ಮುನಿಸು ತರವೇ ?? ಮಗುವೇ??
ಏಕಿಂದು ನಿನ್ನ ಮುಖ
ಕೊಂಚ ಬಾಡಿದೆ
ಮುದ್ದು ಮುದ್ದಿನ ಮಾತು
ಮುನಿಸು ತೋರಿದೆ |
ಅಮ್ಮನೊಡನೆ ಕೋಪವೇನೆ
ಹೀಗೆ ಮಲಗಿಹೆ
ಮೋರೆಗಡ್ಡ ಕೈಯನಿಟ್ಟು
ಮಗ್ಗುಲಾಗಿಹೆ |
ಪುಟ್ಟ ಹೆಜ್ಜೆ ಇಟ್ಟು
ಮನೆಯ ಅಳತೆ ಮಾಡೆಯಾ
ತುಂಟ ನೋಟದಲ್ಲಿ ನನ್ನ
ಇಣುಕಿ ನೋಡೆಯಾ |
ಕಾಡಬೇಡ ಕಂದ ಹೀಗೆ
ನನ್ನ ನೋಡದೆ
ಮುನಿಸಿನಲ್ಲಿ ಮಲಗಬೇಡ
ಮಾತನಾಡದೆ |
ಕಾಯುತಿರುವೆ ಕಂದ ನಿನ್ನ
ಒಲವ ಬಂಧಕೆ
ಸೋತು ಹೋದೆ ಮುನಿಸಿನಲ್ಲೂ
ನಿನ್ನ ಚಂದಕೆ !
ಸಾಲುಗಳು
- 324 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ