Skip to main content

ಸತ್ತರೂ.. ಪ್ರೀತಿ ಅಮರ ಅಂತಾರಲ್ಲ?? ಇದೇನಾ?

ಬರೆದಿದ್ದುApril 20, 2009
3ಅನಿಸಿಕೆಗಳು

ಬೆಳಗಾಗುವ ಮುನ್ನವೇ. ದುಡುಕಿದವನಿಗೆ, ಬದುಕು ಕತ್ತಲಾಗಿ ಹೋಯಿತು, ಪ್ರಾಣಪಕ್ಷಿ ದೇಹದ ಗೂಡು ತೊರೆದು ಹಾರಿಹೋಗಿತ್ತು. :(

ಅವಳ ಬಳಿ ತನ್ನ ಪ್ರೀತಿಯ ನಿವೇದನೆಯ ಮೊಂಬತ್ತಿ ಹಚ್ಚಿದ್ದಕ್ಕೆ, ಕ್ಷಣಾರ್ದದಲ್ಲಿ 'ಉಫ್' ಎಂದು ಹಾರಿಸಿ ಬಿಟ್ಟಳು..! ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಇವನನ್ನು, ಕಲ್ಲು ಹೃದಯದಿಂದ ಮನಸ್ಸಿನ ಕನ್ನಡಿ ಹೊಡೆದು ಚೂರು ಮಾಡಿಬಿಟ್ಟಿದ್ದಳು, ಉದ್ವೇಗದಿಂದ ಉಸಿರೇ ಇವಳಾಗಿದ್ದ ಇವನನ್ನು; ಉಸಿರೇ ಬಿಟ್ಟು ಬಿಡು ಎಂದಳು!, ಹೂ-ಬಾಣದಂತೆ ಅವಳ ಕಣ್ಣು ಎಂದು ವರ್ಣಿಸುತ್ತಿದ್ದವನಿಗೆ, ಅದೇ ಬಾಣಗಳಿಂದ ಎದೆಯ ಮೀಟಿ, ಹೃದಯವನ್ನೆ ಕೊಂದಳು!, ಪ್ರೀತಿ ಮಾತ್ರ ಎಲ್ಲರನ್ನು ಸೊಂಕು ಮಾಡಿಬಿಡುತ್ತದೆ ಆದರೆ ಸೊಂಕಾದವರಲ್ಲಿ ಕೆಲವರು ಬದುಕಿದರು-ಕೆಲವರು ಸತ್ತರು!!....

ಯೌವ್ವನದ ಹುಚ್ಚು-ಹೊಳೆಯಲ್ಲಿ.. ಪ್ರೀತಿ, ಪ್ರೇಮ ಇವೆಲ್ಲ ಸಹಜ. ಇದೆಲ್ಲದರ ನಡುವೆ ಸೋಲು, ಗೆಲುವು ಇದೇ ಭವಿಷ್ಯದ ಮುಖ್ಯವಾದ ದಾರಿ. ಪಾಪ ಇವನದು ನಿಜಕ್ಕು ಸಚ್ಚಾ 'ಪ್ರೀತಿ' ಅವಳನ್ನು ಎಷ್ಟು ಪ್ರೀತಿಸುತ್ತಿದ್ದ ಎಂದರೇ, ತನ್ನ ಭವಿಷ್ಯದ ರೂಪು-ರೇಖೆಗಳನ್ನೆಲ್ಲ ಮರೆತಿದ್ದ, ಸದಾ ಅವಳ ಗುಂಗಿನಲ್ಲಿ ತನ್ಮಯತೆಯಿಂದ ತನ್ನನ್ನೇ.. ಮರೆಯುತ್ತಿದ್ದ, ದಿನದ ಎಲ್ಲಾ ಪುಟಗಳಲ್ಲಿಯೂ ಅವಳ ಹೆಸರಿತ್ತು, ಅವಳದೆ ನೆನಪಿತ್ತು, ಅವಳದೇ...ಎಲ್ಲಾ....! ಇವನ ಈ ಪ್ರೀತಿಯ ಪವಿತ್ರತೆಯನ್ನು ಅರ್ಥ ಮಾಡಿಕೊಳ್ಳದೆ ಇವನನ್ನು ನಿರಾಕರಿಸಿ ಬಿಟ್ಟಳು. ನೀನು 'ಸಾಯಿ' ಎಂದ ಮರುಕ್ಷಣವೇ.. ಜೀವ ಬಲ ಉಡುಗಿ ಹೋಗಿತ್ತು..!

ಇವನ ಬಗ್ಗೆ ಹೆಚ್ಚಾಗಿ ತಿಳಿಯದ ತಂದೆ-ತಾಯಿಯರೂ ಕೂಡ ಇವನ ದೇಹ ಸ್ಥಿತಿಯ ಬಗ್ಗೆ ಕನಿಕರದಿಂದ ದೇವರು-ದಿಂಡಿರು-ಹಾಸ್ಪಿಟಲ್-ಮಂತ್ರ-ತಂತ್ರ ಹೀಗೆಲ್ಲಾ.. ತಿರುಗಾಡಿದ್ದರು.. ಯಾವ ಕಾಯಿಲೆ? ಯಾವ ರೋಗ? ಯಾವ ಔಷಧಿ? ತಲೆ ಕೆಟ್ಟು ಹೋಗಿತ್ತು, ಆದರೆ ಇವನಿಗೆ ಅವಳ ಪ್ರೀತಿಯ ಔಷಧಿಯ ಮುಂದೆ ಇನ್ನೆಲ್ಲವೂ.. 'ಸತ್ತೆ' :(

ದಿನೇ, ದಿನೇ... ಅವಳ ನೆನಪಲ್ಲಿ, ಬದುಕಿದ್ದು ಸತ್ತ-ನಿರ್ಜೀವವಾಗಿದ್ದವನಿಗೆ ಅದೊಂದು ಕೊನೆಯ ಕ್ಷಣ.. ದೇಹದಿಂದ ಕೊನೆಯ ಬಿಡುಗಡೆಗಾಗಿ ಉಸಿರು ಪರದಾಡುತ್ತಿದೆ.!? ದೇಹ ಸ್ಥಿತಿ ಸಂಪೂರ್ಣ ನಿಂತು ಹೋಗಿದೆ, ಬಿಟ್ಟ ಕಣ್ಣು, ಬಿಟ್ಟಂತೆಯೇ.. ಮಾತಿಲ್ಲದೇ..ಮೌನದಲ್ಲಿ ಅವಳ ಬರುವಿಕೆಗಾಗಿ ಕಾದಂತಿದೆ..? ಬಂದು-ಬಳಗ, ತಂದೆ-ತಾಯಿ ಎಲ್ಲರೂ... ಅಳುತ್ತಿದ್ದಾರೆ, ಇವನ ಈ ವಿಚಿತ್ರ ಕಾಯಿಲೆಯನ್ನು ತಿಳಿಯಲಾಗದೆ..! ವಿಷಯ ಊರೆಲ್ಲ ಹರಡುತ್ತಿದ್ದಂತೆ ಅದರ ಸುಳಿವು ಅವಳಿಗೂ ತಿಳಿಯಿತು, ಕೊನೆಯ ಜೀವ, ತಿಳಿಯದ ರೋಗ, ವಯಸ್ಸು ಕೂಡ ಎಳೆಯದು, ಇದೆಲ್ಲದರ ಪರಿಗಣನೆ ಮಾಡುತ್ತಿದ್ದ ಅವಳು., ತನ್ನ ಮನಸ್ಸು ಹಗುರವಾಗುತ್ತಿದ್ದಂತೆ ಅನಿಸತೊಡಗಿತ್ತು, ಕಲ್ಲಾಗಿದ್ದ ಹೃದಯ ಕರಗುತ್ತಿದ್ದಂತೆ ಭಾಸವಾಗತೊಡಗಿತ್ತು, ಕನಿಕರದ ನೀರಾಗಿ ಹರಿಯುತ್ತ, ಅವನ ರೋಗಕ್ಕೆ ನಾನೇ ಮದ್ದು ಎಂಬ ತನ್ನ ತಪ್ಪಿನ ಅರಿವಾಗಿ, ತನ್ನ ಗೆಳೆಯರೊಂದಿಗೆ ಇದರ ಬಗ್ಗೆ ತಿಳಿದು ಕೊಂಡು, ತನ್ನನ್ನು ಪ್ರೀತಿಸುತ್ತಿದ್ದ ಇವನನ್ನು ಉಳಿಸಲು ಓಡೋಡಿ ಬಂದಳು...:)

ನೀರವ ಮೌನ, ಎಲ್ಲರ ಮನದ ಮೌನ ರೋಧನೆ, ಗಂಟೆಗಳು ಉರುಳುತ್ತಿದ್ದರೂ.. ಬಿಟ್ಟು ಹೋಗದ ಪ್ರಾಣ!? ಎಲ್ಲಾ ವೈಧ್ಯರೂ, ಮಂತ್ರ-ತಂತ್ರ ದೇವರೂ.. ಯಾವುದೂ.. ಪ್ರಯೋಜನಕಾರಿಯಾಗಿರಲಿಲ್ಲ, ಇದ್ದಷ್ಟು ದಿನ ಇರಲಿ ಬಿಡಿ ಎಂದವರೇ ಎಲ್ಲರೂ.. :( ತಾಯಿಯ ಒಡಲಲ್ಲಿ ಬೆಂಕಿಯ ಜ್ವಾಲೆ ಧಗ-ಧಗಿಸುತ್ತಿದೆ, ಕಣ್ಗಳಲ್ಲಿ ನೀರೆಲ್ಲ ಖಾಲಿಯಾಗಿ ರೋಧಿಸುವುದು ನಿಲ್ಲಿಸಿ, ತನ್ನಲ್ಲಿದ್ದ ನಗುವನ್ನು ಕಳೆದುಕೊಂಡಾಗಿದೆ, ತನ್ನ ಮಗನ ತಲೆಯನ್ನು ನೀವಿಸುತ್ತ ಪದೇ-ಪದೇ ಕೇಳುತ್ತಿದ್ದಾಳೆ, ಏನಾದರು ಮಾತಾಡು ಕಂದ, ಏನಾದರು ಹೇಳು, ಏನಾಗ್ತಿದೆ ನಿಂಗೆ? ಯಾವುದಕ್ಕು ಉತ್ತರವಿಲ್ಲದ ಮೌನ.. :(

ಇವಳು ಬಂದೊಡನೆ, ಏನೂ ತಿಳಿಯದವಳಂತೆ ಅವನನ್ನು ದೂರದಿಂದಲೇ ನೋಡುತ್ತಿದ್ದಳು. ಇವಳಿಗೂ ಭಯವಿತ್ತು, ಇಷ್ಟೊಂದು ಜನರಿದ್ದಾರೆ, ನಾನು ಹೇಗೆ ಅವನನ್ನು ಮಾತಾಡಿಸಲಿ ಎಂಬ ಅಂಜಿಕೆಯಿಂದ ಹಿಂದೆ ಸರಿದಳು, ಕಣ್ಣಲ್ಲಿ ಕಂಬನಿಯು ತುಂಬಿ ಬಂದರೂ, ಕಣ್ಮುಚ್ಚಿಕೊಂಡು ದೇವರಲ್ಲಿ ಪ್ರಾರ್ಥಿಸುತ್ತಿದ್ದಳು. ಅವನ ಗುಣಮುಖವಾದರೆ, ನಾನವನನ್ನು ಮದುವೆಯಾಗುವೆ, ದೇವರೆ ದಯವಿಟ್ಟು ಅವನನ್ನು ಬದುಕಿಸು. ಎನ್ನುತ್ತಿದ್ದಂತೆ..

ಇವಣ ಕಣ್ಗಳಲ್ಲಿ ಸಂಚಲನ ಶುರುವಾಗತೊಡಗಿತ್ತು, ಎಲ್ಲರೂ ಇವನನ್ನೆ ಗಮನಿಸುತ್ತಿದ್ದರು, ತನ್ನ ಮಗನ ಈ ಚಲನೆಯಿಂದ ಜೀವ ಬಂದಂತಾಗಿ ಸ್ವಾಮಿ, ನಮ್ಮಪ್ಪ, ದೇವ್ರೆ, ಮಗ, ಮಾತಾಡೊ.. ಮಾತಾಡೊ ಕಂದ ಎನ್ನುತ್ತಿದ್ದ ತಾಯಿ, ಅವನು ನೇರವಾಗಿ ಎಲ್ಲರತ್ತ ಗಮನಹರಿಸುತ್ತ ಬರುತ್ತಿದ್ದಂತೆ, ಅವಳು ನಿಂತಿರುವುದು ಕಾಣಿಸಿತು. ಅವಳು ಕಣ್ಮುಚ್ಚಿಕೊಂಡು ಪ್ರಾರ್ಥಿಸುತ್ತಿರುವ ಸ್ಥಿತಿಯನ್ನು ಗಮನಿಸಿದ ಇವನು ತನ್ನ ಕೈಗಳನ್ನು ನಿಧಾನವಾಗಿ ಮೇಲೆತ್ತಲು ಪ್ರಯತ್ನಿಸುತ್ತಿರುವಂತೆ ಕಾಣಿಸಿತು, ಎಲ್ಲರಿಗೂ ಏನಾಗುತ್ತಿದೆ ಎನ್ನುವ ಪರಿವೆಯೇ ಇಲ್ಲದೆ, ತದೇಕ ಚಿತ್ತದಿಂದ ಕಣ್ಣು ಮಿಟುಕಿಸದೆ ನೋಡುತ್ತಿದ್ದವರಿಗೆ, ಕ್ಷಣಾರ್ಧದಲ್ಲಿ ಪ್ರಾಣ ಪಕ್ಷಿ ಹಾರಿಹೋಗಿತ್ತು..!! :(

ತಾಯಿಯ ಆರ್ತನಾದ ಮುಗಿಲು ಮುಟ್ಟುವಂತೆ ಕೇಳಿಸುತ್ತಿತ್ತು, ಮಗನನ್ನು ಕಳೆದುಕೊಂಡ ಜೀವಕ್ಕೆ ತನ್ನೆಲ್ಲ ಶಕ್ತಿಯು ಕಳೆದುಕೊಂಡಂತೆ, ರೋಧಿಸುತ್ತ ಮಗನನ್ನು ಬಲವಾಗಿ ತಬ್ಬಿ, ಇನ್ನಷ್ಟು ಬಿಕ್ಕಳಿಸುತ್ತಿದ್ದರೆ, ಎಲ್ಲರಿಂದ ಇವನು ದೂರ ಹೋಗಿದ್ದ..! ಇವಳು ನಿಂತಲ್ಲಿಯೇ ಈ ದೃಶ್ಯವನ್ನು ನೋಡಿ, ಕುಸಿದು ಬಿದ್ದಳು..!!

ವಿಧಿ-ವಿದಾನಗಳೆಲ್ಲ ಮುಗಿದ ಮೇಲೆ, ಸ್ಮಶಾನದಲ್ಲಿ ಎಲ್ಲರೂ ಹೊರಟು ಹೋದಮೇಲೆ, ಇವಳು ಸಮಾಧಿಯ ಮೇಲೊಂದು ಹೂವನಿಟ್ಟು ಕಣ್ಗಳಲ್ಲಿ ನೀರು ತುಂಬಿಕೊಂಡು ತನ್ನೆಲ್ಲ ತಪ್ಪುಗಳನ್ನು ಮನ್ನಿಸುವಂತೆ ಕೇಳಿಕೊಂಡಳು. ತನ್ನ ತಪ್ಪಿನ ಎಲ್ಲ ಒಪ್ಪುಗಳ ಸರತಿಯನ್ನು ತಿಳಿಸಾದಮೇಲೆ, ಹೊರಟು ನಿಂತವಳಿಗೆ ಮತ್ತೊಮ್ಮೆ ಹಿಂತಿರುಗಿ ನೋಡಿ ದುಃಖ ತಡೆಯಲಾಗದೆ ಮುಂದೆ ಹೆಜ್ಜೆ ಹಾಕತೊಡಗಿದಳು..

ಇದೆಲ್ಲವನ್ನು ಗಮನಿಸುತ್ತಿದ್ದವನಿಗೆ, ಕ್ಷಣಾರ್ಧದಲ್ಲಿ ಅವಳನ್ನು ಕೂಗಿ-ಕೂಗಿ ಕರೆಯ ತೊಡಗಿದ ? ಅವಳು ತನ್ನ ಪಾಡಿಗೆ ತಾನು ಬಿಕ್ಕಳಿಸುತ್ತ, ಕಣ್ಣೀರುವರೆಸಿಕೊಳ್ಳುತ್ತ ಹೋಗುತ್ತಿದ್ದಳು.. ಇವನು ಕೂಗುತ್ತ, ನಿಲ್ಲು ಎನ್ನುತ್ತ ಓಡೋಡಿ ಬಂದು ಅವಳ ಕೈಯನ್ನು ಹಿಡಿಯಲು ಪ್ರಯತ್ನಿಸಿದ!? ಆದರೆ ತನ್ನ ಅರಿವಿಗೆ ಬರುತ್ತಿದ್ದಂತೆ ಒಂದು ಕ್ಷಣ ಅವನೇ ನಿಬ್ಬೆರಗಾಗಿ ನಿಂತಿದ್ದ!!!.??

ತಾನು 'ಆತ್ಮ'ವಾಗಿದ್ದ! ತನ್ನ ಸಮಾಧಿಯನ್ನು ತಿರುಗಿ ನೋಡಿದ, ತನ್ನ ದೇಹ ಆಗಲೆ ಮಣ್ಣಾಗಿತ್ತು! ಇಳಿ ಸಂಜೆಯ ಆ ಹೊತ್ತಿನಲ್ಲಿ ಸ್ಮಶಾಣದ ನೀರವ ಮೌನದ-ತನ್ನವರಿಲ್ಲದ, ತನ್ನ ವ್ಯಥೆಯನ್ನು ಯಾರಿಗೂ ಹೇಳಲಾಗದ ಪರಿಸ್ಥಿತಿಯನ್ನು ನೋಡಿಕೊಂಡು, ಅಳುತ್ತಲಿದ್ದ.. ಒಂಟಿ...ಒಬ್ಬಂಟಿಯಾಗಿ...!! ಅದಾಗಲೆ ಅವಳು ಮರೆಯಾಗಿದ್ದಳು...!

ಸತ್ತರೂ.. ಪ್ರೀತಿ ಅಮರ ಅಂತಾರಲ್ಲ?? ಇದೇನಾ?? ಅದು ನಿಜವಾಗಿತ್ತು..!!!

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ಗೆಂಡೆತಿಮ್ಮ (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/22/2009 - 10:15

ಯೋಗೇಶ್,
ದಯಮಾಡಿ ಲೇಖನದ ಮಧ್ಯೆ ಮುಖಭಾವಗಳನ್ನು(smileys) ಬಳಸಬೇಡಿ. ಲೇಖನದ ಸ್ವಾರಸ್ಯ ಕೆಡುತ್ತದೆ. ಮುಖಭಾವಗಳನ್ನು ಪ್ರತಿಕ್ರಿಯೆಗೆ ಮೀಸಲಿಡಿ ಎಂಬ ವಿನಂತಿ.

prasadbshetty ಧ, 07/15/2009 - 13:41

......................ವಯಸ್ಸಿಗೆ ಬಂದಾಗ ಬುದ್ಧಿ ಕುರುಡಾಗಿ ವರ್ತಿಸುವ ರೀತಿಯಲ್ಲವವೇ....

"ಪ್ರೀತಿ".......?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.