Skip to main content

ಎಲ್ಲರನ್ನೊಮ್ಮೆ 'ಪ್ರೀತಿ'ಸಿ

ಬರೆದಿದ್ದುMarch 23, 2009
4ಅನಿಸಿಕೆಗಳು

ಪ್ರೀತಿ ಮಾಡಬಾರದು, ಮಾಡಿದರೆ ಒನ್ವೇ ಇರಬಾರದು! ಎಷ್ಟರ ಮಟ್ಟಿಗೆ ಇದರ ಒಳ ಅರ್ಥವಿದೆಯೆಂದರೆ, ಒಬ್ಬರೇ ಕೊರಗಿ, ಕಾಡುವ ವಿಚಿತ್ರ ಭಾವನೆಗಳೆಲ್ಲ ಮನಸ್ಸಿನಲ್ಲಿ ತುಂಬಿಕೊಂಡು, ಧೈರ್ಯ ಸಾಲದೆ, ಕೊನೆಗೊಂದು ದಿನ ತಿರಸ್ಕಾರಗೊಳ್ಳುವ 'ಪ್ರೀತಿ'ಯನ್ನು ಇದ್ಧ-ಬದ್ಧ ಎಲ್ಲಾ ಆಸೆ-ಆಕಾಂಕ್ಷೆಗಳನ್ನೆಲ್ಲ ದೂರಮಾಡಿಕೊಂಡು, ಕಣ್ಣೀರಿನಲ್ಲಿ ಕಾಲದ ಜೊತೆಗೆ, ಹೆಜ್ಜೆಹಾಕುವ ಆ ದಿನಗಳು ಯಾವ ಪ್ರೇಮಿಗಳಿಗೂ ಬೇಡ ಎನ್ನುವುದೇ ನನ್ನ ಮನದ ನಿರೀಕ್ಷೆ.

ನಿಜ ಹೇಳಿಬಿಟ್ಟು ಇದೆ-ಇಲ್ಲ ಎನ್ನುವ ಉತ್ತರದಿಂದ ಎದೆಯ ಭಾರವನ್ನು ಕಡಿಮೆ ಮಾಡಿಕೊಂಡರೆ ಎಷ್ಟೋ ಮೇಲು!? ಆದರೆ ನನ್ನೊಳಗೆ ಕಾಡುತ್ತಿರುವ ಒಂದು ಪ್ರಶ್ನೆಯೆಂದರೆ.. ಪ್ರೀತಿಯೆಂದರೆ ಅವಳ ಜೊತೆ ಕೂಡುವುದೇ ಅಲ್ಲ..! ಪ್ರೀತಿಯೆಂದರೆ ಸಾಯುವವರೆಗೂ ಮನಸ್ಸಿನಲ್ಲಿ ಆರಾಧಿಸುವಂತದು..! ಅವಳು ಸಿಗಲಿಲ್ಲವೆಂದು ನಾವೇಕೆ ನಮ್ಮನ್ನೇ ಶಿಕ್ಷಿಸಿಕೊಳ್ಳಬೇಕು? ಅಥವಾ ಅವಳಿಗೆ ಶಿಕ್ಷೆಕೊಡಬೇಕು? ಪ್ರೀತಿ ಮಾಡಿದ್ದು ನಿಜವೇ ಆದರೆ ಅವಳು ಎಲ್ಲೇ ಇರಲಿ (ಜೊತೆಯಾದರೂ) ಹೇಗೆ ಇರಲಿ, ಚೆನ್ನಾಗಿ ಬಾಳಿ-ಬದುಕು ಎಂದು ಆಶಿಸುವುದಲ್ಲವೆ ನಮ್ಮ ನಿಜವಾದ ಪ್ರೀತಿ.!

ಅವಳ ಜೊತೆ ಕೂಡುವದಕ್ಕೆ, ಸಾಂಗತ್ಯಕ್ಕೆ, ವಿಕೃತ ಆಸೆಗೆ, ಪ್ರೀತಿ ಮಾಡುವುದು ನಿಜಕ್ಕೂ ಎಷ್ಟು ಬೇಸರದ ಸಂಗತಿ! ಜೀವನದಲ್ಲಿ ಹೆಣ್ಣೊಬ್ಬಳು ನಮಗೆಂದು ಎಲ್ಲೋ ಇರುತ್ತಾಳೆ, ವಯೋಮಿತಿಗೆ ಬಂದಾಗ, ಸಂಬಂಧಗಳ ಕೊಂಡಿಯಿಂದ, ತಂದೆ-ತಾಯಿಯರ ಆಶೀರ್ವಾದದಿಂದ ನಮಗೂ ಒಬ್ಬಾಕೆ ಜೊತೆಯಾಗುತ್ತಾಳೆ! ಕೂಡುವುದು-ಕಳೆಯುವುದು ಇದ್ದದ್ದೇ..! ಆದರೆ ನಿಜವಾದ ಪ್ರೀತಿ ತಾನು ಮತ್ತು ಪರರ ಸಂತೋಷವನ್ನು ಅವಲಂಬಿಸಿರುತ್ತದೆ.

ಹೋರಾಟದ ಈ ಬದುಕಿನಲ್ಲಿ ನಾವೇಕೆ ಗೆಲುವಿಗಿಂತ ಸೋಲನ್ನೆ ಹೆಚ್ಚು ಕಾಣುತ್ತೇವೆ? ಎಂದು ಕೊಂಡಾಗ, ಒಮ್ಮೆ ಯೋಚಿಸಿ ನೋಡಿದರೆ, ನಾವು ಬೆಳೆಯುತ್ತಿರುವ ಪರಿಸ್ಥಿತಿ ಹಾಗು ಬೆಳವಣಿಗೆಗನುಸಾರವಾಗಿ ನಮ್ಮಲ್ಲಿರುವ ಜಡತೆ. ಬಡವ-ಶ್ರೀಮಂತನೆಂಬುದಿಲ್ಲ, ಎಲ್ಲರಲ್ಲೂ ಮನಸ್ಸೆಂಬುದೊಂದಿದೆಯಾದರೂ.. ಅದರ ನಿಸ್ವಾರ್ಥ ಕಾರ್ಯ ಎಷ್ಟು? ಎಂಬುದಿಲ್ಲ! ಎಲ್ಲರೂ ಮಾಡುವುದು ಹೊಟ್ಟೆಗಾಗಿ-ಗೇಣು ಬಟ್ಟೆಗಾಗಿ ಎಂಬುದರ ನೀತಿಯ ಅರಿವಿನೊಂದಿಗೆ, ಪರರಿಗೇನಾದರು ನನ್ನಿಂದ ತೊಂದರೆ ಉಂಟಾಯಿತೆ ಎಂದು ತಿರುಗಿ ನೋಡುವ ಪರಿವೆಯೇ ಇಲ್ಲ!? ಎಲ್ಲಾ ಕೊಟ್ಟಿರುವ ದೇವರಿಗೆ, ಏನು ಕೊಟ್ಟೆ ಎಂದು ಪ್ರಶ್ನಿಸುವ ನಾವು, ಧನ್ಯತಾ ಭಾವದಿಂದ ಸಾಕು ಎಂದು ಕೈ ಮುಗಿದು ಬೇಡಿಕೊಂಡಿದ್ದು ಉಂಟೆ? ಹೌದು... ಮನಸ್ಸಿಗನ್ನಿಸಿದ್ದು ಎಲ್ಲಾ ಸ್ವಾರ್ಥ ಬಾವದಿಂದ ದೂರ ನಿಂತು ನನ್ನದೇನಿಲ್ಲದ ಈ ಜಗತ್ತಿನಲ್ಲಿ, ನಿಸ್ವಾರ್ಥ ಭಾವದಿಂದ ನೋಡು ಎಂದು ಮನಸ್ಸಿಗನಿಸಿದಾಗ ಆತ್ಮಾನಂದ ತೃಪ್ತಿ. ಸಡಿಲಗೊಂಡ ಎಲ್ಲಾ ಚಿಂತೆಗಳು ಪರಮಾನಂದದಿಂದ ಬೀಗಿದ ಕ್ಷಣ ಆ ಅವಸ್ಮರಣೀಯ ಕ್ಷಣಕ್ಕೆ, ಮತ್ತೆ ಈ ಜೀವನವೆಂಬ ಬಂದನಕ್ಕೆ ತೊಪ್ಪೆಂದು ಬಿದ್ದಂತೆ ಭಾಸವಾಯಿತಾದರೂ ಈ ಜೀವನ ಹಾಗೂ ಸಂಸಾರದಲ್ಲೂ.. ತೃಪ್ತಿಯ ಭಾವಗಳಿರುತ್ತವೆ. ಆದರೆ ಮುಳ್ಳಿನ ಮೇಲೆ ನಮ್ಮ ಬಟ್ಟೆ ಇರುವಾಗ ಎಳೆದು ಕೊಳ್ಳದೆ, ನಿಧಾನವಾಗಿ ಬಿಡಿಸುವ ಜಾಣ್ಮೆಯೆ ಜೀವನಕ್ಕೆ ಪರಿಪಾಠವೆಂಬುದು ಮನಸ್ಸಿಗನಿಸಿದ್ದು!

ಒಂದು ಒಳ್ಳೆ ಪುಸ್ತಕ ಕೊಂಡು ಓದಿದರೆ, ಮನಸ್ಸಿಗೆ ಬಹಳ ಆನಂದವಾಗುತ್ತದೆ. ಜೊತೆಗೆ ಬುದ್ದಿ-ಶಕ್ತಿ, ಜೀವನ ಶೈಲಿ, ನಾವು ಬದುಕುವ ರೀತಿ ಬದಲಾಗುತ್ತದೆ. ನಾವೆಲ್ಲರು ಅಂದು ತಿಳಿದು ಕೊಳ್ಳುವ ವಿಚಾರವೇನೆಂದರೆ ನಾವು ಮಾಡುವ ತಪ್ಪುಗಳೆಲ್ಲ ನಮ್ಮ ಅರಿವಿನ ಸ್ಮೃತಿ ಪಠಲದಿಂದ ಹೆಚ್ಚಿನ ಬೆಳಕನ್ನು ಹೊಮ್ಮಿಸಿ, ಸತ್ಕಾರ್ಯಗಳ ದಾರಿಯನ್ನು ತೋರಿ, ಜಾಗೃತಗೊಂಡ ಮನಸ್ಸು ಕೂಡ ಎಲ್ಲಾ ಚಿಂತನೆಗಳಿಂದ ಮುಕ್ತಗೊಂಡು ಆದರ್ಶ ಜೀವನವನ್ನು ಪರಿಪಾಲಿಸುತ್ತದೆ.

ಮುಖ್ಯವಾದ ಸಾರಾಂಶ
1) ನನ್ನಿಂದ ಇನ್ನೊಬ್ಬರಿಗೆ ಸಹಾಯ ಮಾಡಲು ಯೋಗ್ಯತೆ ಇಲ್ಲದಿದ್ದರೆ, ತೊಂದರೆಯಂತೂ ಕೊಡಬಾರದು.
2) ಸಹನೆಯೇ.. ಜೀವನದ ಯಶಸ್ಸು
3) ಎಲ್ಲರನ್ನು ಪ್ರೀತಿಸುವಂತಾದರೆ.. ಸಾವು ಕೂಡ ಹಿಂಜರಿಯುತ್ತದೆ.
4) ಸಂಕಷ್ಟದಲ್ಲಿರುವಾಗ ನೀ ಮಾಡಿರುವ ಒಳ್ಳೆ ಕಾರ್ಯವೇ ನಿನ್ನ ಕಾಪಾಡುತ್ತದೆ.

ದ್ವೇಷ, ಅಸೂಯೆಗಳನ್ನೆಲ್ಲ ಬಿಟ್ಟು, ಪರರನ್ನು ನಿಂದಿಸುವುದು ಬಿಟ್ಟು, ಎಲ್ಲರ ಹಿತಗಳನ್ನು ಬಯಸುವ ಒಳ್ಳೆ ಮನಸ್ಸಿಗೆ ಎಂದೂ ಸಂಕಷ್ಟವಿಲ್ಲ. ತೃಪ್ತಿಯೆನಿಸುವುದಿಲ್ಲವೆ??

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/25/2009 - 09:45

one way ಪ್ರೀತಿಯಿಂದ ಕೊರಗಿದ ಮನಸ್ಸಿಗೆನಿಮ್ಮ ಲೇಖನ ಸಾಂತ್ವಾನ ಮಾಡಿದೆ. ನಿಜಾವದ ಪ್ರೀತಿ ತಾನು ಮತ್ತು ಪರರ ಸಂತೋಶವನ್ನು ಬಯಸುತ್ತದೆ. ಜೀವನದಲ್ಲಿ ನನಗಾಗಿ ಒಬ್ಬ ಕಾಯುತ್ತಿದ್ದಾನೆ ಈ ಆಶಾ ಭಾವನೆನೆ ಸಾಕು ನಮ್ಮ ಮುಂದಿನ ದಿನಗಳನ್ನು ಸುಂದರವಾಗಿರಿಸಲು.

ತುಂಬಾ ಧನ್ಯವಾದಗಳು.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/25/2009 - 16:37

ನಿಜವಾಗಿಯು ನಿಮ್ಮ ಮಾತು ಸತ್ಯ. ಕೆಲವರು ತಮ್ಮಆಸೆಗೆ ಪ್ರೆೀತಿ ಮಾಡುತರೆ...........ಆದ್ರೆ ಹುಡುಗರು ಹುಡುಗಿರ ಮನಸ್ಸನ್ನು ಅರ್ಥ ಮಾಡಿಕೊಳ್ಳದೆ ನಿಜವಾಗಿಯು ಪ್ರೆೀತಿ ಮಾಡಬಾರದು.

ರಾಜೇಶ ಹೆಗಡೆ ಗುರು, 03/26/2009 - 18:07

ಹಾಯ್ ಯೋಗೇಶ್,

ಎಲ್ಲರೂ ನಿಮ್ಮ ವಾಕ್ಯವನ್ನು ಅಕ್ಷರಶಃ ಪಾಲಿಸಿದರೆ ಎಷ್ಟು ಸೊಗಸಾಗಿರುತಿತ್ತು ಅಲ್ವಾ? ಅರಿಷ್ಡ್ವರ್ಗಗಳು (ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯಗಳು) ಇದಕ್ಕೆ ಅವಕಾಶ ಮಾಡಿಕೊಡುವದಿಲ್ಲವೇನೋ. :)

ಚೈತ್ರ ಎಸ್ (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/08/2009 - 15:24

ಹುಡುಗರು ಈ ಮಾತನ್ನು ತಿಳಿದು ಕೊ0ಡರೆ ಎಸ್ಟು ಚೆನ್ನ. ಹುಡುಗಿರ ಬಾಳು ನಿಜವಾಗಿಯು ಚೆನ್ನಾಗಿರುತ್ತೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.