Skip to main content

ಚುನಾವಣೆ ಬಂತೆದರೆ ಆರೋಪ ಮತ್ತು ಪ್ರತ್ಯಾರೋಪಗಳ ಸರಮಾಲೆಯೇ ಕೇಳಿಬರುತ್ತದೆ. ಹೋಗಲಿ ಬಿಡಿ ರಾಜಕಾರಣಿಗಳ ಆ ವಿಷಯ ತಗೊಂಡು ಏನು ಮಾಡಬೇಕು. ಈ ಆರೋಪ-ಪ್ರತ್ಯಾರೋಪಗಳ ಮಧ್ಯೆ ಮಾಧ್ಯಮಗಳಲ್ಲಿ ಮತ್ತೊಂದು ಸಾಮಾನ್ಯ ಪದ ಕಾಣಿಸಿಕೊಳ್ಳೋದು ಅಂದ್ರೆ ಪ್ರಜ್ಞಾವಂತ ಮತದಾರರು. !!!!!ಮಾಧ್ಯಮಗಳ ಪ್ರಕಾರ ಪ್ರಜ್ಞಾವಂತ ಮತದಾರರು ಅಂದ್ರೆ ರಾಜಕೀಯ ,ಆರ್ಥಿಕ, ಪ್ರಜ್ಞೆ ಇರುವವರು . ನಮ್ಮ ಕರ್ನಾಟಕದ ವಿಷಯಕ್ಕೆ ಬಂದಾಗ ಬೆಂಗಳೂರು ದಕ್ಷಿಣ ಕ್ಷೇತ್ರ ಅತಿ ಹೆಚ್ಚು ಪ್ರಜ್ಞಾವಂತರು ಇರೋ ಕ್ಷೇತ್ರ ಅಂತ ಪ್ರಚಾರ ಪಡೆದಿದೆ. ಈ ಕ್ಷೇತ್ರದಲ್ಲಿ ಶೇ.90 -95 ಸಾಕ್ಷರತೆ ಇದೆ. ಅದರಲ್ಲೂ ಸಾಕಷ್ಟು ಜನ ಪದವಿಧರರು.ಆದರೆ 1994 ರಿಂದ ನಾನು ಗಮಿನಿಸೋರೋ ಹಾಗೆ ಬೆಂಗಳೂರುನಲ್ಲಿ ಮತದಾನ ಶೇ.55 ನ್ನು ದಾಟಿಲ್ಲ.ಪ್ರಜ್ಞಾವಂತರು ನಮ್ಮ ದೇಶ ಕಟ್ಟಬೇಕು,ಬೆಳಸಬೇಕು ಅನ್ನೋ ಕೂಗು ಕೇಳಿಬರುವಾಗ ಯಾಕೆ ಈ ತರ ದೇಶ ರೂಪಿಸೋ ಚುನಾವಣೆಯಿಂದ ವಿಮುಖರಗೋದು ?.2004,2008 ರಲ್ಲಿ ಅಂತು ಮತದಾನ ಶೇ .50 ನ್ನು ದಾಟಲಿಲ್ಲ .ಇದೆ ನಮ್ಮ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿಷಯಕ್ಕೆ ಬಂದರೆ 1994 ರಿಂದ ಶೇ.72 ಕ್ಕಿಂತ ಕಡಿಮೆ ಮತದಾನ ಆಗಿಲ್ಲ. 2004 ರಲ್ಲಿ ಶೇ.75,2008 ರಲ್ಲಿ ಶೇ. 76 ರಷ್ಟು ಮತದಾನ ಕಂಡಿತ್ತು.ಇವತ್ತು ಕೂಡ ರಾಜ್ಯದಲ್ಲಿ ಅತಿ ಹೆಚ್ಚು ಮತದಾನ ಚಿಕ್ಕೋಡಿ ವಾಪ್ತಿಯಲ್ಲಿ ನಡೆದಿದೆ. ಚಿಕ್ಕೋಡಿ ಕ್ಷೇತ್ರ ವ್ಯಾಪ್ತಿಯಲ್ಲಿ ನಿಪ್ಪಾಣಿ,ಸಂಕೇಶ್ವರ,ಅಥಣಿ,ಚಿಕ್ಕೋಡಿ ಬಿಟ್ಟರೆ ಉಳಿದ ಶೇ.85 ಭಾಗ ಹಳ್ಳಿಗಳಿಂದ ಕೂಡಿದೆ.ಇಲ್ಲಿನ ಸಾಕ್ಷರತೆ ಶೇ.74 .ಅದರಲ್ಲಿಪದವಿಧರರು ಶೇ.25-30 . ಆದರು ದೇಶ ರೂಪಿಸೋ ಚುನಾವಣೆಯಲ್ಲಿ ಇಷ್ಟು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕತ್ಯವ್ಯ ನಿರ್ವಹಿಸಿದ್ದಾರೆ.

ಈಗ ನನ್ನ ಚರ್ಚೆಯ ವಸ್ತು ಏನೆಂದರೆ ಪ್ರಜ್ಞಾವಂತ ಮತದಾರರು ಅಂದ್ರೆ ಯಾರು ? ಮೇಲಿನಾ ಎರಡು ಉದಾಹರಣೆ ತಗೊಂಡು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ.
ಪ್ರಜ್ಞಾವಂತರು ಕೇವಲ ನಗರ ಪ್ರದೇಶಕ್ಕೆ ಸೀಮಿತಾನಾ ?ಅಥವಾ ಕೇವಲ ಪಧವಿದರರಿಗೆ ಮಾತ್ರ ಸೀಮಿತಾನಾ ?..ಚುನಾವಣೆಯಲ್ಲಿ ಪಾಲ್ಗೊಂಡು ತಮ್ಮ ಕರ್ತವ್ಯ ನಿರ್ವಹಿಸೋ ರಾಜಕೀಯ ,ಆರ್ಥಿಕ ಪ್ರಜ್ಞೆ ಇರುವ ಪಧವಿಧರರಲ್ಲದವರು,ಅನಕ್ಷರಸ್ತರು ಪ್ರಜ್ಞಾವಂತರಲ್ಲವೇ? ನಿಮ್ಮ ಅಭಿಪ್ರಾಯ ಮಂಡನೆ ಆಗಲಿ .ಅರೋಗ್ಯಕರ ಚರ್ಚೆ ನಡೆಯಲಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Ballari Babu (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 04/24/2009 - 09:09

ಮತದಾರರು ಪ್ರಜ್ಞಾವಂತರೇ., ಅದರೆ ನಮ್ಮನ್ನು ಪ್ರತಿನಿಧಿಸುವವರು ಎಂದೆನಿಸಿಕೊಂಡವರು ಅರ್ಹರಿಲ್ಲವೆಂದು ಅರಿತ ಮೇಲೆಯೇ, ಅವರೂ ಅಯೋಗ್ಯರು ಎಂದೆನಿಸಿ ಮತ ಚಲಾವಣೆ ಮಾಡಲು ಹಿಂದೇಟು ಹಾಕುವುದು., ಎಲ್ಲರಿಗೂ ಗೊತ್ತಿರುವ ವಿಷಯವೇ. ಎಲ್ಲಾ ರಾಜಕೀಯ ಪಕ್ಷಗಳೂ ಅಯೋಗ್ಯರಿಗೇ ತಮ್ಮ ಟಿಕೇಟ್ ನೀಡುತ್ತಿರುವುದೆಂದು. ಅಯೋಗ್ಯರನ್ನು ಯಾಕೆ ಆರಿಸಲು ತಮ್ಮ ಅಮೂಲ್ಯ ಮತವನ್ನು ಏಕೆ ವ್ಯರ್ಥ ಮಾಡಿಕೊಳ್ಳಬೇಕೆಂಬ ನಿಲುವು ವಿದ್ಯಾವಂತರಿಗೆ ಪ್ರಜ್ಞಾವಂತರಿಗೆ ಬಂದಿರಬಹುದು.

ಗೆಂಡೆತಿಮ್ಮ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 04/24/2009 - 12:58

ಪ್ರಜ್ಞಾವಂತ ಮತದಾರರು ಅಂದರೆ ಮತಹಾಕಲು ದುಡ್ಡು ತೆಗೆದುಕೊಂಡಾದ ಮೇಲೂ ದುಡ್ಡುಕೊಟ್ಟವರಿಗೆ ಮತಹಾಕದಿದ್ದರೆ ಅದು ಅವರಿಗೆ ಗೊತ್ತಾಗುವದಿಲ್ಲ ಎಂದು ಗೊತ್ತಿರುವವರು.

ಅಲ್ಲದೇ ದುಡ್ಡು ತೆಗೆದುಕೊಂಡು ಮತಹಾಕದೇ ಹೋದರೆ ಪಾಪಪ್ರಜ್ಞೆಯಿಂದ ನರಳದೇ ಕೂಡ ಇರುವವರು.

ಆದರೆ ಎಲ್ಲದಕ್ಕಿಂತ ಮುಖ್ಯವಾಗಿ ಪ್ರಜ್ಞಾವಂತ ಮತದಾರರು ಅಂದರೆ, ಕೇಳಲು ಜನ ಇದ್ದಾರೆ ಅಂತ ಅವರ ಮುಂದೆ ಹೇಗೆ ದೇಶ ಕೆಟ್ಟು ಹೋಗಿದೆ ಎಂದು ಭಾಷಣ ಮಾಡಿದರೂ ಮತಗಟ್ಟೆಗೆ ಮರೆಯದೇ ಹೋಗಿ ಮತ ಹಾಕುವವರು.

  • 952 views