Skip to main content

ಮುಂಗಾರು ಮಳೆ ಗಣೇಶ್ ಅವರ ಸರ್ಕಸ್ ಚಿತ್ರ ಹೇಗಿದೆ? ಎಲ್ಲ ವಿಮರ್ಶೆಗಳಲ್ಲೂ ಅದನ್ನು ಹೊಗಳಿದ್ದಾರೆ. ಆದ್ರೆ ಚೆನ್ನಾಗಿದೆಯೇ? ನೋಡಿದ್ದರೆ ಹೇಗಿದೆ ಅಂತಾ ತಿಳಿಸಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ವಿ.ಎಂ.ಶ್ರೀನಿವಾಸ ಸೋಮ, 01/19/2009 - 19:21

ನಮಸ್ತೇ ಸಾರ್.
ಸರ್ಕಸ್ ಸಿನಿಮಾಗೆ ಹೋಗಿದ್ದೆ. ಮೊದಲಾರ್ಧ ಎಲ್ಲಾ ಕನ್ನಡ ಸಿನಿಮಾಗಳ ತರಾನೇ ಸ್ವಲ್ಪ ಹಾಸ್ಯ, ಸ್ವಲ್ಪ ಪ್ರೀತಿ, ಸ್ವಲ್ಪ ಸೆಂಟಿಮೆಂಟ್ ಗಳ ಮಿಶ್ರಣದಿಂದ ತುಂಬಿದೆ. ಆದರೆ ದ್ವಿತಿಯಾರ್ಧ ನಿಜಕ್ಕೂ ವಂಡರ್ ಪುಲ್. ಅಮೋಘ ಎನ್ನುವಂತಹ ಕ್ಯಾಮೆರ ಕೈಚಳಕ, ಗಣೇಶನ ಎಂದಿನಂತಿಲ್ಲದ, ಹೊಸ ರೀತಿಯ ಮನಮುಟ್ಟುವ ಅಭಿನಯ ಮತ್ತು ಸಾಹಸ, ಕಥೆಯಲ್ಲಿನ ಸಸ್ಪೆನ್ಸ್ , ಸಿನಿಮಾವನ್ನು ಲೀಲಾಜಾಲವಾಗಿ ನೋಡಿಸಿಕೊಂಡು ಹೋಗುತ್ತವೆ.
ಗಣೇಶನ ಸ್ನೇಹಿತರು, ರೈಲ್ವೆ ಇಲಾಖೆಯ ಸ್ಟೇಶನ್ ಮಾಸ್ಟರ್ ಗೆ , ತಮಾಷೆಗಾಗಿ ಗಂಧದಗುಡಿ ಎಕ್ಷ್ ಪ್ರೆಸ್ ಗೆ ಬಾಂಬಿಡ್ತಿವಿ ಅಂತ ಪತ್ರ ಬರೀತಾರೆ. ಆದ್ರೆ ಮತ್ತೊಬ್ಬ ಸ್ನೇಹಿತ ಅದರಲ್ಲಿ From address ಗಣೇಶನದ್ದು ಬರೆದುಬಿಡ್ತಾನೆ. ಅಲ್ಲಿಂದ ಸರ್ಕಸ್ ಶುರು. ಹೇಗಾದ್ರೂ ಮಾಡಿ ಆ ಪತ್ರ ಸ್ಟೇಶನ್ ಮಾಸ್ಟರ್ ಗೆ ಸಿಗುವ ಮುಂಚೆ ಅದನ್ನು ಅಪಹರಿಸಬೇಕು ಅಂತ ಗಣೇಶ್ & ಟೀಮ್ ಪ್ರಯತ್ನಿಸುತ್ತೆ. ಆದರೆ ಅವರು ಪತ್ರದಲ್ಲಿ ಬರೆದಿದ್ದ ಟೈಮಿಗೆ ಸರಿಯಾಗಿ ನಿಜವಾಗಿಯೂ ಗಂಧದಗುಡಿ ಎಕ್ಷ್ ಪ್ರೆಸ್ ನಲ್ಲಿ ಬಾಂಬಿಡಲು ಉಗ್ರಗಾಮಿಗಳು ಪ್ಲ್ಯಾನ್ ಮಾಡಿರುತ್ತಾರೆ. ಮುಂದೇನಾಗುತ್ತೆ. ಅನ್ನೋದೆ ಕಥಾ ಹಂದರ. ನಿರ್ದೇಶಕರಾಗಿ ದಯಾಳ್ ರವರು ಯಶಸ್ವಿಯಾಗಿದ್ದಾರೆ. ಹಾಡುಗಳಲ್ಲಿ ಎರಡು ಚೆನ್ನಾಗಿವೆ. ಖಂಡಿತ ನೋಡಲಡ್ಡಿಯಿಲ್ಲ, ಅಥವಾ ಕೊಟ್ಟ ದುಡ್ಡಿಗೆ ಮೋಸವಿಲ್ಲ.

ಪಿ ಲ0ಕೇಶ್ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/19/2009 - 19:45

ಹಳಿಸಿದನ್ನ ಚಿತ್ರನ್ನಕ್ಕಿ0ತ ಈ ಸಿನಿಮಾ ವಾಸಿ ಕಣ್ರಿ... ಅದ್ರೆ ಕ್ಲೈಮಾಕ್ಸಎ ಸ್ವಲ್ಪ ಸುಮಾರು ಕಣ್ರಿ... :dance:

ಶಿವಕುಮಾರ ಕೆ. ಎಸ್. ಮಂಗಳ, 01/20/2009 - 12:57

ಸಿನೆಮಾ ಬಿಡುಗಡೆಯಾದದ್ದು ಹೋದ ಶುಕ್ರವಾರ. ಆದರೆ ಭಾನುವಾರಕ್ಕೇ 'ರವಿ ಬೆಳಗೆರೆ' ಸಾರ್ ತಮ್ಮ 'ಮುಖವಾಣಿ'ಯಾದ 'ಹಾಯ್ ಬೆಂಗಳೂರ್'ನಲ್ಲಿ 'ಸರ್ಕಸ್' ಚಲನಚಿತ್ರ ಚೆನ್ನಾಗಿಲ್ಲ ಎಂದು 'ಮುಖಪುಟ' ಲೇಖನ ಬರೆದು ಬಿಟ್ಟು 'ಸರ್ಕಸ್'ನ ಹಣೆಬರಹ ನಿರ್ಧರಿಸಿಯೇ ಬಿಟ್ಟರಲ್ಲ (ಸರ್ಕಸ್ಸಿನ ಚಿತ್ರಕತೆಯನ್ನೂ ಸಾದ್ಯಂತವಾಗಿ ವಿವರಿಸಿ, ಜೊತೆಗೆ ಗಣೆಶನ ಜನ್ಮವನ್ನೂ ಜಾಲಾಡಿ)! ಆಗದವರೆಡೆಗೆ ತುಂಬಾ ಪೂರ್ವಾಲೋಚಿತ/ಯೋಜಿತ ದಾಳಿ ಎಂದರೆ ಇದೇ ಇರಬೇಕು!

meghariya ಮಂಗಳ, 03/17/2009 - 22:16

ನಾನಿನ್ನು ಈ ಚಿತ್ರ ನೊದಿಲ್ಲ
ನೊದಿದ ನನ್ತರ ತಿಲಿಸುತ್ತೆನೆ

  • 1215 views