Skip to main content

ಇವತ್ತು ಕೂಡ ಕನ್ನಡ ಚಿತ್ರರಂಗ ಇಡೀ ಭಾರತದ ದೃಷ್ಟಿ ಸೆಳೆಯೋದು ಕಲಾತ್ಮಕ ಚಿತ್ರಗಳ ಮೂಲಕ ಆದ್ರೆ ಇಂಥ ಚಿತ್ರಗಳ ಬಗ್ಗೆ ಕನ್ನಡಿಗರಲ್ಲೇ ಅಭಿಮಾನ ಇಲ್ಲ.. ಪ್ರಶಸ್ತಿಗೆ ಅಂತ ಚಿತ್ರ ಮಾಡ್ತರೆ ಅನ್ನೋ ಸಣ್ಣತನದ ಮಾತು ಆಡೊ ಜನ ಇದರೆ. ದುಡ್ಡು ಸುರ್ದು ಕೆಟ್ಟ ಚಿತ್ರ ಮಾಡೊರ ಬಗ್ಗೆ ಏನು ಹೇಳೋಲ್ಲ ಯಾಕೆ ಹೀಗೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ವಿ.ಎಂ.ಶ್ರೀನಿವಾಸ ಮಂಗಳ, 09/22/2009 - 13:10

ಯಾಕೆಂದರೆ ಈ ಕಲಾತ್ಮಕ ಚಿತ್ರಗಳನ್ನು ನಿರ್ಮಿಸೋ ಮಂದಿಗೆ ಪ್ರಶಸ್ತಿ ಪಡೆಯುವವರೆಗೆ ಇರುವಂತಹ ಆಸಕ್ತಿ ಅದರ ನಂತರ ಅಂದರೆ ಅದನ್ನು ಜನಕ್ಕೆತಲುಪಿಸೋದರಲ್ಲಿ ಇರುವುದಿಲ್ಲ. ನನಗೆ ದ್ವೀಪ ನೋಡಬೇಕು,ಮುನ್ನುಡಿ ನೋಡಬೇಕು, ಗುಲಾಬಿಟಾಕೀಸ್ ನೋಡಬೇಕು ಅಂತ ಆಸೆ. ಆದರೆ ಎಲ್ಲಿ ನೋಡೋದು ಯಾವಾಗ ಥಿಯೇಟರ್ ಗೆ ಬರುತ್ತೋ ಅಂತ ಕಾದಿದ್ದೆ ಬಂತು, ಬಂದರೂ 2 ದಿನದ ಮೇಲೆ ಯಾವುದೂ ಇರೋಲ್ಲ. ಕೊನೆಗೆ ಜೆ.ಸಿ.ರೋಡ್ ಗೆ ಹೋಗಿ ಸಿ.ಡಿ. ತಂದು ಆ ಸಿನಿಮಾಗಳನ್ನು ನೋಡಿದೆ. ಎಷ್ಟು ಜನಕ್ಕೆ ಇಷ್ಟೆಲ್ಲ ವ್ಯವಧಾನವಿರುತ್ತದೆ ಮಿಸ್ಟರ್. ಯಾವುದು ಸುಲಭವೋ , ಸರಳವೋ , ಮನರಂಜಕವೋ ಅದೇ ತಾನೇ ಜನರಿಗೆ ಇಷ್ಟ. ಅದೇ ತಮಿಳು, ತೆಲಗು, ಹಿಂದಿಯಲ್ಲಿ ಈ ತರಹದ ಸ್ಥಿತಿ ಇಲ್ಲ. ಬೇಕಾದರೆ ಗಮನಿಸಿ ಹಿಂದಿಯಲ್ಲಿ ಈ ಬಾರಿಯ ಪ್ರಶಸ್ತಿಯ ಸ್ವರ್ದೆಯಲ್ಲಿದುದು, ಚಕ್ ದೇ ಇಂಡಿಯಾ. ತಾರೇ ಜಮೀನ್ ಪರ್ ನಂತಹ ಜನಪ್ರಿಯ ಚಿತ್ರಗಳು. ಈ ಸಿನಿಮಾಗಳು ಎಷ್ಟು ಜನಪ್ರಿಯ ಅಂತ ನಿಮಗೆ ಗೊತ್ತಿರಬೇಕು ಅಂದ್ಕೋತೀನಿ. ತಮಿಳಿನಲ್ಲಿ ಪಿತಾಮಗನ್ ನಂತಹ ಚಿತ್ರಗಳಿಗೆ ಪ್ರಶಸ್ತಿ ಸಿಗುತ್ತದೆ. ತೆಲುಗಿನಲ್ಲಿ ಕೂಡ ಸ್ಥಿತಿ ಭಿನ್ನವೇನಲ್ಲ. ಆದರೆ ನಮ್ಮಲ್ಲಿ ಇದುವರೆಗೂ ಯಾವುದಾದರೂ ಮನರಂಜನಾ ಚಿತ್ರ, ಜನಮನ್ನಣೆ ಪಡೆದ ಚಿತ್ರ, ಪ್ರಶಸ್ತಿ ಪಡೆದಿದೆಯಾ..? ಅಂದರೆ ಜನಮನ್ನಣೆಗಿಂತ, ಯಾರೋ ಕೆಲವು ಬುದ್ಧೀಜೀವಿಗಳ ನಿರ್ಧರಿಸುವ ಪ್ರಶಸ್ತಿ ದೊಡ್ಡದಾ..? ಬುದ್ದೀಜೀವಿಗಳಿಗೆ ಅರ್ಥವಾಗುವ ವಿಷಯಗಳು ಜನಸಾಮಾನ್ಯರಿಗೆ ಅರ್ಥವಾಗುವುದು ಹೇಗೆ.? ಅಷ್ಟು ಸುಲಭಕ್ಕೆ ಅರ್ಥವಾಗುವುದಾಗಿದ್ದಿದ್ದರೆ ನಮ್ಮಂತ ಎಷ್ಟೋ ಜನ ಇನ್ನೂ "ಅನಾಗರೀಕರಾಗಿ" ಇರಬೇಕಿರಲಿಲ್ಲ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ.
ಹಾಗೆಂದ ಮಾತ್ರಕ್ಕೆ ಕಲಾಪ್ರಕಾರದ ಚಿತ್ರಗಳು ನಿರ್ಮಾಣವಾಗುವುದೇ ತಪ್ಪು ಎಂದು ನಾನು ಹೇಳುತ್ತಿಲ್ಲ. ಕಲಾಪ್ರಕಾರದ ಚಿತ್ರಗಳು ಸಾಮಾನ್ಯವಾಗಿ ಒಂದು ಶೋಷಿತ ವರ್ಗದ, ಜ್ವಲಂತ ಸಮಸ್ಯೆಯ ಸುತ್ತ ಗಿರಕಿಹೊಡೆಯುತ್ತವೆ. ಆ ಗಿರಕಿ ಪ್ರಕ್ರಿಯೆ ಥೀಯೇಟರ್ ನಲ್ಲಿ ಕುಳಿತ ಪ್ರೇಕ್ಷಕನಿಗೂ ಆಗಬಾರದು. ಅದರ ಬದಲು ತುಸು ಸರಳವಾಗಿ ಮನರಂಜಕವಾಗಿ ಹೇಳಿದರೆ ಅದರ ಪರಿಣಾಮ ಇನ್ನಷ್ಟು ವ್ಯಾಪಕವಾಗಿರುತ್ತದೆ. ಕಲಾ ಪ್ರಕಾರದ ಚಿತ್ರಗಳು ಯಾವುದೇ ಸಾಂಸ್ಕ್ರುತಿಕ ವಿಭಾಗದ ಆಧಾರ ಸ್ತಂಭಗಳು. ಆದರೆ ಆ ಸ್ತಂಭಗಳಿಗೆ ನುಸಿ ಹಿಡಿಯಬಾರದು ಅಷ್ಟೆ.

praveen sooda ಶುಕ್ರ, 09/25/2009 - 09:30

ನೀವು ಹೇಳಿದ್ರಲ್ಲ ತಾರೆ ಜಾಮಿನ್ ಪರ್, ಪಿತಮಗನ್, ಇವೆಲ್ಲ ಕಲಾತ್ಮಕ ಚಿತ್ರಗಳೆ ಆನ್ಬೋದು. ಆದ್ರೆ ಜನರನ್ನ ತಲುಪಿರೋ ಚಿತ್ರಗಳು. ಆದರೆ ನಮ್ಮಲ್ಲಿ ಅಂತ ಚಿತ್ರ ಹಿಟ್ ಅನ್ಸ್ಕೊಳಲ್ಲ. ಉದಾಹರಣೆಗೆ ಮಾ ಮಾ ಮ, ಚಿಗುರಿದ ಕನಸು, ಇಂತೀ ನಿನ್ನ ಪ್ರೀತಿಯ, ಇವೆಲ್ಲ ಒಳ್ಳೇ ಪ್ರಯತ್ನಗಳು ಆದ್ರೆ ಸೋತಿವೆ. ಇದನ್ನೇ ಹಿಂದಿ ತಮಿಳ್ ಅಲ್ಲಿ ತಗೆದರೆ ಅದು ಕನ್ಡಿತ ಹಿಟ್ ಅಂಸ್‌ಕೋತಾ ಇದ್ವು, ಕಾರಣ ಅಲ್ಲಿನ ಕೆಲವು ನಿರ್ದೇಶಕರು ಜನರಲ್ಲಿ ಇಗಲು ಅಂತ ಸದಭಿರುಚಿನ ಕಾಪಡ್ಕೊನ್ಡು ಬಂದಿದಾರೆ. ಒಂದು ತಿಳಿರಿ ಜನಕ್ಕೆ ತಲುಪಿದ್ರೆ ಮಾತ್ರ ಅದು ಸದಭಿರುಚಿ ಇಲ್ಲ ಅಂದ್ರೆ ಇಲ್ಲ ಅನ್ನೋ ಮನೋಭಾವ ಸರಿನ? ಬುದ್ಧಿಜೀವಿಗಳ ಪ್ರಕಾರ ಒಳ್ಳೇದು ಅನ್ಸಿದ್ದು ಜನ ಪರವಾದ ಕಾಳಜಿ ಇಂದ ಹೊರತು ತೋರಿಕೆಗಳ್ಳ. ಮಕ್ಕಳು ಬೇಕು ಅಂದಿದ್ದೆಲ್ಲ ಕೊಡೊಕೆ ಆಗಾತ್ತಾ ಇಲ್ಲ ಅಲ್ವಾ ಹಾಗೆ ಒಳ್ಳೇದು ಕೆಟ್ಟದ್ದು ಹೇಳೋಕೆ ಒಬ್ರು ಇರ್ಬೇಕು. ಅವರ್‌ನ್ನ ನೀವು ಬುದ್ಧಿಜೀವಿಗಳು ಅಂದ್ರೆ ಹಾಗೆ ಇರ್‍ಲಿ.

  • 652 views