Skip to main content

ನನ್ನವ್ವನಿಗೆ ಸುಸ್ತಾಗುವುದಿಲ್ಲ !

ಇಂದ Bhavanilokesh
ಬರೆದಿದ್ದುOctober 6, 2009
2ಅನಿಸಿಕೆಗಳು

ಹೊತ್ತು ಮೂಡುವ ಮೊದಲೆ
ಮತ್ತೆ ಬಾಗಿಲ ತೊಳೆದು
ಸುತ್ತು ರಂಗೋಲಿಯಲಿ
ಮುತ್ತಿನ ಹಾಗೆ ಮನೆಯ
ಸಿಂಗರಿಸುವಳು ನನ್ನವ್ವ
ಅವಳಿಗೆ ಸುಸ್ತಾಗುವುದೇ ಇಲ್ಲ |
ತಣ್ಣನೆಯ ನೀರಲ್ಲಿ ಮಿಂದು
ಮಡಿಯ ಉಡುಗೆಯ ಧರಿಸಿ
ಕಣ್ಮುಚ್ಚಿ ಧ್ಯಾನಿಸುತ ದೇವರನು ನನ್ನ
ಮಣ್ಣು , ಮಕ್ಕಳು, ಪತಿಯ ಕಾಪಾಡು ತಾಯೆ
ಎಂದು ಬೇಡುವಳು ನನ್ನವ್ವ ಅವಳಿಗೆ
ತನ್ನ ನೆನಪಾಗುವುದೇ ಇಲ್ಲ |
ಅಡುಗೆ ಮಾಡುತ ಬಡಿಸಿ
ಮನೆಯ ಕೆಲಸವ ಮುಗಿಸಿ
ಬುತ್ತಿಯನು ಹೊತ್ತು ನಡೆವಳು ಹೊಲಕೆ
ನನ್ನವ್ವ ಅವಳಿಗೆ ಹಸಿವಾಗುವುದೇ ಇಲ್ಲ |
ಬೆಳೆದ ಬೆಳೆಯನು ಕಣ್ತುಂಬಿಕೊಳ್ಳುತ್ತ
ಕಳೆಯ ಹುಲ್ಲನ್ನು ಹೊರೆ ಮಾಡಿ ತನ್ನ
ಬಳೆಯ ಸದ್ದಿಗಾಗಿ ಕಾಯುತಲಿರುವ
ಎಳೆಯ ಕರುಗಳಿಗುಣಿಸಿ ತನ್ನ ತಾಯ್ತನವ
ತೋರುವಳು ನನ್ನವ್ವ
ಅವಳಿಗೆ ಸುಸ್ತಾಗುವುದೇ ಇಲ್ಲ |
ಕುಲದ ಒಂದೇ ಕಸುಬು
ಹೊಲದ ದುಡಿಮೆಯ ಮಾಡಿ
ಸಾಕಾಗಿ ಬಂದ ನನ್ನಪ್ಪನಿಗೆ
ಒಲವ ತೋರುತ ರಮಿಸಿ
ಏನನ್ನೋ ನೆನೆದು ಮತ್ತೆ
ಒಳಗೋಡುವಳು ನನ್ನವ್ವ
ಅವಳಿಗೆ ಸುಸ್ತಾಯಿತೇ ? ಎಂದು
ಕೇಳುವವರಿಲ್ಲ .
ಅದಕ್ಕೇ ಏನೋ ನನ್ನವ್ವನಿಗೆ ಸುಸ್ತಾಗುವುದೇ ಇಲ್ಲ ||

ಲೇಖಕರು

Bhavanilokesh

naano bhavuka jeevi

ಅನಿಸಿಕೆಗಳು

kmurthys ಮಂಗಳ, 10/06/2009 - 15:06

ಬಹಳ ಹೃದಯಸ್ಪರ್ಶಿಯಾಗಿದೆ ನಿಮ್ಮ ಕವನ!

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 10/13/2009 - 10:21

dhanyavada sir

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.