ಮಳೆ (ಕಣ್) ನೀರಿನ ಹನಿ
[img_assist|nid=4911|title=ಮಳೆ (ಕಣ್) ನೀರಿನ ಹನಿ|desc=ಮಳೆ (ಕಣ್) ನೀರಿನ ಹನಿ|link=none|align=left|width=150|height=118]
ಗೆಳೆಯ ತುಂಬ ಸಂತೋಷ ಇಂದು ಮಳೆ ಬಂದಿದೆ ಕಾರಣ ನನ್ನ ಕಣ್ಣೀರು ಕಾಣುವುದಿಲ್ಲ
ಮಿಂಚಿನ ಬೆಳಕಲ್ಲಿ ನನ್ನನ್ನು ನೋಡಬೇಕೆಂದು ನೀನು ಬಂದೆ
ಸದ್ಯ ಗುಡುಗಿನ ಶಬ್ದದಿಂದ ಹೆದರಿ ನೀ ನನ್ನ ನೋಡಲಿಲ್ಲಾ.,.
ಗೆಳೆಯ ನಿನ್ನ ಮೇಲೆ ನನಗೆ ಕೋಪವಿಲ್ಲ ಕಾರಣ
ನೀನು ಮಳೆ ನೆನೆಯಬಾರದೆಂದು ನನ್ನ ಛತ್ರಿಯನ್ನು ನೀನು ತೆಗೆದುಕೊಂಡೆ
ಮತ್ತೆ , ನೀನು ನನ್ನ ಜೀವನದ ಸೂರೆಲ್ಲಿ ಕೊಡಿಸುತ್ತಿಯ ಎಂಬುದ ನಾನು ಅರಿತು ಕೊಂಡೆ .,.
ಗೆಳೆಯ ನೀ ನನ್ನ ಗುಲಾಬಿ ಎಂದು ಕರೆದಾಗ ಸೊಂತೋಷ ಗೊಂಡೆ
ಸದ್ಯ ನಾನಿಂದು ಗುಲಾಬಿಯಂತೆ ಆಗಲಿಲ್ಲವಲ್ಲ ಅದರಿಂದ ನಾ ತೃಪ್ತಿ ಗೊಂಡೆ
ನೀನಿಂದು ನನ್ನಂಥ ಬೇರೆ ಸುಮಾರು ಹುಡುಕಿ ಕೊಂಡೆ .,.
ಗೆಳೆಯ ,,,ಆದರೇನು ಈಗ ಹುಡುಕಿ ಕೊಂಡವರಲ್ಲಿ ನಾನಿಲ್ಲವಲ್ಲ ಅದರಿಂದ ನಾ ಸಮಾಧಾನ ಗೊಂಡೆ
ಈ ಮಳೆ ನಿಂತ ಮೇಲೆ ಮತ್ತೊಂದು ಶುಬ್ರ ಆಕಾಶ ಕಂಡಿತಲ್ಲ ಅದರಿಂದ ನಾ ಪುಳಕಿತ ಗೊಂಡೆ
ನಾನು ನನ್ನ ಹೆಸರಿನ ಶುಬ್ರಃ ಗುಲಾಬಿಯಾಗಿ ಈ ಪ್ರಪಂಚವನ್ನು ಮತ್ತೆ ಮತ್ತೆ ಮತ್ತೆ ,,,, ಕಂಡೆ ,.,.,.,.
ಸಾಲುಗಳು
- 496 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ