Skip to main content
Submitted by Mugilu on ಶುಕ್ರ, 12/12/2008 - 09:31
Forums

ನಮ್ಮ ಮನೆ ಭಾರತ ನಾವು ಭಾರತೀಯರು.. ಅತಿಥಿಗಳಿಗೆ ಸತ್ಕಾರ ಮಾಡುವಲ್ಲಿ ನಿಸ್ಸೀಮರು...ಮನೆಯವರು ಉಪವಾಸವಿದ್ದರೂ, ಬಂದಿರುವವರಿಗೆ ನಮ್ಮ ಆತಿಥ್ಯಕ್ಕೇನು ಕೊರತೆಯಾಗದಂತೆ ನೋಡಿಕೊಳ್ಳುವವರು. ಇದು ಬುನಾದಿಯಾದರೂ... ಈಗಿರುವ ಭಾರತದ ಪರಿಸ್ಥಿತಿಯಲ್ಲಿ ನಾವುಗಳು ಇಂದಿಗೂ ಅನ್ನುತ್ತಿರುವುದು "ತೆರೆದಿದೆ ಮನೆ ಓ ಬಾ ಅತಿಥಿ". ನನ್ನ ಮಾತು ಇಲ್ಲಿ ಪ್ರಾರಂಭವಾಗುತ್ತದೆ.

ನಮ್ಮ ಮನೆಗೆ (ಭಾರತಕ್ಕೆ) ಅತಿಥಿಗಳು ಬರುತ್ತಿರುವುದು ಅತೀ ಆಗುತ್ತಿದೆ.. ಇಷ್ಟವಿದ್ದರೂ ಇಲ್ಲದಿದ್ದರೂ, ಕರೆದಿದ್ದರೂ ಕರೆಯದಿದ್ದರೂ ನಿರಂತರವಾಗಿ ಪಕ್ಕದ ಪಾಕಿಸ್ತಾನ, ಬಾಂಗ್ಲಾದೇಶ ದಿಂದ ಬರುತ್ತಿರುವವರಿಗೆಲ್ಲ ನಮ್ಮ ದೇಶ ಸದಾ ರತ್ನಕಂಬಳಿಯೊಂದಿಗೆ ಸ್ವಾಗತಿಸಿ, ಹಿಂದಿರುಗಿಸಿ ಕಳುಹಿಸುವ ಪರಿಪಾಠ ಕಲಿತಿಲ್ಲ. ದೇಶದಲ್ಲಿ ನುಸುಳಿರುವ ಈ ವಿದೇಶಿಯರನ್ನು "ನಮ್ಮವರೇ" ಎಂದೆನಿಸಿಕೊಳ್ಳುವ ಜನರು ಪಾಲಿಸಿ., ಪೋಷಿಸಿ ದೇಶದ್ರೋಹ ಕೆಲಸಗಳಲ್ಲಿ ನಮ್ಮತನವನ್ನೂ ತೋರಿಸುತ್ತಿದ್ದಾರೆ. ಬಂದವರಿಗೆ ಮನೆ, ವೋಟು ಹಾಕಲು ಅಧಿಕಾರ, ಮೊಬೈಲ್, ಅವರ ಮಕ್ಕಳಿಗೆ ದೇಶದ ತುಂಬೆಲ್ಲಾ ನಾಯಿಕೊಡೆಯಂತೆ ಹರಡಿರುವ ಮದರಸಾಗಳಲ್ಲಿ ಉಚಿತ ಅತ್ಯುನ್ನತ ಎಂದುಕೊಳ್ಳುವ ದೇವರ ಶಿಕ್ಷಣ ದೊರಕಿಬಿಡುತ್ತಿದೆ. ಅವರನ್ನು ಹೊರಹಾಕಿ ಎಂದು ಬೊಬ್ಬೆ ಹೊಡೆಯುವ ಜನರ ಮಾತು ಕೇಳಿಯೂ ಕೇಳದಂತೆ ತಣ್ಣಗಾಗುತ್ತದೆ. ಅದು ಹುಡುಕುವ ಕಾಲಕ್ಕೆ ಅವರೆಲ್ಲರೂ ಹಿಂದೂಸ್ಥಾನಿಗಳೇ ಆಗಿಬಿಟ್ಟಿರುತ್ತಾರೆ.

ಈಗಲಾದರೂ ನಮ್ಮವರು ಅವರನ್ನು ನಿಯಂತ್ರಿಸದಿದ್ದಲ್ಲಿ., ಮುಂಬೈನಲ್ಲಿ ಆಗಿರುವ ಘಟನೆಗಳು ದೇಶದೆಲ್ಲಡೆ ನಿರಂತರವಾಗಿ ನಡೆಯುವುದರಲ್ಲಿ ಸಂದೇಹವಿಲ್ಲ., ಮತ್ತದೇ ಸಾವುಗಳು, ನೋವುಗಳು., ಮತ್ತದೇ ಭಾರತೀಯರು., ಅದೇ ರಾಜಕಾರಣಿಗಳು., ಮತ್ತದೇ ಮಾತು.,

ಕೊನೆಗೆ ಉಳಿಯುವುದೊಂದೆ., ತೆರೆದಿದೆ ಮನೆ ಓ ಬಾ ಅತಿಥಿ.... ಅಲ್ಲ ನಮ್ಮದಾಗಿರುತ್ತದೆ "ತಿಥಿ" ಏನಂತೀರಾ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 711 views