Skip to main content

ಹೇ ಪ್ರೇಮವೇ ನನ್ನ ಹೃದಯದ ಗರ್ಭಗುಡಿಯಲ್ಲಿ ನಿನ್ನ ಆರಾಧಿಸುತ್ತಿರುವೆ

ಬರೆದಿದ್ದುFebruary 14, 2009
6ಅನಿಸಿಕೆಗಳು

[img_assist|nid=3562|title=ಪ್ರೀತಿ|desc=|link=none|align=left|width=300|height=198]ಮೊದಲಿನಲ್ಲಿ ಪ್ರಿಯತಮ ಚಂದ್ರ ತುಂಬಾ ಚೆನ್ನಾಗಿದೆಯಲ್ಲವೇ? ಎನ್ನುತ್ತಾನೆ. ಅವಳು ಹೌದು ಎನ್ನುತ್ತಾಳೆ. ಈ ರಾತ್ರಿ ತುಂಬಾ ಚೆನ್ನಾಗಿದೆಯಲ್ಲವೇ ಎನ್ನುತ್ತಾನೆ, ಹೌದು ಅನ್ನುತ್ತಾಳೆ. ಈ ರಾತ್ರಿ ತುಂಬಾ ಚೆನ್ನಾಗಿದೆಯಲ್ಲವೇ ಎನ್ನುತ್ತಾನೆ, ಹೌದು ಅನ್ನುತ್ತಾಳೆ. ನಮ್ಮ ಮನಸ್ಸು ಭಾವಗಳು. ಒಂದಾಗಿದೆಯಲ್ಲವೇ ಅನ್ನುತ್ತಾನೆ. ಅವಳು ತನ್ಮಯಳಾಗಿ ತಲೆಯಾಡಿಸುತ್ತಾಳೆ. ನಾನು ನಿನ್ನ ಪ್ರೀತಿಸ್ತಿದೇನೆ ಎನ್ನುತ್ತಾ ನಾನೂ ಅಷ್ಟೇ ಅನ್ನುತ್ತಾಳೆ, ಕೊನೆಗೆ ನೀನಿಲ್ಲದೆ ನಾನು ಬದುಕಲಾರೆ ಅನ್ನುತ್ತಾಳೆ, ಅವನು ಅವಳನ್ನು ತೋಳಿನಲ್ಲಿ ಬಂಧಿಸುತ್ತಾನೆ. ಪ್ರಕೃತಿ ಪುಲಕಿಸುತ್ತದೆ. ಅವಳು ಅವನಲ್ಲಿ ಐಕ್ಯವಾಗುತ್ತಾಳೆ. ಒಟ್ಟಿನಲ್ಲಿ ಕೊನೆಗೆ ಏನಾಯಿತೆಂದರೆ ಅವನು ಅವಳನ್ನು ಅನುಭವಿಸುತ್ತಾನೆ...!
ಅಂದ ನೋಡಿ, ಆಸೆ ಪಡೊದು, ಆಸೆ ಪಟ್ಟು ಅಂದಾನ ಅನುಭವಿಸೋದು, ಅಂದಾನ ಅನುಭವಿಸಲೇ ಬೇಕೂಂತ ತಪ್ಪು ದಾರಿ ಹಿಡಿಯೋದು. ಕ್ಷಣದ ಸುಖಕ್ಕೋಸ್ಕರ ಜೀವನದ ಎಲ್ಲೆಗಳನ್ನು ಮೀರಿ ವಿಕೃತ ಕಾಮುಕರಾಗಿ, ಪವಿತ್ರತೆಯ ಜೀವನವನ್ನು ಅಪವಿತ್ರಗೊಳಿಸೋದು.

ಪ್ರೀತಿಗೆ ತನ್ನದೇ ಆದ ಸ್ಥಾನ-ಮಾನಗಳಿವೆ, ಆ ಪ್ರೀತೀನ ಯಾವತ್ತೂ ಕಾಮದ ದೃಷ್ಟಿಯಿಂದ ನೋಡಬಾರದು ಎಂಬುದೆ ನನ್ನ ಅಭಿಪ್ರಾಯ. ಹೆಣ್ಣು, ಹೊನ್ನು, ಮಣ್ಣು ತಾನಾಗಿಯೇ ಒಲಿಯಬೇಕೆ ಹೊರತು, ಕಸಿದು ಕೊಳ್ಳುವ ಗೋಜಿಗೆ ಹೋಗಬಾರದು. ವಿನಾ ಕಾರಣ ತೊಂದರೆಗೆ ಸಿಲುಕಿ ನೋವಿನ ಸೆರೆಮನೆಯಲ್ಲಿ ವಿಲ,ವಿಲ ಅಂತ ನರಳಾಡಬೇಕಾಗುತ್ತೆ. ಗಂಡು, ಹೆಣ್ಣಿನ ನಡುವಿನ ಸಂಬಂಧ, ಅವರಿಬ್ಬರ ನಡುವಿನ ಪರಿಚಯ, ಸ್ನೇಹ, ಜಣಛಿ.. ಬಾವನೆಗಳು ಮುದಗೊಳ್ಳುತ್ತ, ಕಲ್ಪನೆಗಳು ಹದಗೊಳ್ಳುತ್ತ, ಕನಸುಗಳು ಕಾಡುತ್ತ, ಆಸೆಗಳು ಚಿಗುರುತ್ತ, ಹೃದಯದಲ್ಲಿ ಹರಳುವ ಪ್ರೀತಿಗೆ, ಅವಳ ರೀತಿಗೆ, ಮನಸ್ಸು ಅವಳ ಆರಾಧಿಸಲ್ಪಡುತ್ತೆ. ಒಂದು ಕ್ಷಣದ ಮೋಹ ಸುಖಕ್ಕಿಂತ, ಅವಳ ಜೊತೆ ಕಳೆಯುವ ಪ್ರತಿಯೊಂದು ಕ್ಷಣದ ಮಧುರವಾದ, ಸಾಂಗತ್ಯವೇ.. ನಿಜವಾದ ಪ್ರೀತಿ.. ಆ ಪ್ರೀತಿಗೊಮ್ಮೆ ಶರಣಾಗಿ..!!
ನನ್ನೆದೆಯ ಬಾಂದಳದ ಹೊಂಬಿಸಿಲೇ ನಿನಗೆ ನನ್ನ ಪ್ರೀತಿಯ ಶುಭಾಶಯಗಳು. ಮನಸ್ಸು ಹದಗೊಂಡು, ನನ್ನೆದೆಯ ತೋಟದಲ್ಲಿ, ಪ್ರೀತಿ - ಪ್ರೇಮಗಳ, ಸ್ನೇಹ-ಸಿಂಚನಗಳ, ಆಸೆ-ಆಕಾಂಕ್ಷೆಗಳ, ಬಗೆ-ಬಗೆಯ ಹೂಗಳು ನನ್ನೆದೆಯ ತೋಟದಲ್ಲಿ ಬಿರಿದಿವೆ. ಎಲ್ಲದಕ್ಕೂ ನೀ ಎನ್ನ ಪುಟ್ಟ ಹೃದಯದಲ್ಲಿ ನೆಲೆಯೂರಿದ್ದೇ ಕಾರಣ. ಅಂದಕಾರದಿಂದ, ಮಂದಗತಿಯಿಂದ ನಾ ಎದ್ದು, ಇಂದು ನಿನ್ನಿಂದ ಆನಂದದಲ್ಲಿದ್ದೇನೆ.

ದೇಹವೇ ದೇಗುಲದಂತೆ, ಮನಸ್ಸೆ ಪೂಜಾರಿಯಂತೆ, ಹೃದಯದ ಗರ್ಭಗುಡಿಯಲ್ಲಿ, ನಿನ್ನ ಆರಾಧಿಸುತ್ತಿರುವೆ. ನಿನ್ನ ಪ್ರೀತಿಸುತ್ತಿರುವೆ. ಎಲ್ಲಾ ಕ್ಷಣದಲ್ಲೂ ನಿನ್ನದೆ ನೆನಪುಗಳ ಒಡನಾಟ. ನಿನ್ನ ಲಗು-ಬಗೆಯ ಉತ್ಸಾಹ, ಉನ್ಮಾದಗಳಿಗೆ ತಲೆದೂಗಿರುವೆ, ಮಿತವಾದ ಮಾತುಗಳಿಂದ ಅತಿಯಾದ ತೃಪ್ತಿಗೊಳಿಸುವೆ. ಮುಖ ಭಾವನೆಗಳಿಂದ ನೂರು ಮಾತಾಡಿರುವೆ. ಅನಿಸುತ್ತದೆ ಕಲ್ಲು ಕೂಡ ನಿನ್ನ ಸ್ಪರ್ಶಕ್ಕೆ ಕರಗಿ ಹೋದರೂ ಆಶ್ಚರ್ಯವೇನಿಲ್ಲವೆಂದು! ನಾನು ಕೂಡ ನಿನ್ನ ಹಾಗೆ ಇರಬೇಕು ಅನಿಸುತ್ತದೆ. ಅಯ್ಯೋ.. ನನ್ನ ನೋಡಿ ಮೂದಲಿಸಬೇಕಾಗಿಲ್ಲ, ನೀನೊಮ್ಮೆ ನನ್ನ ಜೀವನವೆಂಬ ದೀಪದಲ್ಲಿ ಆಸೆಗಳ ಬತ್ತಿಗಳನ್ನು ಹೊತ್ತಿಸಿಬಿಡು, ನನ್ನ ಜೀವನ ಬೆಳಗುತ್ತದೆ. ಕಾಲದ ಕಾಲೆಳೆದು, ಅದರ ಮೇಲೆ ಸವಾರಿ ಮಾಡಲು ಹೊರಟಿಲ್ಲ, ಅದರ ಬದಲಾಗಿ ಕಾಲದ ಕಾಲಿಗೆ ಬಿದ್ದು, ಕೈ ಮುಗಿದು ಬೇಡಿ ಕೊಂಡಿರುವೆ. ನೀ ಬೇಗ ನನಗೆ ಸಿಗಬೇಕೆಂದು.

ಬೆಳದಿಂಗಳ ಆ ಹುಣ್ಣಿಮೆಗೂ ಗೊತ್ತು, ಅದರ ಮಡಿಲಲ್ಲಿ ನಿನ್ನ ಬಗ್ಗೆ ನನ್ನೆದೆ ಅಂತರಾಳದ ಮಾತೆಲ್ಲ ಬಸಿದುಕೊಂಡದ್ದು, ನೀ ನನ್ನ ಜೊತೆಯಾದರೆ ನೀ ನನ್ನೆಲ್ಲ ಒಡನಾಟಗಾರರಿಗೂ ಕೇಳು ನೀನಂದ್ರೆ ನನಗೆ ಎಷ್ಟು ಇಷ್ಟ ಅಂತ.
****************************************

ಚಡಪಡಿಕೆ, ಆತುರ-ಕಾತುರ, ಹೇಳು ಬೇಗ ನಿನ್ನ ಉತ್ತರ! ಈ ಪರೀಕ್ಷೆಯಲ್ಲಿ ನನ್ನ ನಪಾಸು ಮಾಡಬೇಡ. ನೀ ಏನಾದರು ಇಲ್ಲವೆಂದು ಕಲ್ಲು ತೂರಿದರೆ, ನನ್ನೊಳಗಿರುವ ಜೀವಂತ ಬಾನಾಡಿಗಳು ಹಾರಿಹೋಗುತ್ತವೆ. ಈ ದೇಹದಲ್ಲಿ ಉಸಿರೇ ನಿಲ್ಲುತ್ತದೆ. ಅದೇ ಮುಸ್ಸಂಜೆಯಲ್ಲಿ ಕಳೆದು ಹೋಗುವ ರವಿ, ಮತ್ತೆ ಬೆಳಕನ್ನು ನಾನು ನೋಡುತ್ತೇನೆ ಅನ್ನುವ ಅನುಮಾನವೆ ಬೇಡ.

ಸ್ಮಶಾನದಲ್ಲೊಂದು ಹೂವನ್ನಾದರು ಇಟ್ಟು ಹೋಗು, ನನ್ನ ಆತ್ಮ ತೃಪ್ತಿಗೋಸ್ಕರ. ನಿನ್ನ ಕಣ್ಣಿಂದ ಹನಿಯೊಂದು ಜಾರಿ ಬಿದ್ದರೆ, ಮತ್ತೆ ನಾ ನಿನಗೋಸ್ಕರ ಹುಟ್ಟಿ ಬರುವೆ, ಮತ್ತೆ ನೀ ಎದುರಾಗಲು, ನನ್ನಲ್ಲಿ ಪ್ರೀತಿ ಅಂಕುರ ಮೂಡುತ್ತಿದ್ದಂತೆ...
(ಮತ್ತೆ ಮೊದಲಿನಿಂದ) ನನ್ನೆದೆಯ ಬಾಂದಳದ ಹೂವೆ......

ವಿಸ್ಮಯ ನಗರಿಯ ಓದುಗರಿಗೆಲ್ಲ ಪ್ರೇಮಿಗಳ ದಿನದ ಶುಭಾಶಯಗಳು..

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

shankar878 (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 02/16/2009 - 16:36

:dance: ಗುರು ಚೆನ್ನಾಗಿ ಬರೆದಿರುವೆ

ಯೋಗೇಶ್ ಸೋಮ, 02/16/2009 - 19:24

ಥ್ಯಾಂಕ್ಸ್

lokesh ಮಂಗಳ, 02/17/2009 - 12:46

ಚೆನ್ನಾಗಿ ಬರೆದಿರುವೆ

ಚಂದ್ರ ಧ, 02/18/2009 - 15:56

thumba channagi baredidera sir

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 02/26/2009 - 12:48

ninna preethi jaisali endu harivutthene.

shilpa1_4u@yahoo.com ಸೋಮ, 03/09/2009 - 17:42

.ಯುವಪ್ರೇಮಿಗಳಿಗೆ ದಾರಿದೀಪದಂತಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.