Skip to main content
Forums

India is great, but Indians are not great
ಈ ರಾಜಕಾರಣಿಗಳಿಂದನೇ ನಮ್ಮ ದೇಶ ಹಾಳಾಗಿ ಹೋಗ್ತಿದೆ.
ನಮ್ಮ ದೇಶ ಯಾವಾಗ್ಲೂ ಉದ್ಧಾರ ಅಗಲ್ಲ.
ಇವ್ರುದ್ದು ಅತಿ ಆಯ್ತು.... ಇನ್ನೂ ನಾವು ಸುಮ್ನೆ ಕೂತಿದ್ರೆ ದೇಶಾನೇ ನಾಶ ಮಾಡ್ಬಿಡ್ತಾರೆ..... (ಇತ್ಯಾದಿ ಇತ್ಯಾದಿ)

ಇತ್ತೀಚೆಗೆ ಯಾರನ್ನ ಕೇಳಿದ್ರೂ ಹೀಗೇ ಹೇಳ್ತಾರೆ.... ಎಲ್ಲಾರ ಬಾಯಲ್ಲೂ ಇದೇ ವಿಚಾರ, ಎಲ್ಲಾ ಬ್ಲಾಗ್ ಗಳಲ್ಲೂ ಇದೇ ಚರ್ಚೆ. ನಮ್ಮ ದೇಶ ಸರಿಯಾಗ್ಬೇಕು ಅಂದ್ರೆ ಜನಗಳೇ ಏನಾದ್ರೂ ಮಾಡ್ಬೇಕು ಅಂತ. ಆದ್ರೆ ನನಗೆ ಅರ್ಥ ಆಗ್ದೇ ಇರೋ ಒಂದು ವಿಚಾರ ಅಂದ್ರೆ ನಾವೇನ್ಮಾಡ್ಬೇಕು ಅಂತ!!!

ಭಾರತದಂಥಾ ದೇಶದಲ್ಲಿ ಮೊದ್ಲಿಂದ್ಲೂ ಸಮಸ್ಯೆಗಳಿಗೇನು ಬರ ಇಲ್ಲ. ಈಗಂತೂ ಅದರ ಲೆಖ್ಖ ಇಡಕ್ಕೂ ಆಗಲ್ಲ ಬಿಡಿ. ಒಂದೊಂದಾಗಿ ಸುಮ್ನೆ ಪಟ್ಟಿ ಮಾಡ್ತಾ ಹೋದ್ರೆ ಎಷ್ಟೊಂದು ಸಿಕ್ಕುತ್ತೆ. ಉದಾ : ಭಯೋತ್ಪಾದನೆ, ಉದ್ಯೋಗ ಸಮಸ್ಯೆ, ಲಂಚ, ಮತಾಂತರ ವಿವಾದಗಳು, ಬೇಕಾದ ಹಾಗೆ ಮೆರೆಯೋ ರಾಜಕಾರಣಿಗಳು, ನಮ್ಮ ಯಾವುದೇ ಸಮಸ್ಯೆಗಳಿಗೂ ಸ್ಪಂದಿಸದ ಸರ್ಕಾರಿ ಉದ್ಯೋಗಿಗಳು (ಎಲ್ಲಾ ಇಲಾಖೆಗಳೂ ಅಷ್ಟೇ!!), ನಾಲ್ಕು ದಿನ ಚೆನ್ನಾಗಿ ಮಳೆ ಬಂದರೆ ಪ್ರವಾಹ, ಮಳೆಗಾಲ ಮುಗಿದು 2 ತಿಂಗಳಿಗೇ ನೀರಿನ ಅಭಾವದಿಂದ ಪವರ್ ಕಟ್, ಇನ್ನೂ ಬೇಕಾದಷ್ಟು!!!!!

ಈ ಎಲ್ಲಾ ಸಮಸ್ಯೆಗಳಿಗೆ ಹೊಣೆ ಯಾರು? ಹೊರಗಿಂದ ಬಂದು ಬೇಕ್ಬೇಕಾದ ಹಾಗೆ ದೀಪಾವಳಿ ಮಾಡ್ಕಂಡು ಹೋಗೋ ಉಗ್ರಗಾಮಿಗಳಾ, ಸಿಕ್ದೋರ್ನೆಲ್ಲಾ ಮತಾಂತರ ಮಾಡೋ ಮಿಷನರಿಗಳಾ, ನಮಗೂ ಇದಕ್ಕೂ ಸಂಬಂಧನೇ ಇಲ್ಲ ಅನ್ನೋ ಹಾಗೆ ಅವರ ಸೆಕ್ಯೂರಿಟಿ ಬಗ್ಗೆ ತಲೆ ಕೆಡುಸ್ಕೊಂಡಿರೋ ರಾಜಕಾರಣಿಗಳಾ, 'ಮಾಮೂಲಿ'ಗಾಗೇ ಕೆಲಸ ಮಾಡುವ ಪೋಲೀಸ್ನೋರಾ, ಅಥವಾ ಇವರ್ಯಾರೂ ಸರಿ ಇಲ್ಲ, ನಮ್ಮ ವ್ಯವಸ್ಥೆನೇ ಸರಿ ಇಲ್ಲ, ಅಂತೆಲ್ಲಾ ಹೇಳ್ಕೊಂಡು ಏನೂ ಮಾಡಕ್ಕೆ ಗೊತ್ತಾಗ್ದೇ ಕೂತಿರೋ ಜನಾನಾ (ನಾನೂ ಅವರಲ್ಲೊಬ್ಬ!!) ..

ಇಷ್ಟೇನಾ ನಮ್ಮ ಕೈಲಾಗೋದು?? Forward this if you are a true Indian ಅನ್ನೋ mailಗಳನ್ನ ಕಳಿಸೋದು ಬಿಟ್ಟರೆ ಅದಕ್ಕಿಂತ ಜಾಸ್ತಿ ಇನ್ನೇನೂ ಮಾಡಕ್ಕೆ ಆಗಲ್ವಾ??

ಸುಮ್ನೆ ಮಾತಾಡ್ಸಿ ನೋಡಿ, ಈ ಸಮಸ್ಯೆಗಳ ವಿರುದ್ಧ ಹೋರಾಡೋಕೆ ಬೇಕಾದಷ್ಟು ಜನ ರೆಡಿ ಅಂತಾರೆ, ಆದ್ರೆ ಯಾರಿಗೂ ಏನು ಮಾಡ್ಬೇಕು ಅಂತ ಗೊತ್ತಿಲ್ಲ.

ನಾವು (ವಿಸ್ಮಯ ನಗರಿಯ ಓದುಗರು) ಏನಾದರೂ ಮಾಡಲು ಸಾಧ್ಯವಾ? ತಮ್ಮ 'ತನು-ಮನ-ಧನ' ಗಳನ್ನ ಅರ್ಪಿಸೋದಕ್ಕೆ ಯಾರೂ ರೆಡಿ ಇರಲ್ಲ ('ನಾನು ದೇಶಕ್ಕಾಗಿ ಪ್ರಾಣ ಬೇಕಾದ್ರೂ ಕೊಡ್ತೀನಿ' ಅನ್ನೋರು ಕೂಡಾ!!) ಆದ್ದರಿಂದ ದಯವಿಟ್ಟು ಹಲವು ಜನರ ಕಡಿಮೆ contributionಗಳಿಂದ ನಾವೇನಾದರೂ ಮಾಡಬಹುದಾ? ನೋಡಿ. (ಉದಾಃ ಕಡೇಪಕ್ಷ ವರ್ಷಕ್ಕೊಂದು ಬಾರಿ ನಾವೆಲ್ಲಾ ಸೇರಿ ಗಿಡಗಳನ್ನ ನೆಡೋ ಕೆಲಸ ಮಾಡಬಹುದು --- ಖರ್ಚು ಕಡಿಮೆ :-) ನೀವೂ ಈ ಕೆಲಸಕ್ಕೆ ಕೈ ಜೋಡಿಸಲು ರೆಡಿನಾ??
ನಿಮಗೇನಾದರೂ ಅಂತಹ Ideaಗಳು ಇದ್ದಲ್ಲಿ ದಯವಿಟ್ಟು ತಿಳಿಸಿ. ಸಮಸ್ಯೆ ಹಾಗೂ ನಾವು ಮಾಡಬಹುದಾದ ಕೆಲಸ ಎರಡನ್ನೂ ತಿಳಿಸಿದರೆ ಚೆನ್ನ.
ಇಂತಹ ಕಾರ್ಯಗಳಿಗಾದರೂ ವಿಸ್ಮಯ ಓದುಗರು ಒಟ್ಟಿಗೆ ಸೇರುವಂತಾಗಲಿ! ವಿಸ್ಮಯ ಈ ಕಾರ್ಯಕ್ಕೆ ವೇದಿಕೆ ಆಗಲಿ!!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ತಿಲಕ್ ರಾಜ್ ಡಿ.ಟಿ. ಗುರು, 01/22/2009 - 14:05

ವಿಕ್ರಂ ಅವರೇ,
ನಿಮ್ಮ ಆಲೋಚನೆ ಸರಿಯಾಗಿಯೇ ಇದೆ. ದೇಶವನ್ನು ಸರಿದಾರಿಗೆ ತರಲು ನಮ್ಮಿಂದಂತೂ ಆಗದ ಕೆಲಸ, atleast ಗಿಡಗಳನ್ನಾದರೂ ನೆಟ್ಟು, ಅವುಗಳನ್ನಾದರೂ ಪೋಷಣೆ ಮಾಡಿ, ದೇಶಕ್ಕೆ ಕೊಡುಗೆ ನೀಡುವ ನಿಮ್ಮ ಕಾರ್ಯಕ್ಕೆ ನನ್ನ ಸಹಮತವಿದೆ.

ರಾಜೇಶ ಹೆಗಡೆ ಶುಕ್ರ, 01/23/2009 - 13:38

ಹಾಯ್ ವಿಕ್ರಂ,

ಈ ಸಮಸ್ಯೆಗಳು ಇದೆಯಲ್ಲ ಅದು ಆಗಿರೋದು ಅನೇಕ ಜನರಿಂದ. ಇದಕ್ಕೆ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣ.
ಉದಾಹರಣೆಗೆ ಕೆಲವು ಸಮಸ್ಯೆ ತೆಗೆದುಕೊಳ್ಳೋಣ

ಮತಾಂತರಃ ಅಸ್ಪ್ರಶ್ಯತೆ, ಕೆಳ ಜಾತಿಯವರನ್ನು ಶೋಷಿಸುವದು. ಇದು ಮತಾಂತರ ಮಾಡುವವರಿಗೆ ಕೆಲಸವನ್ನು ಸಲೀಸಾಗಿಸಿದೆ.

ಉಗ್ರಗಾಮಿಗಳುಃ ಅವರಿಗೆ ನಮ್ಮ ದೇಶದಲ್ಲೂ ಸಹಾಯ ಮಾಡುವವರಿದ್ದಾರೆ. ಅದಕ್ಕೇ ಹೀಗೆ ರಾಜಾರೋಷವಾಗಿ ಹತ್ಯೆಗೈದು ಹೋಗುತ್ತಿರುವದು.

ರಾಜಕಾರಣಿಗಳುಃ ನಮ್ಮಲ್ಲಿ ಚುನಾವಣೆ ಗೆಲ್ಲಲು ಜಾತಿ, ಹಣ, ಹರಿದ ಹೆಂಡದ ಹೊಳೆ ಎಲ್ಲವೂ ಅವಲಂಭಿಸಿರುತ್ತದೆ. ಪ್ರಾಮಾಣಿಕವಾಗಿ ನಾನು ಜನ ಸೇವೆ ಮಾಡುತ್ತೇನೆ ಎಂದು ಯಾರಾದರೂ ಗಾಂಧಿ ತರಹ ಚುನಾವಣೆಗೆ ನಿಂತರೆ ಒಂದೇ ಆತ ಠೇವಣಿ ಕಳೆದು ಕೊಳ್ಳುತ್ತಾನೆ. ಅಥವಾ ಗೆದ್ದರೂ ಹಣದಾಸೆಗೆ ಬಿದ್ದು ಹಿಂದೆ ನೀಡಿದ ಭರವಸೆ ಎಲ್ಲ ಮರೆಯುತ್ತಾನೆ. ಆದರೆ ಅನಕ್ಷರತೆ, ಬಡತನ ಇವೆಲ್ಲವೂ ಜನರ ವಿವೇಕತನವನ್ನು ಕಸಿದುಕೊಂಡಿದೆ. ಏಷ್ಟೇ ಬೃಷ್ಟಾಚಾರಿಯಾದ ರಾಜಕಾರಣಿಯೂ ತನ್ನ ಹಣ, ಜಾತಿ ಬಲದ ಮೇಲೆ ಗೆಲ್ಲಬಹುದು.

ಈ ವ್ಯವಸ್ಥೆಯಲ್ಲಿರುವದು ಕೋಟ್ಯಂತರ ಜನ. ಎಲ್ಲರನ್ನೂ ಹದ್ದುಬಸ್ತಿಗೆ ತರುವದು ಆಗದ ಮಾತು. ಊರೆಲ್ಲಾ ಕೊಚ್ಚೆಯೆಬ್ಬಿಸುತ್ತಿದ್ದರೆ ಎಲ್ಲರೂ ಅವರವರ ಮನೆ ಸ್ವಚ್ಚ ಇಟ್ಟುವಂತೆ ಮಾಡಿ ಸ್ವಲ್ಪವಾದರೂ ಊರು ನೀಟಾಗಿರುವಂತೆ ಮಾಡಬಹುದು.
ಅದೇ ಜನರಲ್ಲಿ ಇವುಗಳ ಬಗ್ಗೆ ತಿಳುವಳಿಕೆ ಮೂಡಿಸುವದರ ಮೂಲಕ ಇದನ್ನು ಹಿಡಿತಕ್ಕೆ ತರಬಹುದೇ?
ಹಿಂದೂ ಧರ್ಮದ ಮಹತ್ವ ಅದರ ಉನ್ನತ ದ್ಯೇಯ ಜನರಿಗೆ ಇನ್ನೂ ಸರಳ ರೂಪದಲ್ಲಿ ತಲುಪಿಸಿ ಹಾಗೂ ಇತರ ಧರ್ಮೀಯರನ್ನು ಮತಾಂತರ ಗೊಳಿಸುವ ವ್ಯವಸ್ಥಿತ ಸಂಚನ್ನು ಬಯಲು ಗೊಳಿಸಿದರೆ?
ಉಗ್ರಗಾಮಿಗಳಿಗೆ ಸಹಾಯ ಮಾಡದಂತೆ ಜನರಿಗೆ ತಿಳುವಳಿಕೆ ಮೂಡಿಸಿದರೆ?
ಬ್ರಷ್ಟ ರಾಜಕಾರಣಿಗಳ ಬಗ್ಗೆ ಬರೆದು ಮುಂದೆ ಅವರು ಗೆಲ್ಲದಂತೆ ನೋಡಿಕೊಂಡರೆ?

ಜನರ ಕುಂದು ಕೊರತೆ ಬಗ್ಗೆ ಬರೆದು ರಾಜಕಾರಣಿಗಳಿಗೆ ತಲುಪಿಸಿದರೆ? ಅಥವಾ ಅದನ್ನು ಜನರೇ ಹೇಗೆ ಸರಿಪಡಿಸಬಹುದು ಎಂಬ ದಿಕ್ಕಿನಲ್ಲಿ ಚರ್ಚೆ ನಡೆಸಿದರೆ ಒಳ್ಳೆಯದೇ?

ಅನೇಕ ಸಂಘ ಸಂಸ್ಥೆಗಳು ಹುಟ್ಟಿವೆ ದೇಶ ಉದ್ಧಾರ ಮಾಡಲು ಆದರೆ ಅವು ಒಳ್ಳೆಯ ಮಾರ್ಗದಲ್ಲಿ ತಮ್ಮ ಖರ್ಚು-ವೆಚ್ಚಕ್ಕೆ ಬೇಕಾದ ಹಣ ಸಂಗ್ರಹಿಸುತ್ತಿವೆಯಾ? ಅನೇಕ ಬಾರಿ ಅವು ಮಾಡುವ ಗಲಾಟೆಗಳು ಜನಸೇವೆಗಿಂತ ಕೇವಲ ಸ್ವಾರ್ಥ ಪರ ಎನಿಸುತ್ತವೆ.

ಗಿಡಗಳನ್ನು ನೆಡುವ ಕೆಲಸ ತುಂಬಾ ಇಷ್ಟವಾಯ್ತು. ಆದ್ರೆ ಎಲ್ಲಿ ನೆಡುವದು? ಖಾಲಿ ಜಾಗ ಕಂಡಾಕ್ಷಣ ಅತಿಕ್ರಮಿಸಿ ಅಲ್ಲಿ ಮನೆ, ಅಂಗಡಿ ಕಟ್ಟುವ ಈ ನಾಡಿನಲ್ಲಿ? !!
ಎಲ್ಲವೂ ಸಾಧ್ಯವಾಗದಿರಬಹುದು. ಆದರೆ ನಮ್ಮ ಪ್ರಯತ್ನ ಸ್ವಲ್ಪವಾದರೂ ಯಶಸ್ಸು ಗೊಂಡರೂ ಸಾಕು. ಇನ್ನೂ ಏನಾದರೂ ಉಪಾಯ ಇದ್ರೆ ಸೇರಿಸಿ. ನೋಡೋಣ ನಾವೆಲ್ಲಾ ಸೇರಿ ಏನು ಮಾಡಬಹುದು ಅಂತಾ.

shailesh rai (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/25/2009 - 11:22

ನಮ್ಮ ದೆಶ ಉದ್ದ್ರ ಅಗ್ಗ್ಲ್ಲ ಬಿದಿ

rajeevdm ಭಾನು, 03/08/2009 - 21:54

ನಮ್ಮ ದೇಶದ ಸಮಸ್ಯೆಗಳಿಗೆ ದೇಶದ ಜನರು ಅಂದ್ರೆ ನಾವೇ ಕಾರಣರಲ್ಲವೇ?
ಉದಾ : ಲಂಚಗುಳಿತನ : ಇದು ಯಾಕೆ ನಮ್ಮ ವ್ಯವಸ್ಥೆಯಲ್ಲಿ ಇಷ್ಟು ಹಾಸು ಹೊಕ್ಕಾಗಿದೆ ? ಯಾಕಂದ್ರೆ ಪ್ರಾಮಾಣಿಕವಾಗಿ ನಮಗೆ ಏನೂ ಮಾಡೋದು ಬೇಕಾಗಿಲ್ಲ . ಡ್ರೈವರ್ ಲೈಸೆನ್ಸ್ ಗೆ ರೂಲ್ಸ್ ಬುಕ್ ಓದಿ ಟೆಸ್ಟ್ ಕೊಟ್ಟು ಪಾಸಾಗೋ ಅಷ್ಟು ವ್ಯವಧಾನ ಇಲ್ಲ . ಒಮ್ಮೆ ಆ ರೀತಿ ಮಾಡಿದರೂ ಟೆಸ್ಟ್ ಫೈಲ್ ಆದ್ರೆ ಎರಡನೇ ಸಾರಿ ಹೋಗಿ ಛಲದಿಂದ ಬರೆದು
ಪಾಸಾಗುವ ತಾಳ್ಮೆಯೂ ಇಲ್ಲ .
ಮನೆ ಕಟ್ಟಿಸ್ತಿರಾ? ಪ್ಲಾನು ಅಪ್ಪ್ರೂವ ಆಗಲ್ಲ? ಯಾಕೆ? ಸರಕಾರ ಹೇಳಿರೋ ರೂಲ್ಸ್ ಪಾಲಿಸೋದು ಯಾರಗೂ ಬೇಕಾಗಿಲ್ಲ. ಜಾಗ ವೇಸ್ಟ್ ಆಗುತ್ತಲ್ಲ ಅದಕ್ಕೆ! ಅದಕ್ಕೇನು ಮಾಡ್ತೀವಿ ? ಆಫೀಸರ್ಗೆ ಒಂಚೂರು ದುಡ್ಡು ತಿನ್ನಿಸಿ ಪ್ಲಾನು ಅಪ್ಪ್ರೂವ ಮಾಡ್ಸ್ಕೊತಿವಿ!!!
ಕುಮ್ಮಕ್ಕು ಕೊಡೋದೂ ನಾವೇ ಆಮೇಲೆ ಗೋಳಾಡೋದೂ ನಾವೇ!
ರಾಜಕಾರಣ ಬಿಸಿನೆಸ್ ಆಗಿದೆ ಯಾಕೆ? ಜನ ತಮ್ಮ ಸಮಸ್ಯೆಗಳ್ನ ಪರಿಹರಿಸೋಕೆ ರಾಜಕಾರಣಿಗಳಿಗೆ ದುಡ್ಡು ಸುರಿತಾರೆ? ಯಾಕೆ ಪ್ರಾಮಾಣಿಕವಾಗಿ ಸರಕಾರಕ್ಕೆ ದುಡ್ಡು ಕಟ್ಟಕ ಆಗಲ್ವ?

ಸಮಸ್ಯೆಗಳನ್ನ್ ತೊಡೆದು ಹಾಕೋಕೆ ಛಲ ಬೇಕು, ತಾಳ್ಮೆ ಬೇಕು, ಶಿಕ್ಷೆ ಮತ್ತು ಶಿಕ್ಷಣ ಬೇಕು. ಜನರಲ್ಲಿ ಹಕ್ಕು ಮತ್ತು ಕರ್ತವ್ಯಗಳ ಜಾಗೃತಿ ಮೂಡಿಸಬೇಕು. ಅದನ್ನ ಜನರಿಗೆ ತಿಳಿಸಿ ಕೊಡೊ ಕಾರ್ಯ ಆಗಬೇಕು. ಸರಕಾರ ಇಷ್ಟು ಕಾರ್ಯಕ್ರಮ ರೂಪಿಸಿದರೂ ಅವು ಜನರಿಗೆ ತಲಪೋದೆ ಕಷ್ಟ! ಅಥವಾ ಬೇಕೆಂತಲೇ ತಲಪದೆ ಇರಲಿ ಅಂತ ಒಳ ಮರ್ಮ ಏನೋ?!! ಸಾಮಾಜಿಕ ಬದಲಾವಣೆ ಬೇಕಿದ್ದರೆ ಜನರಲ್ಲಿ ಪ್ರಾಮಾಣಿಕತನ, ದೇಶ ನಮ್ಮದು ಎನ್ನೋ ನಮ್ಮತನ ಬರಬೇಕು.

ಸೋ ನಾವ್ಹೇಗೆ ಇದಕ್ಕೆ ಸಹಾಯ ಮಾಡಬೇಕು ಅನ್ನೋದು ಇಲ್ಲಿರೋ ಪ್ರಶ್ನೆ. ಸಾಮಾಜಿಕ ಬದಲಾವಣೆ ತರೋ ಅಷ್ಟು ಶಕ್ತಿ ಇದ್ದವರು ಸಂಘಟನೆಗಳ ಮೂಲಕ ಜನ ಜಾಗೃತಿ ಮೂಡಿಸಿ. ನೀವಿರೋ ಅಪಾರ್ತ್ಮೆಂತಲ್ಲೋ ನಗರದಲ್ಲೋ ಚಿಕ್ಕ ಚಿಕ್ಕ ಸಂಘಟನೆಗಳನ್ನ ಮಾಡ್ಕೊಂಡು ಸಮಸ್ಯೆಗಳನ್ನ ಚರ್ಚಿಸಿ, ಸಮಾಧಾನ್ ಹುಡುಕಿ. ಸರ್ಕಾರದ ಅಂಗ ಸಂಸ್ಥೆಗಳ ಮೇಲೆ ಒತ್ತಡ ತನ್ನಿ. ಜನರಲ್ಲಿ ಪ್ರಾಮಾಣಿಕತೆ ಬಗ್ಗೆ ಜಾಗೃತಿ ಮೂಡಿಸಿ. ಮಕ್ಕಳಲ್ಲಿ ಜಾಗೃತಿ ಮೂಡಿಸಿ.

ಸುನಿಲ್ ಎಸ್.ಇಟಗಿ ಮಂಗಳ, 10/06/2009 - 16:13

ಹಾಯ್ ವಿಕ್ರಂ
ನಿಮ್ಮ ಸಮಸ್ಯೆ ಬೆಕ್ಕಿನ ಕತ್ತಿಗೆ ಗಂಟೆ ಕಟ್ಟೋ ಕೆಲಸ ಮಾಡ್ಬೇಕು ಇದರಲ್ಲಿ ನನಗೆ ಅರ್ಥ ವಾಗದ ಸಮಸ್ಯೆ ಯೆಂದರೆ ಇದರಲ್ಲಿ ಬೆಕ್ಕು ಯಾರು ಈ ಬೆಕ್ಕು ತಿನ್ನಬೇಕೆಂದಿರುವ ಇಲಿ ಯಾರು ಇದನ್ನು ನನಗೆ ಸ್ಪಷ್ಟ ಪಡಿಸಿ
ಇಲ್ಲಿ ನೀವು ತಿಳಿಸಿರುವ ಬೆಕ್ಕೆಂದರೆ ನಿಮ್ಮ ಪ್ರಕಾರ ರಾಜಕಾರಣಿಗಳು ಉಗ್ರಗಾಮಿಗಳು ಮತ್ತು ಮತಾಂತರ ಮಾಡುವವರು ಮತ್ತು ಇತರೆ ಸರ್ಕಾರಿ ಉದ್ಯೊಗದಲ್ಲಿರುವ ಭಾರತ ಹಾಗು ನೆರೆದೇಶಗಳ ನಾಗರೀಕರು ಎಂದರ್ಥ ಬರುತ್ತದೆ ಇನ್ನು ಇಲಿಗಳೆಂದರೆ
ಮತ್ತೆ ಹೇಳಬೇಕೆ (ಶ್ರೀ ಸಾಮಾನ್ಯರಾದ ನಾವುಗಳೇ) ಇಲ್ಲಿ ನಾನು ನಿಮಗೆ ಒಂದು ಸಣ್ಣ ಕಥೆಯನ್ನು ಹೇಳಬೇಕೆಂದಿದ್ದನೆ ನಾನು ಸಣ್ಣವನಿದ್ದಾಗ ನಮ್ಮ ಅಜ್ಜ ನವರು ಹೇಳುತಿದ್ದ ಕಥೆಯ ಮೊದಲನೇ ಸಾಲೇ ನಿಮ್ಮ ಪ್ರಶ್ನೆ ಯಾಗಿದೆ ಈ ಪ್ರಶ್ನೆ ಯನ್ನು ನೀವು ಕೇಳಿದಾಗ ನಮ್ಮ ಅಜ್ಜನವರು ಹೇಳುತಿದ್ದ ಆ ಕಥೆಯಲ್ಲಿನ ಜಾಣ ಇಲಿಯು ನೆನೆಪಾಗುತ್ತದೆ ಅದರಲ್ಲಿ ಇಲಿಯು ತನ್ನಸಂಸಾರವನ್ನೆಲ್ಲಾ ಬೆಕ್ಕು ತಿಂದು ಹಾಕುತಿದ್ದಾಗ ಆ ಜಾಣ ಇಲಿಯು ತನ್ನವರನ್ನು ಉಳಿಸಿಕೊಳ್ಳಲು ಹಾಲಿನ ಮಡಿಕೆಗೆ ಘಂಟೆಯನ್ನು ಕಟ್ಟಿ ಬೆಕ್ಕು ಆ ಹಾಲನ್ನು ಕುಡಿಯಲು ಮಡಿಕೆಯೊಳಗೆ ತನ್ನ ತೆಲೆಯನ್ನು ತೊರಿಸಿದಾಗ ಆ ಮಡಿಕೆಯೊಳಗೆ ತನ್ನ ತೆಲೆಸಿಕ್ಕಿ ಹಾಕಿ ಕೊಂಡು ಒದ್ದಾಡಿ ಆ ನಂತರ ಬೆಕ್ಕು ಮಡಕೆಯನ್ನು ಒಡೆದು ಹಾಕಿದಾಗ ಅದಕ್ಕೆ ಕಟ್ಟಿದ್ದ ಘಂಟೆ ಬೆಕ್ಕಿನ ಕೊರಳಲ್ಲಿ ಬಿತ್ತು ಆಗ ಬೆಕ್ಕು ಎಲ್ಲಿ ಮತ್ತು ಯಾವಾಗಲೇ ಬಂದರು ಇಲಿಗಳಿಗೆ ಗೊತ್ತಾಗುತ್ತಇತ್ತು ಈ ಜಾಣ ಇಲಿಯ ಜಾಣ್ಮೆಯಿಂದ ಇಲಿಯು ತನ್ನ ಸಂಸಾರ ವನ್ನು ಹೇಗೆ ಕಾಪಾಡಿತ್ತೊ ಹಾಗೆ ನಾವು ಶ್ರೀ ಸಾಮಾನ್ಯರಾದವರು ಈ ತರಹದ ಜಾಣ್ಮೆಯನ್ನು ಉಪಯೋಗಿಸಿ ನಮ್ಮ ಜಾತಿ ಧರ್ಮ ಭಾಷೆ ರಾಷ್ಟ್ರಿಯತೆ ನಮ್ಮ ದೇಶ ನಮ್ಮವರು ತಮ್ಮವರನ್ನು ಹೀಗೆ ರಕ್ಷಿಸಿ ಕೊಳ್ಳಬೇಕು ಅದು ರಾಜಕಾರಣಿ ಯವರು ಕೊಡುವ ದುಡ್ಡು ಸೀರೆ ಹೆಂಡ ಸಾರಾಯಿ ಮುಂತಾದ ಆಮಿಷ ಗಳಾಗಿಬಹುದು ಅಥವಾ ಉಗ್ರಗಾಮಿಗಳ ಉಪಟಳ ವಾಗಿರಬಹುದು ಬೇರೆ ಯಾರೆ ಆಗಿದ್ದರು ಸಹ ನಮ್ಮ ಜಾಣ್ಮೆ ಯನ್ನು ಉಪಯೊಗಿಸಿ ನಮ್ಮ ದೇಶವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ನಮ್ಮ ದೇಶದ ಲ್ಲಿ ಒಬ್ಬರೇ ಇಬ್ಬರೇ ಐಟಿ ಬಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ದೊಡ್ಡ ದೊಡ್ಡ ಹೆಗ್ಗಣ ಗಳೆ ಇವೆಯಲ್ಲಾ (ಸಾರಿ ಇಂಜಿನಿಯರ ರವರನ್ನು ಹೆಗ್ಗಣ ಎಂದಿದ್ದಕ್ಕೆ) ಇವರಿಂದ ಹಿಡಿದು ಸ್ಲಂ ನಲ್ಲಿ ವಾಸ ಮಾಡಿತ್ತಿರುವ ಜನರ ವರಗೆ ಎಲ್ಲಾರೊ ತಮ್ಮ ತಮ್ಮ ಬುದ್ದಿವಂತಿಕೆಯನ್ನು ತೊರಿಸಿದರೆ ನಮ್ಮ ದೇಶದವರನ್ನು ನಾವು ಕಾಪಾಡಿ ಕೊಳ್ಳಬಹುದು
ಇನ್ನು ಪರಿಸರ ಸಂರಕ್ಷಣೆಯಬಗ್ಗೆ ಯಂದರೆ ನಾವು ಅಲ್ಲಿ ಇಲ್ಲಿ ಗಿಡ ನೆಡುವುದರ ಬದಲು ನಮ್ಮ ಮನೆಯಮುಂದೆ 1ರಿಂದ 2 ಗಿಡ ನೆಡಿ ನುಡಿಮಾತು ಕೇಳಿಲ್ಲವೇ (ಮನೆಗೊಂದು ಮರ ಊರಿಗೂಂದು ವನ)ವೆನ್ನುವಹಾಗೆ
ಮೊದಲು ಕೆಲಸ ಯಾರಾದರು ಶುರುಮಾಡಲಿ ಎಂದು ಕುಳಿತುಕೊಳ್ಳುವ ಬದಲು ನಾವೇ ಆ ಕೆಲಸ ವನ್ನು ಶುರು ಮಾಡೊಣ ಬದಲಾವಣೆ ನನ್ನಿಂದಲೇ ಶುರುವಾಗಲಿ ಎಂಬ ದೈಹ ವಿರಬೇಕು ವರನಟ ಡಾ.ರಾಜ್ ಕುಮಾರ ರವರು ಬಂಗಾರದ ಮನುಶ್ಯ ಚಿತ್ರದಲ್ಲಿ ಹಾಡಿರುವ ಸಾಲಿನ ಹಾಗೆ ಆಗದು ಎಂದು ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಹದೆ ಇರಬೇಕೆಂದು
ಸುನಿಲ್ ಇಟಗಿ.

kirana (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/30/2010 - 16:11

ಹಾಯ್ ವಿಕ್ರಮ್ ನೀವ್ ಹೇಳಿದ ಹಾಗೆ ನಾನು ಕೂಡ ಗಿಡ ಮರ ಬೆಳಸೋದರಲ್ಲಿ ತೊಂಬಾ ಆಸೆಯಿಂದ ಇದ್ದವಳು ನಮಗೆ ಅಂತ ಸ್ವಂತ ಮನೆ ಕೂಡ ಇಲ್ಲ ನಾವು ಎಲ್ಲೇ ಹೋದರು ಬಾಡಿಗೆ ಮನೆನೇ ಅಲ್ಲಿ ಹೋದಾಗಲೆಲ್ಲ ಒಂದೊಂದು ಮನೆಯಲ್ಲಿ ಅಂದ್ರು 3 ಅಥವ 4,5 ವರ್ಷ ಇರುತ್ತಿದ್ದೆವು ನನ್ನ ಲಕ್ ಅನ್ನೋ ಹಾಗೆ ಎಲ್ಲಾ ಕಡೆ ಹಿತ್ತಲ ಮನೆಗಳೇ ಸಿಕ್ಕದ್ದು ನನಗೆ ಗಿಡ ಮರ ಹಾಕೋದು ಅಂದ್ರೆ ತುಂಬಾ ಇಷ್ಟ ಎಲ್ಲೇ ಹೋದರು ಒಂದು 3 ಅಥವ 4 ಮರವನ್ನಾದರೂ ಹಾಕುತ್ತಿದ್ದೆ ಆದರೆ ನಾ ಬಿಟ್ಟು ಬಂದ ಮನೆಗಳಲ್ಲಿ ಆ ಮರಗಳನ್ನ ನನ್ನ ಕಣ್ಣ ಮುಂದೆನೇ ತರಿದು ಹಾಕಿದರು ನನಗೆ ಎಷ್ಟು ಅಳು ಬರುತ್ತಿತ್ತು ಗೊತ್ತಾ ಅಮ್ಮನಿಗೆ ಹೇಳಿ ಅಳೋ ಹಾಗೆ ಆಯ್ತು ಅಮ್ಮನ ಅತ್ರ ಹೋಗಿ ಹೇಳಿದೆ ಅಮ್ಮ ಇನ್ನೇನು ಅದು ದೊಡ್ಡದಾಗುತ್ತಿದೆ ಎಲ್ಲ ಹೂ ಹಣ್ಣು ಬಿಡೋ ಹೊತ್ತು ಯಾಕಮ್ಮ ಅದನ್ನ ಹೀಗೆ ಕಿತ್ತಾಕಿದ್ದಾರೆ ಅಂತ ಅಮ್ಮ ನನ್ನ ನೋವು ತಿಳಿದು ಕೊಳ್ಳೋದಕ್ಕೆ ಮುಂದಾಗದೆ ನೋಡು ಎಷ್ಟೊಂದು ಸೌದೆ ಆಗಿದೆ ಅದನ್ನೇ ನಾವೇ ಕಡಿದಿದ್ದರೆ ನಮಗೆ ಎಷ್ಟು ಹೆಲ್ಪ ಆಗತ್ತಾ ಇತ್ತು ಅಂದರು ಇಲ್ಲಿ ನನ್ನ ಅಮ್ಮನೇ ಹೀಗೆ ಅನ್ಕೋಂಡ್ರಲ್ಲ ಇಲ್ಲಿ ಯಾರು ಸ್ವಾರ್ತಿ ನಾನು ಹೇಗೆ ಈ ಜನನ ತಿದ್ದಲಿ ನಾವು ನಮ್ಮ ಮನೆಯವರನ್ನ ಮೊದಲು ತಿದ್ದ ಬೇಕು ಆಮೇಲೆ ಬೇರೆಯವರು....

  • 1521 views