Skip to main content

ವಿಸ್ಮಯ ನಗರಿಯ ಎಲ್ಲಾ ಓದುಗರಿಗೂ.....

ಬರೆದಿದ್ದುApril 3, 2009
3ಅನಿಸಿಕೆಗಳು

ಕೆಲವು ತಾಣಗಳಿವೆ, ಅಲ್ಲಿ ನಮ್ಮ ಬರಹಗಳಿಗೆ ಕಾದು ಅವರು ಪ್ರಕಟಿಸುವವರೆಗೂ... ನಾವು ಏನೂ... ಮಾಡುವಂತಿಲ್ಲ..! :( ಆದರೆ ವಿಸ್ಮಯದಲ್ಲಿ ನಮ್ಮ ಪ್ರತಿಭೆಗೆ ಮುಖ್ಯವೇದಿಕೆಯಾಗಿರುವ ಮತ್ತು ನಮ್ಮೆಲ್ಲ ಬರಹಗಳನ್ನು ನಾವೇ ಸ್ವತ: ಪ್ರಕಟಿಸುವ ಸದಾವಕಾಶವನ್ನು ರಾಜೇಶ್ ಅವರು ಕಲ್ಪಿಸಿಕೊಟ್ಟಿರುವುದು ಗಮನಾರ್ಹ :) ಅವರಿಗೊಮ್ಮೆ ಹೃತ್ಪೂರ್ವಕ ಧನ್ಯವಾದಗಳು... :)

ಮೊದಲನೆಯದಾಗಿ ನಾನು-ನೀನು ಅನ್ನುವ ಅಹಂ ನಮ್ಮಲ್ಲಿ ಬೆರೆತು ಹೋಗಿದೆ. ಆದ್ದರಿಂದ ಪ್ರತಿಯೊಬ್ಬರ ಕಾಲೆಳೆಯುವ ಕೆಲಸವೇ ಮುಂದುವರೆಯುತ್ತಿದೆ, ಹಾಗು ನಾವುಗಳೂ ಕೂಡ ಅದರ ವಿಕೋಪಕ್ಕೆ-ಪ್ರತಿರೇಕವಾಗಿ ನಡೆದುಕೊಂಡು ಇನ್ನಷ್ಟು ಅವನತಿಯ ಅಂತಕ್ಕೆ ತಂದು ನಿಲ್ಲಿಸಿಬಿಡುತ್ತೇವೆ..... ನೀವೇ..ಯೋಚಿಸಿ? ನನ್ನದು ಎನ್ನುವ ವಸ್ತುಗಳನ್ನೆಲ್ಲ ನಾವುಗಳು ಎಷ್ಠು ಜವಾಬ್ದಾರಿಯುತವಾಗಿ ಕಾಪಾಡುತ್ತೇವೆ!. ಅದೇ ಇನ್ನೊಬ್ಬರ ನೋವಿನಲ್ಲಿ ನಮ್ಮ ಪಾತ್ರ ಕಿಂಚಿಷ್ಟಾದರು ಇರುತ್ತದೆಯೇ...?? ಇದಕ್ಕೆಲ್ಲ ಕಾರಣವೇನೆಂದರೆ ನಮ್ಮ-ನಮ್ಮಲ್ಲೇ ಇಲ್ಲದಿರುವ ಒಗ್ಗಟ್ಟು-ಸ್ನೇಹಬಾಂದವ್ಯ-ಪ್ರೀತಿ-ವಿಶ್ವಾಸ!!

ನಾವು ಬರೆದ ಕಥೆ-ಕವನ ಯಾವುದೇ ಒಂದು ಸಂಕಲನದಲ್ಲಿ ಬರೆದ ಸಾರಾಂಶವನ್ನು ಕೂಲಂಕುಶವಾಗಿ ಮತ್ತೊಮ್ಮೆ ಓದಿ, ಅದು ನಮಗೆ ಆರೋಗ್ಯಕರವಾಗಿದೆಯೇ ಎಂದು ನಮ್ಮನ್ನೊಮ್ಮೆ ಪ್ರಶ್ನಿಸಿಕೊಂಡು, ತೃಪ್ತಿಯ ಭಾವವೆನೆಸಿದಾಗ, ಮತ್ತೊಬ್ಬರಿಗೆ ಉಣಬಡಿಸಿದರೆ ಅವರು ಕೂಡ ಅದರ ಸವಿಯನ್ನು ಸವಿಯಬಲ್ಲರು! ಇಲ್ಲವಾದರೆ ದಂಡಂ-ದಶಗುಣಂ, ಮತ್ತದೇ ಬೈಗುಳ!!!

ನಮ್ಮ ಲೇಖನಗಳಿಂದ ಸಮಾಜಕ್ಕೆ ಯಾವ ತರಹದ ಉಪಯೋಗವಾಗಿದೆ ಎಂದು ಯೋಚಿಸಬೇಕೋ..? ಅಥವ ಎಷ್ಟು ಜನರ ಉತ್ತರಕ್ಕಾಗಿ ಅವರಾಡುವ ಸಮಾಧಾನಕರ (ಕ್ಲಿಷ್ಥಕರ) ಮಾತುಗಳಿಗೋಸ್ಕರ ನಾವು ಸಿಕ್ಕಿದ್ದೆಲ್ಲ ಬರೆಯಬೇಕೊ?? ಒಬ್ಬಾತನಿಂದ ಬೈಗುಳ - ಒಬ್ಬಾತನಿಂದ ಹೊಗಳಿಕೆ, ಇದೆಲ್ಲದರ ನಡುವೆ ಅವರ ಜೊತೆ ನಮ್ಮದೂ ಕಾದಾಟ! ಇದರಿಂದ ಮಾತಿನ ಚಕ-ಮಕಿಯಲ್ಲಿ ಮುಂದಿನ (ಅದು ಚೆನ್ನಾಗಿರಲಿ-ಇಲ್ಲದಿರಲಿ) ಬರಹಕ್ಕೆ ಮತ್ತೆ ಬೈಗುಳ!

ನಾವುಗಳು ಬರೆಯುವಾಗ ಆದಷ್ಟು ಚಿಂತಿಸಿ ಪದಗಳ ವಿಶ್ಲೇಷಣೆ ಮಾಡಿ ನಮಗಿಂತ ಹೆಚ್ಚು\ ಬಲ್ಲವರಿಂದ ತಿಳಿದುಕೊಂಡು-ಓದಿಕೊಂಡು-ಅರ್ಥೈಸಿಕೊಂಡು, ಅವರಂತೆ ಸಭ್ಯರಾಗಿ ಕಣಕ್ಕಿಳಿದರೆ, ಯಾವ ಎದುರಾಳಿಯು ಮಾತಿನ ಕತ್ತಿಯಿಂದ ಗೆಲ್ಲಲಾರ!! :)

ವಿಸ್ಮಯನಗರಿಯ ಓದುಗರೇ, ಪ್ರಜೆಗಳೇ.... ಬಹಳ ನೋವಿನಿಂದ-ವಿನಮ್ರತೆಯಿಂದ ಹಾಗು ನಿಮ್ಮೆಲ್ಲರಿಗಿಂತ ಚಿಕ್ಕವನಾದ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ... ನಮ್ಮ ಭವಿಷ್ಯದ ರೂಪು-ರೇಖೆಗಳನ್ನು ನಾವೇ ತಿದ್ದುಕೊಳ್ಳಬೇಕೇ..ಹೊರತು, ಬೇರೆಯವರು ತಿದ್ದಲು ಸಾಧ್ಯವಿಲ್ಲ, ಆದ್ದರಿಂದ ಬರವಣಿಗೆಯಲ್ಲಿಯೇ ಆಗಲಿ, ಬರೆದ ಅರ್ಥದಲ್ಲಿಯೇ ಆಗಲಿ, ಬರೆದವರನ್ನೇ ಆಗಲಿ ದೂರದೇ, ಅವರ ತಪ್ಪುಗಳನ್ನು ಅವರಿಗೆ ನೋವಾಗದಂತೆ-ನಿಮಗೆ ತಿಳಿದಿದ್ದರೆ ಅದನ್ನು ಪ್ರಸ್ತುತ ಪಡಿಸಿ, ನಾವುಗಳೆಲ್ಲರು ಒಂದೇ ಎಂಬ ದೃಡ ನಿರ್ಧಾರದಿಂದ, ನಾವುಗಳು ಬೆಳೆಯುತ್ತ, ಬೇರೆಯವರನ್ನು ಬೆಳೆಸುತ್ತ, "ವಿಸ್ಮಯ" ಅನ್ನೊ ಮಾತಿಗೆ ನಾವುಗಳು ಎಷ್ಟು ವಿಸ್ಮಯವಾಗಿ ರೂಪುಗೊಂಡಿದ್ದೇವೆ ಹಾಗು ರೂಪುಗೊಳ್ಳುತ್ತೇವೆ ಎಂಬುದನ್ನು ಸಾಧರಪಡಿಸೋಣ... :)

ರಾಜೇಶ್-ಶಿವು-ಪಾರ್ವತಿ... ಇವರನ್ನೇ ನೋಡಿ ಇವರ ಬರಹಗಳಿಗೆ ತನ್ಮಯತೆಯಿಂದ-ತಲೆದೂಗಲೇ..ಬೇಕು..! ಬಹಳಷ್ಟು ಜನರಿದ್ದಾರೆ, ಆದರೆ ಏಕಾಗ್ರತೆ ಮತ್ತು ಸಹನೆಯೇ.. ನಾವುಗಳು ಉತ್ತುಂಗಕ್ಕೆ ಏರಲು ಸಾಧ್ಯ! ಇಲ್ಲದಿದ್ದರೆ ಜಗಳ-ಜಂಜಾಟದಲ್ಲಿ ನಾವುಗಳು ಇದ್ದಲ್ಲಿಯೇ ಇರಬೇಕಾಗುತ್ತದೆ, ಕೊನೆಗೊಂದುದಿನ ಹೇಳ-ಹೆಸರಿಲ್ಲದೆ ಹೋಗಬೇಕಾಗುತ್ತದೆ.. :(

ಗೆಳೆಯರೆ - ನನ್ನಿಂದ ನಿಮಗೆ ಕಿಂಚಿತ್ತಾದರೂ ಆತ್ಮ-ವಿಶ್ವಾಸ ಹಾಗೂ ಮನಸ್ಸು ಕರಗಿದೆ ಎಂದು ತಿಳಿದಿದ್ದೇನೆ.. :) ಒಬ್ಬರಿಗೆ ಸಹಾಯ ಮಾಡುವುದರಲ್ಲಿರುವ ತೃಪ್ತಿ, ಬೇರೆಲ್ಲು ಇಲ್ಲ ಅನ್ನುವುದೇ ನಾ ನಂಬಿರುವ ಸತ್ಯ! ಹಾಗು ನಿಮ್ಮಿಂದ ದೂರುಗಳ ಧೋರಣೆಯಿಂದ, ದೂರಾಗುತ್ತ, ನಾವುಗಳೆಲ್ಲ ಒಂದಾಗುತ್ತ, ದಯವಿಟ್ಟು ಯಾರೊಬ್ಬರನ್ನೂ.. ದೂರದೇ.. ಅವರ ಬರಹಗಳಿಗೆ ಇನ್ನಷ್ಟು ಸ್ಪೂರ್ತಿ ತುಂಬಿ, ಹುರಿದುಂಬಿಸಿ, ನಮ್ಮ ವಿಸ್ಮಯವನ್ನು ಎಲ್ಲಾ ತಾಣಗಳಲ್ಲಿ ಒಂದಾಗಿಸುತ್ತ ಮುಂದೆ ಸಾಗೋಣ....

ಎಲ್ಲರಿಗೂ.. ಮತ್ತೊಮ್ಮೆ ಮಗದೊಮ್ಮೆ ನನ್ನ ಪ್ರೀತಿಯ ವಂದನೆಗಳು... :) :)

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

yogi (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/04/2009 - 12:41

ನೀವು ಮೇಲೆ ಅಶಯಿಸಿದಂತೆ ಏಲ್ಲವು ಸರಿಯಾಗಿ ಆದರೆ ಇಲ್ಲಿ ಬರೆಯುವ ಪ್ರತಿಯೊಬ್ಬ ಬರಹಗಾರ ನಿಮಗೆ ಒಂದು thanks ಹೇಳಲೇ ಬೇಕು ಯೋಗೇಶ್.. :) a very good initiative from you... keep it up man :)

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 04/05/2009 - 10:39

kettaddu illadiddare olleyadu olleyadu anthaa hege gottaagutte?

ರಾಜೇಶ ಹೆಗಡೆ ಮಂಗಳ, 04/07/2009 - 12:12

ಹಾಯ್ ಯೋಗೇಶ್,

ನಿಮ್ಮ ಕಾಳಜಿಗೆ ಧನ್ಯವಾದಗಳು :) ಆದಷ್ಟು ಅಶ್ಲೀಲ ಶಬ್ದ ಇರುವ ಅಭಿಪ್ರಾಯಗಳನ್ನು ಕಿತ್ತು ಹಾಕಲಾಗುತ್ತಿದೆ. ಸುಮ್ಮನೆ ಜಗಳ ಕಾಯುವ ಅನಾಮಿಕರ ಕಮೆಂಟ್ ಗಳಿಗೂ ಮಿತಿಮೀರಿದಾಗ ಕತ್ತರಿ ಹಾಕಲಾಗುತ್ತಿದೆ.

ಈ ವಿಸ್ಮಯ ನಮ್ಮೆಲ್ಲರ ಜ್ಞಾನ ವೃದ್ದಿಗೆ, ಸಮಸ್ಯೆ ಬಗೆಹರಿಸಲು ಸಹಾಯಕವಾಗಲಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.