Skip to main content

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ರಾಜಕೀಯ ಧುರೀಣರು ಎದ್ದು ನಿಂತು ಸಾರುತ್ತಿರುವ ಏಕೈಕ ವಿಷಯ
ಜಾತ್ಯಾತೀತ ಶಕ್ತಿಗಳೆಲ್ಲಾ ಒಂದಾಗಿ, ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಿ ಎಂದು. ನಿಜವಾಗಿ ಜಾತ್ಯಾತೀತತೆ ಎಂದರೇನು?

ಎಲ್ಲಾ ಜಾತಿಗಳನ್ನು ಸಮಾನವಾಗಿ ಕಾಣುವುದು ಅಥವಾ ಜಾತಿಗಳಿಗೆಲ್ಲಾ ಅತೀತನಾಗುವುದು ಅಲ್ಲವೇ?
ಆದರೆ ಈಗ ನಡೆಯುತ್ತಿರುವುದೇನು?
ಜಾತ್ಯಾತೀತತೆ ಎಂದರೆ...
ಹಿಂದುಗಳನ್ನು ಬೈಯುವುದು
ಬ್ರಾಹ್ಮಣರನ್ನು ದ್ವೇಷಿಸುವುದು ಹಾಗು ಆದಷ್ಟು ಅವರನ್ನು ತುಳಿಯಲು ಪ್ರಯತ್ನಿಸುವುದು
ಮುಸ್ಲಿಮರನ್ನು ಅವರಿಗೇ ಅಸಹ್ಯ ತರಿಸುವಷ್ಟು ಓಲೈಸುವುದು

ಇದು ನಿಜವಾದ ಜಾತ್ಯಾತೀತತೆಯೆ?

ಇವರು ನಿಜವಾಗಿಯೂ ಎಲ್ಲಾ ಜಾತಿಗಳನ್ನು ಸಮಾನವಾಗಿ ಕಾಣುವವರಾಗಿದ್ದರೆ, ಹಿಂದು ಹಾಗು ಮುಸ್ಲಿಮರನ್ನು ಸಮಾನವಾಗಿ ಕಾಣಬೇಕಲ್ಲವೇ?
ದೇಶಭಕ್ತ ಸಾವರ್ಕರನ್ನು ನಿಂದಿಸುತ್ತಾರೆ ಹಾಗು ದೇಶದ್ರೋಹಿ ಅಫ್ಜಲಗುರುವಿಗೆ ಬೂಟು ನೆಕ್ಕುತ್ತಾರೆ. ಹಾಗಾದರೆ
ಜಾತ್ಯಾತೀತತೆ ಎಂದರೇನು ತಿಳಿದವರು ಹೇಳಿರಣ್ಣ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/08/2009 - 11:30

ಪ್ರಿಯ ಬಾಲಚಂದ್ರ ಅವರೆ,

ನೀವು ಹೇಳಿದ್ದೀರ.
ಜಾತ್ಯಾತೀತತೆ ಎಂದರೆ...
ಹಿಂದುಗಳನ್ನು ಬೈಯುವುದು.
(ದಯಮಾಡಿ ತಪ್ಪು ತಿಳಿದುಕೊಳ್ಳಬೇಡಿ. ಆದರೆ ಜಾತ್ಯಾತೀತರು ಅಂತ ಹೆಸರಾದ ಇಂತವರು, ಇಲ್ಲಿ ,ಹೀಗೆ ಹಿಂದೂ ಧರ್ಮಕ್ಕೆ ಬೈದರು ಅಂತ ಒಂದೇ ಒಂದು ಉದಾಹರಣೆ ಕೊಡುತ್ತೀರಾ?)

ಬ್ರಾಹ್ಮಣರನ್ನು ದ್ವೇಷಿಸುವುದು ಹಾಗು ಆದಷ್ಟು ಅವರನ್ನು ತುಳಿಯಲು ಪ್ರಯತ್ನಿಸುವುದು ( ದ್ವೇಷಿಸುವುದು ಕಾಣಲಾರದ್ದು. ಆದರೆ ತುಳಿಯಲು ಹೇಗೆ ಪ್ರಯತ್ನ ಮಾಡುತ್ತಾರೆ ಎಂಬುದರ ಬಗ್ಗೂ ಒಂದು ಉದಾಹರಣೆ)

ಮುಸ್ಲಿಮರನ್ನು ಅವರಿಗೇ ಅಸಹ್ಯ ತರಿಸುವಷ್ಟು ಓಲೈಸುವುದು ( ಮುಸ್ಲಿಮರ ಬಗ್ಗೆ ಎರಡು ಅನಾವಶ್ಯಕ ಒಳ್ಳೆಯ ಮಾತನ್ನಾಡಿ ಅವರನ್ನು ಮರಳುಮಾಡಿ ಆದರೆ ಅವರನ್ನು ಸಮಾಜದಲ್ಲಿ ಇನ್ನೂ ಅತ್ಯಂತ ಕೆಳಸ್ಥರದಲ್ಲಿ ಇಟ್ಟಿರುವದನ್ನು ನೀವು ಓಲೈಸುವದು ಎನ್ನುತ್ತೀರ? ಹಜ್ ಯಾತ್ರೆಯನ್ನು ಬಿಟ್ಟರೆ (ನಮಗೆ ಅಮರನಾಥ ಯಾತ್ರೆ ಇರುವದರಿಂದ) ಅವರಿಗೆ ಸಿಕ್ಕಿರುವ ಎರಡು extra ಸವಲತ್ತುಗಳನ್ನು ಹೇಳುತ್ತೀರ)

ಇನ್ನು, ದೇಶಭಕ್ತ ಸಾವರ್ಕರನ್ನು ನಿಂದಿಸುತ್ತಾರೆ ಸಾವರ್ಕರ ಕಾಲಾಪಾನಿ ಶಿಕ್ಷೆಯನ್ನು ಕಡಿಮೆಮಾಡಿಸಿಕೊಳ್ಳಲು ಬ್ರಿಟಿಶರಿಗೆ ತಪ್ಪೊಪ್ಪಿಗೆ ಪತ್ರ ಕೊಟ್ಟಿದ್ದರು. ಮಾಫಿ ಕೇಳಿದ್ದರು. ಇದು ಆ ಕಾಲದಲ್ಲಿ ಒಂದು ತರದ ಮಾತೃಭೂಮಿದ್ರೋಹವೇ ಆಗಿತ್ತು.

ಬಾಲ ಚಂದ್ರ ಧ, 04/08/2009 - 15:35
ಬಾಲ ಚಂದ್ರ ಧ, 04/08/2009 - 16:19

ಪ್ರೀತಿಯ ಅನಾಮಿಕರೇ,
ಹಿಂದುಗಳನ್ನು ಬೈದಿದ್ದಕ್ಕೆ ಉದಾಹರಣೆ ಕೇಳಿದ್ದೀರಿ,
ನಾನು ಯಾರ ಮನಸ್ಸಿಗೂ ನೋವು ಮಾಡಬಾರದೆಂದು ಉದ್ದೇಶಪೂರ್ವಕವಾಗಿ ಯಾರನ್ನೂ ಹೆಸರಿಸಲಿಲ್ಲ
ಖ್ಯಾತ ಜಾತ್ಯಾತೀತರೆಂದು ಹೆಸರಾದ ದೇವೆ ಗೌಡ, ಯು ಆರ ಅನಂತ ಮೂರ್ತಿ, ಕರುಣಾ ನಿಧಿ, ಗಿರೀಶ ಕಾರ್ನಾಡ, ಹಾಗೂ ಜಾತ್ಯಾತೀತ ಮುಖ ಹೊತ್ತ ಅಗ್ನಿ, ಲಂಕೇಶ ಪತ್ರಿಕೆ ಮುಂತಾದವುಗಳ ಹೇಳಿಕೆಗಳೊನ್ನೊಮ್ಮೆ ಗಮನಿಸಿ . ಇವರ ಪ್ರಕಾರ ಜಾತ್ಯಾತೀತತೆ ಎಂದರೆ ಹಿಂದು ಹಾಗು ಬ್ರಾಹ್ಮಣರ ನಿಂದನೆ.
ಬ್ರಾಹ್ಮಣರನ್ನು ತುಳಿಯುವ ಪ್ರಯ್ಕತ್ನಕ್ಕೆ ಮೀಸಲಾತಿಗಿಂತ ಉತ್ತಮ ಉದಾಹರಣೆ ಬೇಡ,
ಉದ್ಯೋಗದಲ್ಲಾಗಲೀ ಅಥವಾ ಶಿಕ್ಷಣ ಕ್ಷೇತ್ರದಲ್ಲಾಗಲ್ಲಿ 35% ಪಡೆದ ಇತರ ಜಾತಿಯವನಿಗೆ ಸಿಗುವ ಮಾನ್ಯತೆ 85% ಪಡೆದರೂ ಬ್ರಾಹ್ಮಣನಿಗೆ ಸಿಗುವುದಿಲ್ಲ
ಇನ್ನು ಮುಸ್ಲಿಮರನ್ನು ಕೆಳಸ್ಥರದಲ್ಲೇ ಇಟ್ಟಿರುವುದನ್ನು ತಾತ್ವಿಕವಾಗಿ ನಾನೂ ಒಪ್ಪುತ್ತೇನೆ ಆದರೆ ಹಜ ಯಾತ್ರೆಯ ಉದಾಹರಣೆ ಸರಿ ಹೊಂದಲಾರದು ಏಕೆಂದರೆ ಅದಕ್ಕೆ ನೀಡುತ್ತಿರುವ ಧನ ಸಹಾಯದ ಮೂಲ ನಮ್ಮ ಮುಜರಾಯಿ ಇಲಾಖೆಯಿಂದ ಎಂದು ತಮಗೇ ತಿಳಿದಿರಬಹುದು.
ಮೊನ್ನೆ ಮೊನ್ನೆ ತಾನೇ ಬೆಂಗಳೂರಿನಲ್ಲಿ ಸಿಕ್ಕಿ ಬಿದ್ದ ಮುಸ್ಲೀಂ ಉಗ್ರರ ಪರವಾಗಿ ನಾಚಿಕೆಯಿಲ್ಲದೇ ವಾದಿಸಿದ ದೇವೇ ಗೌಡರನ್ನು ಹೇಗೆ ತಾನೇ ಕ್ಷಮಿಸುತ್ತೀರಿ ? ಹೇಳಿ
ಇನ್ನು ಸಾವರ್ಕರ ಅವರ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ
ದೇಶಕ್ಕಾಗಿ , ಸ್ವಾತಂತ್ರ್ಯಕ್ಕಾಗಿ ಸ್ವಾಭಿಮಾನವನ್ನೂ ತೊರೆದ ಅವರನ್ನು ದೇಶದ್ರೋಹಿ ಉಗ್ರಗಾಮಿ ಸೂಳೇಮಕ್ಕಳ ಸಾಲಿಗೆ ಸೇರಿಸುವುದನ್ನು ತಾವೂ ಕೂಡ ಒಪ್ಪಲಾರಿರೆಂದು ಭಾವಿಸುತ್ತೇನೆ
ಅಭಿಪ್ರಾಯಕ್ಕಾಗಿ ವಂದನೆಗಳೊಂದಿಗೆ
ಬಾಲ ಚಂದ್ರ
(ಅನಾಮಿಕರೇ ತಮ್ಮ ನಿಜ ನಾಮಧೇಯ ತಿಳಿಸುವಿರಾ?)

ಅನಾಮಿಕ ಮಿತ್ರ (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/08/2009 - 16:26

ಪ್ರಿಯ ಬಾಲ ಚಂದ್ರ ಅವರೆ,

ಸೂಕ್ಷ್ಮವಾಗಿ ಒಮ್ಮೆ ದೇವೆ ಗೌಡ, ಯು ಆರ ಅನಂತ ಮೂರ್ತಿ, ಕರುಣಾ ನಿಧಿ, ಗಿರೀಶ ಕಾರ್ನಾಡ, ಅಗ್ನಿ ಅಥವಾ ಲಂಕೇಶ ಪತ್ರಿಕೆ ಯವರು ಹೇಳುವದನ್ನೊಮ್ಮೆ ಗಮನಿಸಿ. ಅವರು ಹಿಂದೂಗಳನ್ನು ಎಂದೂ ದೂಶಿಸುವದಿಲ್ಲ. ಬಲಪಂಥೀಯ ರಾಜಕಾರಣಿಗಳನ್ನು ದೂಶಿಸುತ್ತಾರೆ. ಒಪ್ಪಿಕೊಳ್ಳುತ್ತೇನೆ. ತಮ್ಮ ಲಾಭಕ್ಕಾಗೇ ಅದನ್ನು ಮಾಡುತ್ತಾರೆ. ಹಾಗೇ ಬಲಪಂಥೀಯ ರಾಜಕಾರಣಿಗಳು ಕೂಡ ತಮ್ಮ ಬೇಳೆ ಬೇಯಿಸಿಕೊಳ್ಳುವದಕ್ಕಾಗಿ ಮಾತ್ರ ಹಿಂದೂಗಳ ಪರ ಇದ್ದೇವೆ ಎನ್ನುವಂತೆ ಕಾಣಿಸಿಕೊಳ್ಳುತ್ತಾರೆ. ಇವರ ಮಧ್ಯೆ ನನಗೆ ಯಾವುದೇ ವ್ಯತ್ಯಾಸ ಕಂಡು ಬರುವದಿಲ್ಲ. NDA ಸರಿ ಸುಮಾರು ಎಂಟು ವರುಷ ಅಧಿಕಾರದಲ್ಲಿ ಇದ್ದಾಗ BJP ಒಂದು ಸಲವೂ unifrm civil code ಬಗ್ಗೆಯಾಗಲಿ, ರಾಮ ಜನ್ಮ ಭೂಮಿಯಲ್ಲಿ ದೇವಸ್ಥಾನ ಕಟ್ಟುವ ಬಗ್ಗೆಯಾಗಲಿ, ಗೋಹತ್ಯೆ ನಿಷೇಧದ ಬಗ್ಗಾಗಲಿ ಎಂದೂ ಕ್ರಿಯಾತ್ಮಕ ಹೆಜ್ಜೆ ಇಟ್ಟಿರಲಿಲ್ಲ. ಕೇಳಿದವರಿಗೆ coalition government ನ ನಾಮ ಪೇಡಿದರು. ಈಗ ಎಲೆಕ್ಷನ್ ಬಂದಿದೆ. ಸ್ವಲ್ಪ ಹೆಚ್ಚೇ ಮಾತನಾಡುತ್ತಿದ್ದಾರೆ. ಆದರೆ ಅದು ಬರೇ ಹಿಂದೂ ಧರ್ಮದ ಬಗ್ಗೆ ಕಾಳಜಿ ಹೊಂದಿರುವ ಭಾವ ಜೀವಿಗಳಿಗೆ ಕಣ್ಕಟ್ಟಲು ಮಾತ್ರ ಅಂತ ನನ್ನ ನಂಬುಗೆ.

ಮೀಸಲಾತಿಯಲ್ಲೂ ಕರ್ನಾಟಕದಲ್ಲೇ ಲಿಂಗಾಯತರು,ಒಕ್ಕಲಿಗರು ಸಹ ಪಾಲು ಪಡೆದುಕೊಂಡಿದ್ದರೆ. ಬ್ರಾಹ್ಮಣ ಹುಡುಗರು ಕನ್ನಡ ಮಾಧ್ಯಮದವರಿಗೆ ಮೀಸಲಾದ, ಗ್ರಾಮೀಣ ಮೀಸಲಾತಿಯ ಸಿಂಹ ಪಾಲು ಪಡೆದುಕೊಳ್ಳುತ್ತಿದ್ದಾರೆ. ಇಂದು ಮೀಸಲಾತಿ ಹಾಗೂ ಸಾಮನ್ಯ ವರ್ಗಗಳ ಅಂಕಗಳು ತುಂಬಾ ಅಂತರದಲ್ಲೇನೂ ಇರುವದಿಲ್ಲ. ಮೀಸಲಾತಿಯ ಜಾತಿಯಿಂದ ಬಂದಿದ್ದರೂ ಸಾಮಾನ್ಯರಲ್ಲೂ ಆಯ್ಕೆ ಆಗುವವರು ತುಂಬಾ ಇದ್ದಾರೆ. ನನ್ನ ಮಾತನ್ನು ನಂಬಬೇಡಿ. ಕರ್ನಾಟಕ ಪಬ್ಲಿಕ್ ಸರ್ವಿಸ ಕಮಿಶನ್ನಿನ ವೆಬ್ ಸೈಟನ್ನು ಹೊಕ್ಕು ಒಮ್ಮೆ ಖಾತ್ರಿ ಮಾಡಿಕೊಳ್ಳಿ. ಸತ್ಯ ಹೊರಬಂದರೆ ನಮ್ಮ ಬಹುಜನ ಮೇಲ್ಜಾತಿಯ ವಿದ್ಯಾವಂತರ ಸಂಕಟ ನಿವಾರಣೆ ಆದೀತು.

ಅವರಿರುವ ಪರಿಸ್ಥಿತಿಯ ಕಾರಣಕ್ಕೆ ಮುಸ್ಲಿಮರಿಗೆ ನಮ್ಮನ್ನು ಹೋಲಿಸಿಕೊಳ್ಳುವದು ಅವಮಾನ ಅಂತ ನನ್ನ ಭಾವನೆ. ಅವರನ್ನು ಯಾರು ಮಾತಿನಲ್ಲಿ ಮೇಲಕ್ಕೆ ಎತ್ತಿದರೂ ಸಮಾಜದಲ್ಲಿ ನಮ್ಮ ಕಾಲುಗುರಿಗೂ ಅವರು ಸರಿಯಾಗಿ ಕಾಣರು. ಅದಕ್ಕಾಗಿ ಅವರನ್ನು ಯಾರು ತುಶ್ಟೀಕರಿಸಿದರೂ ಬಿಟ್ಟರೂ ಅದಕ್ಕೆ ಪ್ರಾಧಾನ್ಯತೆ ಇಲ್ಲ ಅಂತ ನಂಬಿದ್ದೇನೆ.

ಅಲ್ಲದೇ ಈ ಸಲ ಬೀಜೇಪಿ ಅಧಿಕಾರಕ್ಕೆ ಬಂದರೆ ಮರುದಿನವೇ ಅಫ್ಜಲ್ ಗುರುವನ್ನು ನೇಣಿಗೇರಿಸುತ್ತಾರೆ ಎಂತಲೂ ಆಶಿಸುತ್ತೇನೆ. ಆದರೆ ಸತ್ಯ ಹೇಳಬೇಕೆಂದರೆ ವಿಶ್ವಾಸವಿಲ್ಲ. ಲಾಹೋರಿಗೆ ಇನ್ನೊಂದು ಬಸ್ಸು ಮಾಡಿ ಅದರಲ್ಲಿ ಅವನನ್ನು ಕುಳ್ಳರಿಸಿ ಬೀಳ್ಕೊಟ್ಟರೂ ಬೀಳ್ಕೊಟ್ಟರೆ.

ಲೇಖನಕ್ಕಿಂತ ಪ್ರತಿಕ್ರಿಯೆ ಉದ್ದವಾದುದಕ್ಕೆ ಕ್ಷಮೆ ಇರಲಿ.

ಬಾಲಚಂದ್ರ (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/08/2009 - 17:26

ಪ್ರೀತಿಯ ಅನಾಮಿಕರೇ,
ನಿಮ್ಮ ವಾದಕ್ಕೆ ಮರುಳಾದೆ,
ಬುದ್ದಿ ಜೀವಿಗಳೆಂದೂ ಬಲ ಪಂಥೀಯ ರಾಜಕಾರಣಿಗಳನ್ನು ದೂಷಿಸುವುದಿಲ್ಲ ಬದಲಾಗಿ ನೇರವಾಗಿ ಹಿಂದು ಹಾಗೂ ಬ್ರಾಹ್ಮಣ ನಿಂದನೆಯಲ್ಲೇ ತೊಡಗುತ್ತಾರೆ. ಲಂಕೇಶ ಪತ್ರಿಕೆಯ ಒಂದು ವರ್ಷದ 52 ಪ್ರತಿಗಳನ್ನು ಮುಂದಿಟ್ಟುಕೊಳ್ಳಿ, ಅದರಲ್ಲಿ 40ಕ್ಕೊ ಹೆಚ್ಚು ಪತ್ರಿಕೆಯ ಸಂಪಾದಕೀಯ ವಿಷಯ "ಬ್ರಾಹ್ಮಣರ ನಿಂದನೆ" , ಇನ್ನು ದೇವೆಗೌಡರು ನಿಜವಾದ ಜಾತ್ಯತೀರರಾದರೆ ಯಾವ ಜಾತಿಯಲ್ಲಿದ್ದರು ಸಮಾಜ ಸೇವೆ(?) ಮಾಡಬಹುದಲ್ಲವೇ, ಹಾಗಿದ್ದರೂ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂಬ ಘೋಷಣೆ ಏಕೆ? ಹೇಗೇ ಇರಲಿ
ಈಗ ನೀವೂ ಕೂಡ ರಾಜಕಾರಣಿಗಳ ಜಾತ್ಯತೀತತೆ ಹುಸಿಯಾದದ್ದು ಎಂದು ಒಪ್ಪುತ್ತೀರಿ ತಾನೆ?

ನಿಮ್ಮವ
ಬಾಲ ಚಂದ್ರ
(ದಯವಿಟ್ಟು ನಿಮ್ಮ ನಿಜ ನಾಮಧೇಯ ತಿಳಿಸಿ)

ಹರದನಹಳ್ಳಿ ಮುದ್ದೇಗೌಡ (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/08/2009 - 18:12

ಅಲ್ಲಾ ಸ್ವಾಮಿ, ಅನಾಮಿಕರ ನಿಜ ನಾಮಧೇಯದ ಹಿಂದೆ ಬಿದ್ದಿರುವಿರಲ್ಲ, ನಿಮಗೇನೆನ್ನಬೇಕು? ವಿಸ್ಮಯಕ್ಕೆ ಹೊಸಬರೆಂದು ಕಾಣುತ್ತದೆ!

ಅನಾಮಿಕ ಮಿತ್ರ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/09/2009 - 09:04

ಪ್ರಿಯ ಬಾಲಚಂದ್ರರೆ,

ಬುದ್ದಿ ಜೀವಿಗಳು ನೇರವಾಗಿ ಹಿಂದೂಗಳನ್ನು ದೂಶಿಸಿದ್ದು ನಿಜವಾಗಲೂ ನಾನು ಕೇಳಿಲ್ಲ. ಸನಾತನ ಧರ್ಮದ ವರ್ಣ ವ್ಯವಸ್ಥೆಯನ್ನು ಟೀಕಿಸುವದನ್ನು ಓದಿದ್ದೇನೆ. ಬ್ರಾಹ್ಮಣರನ್ನು ಟೀಕಿಸಿದ್ದನ್ನೂ ನಾನು ಓದಿದ್ದೇನೆ. ಬ್ರಾಹ್ಮಣರೂ ಹಲವರು ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದನ್ನು ಕಂಡಿದ್ದೇನೆ. ಆದರೆ ಇದರಿಂದ ಇಬ್ಬರಿಗೂ ಲಾಭವಾಯಿತು ಅಥವಾ ನಶ್ಟವಾಯಿತೊ ಗೊತ್ತಿಲ್ಲ. ಬಹುಷಃ ಬುಡ್ಧಿಜೀವಿಗಳಿಗೆ ಉಂಡಿದ್ದು ಅರಗಿರಬೇಕು, ಬ್ರಾಹ್ಮಣರಿಗೆ ಕೊಂಚ ಸಿಟ್ಟು ಶಮನ ಆಗಿರಬೇಕು.

ನಿಜ ಹೇಳಬೇಕೆಂದರೆ ಲಂಕೇಶ್ ಪತ್ರಿಕೆ ಓದಿ ಬಹಳ ವರ್ಷಗಳಾದವು. ಅದಕ್ಕಾಗಿ ಲಂಕೇಶ್ ಪತ್ರಿಕೆ / ಗೌರಿಯ "ಲಂಕೇಶ್" ಈಗ ಯಾವ ಲೆವೆಲ್ಲಿಗೆ ಇಳಿದಿದ್ದಾರೆ ಅಂತ ಗೊತ್ತಿಲ್ಲ.

ದೇವೇಗೌಡರು ಈ ಜನ್ಮದಲ್ಲಿ ಹಿಂದುವಾಗಿ ಹುಟ್ಟಿದ್ದಕ್ಕೆ, ಇರುವ ಎಲ್ಲಾ ಹಿಂದೂ ದೇವರಿಗೆ/ದೇವತೆಯರಿಗೆ ಅಡ್ದಬಿದ್ದು, ಯಜ್ನ ಮಾಡಿಸಿ, ಮಾಟ ಮಾಡಿಸಿ, ಕೈಗೆ ಅರ್ಧ ಕೇಜಿ ಕಂಕಣದ ದಾರ ಕಟ್ಟಿಸಿಕೊಂಡು, ಮುಹೂರ್ತ ನೋಡಿ, ಜ್ಯೋತಿಶಿಗಳಿಗೆ ಕೈ ತೋರಿಸಿ ತೋರಿಸಿ ಅವರಿಗೆ ಹಿಂದೂ ಧರ್ಮ ಸಾಕು ಸಾಕಾಗಿ ಹೊಗಿದೆ. ಅದಕ್ಕಾಗಿ ಮುಂದಿನ ಜನ್ಮದಲ್ಲಿ ಪಾಪ ಮುಸ್ಲಿಂ ಆಗಿ ಹುಟ್ಟುತ್ತಾರೆ. ಅದರ ಪೂರ್ವ ತಯಾರಿ ಎಂಬುವಂತೆ ಜ್ಯೋತಿಶಿಯೊಬ್ಬನ ಮಾತು ಕೇಳಿಸಿಕೊಂಡು ತಮ್ಮ ಮಗನೊಬ್ಬನಿಗೆ ಗುಟ್ಟಾಗಿ ಎರಡನೇ ಮದುವೆ ಕೂಡ ಮಾಡಿಸಿದ್ದಾರೆ. (ಕರುಣಾನಿಧಿ ಕೂಡ ಇಳಿವಯಸ್ಸಿನಲ್ಲಿ ಶೋಡಷಿಯೋರ್ವಳನ್ನು ಇದೇ ಜ್ಯೋತಿಶ್ಯದ ಕಾರಣಕ್ಕೆ ಮದುವೆಯಾಗಿದ್ದರು.)

ಹಿಂದೂ ಧರ್ಮದ ಬಗ್ಗೆ, ನನ್ನ ದೇಶದ ಬಗ್ಗೆ ಅತಿರೇಕದ ಪ್ರೀತಿಯಿರುವ ಆದರೆ ವರ್ಣ ವ್ಯವಸ್ಥೆಯಲ್ಲಿ ನಂಬುಗೆಯಿರದ ಆಸಾಮಿ ನಾನು.ಆದರೆ ನಾನು ವೈಯಕ್ತಿಕವಾಗಿ ಯಾರು ಎಂಬುದಕ್ಕೆ ಅಶ್ಟೇನು ಮಹತ್ವವಿಲ್ಲ. ಯಾರಿಗೂ ಎಲ್ಲ ಸಮಸ್ಯೆಗಳ ಎಲ್ಲಾ ಮಜಲುಗಳೂ ಗೊತ್ತಿಲ್ಲದೇ ಇರುವದರಿಂದ ಬಹುತೇಕ ಅಭಿಪ್ರಾಯಗಳು ಪೂರ್ವಾಗ್ರಹ ಪೀಡಿತವಾಗಿರುತ್ತವೆ ಎಂದು ನನ್ನ ನಂಬಿಕೆ. ನೀವು ನಿಮ್ಮ ವಾದ ಮುಂದಿಟ್ಟಾಗ ನನ್ನ ವಾದವನ್ನು ಕೇಳುತ್ತಿರಿ ಎಂಬುದೇ ಮುಖ್ಯ ವಿಷಯ. ಒಮ್ಮೆ ನನ್ನ ವಾದವನ್ನು ಆಲಿಸಿ ಮನಸ್ಸಿನಲ್ಲಿ ವಿಶ್ಲೇಸಿಕೊಂಡ ನಂತರ ನೀವು ನಿಮ್ಮ ಹಳೆಯ ಅಭಿಪ್ರಾಯಕ್ಕೆ ಅಂಟಿಕೊಂಡರೂ ನಾನು ನೀವು ಇಬ್ಬರೂ ಸ್ವಲ್ಪವಾದರೂ ಭಿನ್ನ ದೃಶ್ಟಿಕೋನವೊಂದನ್ನು ಮುಟ್ಟಿ ನೋಡಿದೆವಲ್ಲ ಅಶ್ಟು ಸಾಕು.

ಇನ್ನು ರಾಜಕಾರಣಿಗಳ ಜಾತ್ಯತೀತತೆ ಅಲ್ಲದೇ ಎಲ್ಲವೂ ಹುಸಿಯೇ. ಆದರೆ ಜಾತ್ಯತೀತತೆ ಅನ್ನುವದೇ ಹುಸಿಯಾದದ್ದು ಅಂತ ನನ್ನ ಭಾವನೆ. ನಾನು ಹಿಂದುವೇ. ಇಂದೂ. ಮುಂದೂ.

ಬಾಲ ಚಂದ್ರ ಗುರು, 04/09/2009 - 14:43

ಪ್ರಿಯ ಅನಾಮಿಕರೇ,

ಹಿಂದು ಧರ್ಮದ ವರ್ಣಾಶ್ರಮ ಪದ್ದತಿಯ ಬಗ್ಗೆ ಮಾತನಾಡಿದ್ದೀರಿ,
ಈ ಪದ್ದತಿಯ ಮೂಲ ಅರ್ಥ ಉತ್ತಮವೇ ಆಗಿದ್ದು ಕೆಲ ಮೂಢ ಬ್ರಾಹ್ಮಣರು ಅದರ ಅರ್ಥ ತಿರುಚಿದ್ದಾರೆ ಅಷ್ಟೆ
ಉದಾಃ
ಜನ್ಮಾತೊ ಜಾಯತೇ ಶೂದ್ರಃ
ಸಂಸ್ಕಾರಾತ ದ್ವಿಜಯುಚ್ಚತೆ (ಉಪನಿಷತ್)
ಅರ್ಥಃ ಹುಟ್ಟಿನಿಂದ ಎಲ್ಲರು ಶೂದ್ರರೇ
ಸಂಸ್ಕಾರ ಮಾತ್ರ ಅವರನ್ನು ಬ್ರಾಹ್ಮಣರನ್ನಾಗಿಸುತ್ತದೆ, ಅಂದರೆ ಉತ್ತಮ ಸಂಸ್ಕಾರವಂತರೆಲ್ಲರೂ ಬ್ರಾಹ್ಮಣರೇ
ಇನ್ನು ಈ ವಾದ ಖಂಡಿತಾ ಪೂರ್ವಾಗ್ರಹದಿಂದ ಕೂಡಿದ್ದಲ್ಲ
ನಾನು ಕೂಡ ನೀವು ದೃಷ್ಟಿಕೋನದ ಬಗ್ಗೆ ಆಡಿರುವ ಮಾತನ್ನು ಒಪ್ಪುತ್ತೇನೆ.

ಅನಾಮಿಕ ಮಿತ್ರ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/09/2009 - 16:11

ಪ್ರಿಯ ಬಾಲಚಂದ್ರರೆ,

ನೀವು ಹೇಳಿದ ಶ್ಲೋಕದ ಬಗ್ಗೆ ತುಂಬ ಸಲ ವಿಚಾರ ಮಾಡಿದ್ದೇನೆ. ನಿಮಗೆ ಈ ಶ್ಲೋಕ ಪೂರ್ವಾಗ್ರಹದಿಂದ ಕೂಡಿದ್ದಲ್ಲ ಎನಿಸುತ್ತದೆ. ನನಗೆ ಇದು ವರ್ಣಾಶ್ರಮ ಧರ್ಮದ ಅತ್ಯಂತ racist comment ಎನಿಸುತ್ತದೆ. ಸೂಕ್ಷ್ಮವಾಗಿ ನೋಡಿ.ಹುಟ್ಟಿನಿಂದ ಎಲ್ಲರು ಶೂದ್ರರೇ
ಸಂಸ್ಕಾರ ಮಾತ್ರ ಅವರನ್ನು ಬ್ರಾಹ್ಮಣರನ್ನಾಗಿಸುತ್ತದೆ
ಅಂದರೆ ಸಂಸ್ಕಾರ ಪಡೆದವರು ಬ್ರಾಹ್ಮಣರಾಗುತ್ತರೆ. ಉಳಿದವರು ಶೂದ್ರರಾಗಿ ಉಳಿಯುತ್ತಾರೆ ಎಂಬ ಅರ್ಥ. ಇದು ಸಂಸ್ಕಾರವನ್ನು ಬ್ರಾಹ್ಮಣ್ಯಕ್ಕೆ ನೇರವಾಗಿ ತಳಕು ಹಾಕುತ್ತದೆ ಹಾಗೂ ಶೂದ್ರರು ಅಸಂಸ್ಕೃತರು ಎಂದು ಸಾರುತ್ತದೆ.

ನೀವು ಕೂಡ "ಅಂದರೆ ಉತ್ತಮ ಸಂಸ್ಕಾರವಂತರೆಲ್ಲರೂ ಬ್ರಾಹ್ಮಣರೇ" ಎನ್ನುತ್ತೀರಿ. ನೀವು ಇದನ್ನು ಯಾವುದೇ ದುರುದ್ದೇಶವಿಟ್ಟುಕೊಂಡು ಹೇಳಿರಲು ಸರ್ವಥಾ ಸಾಧ್ಯವಿಲ್ಲದಿದ್ದರೂ ನಿಮ್ಮ ಮಾತಿನಲ್ಲಿ ಶೂದ್ರರಿಗೆ ಉತ್ತಮ ಸಂಸ್ಕಾರವಿಲ್ಲ ಎಂಬ ಅರ್ಥ ಬರುತ್ತದೆ ಅಲ್ಲವೇ? ಇದು ನನಗೆ ಅರಿಯದೇ ನಮ್ಮಲ್ಲಿ ಉಳಿದುಬಿಟ್ಟಿರುವ ಸನಾತನ ಪೂರ್ವಾಗ್ರಹ ಎನಿಸುತ್ತದೆ.

ರಾಜಕಾರಣಿಗಳ ಜಾತೀಯತೆಯ ಬಗ್ಗೆ ಉಲ್ಲೇಖದೊಂದಿಗೆ ಪ್ರಾರಂಭಗೊಂಡ ಈ ಸಂವಾದ ವರ್ಣಾಶ್ರಮದ ಒಳಿತು ಕೆಡಕುಗಳ ಬಗ್ಗೆ ಹೊರಳುತ್ತ ದಾರಿ ತಪ್ಪುತ್ತಿದೆ ಅಂತ ಅನ್ನಿಸುತ್ತಿರುವದರಿಂದ ಇದಕ್ಕೆ ಇಲ್ಲಿಗೇ ಪೂರ್ಣ ವಿರಾಮ. ಅರ್ಥಪೂರ್ಣ ನಾಲ್ಕು ಮಾತುಗಳನ್ನಾಡಿದ್ದಕ್ಕೆ ಧನ್ಯವಾದ.

ಮತ್ತೆ ಭೇಟಿಯಾಗೋಣ. ಇನ್ನೊಂದು ವಿಷಯ. ಇನ್ನೊಂದು ವಿಚಾರಧಾರೆ.

ಬಾಲಚಂದ್ರ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/09/2009 - 17:09

ಪ್ರೀತಿಯ ಅನಾಮಿಕ ಮಿತ್ರ,
ಈ ಶ್ಲೋಕವನ್ನು
ಸಂಸ್ಕಾರವಂತನಾದ ಶೂದ್ರ ಕೂಡ, ಬ್ರಾಹ್ಮಣನಾಗುತ್ತಾನೆ
ಅಸಂಸ್ಕೃತ ಬ್ರಾಹ್ಮಣ ಕೂಡ ಶೂದ್ರನಿಗೆ ಸಮಾನ
ಎಂದು ಅರ್ಥೈಸಿಕೊಳ್ಳಬೇಕು
ಇರಲಿ ಸಂಸ್ಕಾರ ಎಂಬುದು ಕೇವಲ ಅಂತರಂಗಕ್ಕೆ ಸಂಬಂಧ ಪಟ್ಟ ವಿಷಯ ಎಂದು ಹೇಳಬಯಸುತ್ತೇನೆ
ಈ ಸಂವಾದ ನಮ್ಮಿಬ್ಬರ ನಡುವೆ ಮಾತ್ರ ನಡೆದರೂ ಅರ್ಥಪೂರ್ಣವಾಗಿತ್ತು ಮತ್ತು ಇದು ಹಾದಿ ತಪ್ಪುತ್ತಿರುವ ವಿಷಯ ನನ್ನ ಗಮನಕ್ಕೂ ಬಂದಿತ್ತು
ಬೇಸರದ ಬೀಳ್ಕೊಡೊಗೆಗಳೊಂದಿಗೆ

ಸಸ್ನೇಹ
ಬಾಲ ಚಂದ್ರ

ಬಾಲಚಂದ್ರ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/09/2009 - 17:18

9731367777
ಇದು ನನ್ನ ಮೊಬೈಲ್ ನಂಬರ್ ಆಗಿದ್ದು ನಾನು ನಿಮ್ಮಿಂದ
ಕರೆ ನಿರೀಕ್ಷಿಸುತ್ತೇನೆ

ಸಸ್ನೇಹ
ಬಾಲ ಚಂದ್ರ

:) ನನ್ನದೊಂದು ಮಾಡಲು ಕೆಲಸವಿಲ್ಲದವನ ಕೊಂಕು - ಅದು 'ಜಾತ್ಯಾತೀತ' ಅಲ್ಲ 'ಜಾತಿ+ಅತೀತ=ಜಾತ್ಯತೀತ'
ಮತ್ತು 'ಜಾತ್ಯಾತೀತತೆ' ಉಪಯೋಗ ಖಂಡಿತಾ ಸರಿ ಅಲ್ಲ ಅನ್ನೋದು ನನ್ನ ಅನಿಸಿಕೆ...

...ಹಾಗೇ ಸುಮ್ಮನೆ! :D

ಬಾಲ ಚಂದ್ರ ಧ, 04/08/2009 - 16:04

;) ;) ಆಹಾ ಎಂಥಾ ಕೊಂಕು, ಧನ್ಯವಾದಗಳು ಶಿವು
ಖಂಡಿತಾ ಪರೀಕ್ಷಿಸಿ ತಪ್ಪನ್ನು ತಿದ್ದಿಕೊಳ್ಳುತ್ತೇನೆ

sanath kumar (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/09/2009 - 11:36

"ಬುದ್ದಿ ಜೀವಿಗಳು ನೇರವಾಗಿ ಹಿಂದೂಗಳನ್ನು ದೂಶಿಸಿದ್ದು ನಿಜವಾಗಲೂ ನಾನು ಕೇಳಿಲ್ಲ" ಸ್ವಾಮಿ, ನೀವು ಕರುಣಾನಿಧಿಯವರ ರಾಮನ ಕುರಿತ ಮಾತನ್ನು ಕೇಳಿಲ್ವೊ ಅಥವಾ ಅವರನ್ನು ಬುದ್ದಿ ಜೀವಿಗಳು ಅನ್ತಾ ಕರೆಯಲ್ಲೊವೊ?

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/09/2009 - 12:17

ನಿಮಗೆ ರಾಮ=ಹಿಂದೂ. ಕೆಲವರಿಗೆ ಬ್ರಾಹ್ಮಣ=ಹಿಂದೂ. ಇನ್ನುಕೆಲವರಿಗೆ ಅಸ್ಪೃಶ್ಯತೆ=ಹಿಂದೂ. ಹಲವರಿಗೆ ಬೀಜೇಪಿ/ಉಗ್ರ ಬಲಪಂಥೀಯರು=ಹಿಂದೂ. ನನಗೆ ಇವ್ಯಾವದೂ ಸಂಪೂರ್ಣ ಹಿಂದೂ ಅಲ್ಲ. ಬರೇ ಭಾಗಗಳು. ಇವನ್ನು ಯಾರಾದರೂ ಹೊಗಳಿದರೆ ಮೇಲಕ್ಕೆತ್ತಿದಂತಾಗಲಿಲ್ಲ. ಯಾರಾದರೂ ತೆಗಳಿದರೆ ಅವುಗಳ ತೂಕ ಕಡಿಮೆಯಾಗುವದಿಲ್ಲ. ಹಿಂದೂ ಧರ್ಮಕ್ಕಂತೂ ಏನೂ ಅಗುವದಿಲ್ಲ.

ನಮ್ಮ ಮುತಾಲಿಕರು, ಅನಂತ ಕುಮಾರ ಹೆಗಡೆಯವರು ಬಹಿರಂಗವಾಗಿ ಹೇಳುವ ; ನಾವುಗಳು ನಮ್ಮ ನಮ್ಮಲ್ಲಿ ಹೇಳಿಕೊಳ್ಳುವ " ಮುಸ್ಲಿಮರು ದೇಶದ್ರೊಹಿಗಳು." ಎಂಬಂತ generalised commentನ್ನು ಹಿಂದೂಗಳ ವಿರುದ್ಧ ಯಾರಾದರೂ ಬುದ್ಧಿಜೀವಿಗಳು ಎಲ್ಲಾದರೂ ಹೇಳಿದ್ದು ಕೇಳಿದ್ದೀರ?

ಕರುಣಾನಿಧಿ ಬುದ್ಧಿಜೀವಿಗಳ ಸಾಲಿನಲ್ಲಿ ನಿಲ್ಲುತ್ತಾರಾದರೆ ರೇವಣ್ಣನಿಗೆ ಏನೆನ್ನಬೇಕು?

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/09/2009 - 12:43

ಮಾನ್ಯರೇ,
ನಿಮ್ಮಿಬ್ಬರ ರಾಮ್,ಹಿಂದು,ಬ್ರಾಹ್ಮಣ ಇವುಗಳ ಬಗ್ಗೆ ವಾಗ್ವಾದವು ಮುಸಲ್ಮಾನರು ಮತ್ತು ಕ್ರಿಸ್ತೀಯರಿಗೆ ತಮ್ಮ ಸಾಮ್ರಾಜ್ಯವನ್ನು ಬೆಳೆಸಲು ಒಳ್ಳೆಯ ಅನುಕೂಲಕ್ಕೆ ಎಡೆ ಮಾದಿ ಕೋಡುವದು. ದಯವಿಟ್ಟು. ವಾಗ್ವಾದವ ನಿಲ್ಲಿಸಿ ನಮ್ಮ ಸಮಾಜದ ಸುಧಾರಣೆಗೆ ಕಂಕಣಬಧ್ದ್ರಾಗೊಣ್. ಹಿಂದು ಧರ್ಮದಲ್ಲಿಯ ನ್ಯೂನ್ಯತೆಗಳನ್ನು ತೊಡೆಯಲು ಸಹಕರಿಸೊಣ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/09/2009 - 13:07

ಸಾಹೇಬರೆ,
ಇದು ಚರ್ಚಾಕೂಟ ವಿಭಾಗದ ಲೇಖನ. ಅದಕ್ಕಾಗಿ ನಾವು ನಡೆಸುತ್ತಿರುವದು ಸಂವಾದ. ವಾಗ್ವಾದವಲ್ಲ. ನಾವು ನಮ್ಮ ನಮ್ಮಲ್ಲಿ ಹೊಡೆದಾಡಿ ಕೊನೆಯಾಗುತ್ತಿರುವ ಕೃಷ್ಣನ ಯಾದವರಲ್ಲ. ಕಳವಳ ಪಡಬೇಡಿ.

ಬರೆದಿಟ್ಟುಕೊಳ್ಳಿ. ಈ ಭಾರತ ಎಂದೆಂದಿಗೂ ಹಿಂದೂಗಳ ಆಸ್ಥಿಯೇ. ಹಿಂದುಸ್ಥಾನವೇ. ಮುಸ್ಲಿಮರು ಕಿರಿಸ್ತಾರರು ಇಬ್ಬರೂ ಸಾಮ್ರಾಜ್ಯ ಬೆಳೆಸುವ ಸಾಧ್ಯತೆ ನನಗೆ ಕಾಣುವದಿಲ್ಲ. ಇರುವ ಪಾಕಿಸ್ತಾನ, ಅಫಘಾನಿಸ್ತಾನ ಗಳೇ ಅವನತಿಯ ಅಂಚಿಗೆ ಮುಟ್ಟಿದ್ದಾಗಿದೆ ಇನ್ನೆಲ್ಲಿಯ ಸಾಮ್ರಾಜ್ಯ?

ಅಲ್ಲದೇ ಹಿಂದು ಧರ್ಮದಲ್ಲಿಯ ನ್ಯೂನ್ಯತೆಗಳನ್ನು ತೊಡೆಯ ಬೇಕಾದರೆ ಯಾವದು ನ್ಯೂನ್ಯತೆ, ಯಾಕೆ ನ್ಯೂನ್ಯತೆ ಎಂಬ ಚರ್ಚೆ ಆಗಬೇಕಲ್ಲ. ಅದಕ್ಕಾಗಿ ಈ ಸಣ್ನ ಪ್ರಯತ್ನ. ಸಂಯಮದಿಂದಿರಿ.

ಸದ್ಬುದ್ಧಿ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 04/10/2009 - 17:37

ನಾನು ಇತ್ತೀಚೆಗೆ ವಿಸ್ಮಯನಗರಿಯಲ್ಲಿ ಗಮನಿಸುತ್ತಿದೇನೆ, ಇಲ್ಲಿ ಯಾರು ಏನು ಬರೆದರು ಅಲ್ಲಿ ಮೊದಲು ಪ್ರತ್ಯಕ್ಷರಾಗುವುದು ಕೆಲ ಸ್ವಯಮ್ ಘೋಸಿಥ ಪ್ರತಿಕ್ರಿಯಾ ಶೂರರು. ಅವರಿಗೆ ಏನು ಬರೆದರು ಕಷ್ಟ, ಅಲ್ಲಿ ಅವರ ಒಂದು ಮುದ್ರೆ ಬೀಳಲೇ ಬೇಕು. ಇನ್ನು ಇಲಿ ನಿಮ್ಮ ಬರವಣಿಗೆಯ ಮೂಲ ಉದ್ದೇಶವೇ ತಿರುಗ ಮುರುಗ ಆಗಿ ನೇವು ಎನೆನೆನನ್ನೋ ಚರ್ಚಿಸುತ್ತಿದ್ದೆರ..

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/13/2009 - 14:14

ಹೌದೌದು. ಆದರೆ ತಮ್ಮದೂ ಒಂದು ಅಂತ ಸೇರಿಸ ಹೊರಟವರು ಬರೆಹದ ಕನ್ನಡ ಕಾಗುಣಿತದ ಕಡೆ ಒಂದು ಕಣ್ಣಿಡಬೇಕು.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 04/19/2009 - 11:27

ರುದ್ರೆಶ ನನ್

  • 4111 views