Skip to main content

ಪರೆಶನ ಲೈಟ್ ಬಿಲ್ ಮತ್ತು ಇಲಿ

ಬರೆದಿದ್ದುAugust 5, 2009
noಅನಿಸಿಕೆ

ಸಂಜೆ ನಾನು ಟೈಲರ್ ಚಂದ್ರುನಿಂದ ಬಟ್ಟೆ ತೆಗೆದು ಕೊಂಡು ಬರಲು ಹೋದಾಗ ಅಲ್ಲಿ ಚಂದ್ರು ಹೇಳ್ದ ಸಾರ್ ನಿಮ್ ಪರೇಶ ಇವತ್ತು ಲೈಟ್ ಬಿಲ್ ಕಟ್ಟಾಕ್ ಬಂದಿದ್ದ ಬರುವಾಗ ಜೋಬಲ್ಲಿ ಇಲಿ ಮರಿ ಇಟ್ಕೊಂಡ್ ಬಂದಿದ್ದ . ಏನ್ ಹೇಳ್ತಾ ಇದಿಯಪ್ಪ ಅಂದೇ, ಹೌದು ಸಾರ್ ಬಾಳ ದೊಡ್ಡ ಕತೆ ಆಯ್ತು ಇಲ್ಲಿ ಕ್ಯೂ ನಲ್ಲಿದ್ದವರಿಗೆ ಎಲ್ಲ ಓಡ್ಸಿ ಬಿಲ್ ಕಟ್ಟಿ ಹೋದ ಅಂದ , ನನಗೆ ಏನ್ ಹೇಳಬೇಕೋ ತಿಳಿಯದೆ ಮನಗೆ ಬಂದೆ ಕಾರಣ ನೆನ್ನೆ ರಾತ್ರಿ ನಾನೇ ಅವನಿಗೆ ಲೈಟ್ ಬಿಲ್ ಕಟ್ಟು ಅಂತ ಹಣ ಮತ್ತು ಬಿಲ್ ಕೊಟ್ಟಿದ್ದು . ನೇರ ಮನೆಗೆ ಬಂದು ಕೇಳಿದಾಗ ಪರೇಶ ಇನ್ನು ಬಂದಿರಲಿಲ್ಲ ,ರಾತ್ರಿ ಸುಮಾರು ೧೦ ಗಂಟೆಗೆ ಮಹಾರಾಜ ನಿಧಾನವಾಗಿ ಕಡ್ಲೆ ಬೀಜ ತಿಂತ ಬಂದ .

ಪರೇಶ ಬಾರೋ ಇಲ್ಲಿ ಅಂದೇ ಏನ್ಸಾರ್ ಅಂದ ಲೈಟ್ ಬಿಲ್ ಕಟ್ಟಾಕ್ ಹೋದಾಗ ಇಲಿ ಮರಿ ಜೋಬಗ್ ಇಟ್ಕೊಂಡ್ ಹೋಗಿ ಅಲ್ಲಿ ಗಲಾಟೆ ಯಾಕ್ ಮಾಡ್ದೇ . ಹೋಒ ಅದಾ ಸಾರ್.,.,.,
ಇದೆ ಕಡ್ಲೆ ಬೀಜ ಸಾರ್ .,., ಅದು ಏನಂದ್ರೆ ನಮ್ಮ ವಿನಾಯಕ ಟಾಕಿಸ್ ಹತ್ರ ಒಬ್ಬ ಬಾಂಡ್ಲಿ ಯಲ್ಲಿ ಮರಳು ಉಪ್ಪು ಮಿಕ್ಸ್ ಮಾಡಿ ಕಡ್ಲೆ ಬೀಜ ಹುರ್ದು ಮಾರ್ತಾನಲ್ಲಾ ಸಾರ್ ಡಾನ್ ಡೀನ್ ಅಂತ ಸೌಂಡ್ ಮಾಡ್ತಾ ಇರ್ತಾನ್ ನೋಡ್ರಿ ಸಾರ್ ಅದೇ ಕಡ್ಲೆ ಬೀಜ ಸಾರ್ ಇದು ಅಂದ. ಅದೆಲ್ಲ ಇರ್ಲಿ ನಾನ್ ಕೇಳಿದ್ ಅದಲ್ಲ ಅಂದೇ ಅದೇ ಸಾರ್ ಹೇಳ್ತೀನ್ ಕೇಳ್ರಿ .,,.

ನೆನ್ನೆ ರಾತ್ರಿ ಕಡ್ಡ್ಲೇ ಬೀಜ ತಿಂದು ಬಾಕಿ ಜೋಬಲ್ಲಿ ಹಂಗೆ ಇತ್ತಲ್ಲ ಸಾರ್ ಮನೆಗ್ ಹೋಗಿ ಊಟ ಆದ್ ಮೇಲೆ ಬಟ್ಟೆ ಗೂಟಕ್ ನೆತ್ ಹಾಕಿ ಮಲುಗ್ ಬಿಟ್ಟೆ . ಬೆಳಿಗ್ಗೆ ಕೆಲಸಕ್ಕೆ ಹೊರಟಾಗ ಬಟ್ಟೆ ಹಾಕೊಂಡ್ ಹೊರಟೆ ನೇರ KEB ಆಫೀಸ್ ಹೋದೆ ಬಿಲ್ ಕಟ್ಟಿ ಬರಾನ ಅಂತ ನೀವ್ ಕೊಟ್ಟಿದ್ರಲ್ಲ ಅದಕ್ಕೆ , ಅಲ್ಲಿ ಹೋಗ್ ನೋಡುದ್ರೆ ಬಾಳ ಜನ ಕ್ಯೂ ನಲ್ಲಿ ನಿಂತಿದ್ರು ನಾನು ಹೋಗ್ ನಿಂತೇ ನಿಂತಾಗ ಜೋಬಾಗ್ ಒಂತರ ಬುಳು ' ಬುಳು ' ಅಂತ ಶುರು ಆಯ್ತು ಸಾರ್ ನನಗ್ಯಾಕೋ ಒಂತರ ಅನುಸ್ತು ಜನ ಬೇರೆ ತುಂಬ ಇದಾರೆ ಅಂತ ಸುಮ್ನೆ ನಿಂತೇ , ಆದ್ರೆ ಜಾಸ್ತಿನೆ ಬುಳು ಬುಳು ಶುರು ಆಗ್ ಬಿಡ್ತು ಸಾರ್ ಗೊತ್ತಾಗ್ ಬಿಡ್ತು ಸಾರ್ ಎಲ್ಲೋ ರಾತ್ರಿ ಕಡ್ಲೆ ಬೀಜ ತಿನ್ನಕ್ಕೆ ಇಲಿ ಮರಿ ಜೋಬಾಗ್ ಬಂದೈತೆ ಹೊರಗ ಹೊಗಾಕ್ ಆಗಿಲ್ಲ ಅಲ್ಲೇ ಬಾಕಿ ಆಗೈತೆ ಅಂತ , ಸೈಕಲ್ ನಲ್ಲಿ ಬಂದ್ನಲ್ಲ ಸಾರ್ ಹಂಗಾಗ್ ಗೊತ್ತಾಗಿಲ್ಲ ಇಲ್ ಕ್ಯೂ ನಲ್ಲಿ ನಿಂತ ಮೇಲೆ ಬಾಳ ಬುಳು ಬುಳು ಶುರು ಆಗ್ ಬಿಡ್ತು ಸಾರ್ .
ಜೋಬಿಂದ ತೆಗದು ಕೆಳಗ್ ಹಾಕ್ದೆ ಸಾರ್ ,,,,! ಅಷ್ಟೆ ,,, !! ಜನ ಒಂತರ ಇಲಿ ನೋಡಿ ಹುಲಿ ನೋಡ್ ದವರಂಗೆ ಕ್ಯೂ ಬಿಟ್ ಆಕಡೆ ಈಕಡೆ ಒಡುದ್ರು ,,,,,,,,
ನಾನ್ ನೇರ ಹೋಗಿ ಕೌಂಟರ್ನಲ್ಲಿ ದುಡ್ಡು ಕಟ್ಟಿ ಬಂದೆ ಅಂದ ,,,
ಇಷ್ಟೆಲ್ಲಾ ಮಾಡ್ ದಾಗ ಜನ ಯಾರು ನಿಂಗ್ ಬೈಲಿಲ್ವೇನೋ ,,, ಏನ್ ಬೈತಾರೆ ನಾಕೈದ್ ಜನ ಜೋರ ಮಾಡಕ್ ಬಂದ್ರು ಇನೊಂದ್ಸಲ ಹೀಗ್ ಮಾಡುದ್ರೆ ಹಂಗ್ ಮಾಡ್ತಿವ್ ಹಿಂಗ್ ಮಾಡ್ತಿವ್ , ಜೋಬಾಗ್ ಇಲಿ ಇಟ್ಕೊಂಡ್ ಬಂದಿ ನಮಗೆಲ್ಲ ಓಡ್ಸಿ ಮೋಸ ಮಾಡ್ತಿಯೇನೋ ಅಂದ್ರು ,,,,
ನಾನ್ ಹೇಳ್ದೆ ಮುಂದಿನ ತಿಂಗ್ಳು ಇದೆ ತಾರಿಕ್ ಬರ್ತೀನಿ ಅವತ್ತು ಜೋಬಾಗ್ ನಾಲ್ಕು ಹಾವ್ ಇಟ್ಕೊಂಡ್ ಬರ್ತೀನಿ .,.,.,.,.,.,.,.,.,.,.,

ಲೇಖಕರು

ಇಸ್ಮಾಯಿಲ್ ಶಿವಮೊಗ್ಗ

" ಮಲೆನಾಡ ಮನಸ್ಸು ಮರಳುಗಾಡಿನಲ್ಲಿ "

I am a simple person like you
ನನ್ನದು ಮಲೆನಾಡಿನ ತವರೂರು ಶಿವಮೊಗ್ಗ, ಕಲಿತದ್ದು ಸಹ್ಯಾದ್ರಿ ಕಾಲೇಜ್, ಈಗ ಇರುವುದು ಅಬುಧಾಬಿ - ಯು. ಎ. ಯಿ .
ಓದುವುದು, ಬರಿಯುವುದು, ಛಾಯಾಗ್ರಹಣ, ಇಂಪಾದ ಹಾಡುಕೆಳುವುದು,,,,,,,
ನಿಮ್ಮೊಂದಿಗೆ ನಿಮ್ಮ ಭಾಷೆಯಲ್ಲಿ ಮಾತನಾಡುವುದು ...!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.