Skip to main content
Forums

" ಸ್ವತಂತ್ರ ಭಾರತದಲ್ಲಿ ಅಧಿಕಾರ ಎನ್ನುವುದು ದಗಾಕೋರರ, ಠಕ್ಕರ ಹಾಗು ನಿರಂಕುಶ ದರೋಡೆಕೋರರ ಕೈಗೆ ಹೋಗುತ್ತದೆ. ಗಾಳಿಯೊಂದನ್ನು ಬಿಟ್ಟು ತುಂಡು ಬ್ರೆಡ್ಡಾಗಲಿ.. ಶೀಸೆ ನೀರಾಗಲಿ ತೆರಿಗೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಕೆಲವು ಕಾಲಾನಂತರ ಈ ಜೊಳ್ಳು ಜನರ ಗುರುತೂ ಉಳಿಯುವುದಿಲ್ಲ. ಅವರು ತಮ್ಮ ತಮ್ಮೊಳಗೆ ಹೊಡೆದಾಡುತ್ತಾರೆ. ಈ ಬಹಿರಂಗ ಕಾದಾಟದಿಂದ " ಭವ್ಯ ಭಾರತ " ಎನ್ನುವುದು ಕಳೆದು ಹೋಗುತ್ತದೆ ".

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಸಂತೋಶ ಇನಾಮದಾರ್ ಮಂಗಳ, 11/17/2009 - 21:37

ನಮ್ಮಲ್ಲಿನ ನಾಯಕತ್ವಕ್ಕೆ ದೂರದೃಷ್ಟಿಯ ಕೊರತೆ ಇದೆ, ಅಷ್ಟರ ಮಟ್ಟಿಗೆ ಆತ ಹೇಳಿದ್ದು ಸರಿ, ಅಷ್ಟು ಬಿಟ್ಟು ಅವನನ್ನು ಸಿರಿಯಸ್ ಆಗಿ ತೆಗೆದುಕೊಳ್ಳುವ ಜರೂರಿಲ್ಲ. ನೆನಪಿರಲಿ, ಬ್ರಿಟನ್ ಗೆ ಎಂದೂ ಅರ್ಥವಾಗದ ಆಯುಧದಿಂದ ನಮ್ಮಲ್ಲಿ ಸ್ವಾತಂತ್ರ್ಯ ಪಡೆದಿದ್ದು (ಈ ವಿಷಯದಲ್ಲಿ ಏನೇ ತಕರಾರಿರಲಿ). ಅವರಿಗೆ ಅದು ನುಂಗಲಾರದ, ಉಗುಳಲಾಗದ ತುಪ್ಪ. ಅವರ ಪ್ರಕಾರ ಭಾರತೀಯರಿಗೆ administration ಬರೋದಿಲ್ಲ, ಹಾಗೆಂದು ತಮ್ಮ ಕೃತ್ಯವನ್ನ ಸಮರ್ಥಿಸಿಕೊಳ್ಳೋಕೆ ಆಡಿದ ಮಾತು.
ನನ್ನ ಪ್ರಕಾರ ಈ ಮಾತಿಗೆ ಬೆಲೆ ಇಲ್ಲ ಈಗ. Last time ಜಾಕ್ ಸ್ಟ್ರಾವ್ (ಬ್ರಿಟನ ನ ಹಿಂದಿನ ವಿದೇಶಾಂಗ ಮಂತ್ರಿ) ಭಾರತಕ್ಕೆ ಭೆಟ್ಟಿ ನೀಡಿದ್ದಾಗ ಅವರಿಗೆ ಜಲಿಯನ್ ವಾಲಬಾಗ್ ಕಾಂಡಕ್ಕೆ ಕ್ಷಮೆ ಕೇಳುವಂತೆ ಒತ್ತಡತರಲಾಯಿತು. ಅವರು ಹೇಳಿದ್ದೇನು ಗೊತ್ತೆ? ಹಿಂದೆ ಆದ ಕಾಂಡಕ್ಕೆ ನಾನ್ಯಾಕೆ ಕ್ಷಮೆ ಕೇಳಬೇಕು ಅಂತ. ನಾವೂ ನಿನ್ನೆನ ಮರೆತು ಹೊಸ ಭಾರತದ ಕಡೆಗೆ ನಡೆಯಬೇಕು.. ಆ ಮಂದಿಯ ಟೀಕೆಗಳಿಗೆ ನಮ್ಮ ಅಭ್ಯುದಯವೇ ಉತ್ತರಿಸಬೇಕು..

Ullas Hindustani ಧ, 11/18/2009 - 12:24

ಅವನನ್ನು ಸೀರಿಯಸ್ಸಾಗಿ ತಗೆದುಕೊಳ್ಳ ಬೇಕಾಗಿಲ್ಲ ನಿಜ. ಆದರೆ ಅಧಿಕಾರ ಕಳೆದು ಕೊಳ್ಳುವ ನಿರಾಸೆಯಿಂದ ಅವನು ಅಂದುನುಡಿದ ಭವಿಷ್ಯ ಪೂರ್ಣ ಸುಳ್ಳಾಗಿಲ್ಲ ಅನ್ನೋದು ಕೂಡಾ ಅಷ್ಟೇ ನಿಜ. ಅವನು ಅಂದಿನ ಕೆಲ ಕಾಂಗ್ರೇಸ್ ನಾಯಕರನ್ನು (ನೆಹರೂರಂತವರನ್ನು ) ನೋಡಿ ಹೀಗೆ ಅಂದಿರ ಬಹುದು. ಅವನು ಅಂದು ಹೇಳಿದ ಮಾತಿನಂತೆ ಇಂದು ಅಧಿಕಾರ ಎನ್ನುವುದು ದಗಾಕೋರರ, ಠಕ್ಕರ ಹಾಗು ನಿರಂಕುಶ ಪ್ರಭುಗಳ ಕೈಗೆ ಹೋಗಿರುವುದು ಸುಳ್ಳಲ್ಲ. ಇಂದು ಯಾವುದೇ ಅಗತ್ಯ ವಸ್ತುಗಳ ಮೇಲೆ ತೆರಿಗೆ ಹೊರೆ ತಪ್ಪಿದ್ದಲ್ಲ. ಆದರೆ "ಭವ್ಯ ಭಾರತ" ಅನ್ನುವುದು ಕಳೆದು ಹೋಗಿಲ್ಲ. ನಮ್ಮ "ಭಾರತೀಯ ಸಂಸ್ಕೃತಿ" ಎಂಬ ತಾಯಿಬೇರು ಎಲ್ಲಿಯವರೆಗೂ ಜೀವಂತವಾಗಿರುವುದೋ ಅಲ್ಲಿಯವರೆಗೆ "ಭವ್ಯ ಭಾರತ" ಅನ್ನೋದು ಕಳೆದು ಹೋಗುವುದಿಲ್ಲ.
ಇದು ನನ್ನ ಅಭಿಪ್ರಾಯ ನೀವೇನಂತೀರಿ.

ಬ್ರಿಟೀಷರು ಬಿತ್ತಿದ್ದು ವಿಷ ಬೀಜ. ತಮ್ಮಬೇಳೆ ಕಾಳು ಬೇಯಿಸಿಕೊಳ್ಳು ಹಾಗೆ ಮಾಡಿದ್ದು ಅಂತ ಅವರಿಗೂ ಗೊತ್ತು. ಹೀಗಾಗಿಯೇ ವಿಷ ಬೀಜ ಯಾವ ಫಲ ನೀಡಬಹುದು ಎಂಬುದನ್ನು ಮೊದಲೇ ಹೇಳುವುದೇನೋ ಕಷ್ಟವಲ್ಲ. ಬೇವಿನ ಬೀಜ ಬಿತ್ತಿದರೆ ಮಾವಿನ ಫಸಲು ಬರುವುದಿಲ್ಲ! ಹೀಗಾಗಿ ಚರ್ಚಿಲ್ ಹೇಳಿಕೆ ಕುರಿತು ವಿಸ್ಮಯಪಡುವ ಅಗತ್ಯವಿಲ್ಲ.
ಇನ್ನು, ಆತನ ಹೇಳಿಕೆಯ ಸಾಧ್ಯಾಸಾಧ್ಯತೆಗಳ ಕುರಿತು ಚಿಂತಿಸೋಣ. ಅದನ್ನು ಅಸಾಧ್ಯವಾಗಿಸುವುದು ನಮ್ಮ ಕೈಯಲ್ಲೇ ಇದೆ. ಅಷ್ಟೋ ಇಷ್ಟೋ ಬೆಳೆದುನಿಂತಿರುವ \ಅವರು ನೆಟ್ಟ ವಿಷ ವೃಕ್ಷವನ್ನು ಬೇರು ಸಹಿತ ಕಿತ್ತು ಮಾವಿನ ಸಸಿ ನೆಡುವುದೇ ನಮಗಿರುವ ಮಾರ್ಗ. ಮೊದಲು ನಾವು ನಿಜವಾಗಿಯೂ ಮನುಷ್ಯರಂತೆ `ಬದುಕಲು' ಕಲಿಯಬೇಕೇ ವಿನಹಃ ಮನುಷ್ಯರಂತೆ `ಕಾಣಿಸಿಕೊಳ್ಳುವುದು' ಅಪಾಯಕಾರಿ ಎಂಬುದನ್ನು ಅರಿಯಬೇಕು. ಬ್ರಿಟೀಷರೊಂದೇ ಅಲ್ಲ; ಸಹಸ್ರಾರು ವರ್ಷಗಳಿಂದ ಅನ್ಯರ ಆಕ್ರಮಣ ತಾಳಿಕೊಂಡು ಬಾಳಿಕೊಂಡು ಬಂದಿರುವ ಭಾರತವನ್ನು ಅಷ್ಟು ಸುಲಭವಾಗಿ ನಾಶ ಮಾಡಲು ಸಾಧ್ಯವಿಲ್ಲ. ಏಕೆಂದರೆ ಈ ದೇಶದ ಆತ್ಮವಿರುವುದು ಧರ್ಮ ಹಾಗೂ ಸಂಸ್ಕೃತಿಯಲ್ಲಿ ಎಂಬುದನ್ನು ಮರೆಯಬಾರದು. ನಮ್ಮ ಇತಿಹಾಸದಲ್ಲಿ ಯಾವುದೇ``ಅತಿರೇಕ''ಯೂ ಹಾಗೇ ಉಳಿದುಕೊಂಡು ಬಂದ ನಿದರ್ಶನಗಳಿಲ್ಲ. ಅದು ನಾಶವಾಗಿಯೇ ಆಗುತ್ತದೆ. ಈ ಹಿನ್ನೆಲೆಯಲ್ಲಿ ಯಾರ ಹೇಳಿಕೆಯೂ ನೈಜವಲ್ಲ; ಅಂತಹ ಸ್ಥಿತಿಯೂ ನಮಗೆ ಬರುವುದಿಲ್ಲ. ಯಾರ ಮುಂದೆಯೂ ತಲೆ ತಗ್ಗಿಸಬೇಕಾದ ಪ್ರಮೇಯವೂ ಇಲ್ಲ.

ನಿಜ ಪ್ರಭಾಕರ್ ಅವರೆ, ನನ್ನಲ್ಲಿ ನಿಮ್ಮ ಅಭಿಪ್ರಾಯದ ಬಗ್ಗೆ ಸಹಮತವಿದೆ ಮತ್ತು ನಾವು ನಮ್ಮ ದೇಶವನ್ನು ಮತ್ತೆ ಜಗತ್ತಿನ ಆಗು ಹೋಗುಗಳೊಡನೆ ನಾವು ನಮ್ಮನ್ನು ಬೆಸೆಯುವ ರೀತಿ ಬೇಸರ ತರಿಸುತ್ತದೆ, ಇದೇ ಯುರೋಪ್ನಲ್ಲಿ ಅಗತ್ಯ ವಸ್ತುಗಳ ಮೇಲೆ ತೆರಿಗೆ ಇದೆ. EURO ಒಕ್ಕೂಟ ಆಸ್ತಿತ್ವಕ್ಕೆ ಬಂದ ಮೇಲೆ ಸಮಾನ್ಯರ ಬದುಕು (ಸಿರಿವಂತ ದೇಶಗಳಲ್ಲದ - ಸ್ಲೊವೇನಿಯ ಮತ್ತಿತರೇ ಪೂರ್ವಾತ್ಯ ಯುರೋಪಿಯನ್ ದೇಶಗಳು) ದುಸ್ತರಗೊಂಡಿದೆ (ನಾನಿದನ್ನು ಫ್ರಾನ್ಸ್ ನಲ್ಲಿದ್ದಾಗ ವಾಸ್ತವತೆಯನ್ನು ಕೇಳಿ ತಿಳಿದಿದ್ದು). ಈ ಕಾರಣಕ್ಕೇ ಇನ್ನೂ ಕೆಲ ದೇಶಗಳು ಆ ಒಕ್ಕೂಟವನ್ನೇ ಸೇರಿಲ್ಲ. Recession ಅನ್ನೋ ಪೆಡಂಭೂತ ಮಾಡಿರೋ ಹಾನಿ ಎಲ್ಲರಿಗೂ ಗೊತ್ತಿದೆ. ಅವರ ಆರ್ಥಿಕತೆಯೇ ಈ ಥರ ತತ್ತರಿಸುವ ಸಂದರ್ಭದಲ್ಲಿ ಹಳೇ ತಲೆಮಾರಿನ ಒಬ್ಬಾತ (ನಮ್ಮ ಬೇರುಗಳ ಬಗ್ಗೆ ಜ್ನಾನ ಇರದ ಮತ್ತು ಪೂರ್ವಾಗೃಹ ಪೀಡಿತ) ವ್ಯಕ್ತಿಯ comment ಅನ್ನು ತುಲನೆಗೆ ಬಳಸಿಕೊಳ್ಳಬಾರದು ಅನ್ನೋದು ನನ್ನ ಅಭಿಪ್ರಾಯ. ಇನ್ನು ರಾಜಕಾರಣಿಗಳ ಬಗ್ಗೆ, ಎಲ್ಲಾ ದೇಶಗಳಲ್ಲೂ ಈ problem ಇದ್ದಿದ್ದೇ. ಅಮೇರಿಕದ gang wars ಮತ್ತು ಅರಾಜಕತೆ ಜಗತ್ಪ್ರಸಿದ್ಧ. ಆದರೂ ಇಂದದು super power!, ಅವರು ಹಳೆಯದನ್ನೇ ಕೆದಕಿಕೊಂಡು ಕೂಡಲಿಲ್ಲ.. ಸಮಸ್ಯೆಗಳನ್ನು ಎದುರಿಸಿ ದೇಶ ಕಟ್ಟಿದರು, ನಾವೂ ಹಾಗೇ ಮಾಡಬಹುದಲ್ಲವೆ? ನಮ್ಮ ಕಲ್ಪನೆಯ "ಭವ್ಯ ಭಾರತ"ನ ಉಳಿಸಿ ಬೆಳೆಸಬಹುದಲ್ವೇ? ಅಲ್ವಾ ಉಲ್ಲಾಸ್?

Ullas Hindustani ಧ, 11/18/2009 - 18:04

ಸಂತೋಷ್ ನೀವು ಹೇಳಿದ್ದು ಸರಿಯಾಗಿದೆ. (ಸರಿಯಾಗಿರ ಬಹುದು). ಆದರೆ ಕೊನೆಯಲ್ಲಿ ಹೇಳಿದಿರಲ್ಲ ನಮ್ಮ "ಕಲ್ಪನೆಯ ಭವ್ಯ ಭಾರತ" ಅಂತ ಅದನ್ನು ಮಾತ್ರ ಸ್ವಲ್ಪ ಕರೆಕ್ಷನ್ ಮಾಡಬೇಕು ಅಂತ ಅನಿಸುತು. ಯಾಕೆಂದರೆ "ಭವ್ಯ ಭಾರತ" ಅನ್ನುವುದು "ಕಲ್ಪನೆಯಲ್ಲ" ಅದು "ಕಟು ವಾಸ್ತವ" "ಭವ್ಯ ಭಾರತ" ಅನ್ನುವುದು ಹಿಂದೇನು ಇತ್ತು. ಈಗ್ಲೂ.. ಇದೆ ಮುಂದೆನು ಇರುತ್ತೆ ಅದಕ್ಕೆ ಸ್ವಲ್ಪ ಕೊಳೆ ಮೆತ್ತಿ ಕೊಂಡಿರಬಹುದು ಅದನ್ನು ಸ್ವಚ್ಛ ಗೊಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಅಲ್ವಾ...
(ಸಂತೋಷ್ ನಿಮ್ಮ ಅಭಿಪ್ರಾಯನು ಇದೇ ಆಗಿದೆ ಅಂತ ನನಗೆ ಗೊತ್ತು ನಾನಿಲ್ಲಿ ಮಾಡಿದ್ದು ಒಂದು ಸಣ್ಣ ಕರೆಕ್ಷನ್ ಮಾತ್ರ )

ಸಂತೋಷ್ ಹಾಗೂ ಉಲ್ಲಾಸ್ ಅವರೇ ನಮಸ್ಕಾರಗಳು. ನಿಮ್ಮಗಳ ಪ್ರತಿಕ್ರಿಯೆಗೆ ಧನ್ಯವಾದಗಳು.
ಈ ಜಗತ್ತಿನ ಮುಂದೆ ನಾನು ಒಂದು ಸರಳ ಪ್ರತಿ ವಾದ ಮುಂದಿಡುತ್ತೇನೆ. ಯಾವ ದೇಶವಾದರೂ ತನ್ನ ತಪ್ಪು ಒಪ್ಪಿಕೊಂಡು ಉತ್ತರಿಸಲಿ ನೋಡೋಣ! ಈ ಮಾತು ಜಂಭಕ್ಕಲ್ಲ. ಜಗತ್ತಿನ ನಿತ್ಯ ಸತ್ಯವೊಂದನ್ನು ಹೇಳುತ್ತೇನೆ. ಈ ಗ್ಯಾಟ್ ಒಪ್ಪಂದ, ಜಾಗತೀಕರಣ, ಯೂರೋ ಒಕ್ಕೂಟ ಇವೆಲ್ಲಾ ಏನು? ಯಾಕಾಗಿ ಹಾಗೂ ಇವುಗಳಲ್ಲಿನ ನಿಜವಾದ `ಹೂರಣ' ಏನು ಎಂಬುದು ಜಗತ್ತಿನ ಎಲ್ಲರಿಗೂ ತಿಳಿದ ಬಹಿರಂಗ ಸತ್ಯವೇ; ಅದು ಕೇವಲ (ಅವರ ದೃಷ್ಟಿಯಲ್ಲಿ) `ದುರ್ಬಲ' ಎನಿಸಿಕೊಂಡವರ `ಏಳಿಗೆ (?)' ಹೆಸರಿನಲ್ಲಿ ಆದಷ್ಟೂ ಕೊಳ್ಳೆ ಹೊಡೆದು ತಾವು ದೊಡ್ಡವರಾಗುವುದು ಅಷ್ಟೆ.
ಇನ್ನು ಜಗತ್ತಿನ ನಿತ್ಯ ಸತ್ಯದ ವಿಷಯಕ್ಕೆ ಬರುವುದಾದರೆ, (ನಂಬುವುದಾದರೆ) ಭಗವಂತ ಅಥವಾ ಈ ಪ್ರಕೃತಿ ಎಂಬುದು ಈ ಜಗತ್ತಿನ ತನ್ನ ಪ್ರತಿ ಮಕ್ಕಳೂ ಬದುಕಲು ಅಗತ್ಯವಾದ ಎಲ್ಲ ರೀತಿಯ ಸಂಪನ್ಮೂಲವನ್ನೂ ನಮಗೆ ನೀಡಿದೆ. ನಮ್ಮ ವೇದಗಳು 10 ಸಾವಿರ ವರ್ಷಗಳ ಹಿಂದೆಯೇ ಇದನ್ನೆಲ್ಲ ಹೇಳಿವೆ; \ಅದೇ ರೀತಿ ಅದಕ್ಕೊಂದು ವ್ಯವಸ್ಥೆಯನ್ನೂ ಮಾಡಿದೆ. ಅದೇ ವರ್ಣಾಶ್ರಮ ಧರ್ಮ!
ಯಾವುದೇ ಸಮಾಜದ 4 ಶತ್ರುಗಳಾದ ಅಜ್ಞಾನ, ಭಯ, ಅಭಾವ ಹಾಗೂ ಆಲಸ್ಯ-ಇವನ್ನು ಹೊಡೆದೋಡಿಸದ ಹೊರತೂ ಯಾವುದೇ ಸಮಾಜ ಉದ್ಧಾರವಾಗುವುದಿಲ್ಲ.
ಅವನ್ನು ನಾಲ್ಕು ವರ್ಣಗಳ ಮೂಲಕ (ಕರ್ತವ್ಯದ ಆಯ್ಕೆ) ಹೋಗಲಾಡಿಸಬಹುದು. ಅದಕ್ಕೆ ವೇದವು ಕ್ರಮವಾಗಿ 4 ಹೆಸರುಗಳನ್ನಷ್ಟೇ ನೀಡಿದೆ. ಅವೇ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ!! ನಾನಿಲ್ಲಿ ಈಗ ನಾವು ಮಾಡಿಕೊಂಡಿರುವ ನೂರಾರು ಜಾತಿಗಳ ವಿಷಯ ಹೇಳುತ್ತಿಲ್ಲ. (ದಯವಿಟ್ಟು ಕ್ಷಮಿಸಿ. ಇಲ್ಲಿ ಮತ್ತೊಮ್ಮೆ ಯಾರೂ ದಾರಿ ತಪ್ಪುವುದು ಬೇಡ. ಈಗಾಗಲೇ ದಾರಿ ತಪ್ಪಿ ಸಾಕಷ್ಟು ಅನುಭವಿಸುತ್ತಿದ್ದೇವೆ) ಯಾರೇ ಇರಬಹುದು- ಜ್ಞಾನವನ್ನು ಸಂಪಾದಿಸಿ, ಸಂಸ್ಕರಿಸಿ ಅದನ್ನು ಹಂಚುವವನೇ ಬ್ರಾಹ್ಮಣ (ಇದು ಜಾತಿಯಲ್ಲ). ವಿಪತ್ತುಗಳಿಂದ, ದುಷ್ಟತನದಿಂದ, ಭಯ ಹಾಗೂ ಆತಂಕಗಳಿಂದ ನಮ್ಮನ್ನು ರಕ್ಷಿಸುವವನೇ ಕ್ಷತ್ರಿಯ! ಪಂಚ ಭೂತಗಳ ಮೂಲಕ ಪ್ರಕೃತಿ ನಮಗೆ ನೀಡಿರುವ ಸಂಪನ್ಮೂಲವನ್ನು ಎಲ್ಲರಿಗೂ ಸಮನಾಗಿ ಹಂಚುವುದೇ ನಿಜವಾದ ಆರ್ಥಿಕತೆ. ಆ ಕೆಲಸ ಮಾಡುವವನೇ ವೈಶ್ಯ (ಜಾತಿಯಲ್ಲ). ಮನುಷ್ಯನಲ್ಲಿರುವ ಆಲಸ್ಯವನ್ನು ಹೋಗಲಾಡಿಸಿ ಚುರುಕಾಗಿ ಕೆಲಸ ಮಾಡಲು ಪ್ರೋತ್ಸಾಹಿಸಿ ತಾವೂ ಕೆಲಸ ಮಾಡುತ್ತಾ ದೇಶದ ಸಂಪತ್ತನ್ನು ಹೆಚ್ಚಿಸಲು ನೆರವಾಗುವವನೇ ಶೂದ್ರ!!
ಇಂತಹ ಒಂದು ಉತ್ತಮ ವ್ಯವಸ್ಥೆಯನ್ನು ತಪ್ಪು ತಪ್ಪಾಗಿ ಅರ್ಥೈಸಿ, ಅಜ್ಞಾನ ಹರಡಿ, ಅಂಧಕಾರದಲ್ಲಿ ಮುಳುಗಿ ತೇಲಾಡುತ್ತಿರುವವರು ನಾವೇ. ಮೊದಲು ಅದನ್ನು ಹೋಗಲಾಡಿಸಿಕೊಳ್ಳಬೇಕು. ಹಾಗಾದಾಗ ಇಡಿಯಾಗಿ ಒಮ್ಮೆ ಊಹಿಸಿಕೊಳ್ಳಿ- ನಮ್ಮ ದೇಶ ಎಷ್ಟು ಭವ್ಯವಾಗುವುದೆಂದು; ಚರ್ಚಿಲ್ ನಂತಹ ಕೇವಲ `ಮೆದುಳ ಜ್ಞಾನಿ' ಎಲ್ಲಿರುತ್ತಾನೆಂದು....!? (ಅರ್ಥಾಥ್ ಅಂತಹವರು ನಮ್ಮ ಕಾಲ ಬುಡದಲ್ಲಿರುತ್ತಾರೆ ಎಂದು ಬೇರೆ ಹೇಳಬೇಕಾಗಿಲ್ಲವಲ್ಲ!?)

Perfect.

  • 2176 views