾನಿ "ಕ್ಲೆಮೆಂಟ್ ಅಟ್ಲೀ"ಯವರನ್ನು ಪ್ರಶ್ನಿಸಿದಾಗ ಬಂದ ಉತ್ತರ "ಮಿ..ನಿ..ಮ..ಮ್ ".

ಎಚ್.ಎಸ್. ಪ್ರಭಾಕರ ಸೋಮ, 11/23/2009 - 14:54

ಪ್ರಿಯ ಉಲ್ಲಾಸ್, ನಾನು ಜಾಗತಿಕ ದೃಷ್ಟಿಕೋನದಿಂದ ನನ್ನ ಅಭಿಪ್ರಾಯ ಮಂಡಿಸಿದ್ದೇನೆ.
ಎರಡನೆಯದಾಗಿ, ಓರ್ವ ಬ್ರಿಟೀಷ್ ಪ್ರಧಾನಿಯ ಬಾಯಿಂದ ಮಿನಿಮಮ್ ಎಂಬ ಪದವನ್ನಲ್ಲದೆ ಮ್ಯಾಕ್ಸಿಮಮ್ ಎಂಬ ಪದ ನೀರೀಕ್ಷಿಸಲು ಸಾಧ್ಯವಿಲ್ಲ ಅಲ್ಲವೆ? ಅದು ಬಿಡಿ-
ಮೂರನೆಯದಾಗಿ, ಭಾರತದ ಸ್ವಾತಂತ್ರ್ಯಕ್ಕೆ ಅತೀ ಹೆಚ್ಚಿನ ಕೊಡುಗೆ ನೀಡಿದ್ದು ಯಾರೆಂದರೆ ಗಂಡೆದೆಯ ಕ್ರಾಂತಿಕಾರಿಗಳೇ ಹೊರತು ಅಹಿಂಸಾವಾದಿಗಳಲ್ಲ ಎಂಬ ನಿಮ್ಮ ಅಭಿಪ್ರಾಯವನ್ನು ನಾನೂ ಸಹ ಅನುಮೋದಿಸುತ್ತೇನೆ.

Ullas Hindustani ಸೋಮ, 11/23/2009 - 18:20

ನನ್ನ ಅಭಿಪ್ರಾಯವನ್ನು ನೀವು ಒಪ್ಪಿದ್ದಕ್ಕೆ ಧನ್ಯವಾದಗಳು ಸರ್.ಹಾಗೆ ಮತ್ತೊಂದು ಮಾತು "ಓರ್ವ ಬ್ರಿಟೀಷ್ ಪ್ರಧಾನಿಯ ಬಾಯಿಂದ ಮಿನಿಮಮ್ ಎಂಬ ಪದವನ್ನಲ್ಲದೆ ಮ್ಯಾಕ್ಸಿಮಮ್ ಎಂಬ ಪದ ನೀರೀಕ್ಷಿಸಲು ಸಾಧ್ಯವಿಲ್ಲ ಅಲ್ಲವೆ?" ಅಂತ ಹೇಳಿದಿರಿ.
ತಪ್ಪು ತಿಳಿಯಬೇಡಿ ಈ ವಿಚಾರದಲ್ಲಿ ನಾವು ಕ್ಲೆಮೆಂಟ್ ಆಟ್ಲಿಯವರನ್ನು ಮೆಚ್ಚಲೇ ಬೇಕು ಏಕೆಂದರೆ ಅವನು ಕೂಡ ಎಲ್ಲಾ ಬ್ರಿಟೀಷರಂತೆ ಜಾಗತಿಕ ಮಟ್ಟದಲ್ಲಿ ಸಿಗುವ ಗೌರವಕ್ಕಾಗಿ ಅಹಿಂಸಾವಾದಕ್ಕೆ ಸೋತು ಸ್ವಾತಂತ್ರ್ಯ ಬಿಟ್ಟು ಕೊಟ್ಟೆವು ಎಂದು ಸುಳ್ಳು ಹೇಳಬಹುದಾಗಿತ್ತು ಆದರೆ ಅವರು ಉಳಿದವರಂತೆ ಸುಳ್ಳು ಹೇಳಲಿಲ್ಲ ಅನ್ನುವುದೇ ಇಲ್ಲಿ ಗಮನಾರ್ಹವಾದ ಸಂಗತಿ.

ಎಚ್.ಎಸ್. ಪ್ರಭಾಕರ ಸೋಮ, 11/23/2009 - 20:31

ಹೌದೆ...! ಜಾಗತಿಕ ಮಟ್ಟದಲ್ಲಿ ಸಿಗುವ ಗೌರವಕ್ಕಾಗಿ ಅಹಿಂಸಾವಾದಕ್ಕೆ ಸೋತು ಸ್ವಾತಂತ್ರ್ಯ ಬಿಟ್ಟು ಕೊಟ್ಟೆವು..!! ಎಂದು ಬ್ರಿಟೀಷರು ಹೇಳಿದ್ದರೆ!? ಅಯ್ಯೋ ನನಗಿದು ಗೊತ್ತೇ ಇರಲಿಲ್ಲ ಉಲ್ಲಾಸ್. ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. (ಕ್ಲೆಮೆಂಟ್ ಆಟ್ಲಿಯವರ ಕುರಿತೂ ನನಗೆ ಅಷ್ಟಾಗಿ ಗೊತ್ತಿಲ್ಲ.) ಅದಿರಲಿ; ಈಗ ನನಗೆ ಬ್ರಿಟೀಷರ ಮೇಲ್ಕಂಡ ಹೇಳಿಕೆಯ ಸತ್ಯಾಸತ್ಯತೆಗಳತ್ತ ಗಮನ ಹೋಗುತ್ತಿಲ್ಲ. ಬದಲಿಗೆ ಕುತೂಹಲಕ್ಕಾಗಿ ಕೇಳುತ್ತಿದ್ದೇನೆ. ಯಾರು ಈ ಮಾತುಗಳನ್ನು ಹೇಳಿದ್ದರು?

Ullas Hindustani ಸೋಮ, 11/23/2009 - 23:22

ಪ್ರಭಾಕರ್ ರವರೇ "ಜಾಗತಿಕ ಮಟ್ಟದಲ್ಲಿ ಸಿಗುವ ಗೌರವಕ್ಕಾಗಿ ಅಹಿಂಸಾವಾದಕ್ಕೆ ಸೋತು ಸ್ವಾತಂತ್ರ್ಯ ಬಿಟ್ಟು ಕೊಟ್ಟೆವು..!!" ಅಂತ ಮೈಕ್ ಹಿಡಿದು ಕಿರುಚಬೇಕಾಗಿಲ್ಲ ಆ ರೀತಿಯ ಭಾವನೆ ಬರುವಂತೆ ನಡೆದು ಕೊಳ್ಳುವುದು ಕೂಡ ಒಂದು ಸುಳ್ಳೆ.
ಅವರೆಲ್ಲಾ (ಕ್ಲೆಮೆಂಟ್ ಆಟ್ಲಿಯವರನ್ನು ಹೊರತು ಪಡಿಸಿ) ನಿಜ ಹೇಳುವವರಾಗಿದ್ದರೆ "ಭಾರತೀಯ ಮಿಲಿಟರಿ ಪಡೆಗಳು ದಂಗೆಯೇಳುವ ಮುನ್ಸೂಚನೆ ದಟ್ಟವಾಗಿದ್ದರಿಂದ ಭಾರತದಿಂದ ಕಾಲ್ಕಿತ್ತೆವು" ಅಂತ ಹೇಳಬಹುದಿತ್ತಲ್ಲ...!
ಯಾಕೆ ಹೇಳಲಿಲ್ಲವೆಂದರೆ ಅಲ್ಲಿ ಅವರ ಗೌರವ ಅಡ್ಡಬಂತು.
ಕೊನೆಯ ಮಾತುಃ ಸತ್ಯವಲ್ಲದ್ದನ್ನು ಜನರ ಮನದಲ್ಲಿ ತುಂಬುವುದು ಕೂಡ ಒಂದು ಸುಳ್ಳೆ.
ಅದು ಮಾತಿನ ಮೂಲಕವಿರಲಿ, ನಡತೆಯ ಮೂಲಕವಿರಲಿ.

(ಪ್ರಭಾಕರ್ ರವರೇ ನಿಮ್ಮ ಮಾತನ್ನು ನೇರವಾಗೆ ಬರೆಯಬಹುದಿತ್ತು ವ್ಯಂಗ್ಯ ಬೇಕಾಗಿರಲಿಲ್ಲ ಅಲ್ಲವೇ..? ಇರಲಿ ಬಿಡಿ )

ಎಚ್.ಎಸ್. ಪ್ರಭಾಕರ ಮಂಗಳ, 11/24/2009 - 00:01

ಕ್ಷಮಿಸಿ ಉಲ್ಲಾಸ್, ಖಂಡಿತಾ ನಾನು ವ್ಯಂಗ್ಯವಾಗಿ ಕೇಳಿದ್ದಲ್ಲಪ್ಪಾ ಅದು! ಛೆ! ಕೆಲವು ಬಾರಿ ಹೀಗೆ ಅಪಾರ್ಥಗಳಿಗೆ ಈಡಾಗುವ ಸಂಭವ ಬರುತ್ತೆ ನೋಡಿ. ನನ್ನ ಅಭಿಪ್ರಾಯ ಏನಾಗಿತ್ತಪ್ಪಾ ಅಂದರೆ, ಯಾರೋ ಓರ್ವ ಬ್ರಿಟೀಶ್ (ಚರ್ಚಿಲ್ ತರಹ) ಈ ರೀತಿ ಹೇಳಿಕೆ ಕೊಟ್ಟಿದ್ದನೇನೋ ಎಂಬ ಅನುಮಾನದಿಂದ ಆ ರೀತಿ ಮಾಹಿತಿಗಾಗಿ ವಿಚಾರಿಸಿದೆ ಅಷ್ಟೆ. ನನ್ನದೊಂದು ಸ್ವಭಾವವಿದೆ ಉಲ್ಲಾಸ್; ನಾನು ಏನೇ ಆಗಿದ್ದರೂ ಸಹ; ಯಾರು ಏನೇ ತಿಳಿದುಕೊಂಡರೂ ಸಹ; ನನಗೆ ತಿಳಿಯದೇ ಇರುವುದನ್ನು ಬೇರೆಯವರಿಂದ ನೇರವಾಗಿ ಕೇಳಿ ತಿಳಿಯುವ ಹವ್ಯಾಸವಿದೆ. ಇದು ಚಿಕ್ಕಂದಿನಿಂದ ರೂಢಿಸಿಕೊಂಡ ಹವ್ಯಾಸವಾಗಿದೆ. ಓರ್ವ ಜ್ಞಾನ ದಾಹಿಯಾಗಿ ನಾನಿಲ್ಲಿ ಭಾಗವಹಿಸುತ್ತಿದ್ದೇನೆ. ಮತ್ತು ನನಗೆ ತಿಳಿದದ್ದನ್ನು ಮಾತ್ರ ಇರುವುದನ್ನು ಇದ್ದಂತೆ ಹೇಳುತ್ತೇನೆ. ಯಾರನ್ನೂ ನೋಯಿಸುವ ಅಭ್ಯಾಸವೇ ನನಗಿಲ್ಲ ಉಲ್ಲಾಸ್. ದಯವಿಟ್ಟು ತಪ್ಪು ತಿಳಿಯಬೇಡಿ. ನಾನು ನೇರವಾಗಿಯೇ ಕೇಳಿದ್ದೇನಲ್ಲಾ...! ಹೌದೇ...!? ಎಂದು ನಾನು ಪರಮಾಶ್ವರ್ಯ ವ್ಯಕ್ತಪಡಿಸಿದ್ದರೂ ಸಹ ತಾವು ಅದನ್ನು ವ್ಯಂಗ್ಯಾರ್ಥವಾಗಿ ಏಕೆ ಭಾವಿಸಿಕೊಂಡಿರಿ? Anyhow ಯಾವ ಬ್ರಿಟೀಷ್ ಆ ರೀತಿ ಹೇಳಿರಬಹುದು; ಮುಂದೊಮ್ಮೆ ಸಮಯ ಬಂದಾಗ ಉಲ್ಲೇಖಿಸಲು ಸರಕು ಸಿಗಬಹುದು ಎಂಬ ಸಹಜ ಕುತೂಹಲಕ್ಕಾಗಿ ನಾನು ವಿಚಾರಿಸಿದ ಈ ಪ್ರಶ್ನೆಯಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ.
`ಸತ್ಯವಲ್ಲದ್ದನ್ನು ಜನರ ಮನದಲ್ಲಿ ತುಂಬುವುದು ಕೂಡ ಒಂದು ಸುಳ್ಳೆ'- ಈ ಮಾತು ತುಂಬಾ ಚೆನ್ನಾಗಿದೆ ಉಲ್ಲಾಸ್; ಇದನ್ನು ನಾನು ಒಪ್ಪುತ್ತೇನೆ.

Ullas Hindustani ಮಂಗಳ, 11/24/2009 - 10:16

"ಸತ್ಯವಲ್ಲದ್ದನ್ನು ಜನರ ಮನದಲ್ಲಿ ತುಂಬುವುದು ಕೂಡ ಒಂದು ಸುಳ್ಳೆ"- ನನ್ನ ಈ ಮಾತನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ಸರ್...
"ಹೌದೆ...!
ಜಾಗತಿಕ ಮಟ್ಟದಲ್ಲಿ ಸಿಗುವ ಗೌರವಕ್ಕಾಗಿ ಅಹಿಂಸಾವಾದಕ್ಕೆ ಸೋತು ಸ್ವಾತಂತ್ರ್ಯ ಬಿಟ್ಟು ಕೊಟ್ಟೆವು..!! ಎಂದು ಬ್ರಿಟೀಷರು ಹೇಳಿದ್ದರೆ!?
ಅಯ್ಯೋ ನನಗಿದು ಗೊತ್ತೇ ಇರಲಿಲ್ಲ ಉಲ್ಲಾಸ್. ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು."
ಈ ಮಾತುಗಳು ಸ್ವಲ್ಪ ವ್ಯಂಗ್ಯಭರಿತವಾಗಿದ್ದವು ಅಂತ ನನಗನಿಸಿತು. ಅದಕ್ಕಾಗಿ ಹಾಗೆ ಅಂದೆ ಅಷ್ಟೆ. ಅವು ವ್ಯಂಗ್ಯ ಮಾತುಗಳಲ್ಲವಾಗಿದ್ದರೆ ಕ್ಷಮೆಯಿರಲಿ.
ನಿಮ್ಮವ
ಉಲ್ಲಾಸ್ ಹಿಂದುಸ್ತಾನಿ.

ಹರಿಪ್ರಸಾದ್ ಮಂಗಳ, 11/24/2009 - 19:23

ಉಲ್ಲಾಸ್ ರವರೇ ಭಾರತದ ಸ್ವಾತಂತ್ರ್ಯದಲ್ಲಿ ಅಹಿಂಸಾವಾದಿಗಳ ಪಾತ್ರದ ಬಗ್ಗೆ ಬ್ರಿಟೀಷ್ ಪ್ರಧಾನಿ "ಕ್ಲೆಮೆಂಟ್ ಅಟ್ಲೀ"ಯವರನ್ನು ಪ್ರಶ್ನಿಸಿದಾಗ ಬಂದ ಉತ್ತರ "ಮಿ..ನಿ..ಮ..ಮ್ ". ಎಂದು ಹೇಳಿದಿರಿ ಆ ಬ್ರಿಟೀಷ್ ಪ್ರಧಾನಿ "ಕ್ಲೆಮೆಂಟ್ ಅಟ್ಲೀ"ಯವರಲ್ಲಿ ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಕ್ರಾಂತಿಕರಿಗಳ ಪಾತ್ರದ ಬಗ್ಗೆ ಕೇಳಿದರು ಅವರು ಮಿ..ನಿ..ಮ..ಮ್ ". ಎಂದೇ ಉತ್ತರಿಸುತ್ತಿದ್ದರೇನು ಅಲ್ಲವೇ ? ಬ್ರಿಟೀಷ್ರು ಭಾರತಕ್ಕೆ ಸ್ವಾತಂತ್ರ್ಯ ನಾವು ಕೊಟ್ಟದು ಭಾರತೀಯರು ಗಳಿಸಿದ್ದಲ್ಲ ಎಂದೇ ಹೇಳುತ್ತಿದ್ದರು. ಭಾರತದ ಸ್ವಾತಂತ್ರದ ಹೋರಾಟದಲ್ಲಿ ತಮ್ಮ ಜೀವವನ್ನೆ ಮುಡಿಪಾಗಿಟ್ಟು ಪ್ರಾಣರ್ಪಣೆ ಮಾಡಿದ ಕ್ರಾಂತಿಕಾರಿಣೆಗಳು ಹಾಗು ತಮ್ಮಗೆ ಎದುರಾಗಿ ಬರುತ್ತಿದ್ದ ಬ್ರಿಟೀಷರ ಗುಂಡುಗಾಳಿಗೆ ಹೆದರದೆ ಎದೆಯೊಡ್ದಿ ತಮ್ಮ ಪ್ರಾಣರ್ಪಣೆ ಮಾಡಿದ ಅಹಿಂಸಾವದಿಗಳು ಈ ಇಬ್ಬರಲ್ಲಿ ಯಾರ ಪ್ರಾಣರ್ಪಣೆಯನ್ನು ಮಿ..ನಿ..ಮ..ಮ್ ಎಂದು ಒಪ್ಪಲಾದೀತೆ. ಒಬ್ಬ ಭಾರತೀಯ ಸ್ವಾತಂತ್ರ ವೀರರ ಪ್ರಾಣರ್ಪಣೆಯ ಕೊಡುಗೆಯಾನ್ನು ಕನಿಷ್ಟ ಎಂದು ಪರಿಗಣಿಸಾಗದು ಅಲ್ಲವೆ. ಅಂದ ಮೇಲೆ ಭಾರತದ ಸ್ವಾತಂತ್ರದಲ್ಲಿ ಕ್ರಾಂತಿಕರಿಗಳದ್ದು ಮತ್ತು ಅಹಿಂಸಾವದಿಗಳದ್ದು ಮಹತ್ವದ ಪಾತ್ರವೇ . ನಿವೇ ಹೇಳಿದ ಹಾಗೇ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರು ಶ್ರೇಷ್ಠರು . ಇಲ್ಲಿ ಇವರದು ಕನಿಷ್ಟ ಇವರದು ಗರಿಷ್ಟ ಎಂದು ವಿಗಂಡಿಸಾಗದು ಎಂದು ನನ್ನ ಅಭಿಪ್ರಾಯ ಉಲ್ಲಾಸ್ ರವರೇ

Ullas Hindustani ಮಂಗಳ, 11/24/2009 - 23:36

ಹರೀಶ್ ರವರೆ ನಿಮ್ಮ ಮಾತು ಕಂಡಿತ ಒಪ್ಪಬೇಕಾದ್ದೆ. ಅದಕ್ಕಾಗೆ ನಾನು ಪ್ರಾರಂಭದಲ್ಲೇ ಹೇಳಿದ್ದೇ " ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರು ಶ್ರೇಷ್ಠರು ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಬೇಡ" ಅಂತ. ಇಲ್ಲಿ ಪ್ರಶ್ನೆ ಎದ್ದಿರುವುದು ಅವರ ಶ್ರೇಷ್ಠತೆ, ದೇಶಭಕ್ತಿಯ ವಿಚಾರದಲ್ಲಲ್ಲ. ಬದಲಾಗಿ "ಭಾರತದ ಸ್ವಾತಂತ್ರ್ಯದಲ್ಲಿ ಅವರುಗಳ ಪಾತ್ರವೆಷ್ಟು..?" ಎನ್ನುವುದು. ಈ ವಿಚಾರದಲ್ಲಿ ಅಹಿಂಸಾವಾದಿಗಳು ಎಂದಿಗೂ ಕ್ರಾಂತಿಕಾರಿಗಳಿಗೆ ಸಮನಾಗಲ್ಲ ಅನ್ನುವುದು ನನ್ನ ಅಭಿಪ್ರಾಯ.
ಬ್ರಿಟೀಷರ ಬಗ್ಗೆ ಇಲ್ಲಿ ಹೇಳುವುದಾದರೆ "ಜಟ್ಟಿ ನೆಲಕ್ಕೆ ಬಿದ್ದರು ಮೀಸೆ ಮಣ್ಣಾಗಲಿಲ್ಲ ಎಂದನಂತೆ"ಎಂಬ ಗಾದೆ ಮಾತು ನೆನಪಿಗೆ ಬರುತ್ತದೆ. ಅವರ ವಿಷಯ ಬಿಡಿ ಏಕೆಂದರೆ ನೈಜ ವಿಚಾರ ಏನೆನ್ನುವುದು ಗುಟ್ಟಾಗೇನು ಉಳಿದಿಲ್ಲ.
ಹಾಗೆ ಕ್ಲೆಮೆಂಟ್ ಆಟ್ಲಿಯವರ ಬಗ್ಗೆ ಹೇಳುವುದಾದರೆ ಅವರು ಭಾರತದ ಕ್ರಾಂತಿಕಾರಿಗಳ ಬಗ್ಗೆ ನೀವಂದಂತೆ ಹೇಳಲು ಸಾಧ್ಯವಿಲ್ಲ. ಏಕೆಂದರೆ "ಮುಂದಾಗುವ ಕ್ರಾಂತಿಗೆ ಹೆದರಿಯೇ ಸ್ವಾತಂತ್ರ್ಯ ಬಿಟ್ಟು ಕೊಟ್ಟದ್ದು" ಎಂಬರ್ಥದ ಮಾತನ್ನು ಅವರೇ ಆಡಿರುವಾಗ ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯ ಅಷ್ಟಾಗಿ ಸಮಂಜಸ ಅನಿಸುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ ಏಕೆಂದರೆ ಅವರು ಅಹಿಂಸಾವಾದಿಗಳ ಬಗ್ಗೆ ಯಾವುದೇ ಪೂರ್ವಾಗ್ರಹ ಪೀಡಿತರಾಗಿ ಮಾತನಾಡಿದ್ದಲ್ಲ ಎನ್ನುವುದನ್ನು ನೀವು ಗಮನಿಸಬೇಕು.
ಹಾಗೆ ಅತಿಮುಖ್ಯವಾದ ಇನ್ನೊಂದು ವಿಚಾರವೇನೆಂದರೆ ಈ ವಿಷಯದ ಬಗ್ಗೆ ಇಲ್ಲಿ ನಾನು ನನ್ನ ಅಭಿಪ್ರಾಯವನ್ನು ಮಂಡಿಸುತ್ತಿದ್ದೇನಷ್ಟೆ. ಹೊರತು ಇಲ್ಲಿ ನನ್ನ ಅಭಿಪ್ರಾಯವೇ ಅಂತಿಮವಾಗ ಬೇಕೆಂದೇನಿಲ್ಲ. ಯಾವ ವಿಚಾರವನ್ನು ನಿಮಗೆ ಬಲವಂತವಾಗಿ ತುರುಕಲು ಪ್ರಯತ್ನಿಸುತ್ತಿದ್ದೇನೆಂದು ದಯವಿಟ್ಟು ಭಾವಿಸಬಾರದು. ನಿಮ್ಮ ಅಭಿಪ್ರಾಯಗಳು ನನ್ನ ಅಭಿಪ್ರಾಯಕ್ಕೆ ವಿರೋದವಾಗಿದ್ದಲ್ಲಿ ಅಷ್ಟೇ ಪ್ರಬಲವಾಗಿ ನಿಮ್ಮ ವಿಚಾರವನ್ನು ಮಂಡಿಸಿ "

ಧನ್ಯವಾದಗಳೊಂದಿಗೆ ಉಲ್ಲಾಸ್ ಹಿಂದುಸ್ತಾನಿ."

ಹರಿಪ್ರಸಾದ್ ಧ, 11/25/2009 - 11:23

ಉಲ್ಲಾಸ್ ರವರೇ ಒಂದು ಹೋರಾಟದಲ್ಲಿ ಭಾಗಿಯಾದ ಪ್ರತಿಯೋಬ್ಬನ ಪಾತ್ರವು ಪ್ರಮುಖವಾಗಿರುತ್ತದೆ ಎನ್ನುವುದು ನನ್ನ ವಿಚಾರ ಇಲ್ಲಿ ಭಾರತಿಯಾ ಸ್ವಾತಂತ್ರ ಹೋರಾಟಗಾರರ ಶ್ರೇಷ್ಠತೆಯಾ ಹಿನ್ನಲೆಯಲ್ಲಿ ಅವರ ಪಾತ್ರದ ಮಹತ್ವವನ್ನು ಹೇಳಿದೆನೆ ಹೊರತು. ಅವರ ಶ್ರೇಷ್ಠತೆಯಾ ವಿಚಾರದಲ್ಲಿ ಬಿನ್ನಭಿಪ್ರಾಯ ಮಂಡಿಸಲಿಲ್ಲ
ಇನ್ನು ಕ್ಲೆಮೆಂಟ್ ಆಟ್ಲಿಯವರ ಮಿ..ನಿ..ಮ..ಮ್. ವಾದವನ್ನು ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾದ ಪ್ರತಿಯೋಬ್ಬನ ಪಾತ್ರವು ಪ್ರಮುಖವಾಗಿರುತ್ತದೆ ಎಂಬ ಹಿನ್ನಲೆಯಲ್ಲಿ ಖಂಡಿಸಿದೆ. ಮತ್ತು ಅವರ ಇ ಅಭಿಪ್ರಾಯ ಮುಂದಾಗುವ ಕ್ರಾಂತಿಗೆ ಹೆದರಿಯೇ ಸ್ವಾತಂತ್ರ್ಯ ಬಿಟ್ಟು ಕೊಟ್ಟದ್ದು" ಎಂಬರ್ಥಕ್ಕಿಂತ ನನಗೆ ಜಾಗತಿಕ ರಾಜಕೀಯ ಪರಿಸ್ಥಿತಿಯಾತ್ತ ಬೊಟ್ಟು ಮಾಡಿದಂತೆ ಕಾಣುವುದರಿಂದ ಕ್ರಾಂತಿಕರಿಗಳ ಬಗ್ಗೆ ಅವರ ಅಭಿಪಾಯವನ್ನು ಉಹಿಸಿದೆ ಅಷ್ಟೇ. ನನ್ನ ಕನಿಷ್ಟ ಮತ್ತು ಗರಿಷ್ಟೆ ಎಂಬ ವಿಚಾರ ಪಾತ್ರಕ್ಕೆ ಸಂಬಧಿಸಿದೆ ಹೊರತು ಶ್ರೇಷ್ಠತೆಗೆ ಸಂಬಧಿಸಿದ್ದಲ್ಲ ನನ್ನ ಬರವಾಣೆಗೆಯಲ್ಲಿ ಶ್ರೇಷ್ಠತೆಗೆ ಸಂಬಧಿಸಿದಂತೆ ಕಂಡಲ್ಲಿ ಸರಿಪಡಿಸಬೇಕಾಗಿ ವಿನಂತಿಸುತ್ತೆನೆ. ( ಉಲ್ಲಾಸರವರೇ ಅವರ ಅವರ ಅಭಿಪ್ರಾಯವನ್ನು ತಿಳಿಸುವ ಸ್ವಾತಂತ್ರ ಎಲ್ಲರಿಗು ಎದೆ ಇಲ್ಲಿ ಬಲವಂತದ ಪ್ರಶ್ನೆ ಇಲ್ಲ ವಿಚಾರಗಳಲ್ಲಿ ಬಿನ್ನಾಭಿಪ್ರಾಯಗಳು ಸಾಮಾನ್ಯ ಅದನ್ನು ವ್ಯೆವ್ಯಕ್ತಿಕವಾಗಿ ಪರಿಗಣೆಸದಿದ್ದರೆ ಆಯತ್ತು ವಿಚಾರಗಳಲ್ಲಿ ಬಿನ್ನಾಭಿಪ್ರಾಯಗಳಿದ್ದು ಸ್ನೇಹಿತಾರಗಿ ಇರಬಹುದ್ದಲ್ಲವೆ.)

Ullas Hindustani ಧ, 11/25/2009 - 23:12

ಹರಿಪ್ರಸಾದ್ ರವರೆ ನೀವು ಏನ್ ಹೇಳಲ್ಲಿಕ್ಕೆ ಹೊರಟಿರಿ ಅನ್ನೋದು ನನಗೆ ಅರ್ಥವಾಗಲಿಲ್ಲ. ನೀವು ನನ್ನ ವಿಚಾರವನ್ನು ಬೆಂಬಲಿಸಿದಿರೋ ವಿರೋಧಿಸಿದಿರೋ.. ಇಲ್ಲಾ ಮೌನ ಸಮ್ಮತಿ ನೀಡಿದಿರೋ..ಅಥವ ಇದಕ್ಕೆ ಸಂಬಂಧಿಸಿದಂತೆ ಬೇರಾವುದೋ ವಿಚಾರ ತಿಳಿಸಿದಿರೋ ಗೊತ್ತಾಗ್ಲಿಲ್ಲ ಅದಕ್ಕಾಗಿ ನೀವು ಮೇಲೆ ತಿಳಿಸಿದ ವಿಚಾರದ ಬಗ್ಗೆ ನಾನು ಏನನ್ನು ಪ್ರತಿಕ್ರಿಯಿಸುತ್ತಿಲ್ಲ. ಕ್ಷಮೆಯಿರಲಿ ಧನ್ಯವಾದಗಳೊಂದಿಗೆ ನಿಮ್ಮ ಸ್ನೇಹಿತ ಉಲ್ಲಾಸ್ ಹಿಂದುಸ್ತಾನಿ.

ಹರಿಪ್ರಸಾದ್ ಗುರು, 11/26/2009 - 13:58

ಉಲ್ಲಾಸ್ ರವರೇ ಭಾರತದ ಸ್ವಾತಂತ್ರದ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರ ಎಷ್ಟು ಮಹತ್ವದಗಿತ್ತು ಅಷ್ಟೆ ಮಹತ್ವದ ಪಾತ್ರ ಅಹಿಂಸವಾದಿಗಳದಗಿತ್ತು ಕ್ಲೆಮೆಂಟ್ ಆಟ್ಲಿಯವರ ಹೇಳಿದಂತೆ ಮಿ..ನಿ..ಮ..ಮ್. ಆಗಿರಲಿಲ್ಲ ಎಂಬುದು ನನ್ನ ವಿಚಾರ ಇನ್ನು ಕ್ಲೆಮೆಂಟ್ ಆಟ್ಲಿಯವರಲ್ಲಿ ಅಹಿಂಸವಾದಿಗಳ ಪಾತ್ರ ಮಿ..ನಿ..ಮ..ಮ್ ಎಂದು ಏಕೆ ಹೇಳಿದಿರಿ ಅಂದು ಕೇಳಿದ್ದರೆ ಅವರು ನೀವು ಅಂದು ಕೊಂಡಂತೆ ಕ್ರಾಂತಿಕಾರಿಯ ಪಾತ್ರದ ಮಹತ್ವದ ಬಗ್ಗೆ ಹೇಳದೆ.ಆಗಿನ ಇಂಗ್ಲಂಡ್ ಮತ್ತು ಜಾಗತಿಕ ರಾಜಕೀಯ ಪರಿಸ್ಥಿಯ ಕಾರಣದಿಂದ ಭಾರತಕ್ಕೆ ಸ್ವಾತಂತ್ರವನ್ನು ಕೊಟ್ಟೆವು ಎನ್ನುತ್ತಿದ್ದರು ಎಂದು ನನ್ನ ತಿಳುವಳಿಕೆ. ಇರಲಿ ಒಂದು ವೇಳೆ ಕ್ಲೆಮೆಂಟ್ ಆಟ್ಲಿಯವರು ಕ್ರಾಂತಿಕಾರಿಯ ಪಾತ್ರದ ಮಹತ್ವದ ಬಗ್ಗೆ ಹೇಳಿದರು ಭಾರತದ ಸ್ವಾತಂತ್ರ ಹೋರಾಟದಲ್ಲಿ ಅಹಿಂಸವಾದಿಗಳ ಪಾತ್ರ ಮಿ ನಿ ಮ್ ಮ್ ಎಂದು ನಾನು ಒಪ್ಪಲಾರೆ. ಭಾರತದ ಸ್ವಾತಂತ್ರ ಹೋರಾಟದಲ್ಲಿ ಅಹಿಂಸವಾದಿಗಳ ಹೋರಾಟದ ಪ್ರಭಾವದಿಂದ ಎಷ್ಟುಂದು ಭಾರತೀಯರು ಸ್ವಾತಂತ್ರ ಹೋರಾಟಕ್ಕೆ ಧುಮುಕಿದರು ಅವರಲ್ಲಿ ಕೇಲವರು ಕ್ರಾಂತಿಯ ಮಾರ್ಗವನ್ನು ಅನುಸರಿಸಿರಬಹುದು ಹಾಗೇಯೆ ಕ್ರಾಂತಿಕರಿಗಳ ಹೋರಾಟದ ಪ್ರಭಾವದಿಂದ ಭಾರತೀಯರು ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದರು ಅಲ್ಲಿ ಕೊಡ ಕೇಲವರು ಅಹಿಂಸ ಮಾರ್ಗವನ್ನು ಅನುಸರಿಸಿರಬಹುದು. ಇಲ್ಲಿ ಅವರು ಪ್ರಭಾವಿತರದದು ಹೋರಾಟಗರರ ಸ್ವಾತಂತ್ರ ಪ್ರೇಮದಿಂದ ಅದಕ್ಕಾಗಿ ಅವರು ಕೊಟ್ಟ ಬಲಿದಾನದಿಂದ ಅವರು ಅನುಸರಿಸಿದ ಮಾರ್ಗದಿಂದಲ್ಲ.ಇಲ್ಲಿ ಅಹಿಂಸವಾದಿಗಳು ಮತ್ತು ಕ್ರಾಂತಿಕರಿಗಳ ಹೋರಾಟದ ಪ್ರಭಾವ ಭಾರತದ ಸ್ವಾತಂತ್ರದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತ್ತು ಎಂದು ನನ್ನ ಅನಿಸಿಕೆ. ಅಹಿಂಸವಾದಿಗಳ ಮತ್ತು ಕ್ರಾಂತಿಕರಿಗಳ ಈ ಪ್ರೇರಣೆಯಿಂದಲೇ ಅನೇಕ ಭಾರತೀಯರು ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿ ಭಾರತಕ್ಕೆ ಸ್ವಾತಂತ್ರಗಳಿಸಿ ಕೊಡಲು ಸಾಧ್ಯವಾಯಿತು. ಅನೇಕ ಭಾರತೀಯರ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗುವಂತೆ ಅಹಿಂಸವಾದಿಗಳು ಬೀರಿದ ಪಭಾವವನ್ನು ಅಲ್ಲಗಳೆವಂತೆಯಿಲ್ಲ ಈ ನಿಟ್ಟಿನಲ್ಲಿ ಕ್ಲೆಮೆಂಟ್ ಆಟ್ಲಿ ತಿಳಿದಂತೆ ಅಹಿಂಸವಾದಿಗಳ ಪಾತ್ರ ಮಿನಿಮ್ ಮ್ ಆಗಿರದೆ ಕ್ರಾಂತಿಕರಿಗಳ ಪಾತ್ರದಂತೆ ಮಹತ್ವದಗಿತ್ತು ಎಂದು ನನ್ನ ಭಾವನೆ.

Ullas Hindustani ಶನಿ, 11/28/2009 - 12:15

ಹರೀಶ್ ರವರೆ ನೀವು "ಭಾರತದ ಸ್ವಾತಂತ್ರದ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರ ಎಷ್ಟು ಮಹತ್ವದಗಿತ್ತು ಅಷ್ಟೆ ಮಹತ್ವದ ಪಾತ್ರ ಅಹಿಂಸವಾದಿಗಳದಗಿತ್ತು" ಎಂದು ಮತ್ತೆ ಮತ್ತೆ ಅದನ್ನೇ ಹೇಳುವುದು.. ನಾನು ಪುನಃ ಪುನಃ ಮೊದಲಿನ ಉತ್ತರವನ್ನೇ ನೀಡಬೇಕಾಗಿದೆ. ನಾನು ಹೇಳಿದಂತೆ ಅಹಿಂಸಾವಾದಿಗಳು ನಿರಂತರವಾಗಿ ನಡೆಸಿದ್ದು ಬ್ರಿಟೀಷರ ವಿರುದ್ಧದ ಹೋರಾಟವೇ ಹೊರತು ಭಾರತದ ಸ್ವಾತಂತ್ರ್ಯದ ಪರವಾಗಿ ಅಷ್ಟಾಗಿ ಅಲ್ಲ ಆದರೆ ಕ್ರಾಂತಿಕಾರಿಗಳು ನಡೆಸಿದ ಹೋರಾಟ ಭಾರತದ ಸ್ವಾತಂತ್ರ್ಯಪರವಾಗಿ ಅನ್ನುವುದು ನನ್ನ ವಾದ.
ನೀವು ಮೇಲೆ ಹೇಳಿದಂತೆ " ಅಹಿಂಸವಾದಿಗಳ ಹೋರಾಟದ ಪ್ರಭಾವದಿಂದ ಎಷ್ಟುಂದು ಭಾರತೀಯರು ಸ್ವಾತಂತ್ರ ಹೋರಾಟಕ್ಕೆ ಧುಮುಕಿದರು " ಎಂಬ ಮಾತು ಕಂಡಿತ ನಿಜ. ಹಾಗೆ " ಅವರಲ್ಲಿ ಕೆಲವರು ಕ್ರಾಂತಿಯ ಮಾರ್ಗವನ್ನು ಅನುಸರಿಸಿರಬಹುದು " ಎಂದು ಹೇಳಿದಿರಿ. ಅವರು ಆ ಕ್ರಾಂತಿಯ ಮಾರ್ಗವನ್ನು ಅನುಸರಿಸಿದ್ದೇಕೆಂದರೆ ಅಹಿಂಸಾವಾದಿಗಳ ಜೊತೆ ಹೋದ ಕೆಲಸಮಯದಲ್ಲೇ ಅವರಿಗೆ ತಿಳಿದಿರಬೇಕು ಇವರ ಹೋರಾಟ ಎನಿದ್ದರು ಬ್ರಿಟೀಷರ ದುಷ್ಟ ಕಾಯ್ದೆ ಕಾನೂನುಗಳ ವಿರುದ್ದವೇ ಹೊರತು ಭಾರತದ ಸ್ವಾತಂತ್ರ್ಯದ ಪರವಾಗಿ ಅಲ್ಲ ಎಂದು. ಅದಕ್ಕಾಗೆ ಅವರು ಬಿಟ್ಟು ಹೋಗಿದ್ದಿರಬಹುದು.
ಹಾಗೆ ನೀವು ಹೇಳಿದಿರಿ "ಅವರು ಪ್ರಭಾವಿತರದದು ಹೋರಾಟಗರರ ಸ್ವಾತಂತ್ರ ಪ್ರೇಮದಿಂದ " ಎಂಬ ಮಾತನ್ನು ನಿಮ್ಮ ವಾದಕ್ಕೆ ಸರಿ ಹೊಂದುವಂತೆ ನೀವು ಬಳಸಿಕೊಂಡಿದ್ದೀರಿ ಅನ್ನೋದು ಸ್ಪಷ್ಟ ಆದರೆ ಅದು "ಅವರು ಪ್ರಭಾವಿತರದದು ಹೋರಾಟಗರರ ದೇಶ ಪ್ರೇಮದಿಂದ " ಎಂದಾಗಬೇಕಿತ್ತಲ್ಲವೇ..??
ದೇಶ ಪ್ರೇಮದ ವಿಚಾರದಲ್ಲಿ ಇವರಿಬ್ಬರದ್ದು ಸಮಾನವಾದ ಭಕ್ತಿ , ಅಭಿಮಾನ ಎಂದು ಕಂಡಿತವಾಗಿಯು ಒಪ್ಪ ಬಹುದು. ಆದರೆ ಭಾರತದ ಸ್ವಾತಂತ್ರ್ಯದ ಪರವಾಗಿ ಅಲ್ಲ ಎಂಬುದು ನನ್ನ ಅಭಿಪ್ರಾಯ.

ಹರಿಪ್ರಸಾದ್ ಶನಿ, 11/28/2009 - 21:53

ಉಲ್ಲಾಸ್ ರವರೇ ನಿಮಗೆ ನಾನು ಹೇಳಿದ ವಿಚಾರ ಅರ್ಥವಾಗಳಿಲ್ಲ ಏಂದದಕ್ಕೆ ಆ ವಿಚಾರವನ್ನೆ ಪುನ ಹೇಳಿದೆ ಮತ್ತು ನನ್ನ ಅಭಿಪ್ರಾಯ ಅಹಿಂಸವಾದಿಗಳ ಪಾತ್ರವು ಕ್ರಾಂತಿಕರಿಗಳ ಪಾತ್ರದಂತೆ ಮಹತ್ವವಾದುದು ಎಂದ ಮೇಲೆ ಅದನ್ನೆ ಹೇಳಬೇಕಲ್ಲವೇ ಮತ್ತು ಅಹಿಂಸವಾದಿಗಳಿಗೆ ದೇಶ ಪ್ರೇಮವಿದ್ದ ಮೇಲೆ ದೇಶದ ಸ್ವಾತಂತ್ರದ ಪ್ರೇಮ ಇಲ್ಲದೇ ಇರುತ್ತದ್ದೆಯೇ. ನಾನು ಕ್ರಾಂತಿಕಾರಿಗಳಿಂದಲು ಕೆಲವರು ಪ್ರಭಾವಿತರಾಗಿ ಅಹಿಂಸವಾದಿ ಮಾರ್ಗ ದಲ್ಲಿ ಸ್ವಾತಂತ್ರದ ಹೋರಾಟದಲ್ಲಿ ಭಾಗಿಯಾಗಿದ್ದರು ಅಂತಲು ಅಂದಿದ್ದೆ ಅವರೇಕೆ ಕ್ರಾಂತಿಯ ಮಾರ್ಗವನ್ನು ಅನುಸರಿಸಲಿಲ್ಲ ಅದಕ್ಕು ಬೇರೆಯೆ ಕಾರಣಗಳಿರಬಹುದಲ್ಲವೇ. ನಿವಾಂದು ಕೊಡಂತೆ ಕೇವಲ ವಾದಕ್ಕಾಗಿ ನಾನು ಸ್ವಾತಂತ್ರ ಪ್ರೇಮ ಎಂಬ ಶಬ್ದವನ್ನು ಬಳಸಿದ್ದಲ್ಲ ಅಹಿಂಸವಾದಿಗಳಿಗೆ ಸ್ವಾತಂತ್ರ ಪ್ರೇಮ ಇಲ್ಲವೇನ್ನುವುದು ನಿಮ್ಮ ವಿಚಾರ ನನ್ನ ವಿಚಾರ ಹಾಗಿಲ್ಲದ ಮೇಲೆ ನಾನು ಸ್ವಾತಂತ್ರ ಪ್ರೇಮ ಎಂಬ ವಾಕ್ಯವನ್ನು ಬಳಸಿದ್ದು ತಪ್ಪಲ್ಲವಲ್ಲ . ದೇಶ ಪ್ರೇಮಿಗಳಿಗೆ ಸ್ವಾತಂತ್ರ ಪ್ರೇಮವಿಲ್ಲ ಎಂಬ ನಿಮ್ಮ ಅಭಿಪ್ರಾಯ ನನಗೆ ಸಮಂಜಸವಾಗಿ ಕಾಣುತ್ತಿಲ್ಲ. ಎನೇ ಇರಲಿ ಉಲ್ಲಾಸ್ ರವರೇ ನನ್ನ ಮತ್ತು ನಿಮ್ಮ ಧೃಷ್ಟಿ ಕೋನಗಳು ಈ ವಿಚಾರದಲ್ಲಿ ಬೇರೆ ಬೇರೆ ಆದುದರಿಂದ ನಮ್ಮ ಅಭಿಪ್ರಾಯಗಳು ಬಿನ್ನವಾಗಿಯೇ ಇರುತ್ತದೆ. ಅದು ಸರಿ ಹೊಂದಲರವು ಅನಿಸುತ್ತದೆ. ನನ್ನೊಂದಿಗೆ ಈ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ವಿನಿಮಯ ಮಡಿ ಕೊಂಡದಕ್ಕೆ ಮತ್ತು ನನ್ನ ಅಭಿಪ್ರಾಯಗಳನ್ನು ವಿಚಾರಮಾಡಿದಕ್ಕೆ ನನ್ನ ಧನ್ಯಾವದಗಳು ಸ್ನೇಹಿತ ಹರಿಪ್ರಸಾದ್

Ullas Hindustani ಶನಿ, 11/28/2009 - 23:11

ಪ್ರಿಯ ಸ್ನೇಹಿತರಾದ ಹರಿಪ್ರಸಾದ್ ರವರೇ "ನನ್ನ ವಾದ ಅಹಿಂಸಾವಾದಿಗಳು ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲವೆಂದಾಗಲಿ ಅಥವಾ ಅವರಿಗೆ ಸ್ವಾತಂತ್ರ ಪ್ರೇಮವಿಲ್ಲವೆಂದಾಗಲಿ ಅಲ್ಲ. ಕ್ರಾಂತಿಕಾರಿಗಳಿಗೆ ಹೋಲಿಸಿದರೆ ಈ ವಿಚಾರದಲ್ಲಿ ಅವರ ಪಾತ್ರ ಕಡಿಮೆ ಎಂಬುದಾಗಿ ಅಷ್ಟೆ.
1942ರ ಕ್ವಿಟ್ ಇಂಡಿಯಾ ಚಳುವಳಿ ಘೋಷಣೆ ಆಗುವವರೆಗೆ ಅಹಿಂಸಾವಾದಿಗಳು ಭಾರತದ ಸ್ವಾತಂತ್ರ್ಯಕ್ಕಾಗಿ ಯಾವ ಮಹತ್ವದ ಹೋರಾಟವನ್ನು ಮಾಡಲಿಲ್ಲ ಎನ್ನುವುದನ್ನು ನೀವು ಒಪ್ಪಲೇಬೇಕು.
ಈ ಚಳುವಳಿ ಘೋಷಣೆಯಾದ ಕೆಲವೇ ಘಂಟೆಗಳ ಅವಧಿಯಲ್ಲಿ ಎಲ್ಲಾ ಕಾಂಗ್ರೇಸ್ ನಾಯಕರನ್ನು ಬಂಧಿಸಲಾಯಿತು ಹಾಗೆ ಚಳುವಳಿ ಮುನ್ನೆಡಸಲು ಯಾವುದೇ ನಾಯಕರಿಲ್ಲದ್ದರಿಂದ ಕೇವಲ ಐದು ತಿಂಗಳ ಅವಧಿಯಲ್ಲಿ ಚಳುವಳಿಯ ತೀವ್ರತೆ ಸಂಪೂರ್ಣ ಶಾಂತ ಸ್ಥಿತಿಗೆ ತಲುಪಿತ್ತು. ಮುಂದಿನ 3 ವರ್ಷಗಳವರೆಗೂ ಅಂದರೆ 1946 ಫೆಬ್ರವರಿ ಸುಮಾರಿಗೆ ಮುಂಬೈ ನೌಕಾಪಡೆಯಲ್ಲಿ ಕಾಣಿಸಿಕೊಂಡ ಗಲಬೆ ದೇಶವ್ಯಾಪಿ ಹರಡುವವರೆಗೆ ಯಾವೊಬ್ಬ ನಾಯಕನನ್ನು ಕೂಡ ಬಿಡುಗಡೆಗೊಳಿಸಿರಲಿಲ್ಲ. ನಂತರದ ಒಂದು ವರ್ಷದ ಅವಧಿಯಲ್ಲಿ ಹೋರಾಟ ನಡೆಸಿರಬಹುದಾದರು ಅದು ನಿರಂತರವಾಗಿ ಸ್ವರಾಜ್ಯವನ್ನು ಕಲ್ಪನೆಯಲ್ಲಿಟ್ಟು ಕೊಂಡು ಹೋರಾಡಿದ ಕ್ರಾಂತಿಕಾರಿಗಳ ಪಾತ್ರಕ್ಕೆ ಸಮನಾಗಲಾರದು ಎಂಬುದು ನನ್ನ ಅಭಿಪ್ರಾಯ.
ಧನ್ಯವಾದಗಳೊಂದಿಗೆ...
ನಿಮ್ಮ ಪ್ರಿಯ ಸ್ನೇಹಿತ
ಉಲ್ಲಾಸ್ ಹಿಂದುಸ್ತಾನಿ....

dubari premkiran (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/11/2011 - 18:04

nanna prakara hagina paristiti hegettendu havalokisabeku.nanu heluva sambava era bahodada matugalu dhodda mattadhalli thondareyannu srustisabahodu. satya yavagalu kahi antha purvikaru heluttare. nevu yedhuru sikkaga helaballe . phone na mukanthara hela balle .9964287447 

  • 4395 views