Skip to main content

ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಎಲ್ಲ ಪಕ್ಷಗಳ ಚುನಾವಣಾ ತಯಾರಿ ಜೋರಾಗಿಯೇ ನಡೆದಿರಬೇಕು. ಜಾಗೋ ರೇ, ಲೀಡ್ ಇಂಡಿಯಾ ಮುಂತಾದ ಕ್ಯಾಂಪೇನ್ ಗಳು "ವೋಟ್ ಮಾಡಿ, ವೋಟ್ ಮಾಡಿ" ಅಂತ ಮತದಾನದ ಅಗತ್ಯವನ್ನು ಒತ್ತಿ ಹೇಳುತ್ತಿವೆ. ಮತ ಚಲಾಯಿಸುವುದು ನಮ್ಮ ಹಕ್ಕು ಮತ್ತು ಆದ್ಯ ಕರ್ತವ್ಯ ಎರಡೂ ಹೌದು. ಆದರೆ ನಮ್ಮ ಈ ಮತದಾನದ ವ್ಯವಸ್ಥೆಯಲ್ಲಿ ನನಗೆ ಅರ್ಥವಾಗದ ವಿಷಯವೊಂದಿದೆ. ಅದೇನಂದ್ರೆ "ಸೋತು ಗೆಲ್ಲುವ" ಅಭ್ಯರ್ಥಿಗಳದು.

"ಸೋತು ಗೆಲ್ಲುವವರು" ಅಂದ್ರೆ ಯಾರು ಅಂತೀರಾ? ಒಂದು ಉದಾಹರಣೆ ಸಮೇತ ಹೇಳಲು ಪ್ರಯತ್ನಿಸುತ್ತೇನೆ.

ಒಂದು ಕ್ಷೇತ್ರದಲ್ಲಿ ಒಂದು ಲಕ್ಷ ಮತದಾರರಿದ್ದಾರೆ ಮತ್ತು ಅಲ್ಲಿ ನೂರಕ್ಕೆ ನೂರರಷ್ಟು ಮತದಾನ ನಡೆಯುತ್ತೆ ಎಂದಿಟ್ಟುಕೊಳ್ಳೋಣ. ಚುನಾವಣೆ ನಂತರ ಮೂವರು ಅಭ್ಯರ್ಥಿಗಳಲ್ಲಿ ಮೊದಲ ಇಬ್ಬರಿಗೆ ಒಟ್ಟು ಅರವತ್ತು ಸಾವಿರ ಮತಗಳು ಮತ್ತು ಮೂರನೆಯವನಿಗೆ ನಲವತ್ತು ಸಾವಿರ ಮತಗಳು ಲಭಿಸಿದವು ಎಂದಿಟ್ಟುಕೊಳ್ಳೋಣ. ಈಗ ನಮ್ಮ ಚುನಾವಣಾ ವ್ಯವಸ್ಥೆ ಗೆದ್ದವರು ಯಾರೆಂದು ಘೋಷಿಸುತ್ತೆ? ಮೂರನೆಯವನನ್ನು ತಾನೇ?

ಇಲ್ಲಿ ಗಮನಿಸತಕ್ಕ ಅಂಶವೆಂದರೆ, ಈ ಮೂರನೆಯ ಅಭ್ಯರ್ಥಿ ಆ ಕ್ಷೇತ್ರದ 60% ಮತದಾರರಿಂದ ತಿರಸ್ಕರಿಸಲ್ಪಟ್ಟವನು. ಅವನಿಗೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ದೊರೆತು ಅವನು ವಿಜಯಿಶಾಲಿಯೇ ಆಗಿರಬಹುದು. ಆದರೆ, ಅವನು ತನಗೆ ಮತ ಹಾಕದ 60 ಪ್ರತಿಶತ ಮತದಾರರಿಂದ ತಿರಸ್ಕರಿಸಲ್ಪಟ್ಟವನು ಎಂಬ ಅಂಶ ಮಾತ್ರ ಸುಳ್ಳಲ್ಲ ತಾನೇ? ಇಂಥವರನ್ನೇ ನಾನು "ಸೋತು ಗೆಲ್ಲುವವರು" ಅಂತ ಸಂಭೋದಿಸಿದ್ದು.

ಇದು ನಮ್ಮ ಚುನಾವಣಾ ವ್ಯವಸ್ಥೆಯ ಲೊಪವೇ? ಹೌದಾಗಿದ್ದರೆ, ಇದಕ್ಕೆ ಪರಿಹಾರವೇನು?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಉಮೇಶ :) ಸೋಮ, 04/06/2009 - 20:59

"ಚುನಾವಣೆ ನಂತರ ಮೂವರು ಅಭ್ಯರ್ಥಿಗಳಲ್ಲಿ ಮೊದಲ ಇಬ್ಬರಿಗೆ ಒಟ್ಟು ಅರವತ್ತು ಸಾವಿರ ಮತಗಳು..."

ದಯವಿಟ್ಟು ಇದನ್ನು "ಚುನಾವಣೆ ನಂತರ ಮೂವರು ಅಭ್ಯರ್ಥಿಗಳಲ್ಲಿ ಮೊದಲ ಇಬ್ಬರಿಗೆ ತಲಾ ಮೂವತ್ತು ಸಾವಿರ ಮತಗಳು.." ಎಂದು ಓದಿಕೊಳ್ಳಿ.

  • 768 views