ಕರ್ನಾಟಕದ ರಾಜಕೀಯ ಎತ್ತ ಸಾಗುತ್ತಿದೆ ಅಂಥ ನೆನೆಸಿಕೊಂಡರೆ ಒಂದು ಕ್ಷಣ ಮೈಜುಮ್ಮೆನ್ನುತ್ತದೆ. ಯಾರಿಗೂ ಸಾಮಾಜಿಕ ಕಳಕಳಿ ಇಲ್ಲ, ಬದ್ದತೆಯಂತೂ ಇಲ್ಲವೇ ಇಲ್ಲ. ಯಾರಲ್ಲಿ ನೋಡಿದರೂ ಸ್ವಾರ್ಥ, ಅಧಿಕಾರ ಲಾಲಸೆ, ಘೋಮುಖ ವ್ಯಾಘ್ರತನ. ಅದರಲ್ಲೂ ಅಧಿವೇಶನಗಳು ನಡೆದರಂತೂ ಹೇಳುವುದೇ ಬೇಡ ಹೇಸಿಗೆಯೆನಿಸಿಬಿಡುತ್ತದೆ. ಪ್ರಜಾಕಲ್ಯಾಣಕ್ಕೆ ಉಪಯುಕ್ತವೆನಿಸುವ ಯಾವೊಂದು ವಿಷಯಗಳು ಚರ್ಚೆಯಾಗದೇ ಹೋದರೂ ಹಗರಣಗಳು ಮಾತ್ರ ಕಲಾಪಗಳನ್ನು ನುಂಗಿ ನೀರು ಕುಡಿದುಬಿಡುತ್ತವೆ. ಇಂತಹ ವಾತಾವರಣದಲ್ಲೂ ನನ್ನನ್ನೊಂದು ವಿಷಯ ತುಂಬಾ ಕಾಡಿತು ಅದೇನೆಂದರೆ "ಇನ್ನು ಮೇಲೆ ಇಬ್ಬರು ಮಕ್ಕಳಿಗೆ ಮಾತ್ರ ಸರ್ಕಾರಿ ಸವಲತ್ತು ಸಿಗುತ್ತದೆ" ಎಂಬುದು. ಈ ವಿಷಯದ ಬಗ್ಗೆ ಮತ್ತೆ ಚರ್ಚೆಯಾಗಬಹುದು ಅಂತ ತುಂಬಾ ಕಾದೆ. ಆದರೆ ಸದನದ ಒಳಗೆ ಮತ್ತು ಹೊರಗೆ ಈವರೆಗೆ ಒಬ್ಬರೂ ಈ ವಿಷಯದ ಬಗ್ಗೆ ತುಟ್ ಪಿಟಕ್ ಅಂದಿಲ್ಲ.
ನಮ್ಮ ನಡುವಿನ ಎಲ್ಲಾ ಸಮಸ್ಯೆಗಳಿಗಿಂತ ಅಥವಾ ಎಲ್ಲಾ ಸಮಸ್ಯೆಗಳಿಗೆ ಮೂಲವೇ ಈ ಜನಸಂಖ್ಯೆ. ಈ ಒಂದು ಸಮಸ್ಯೆಯ ಮೇಲೆ ನಾವು ನಿಯಂತ್ರಣ ಸಾಧಿಸಿಬಿಟ್ಟರೆ ಪ್ರಸ್ತುತ ಸಮಾಜದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿಬಿಟ್ಟಂತೆ ಎಂಬುದೊಂದು ಬಲವಾದ ವಾದವಿದೆ.
ಈ ವಿಷಯವಾಗಿ ವಿಸ್ಮಯನಗರಿಯಲ್ಲಿ ಅರ್ಥಪೂರ್ಣ ಚರ್ಚೆನಡೆದರೆ ಚೆಂದ ಎನಿಸಿತಾದ್ದರಿಂದ ಇಲ್ಲಿ ದಾಖಲಿಸಿದ್ದೇನೆ. ಮುಂದಿನದು ವಿಸ್ಮಯದ ಓದುಗರಿಗೆ ಬಿಟ್ಟದ್ದು.
- 570 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ