Skip to main content
Submitted by Mugilu on ಭಾನು, 11/23/2008 - 18:24
Forums

ಪ್ರಿಯರೆ.,
ಇಂದು ನಾ ಬರೆಯುತ್ತಿರುವುದು ಸಧ್ಯದ ಪರಿಸ್ಥಿತಿಯ ಬಗ್ಗೆ., ನಾವೆಲ್ಲರೂ ಮುಂದೆ ಕಾಣಬಹುದಾದ ವಾಸ್ತವದ ಬಗ್ಗೆ., ನಾವೆಲ್ಲರೂ ಅಂದುಕೊಂಡತೆ., ಪ್ರಪಂಚವು ಈಗ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟು., ಅತಂತ್ರ ಮಾರುಕಟ್ಟೆಯ ಬಗ್ಗೆ.

ಹಿರಿಯಣ್ಣನಂತೆ ಮೆರೆಯುತ್ತಿದ್ದ ಅಮೇರಿಕಾ, ಜರ್ಮನಿ, ಜಪಾನ ಮುಂತಾದ ಮುಂದುರೆದಿರುವ (?) ರಾಷ್ಟ್ರಗಳ ದಿವಾಳಿತನದ ಬಗ್ಗೆ., ಅದನ್ನು ಅವಲಂಬಿಸಿರುವ ಭಾರತದಂತಹ ಮುಂದುವರೆಯುತ್ತಿರುವ (?) ದೇಶದ ಬಗ್ಗೆ., ಕೆಲವೊಂದು ಪ್ರಶ್ನೆಗಳು ನನ್ನಲ್ಲಿ ಇವೆ., ಎಲ್ಲರೂ ಓದಿ., ಬರಬಹುದಾದ ಘೋರ ದಿನಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.,

ಜಗತ್ತು ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟು ಹೀಗೆ ಮುಂದುವರೆದರೆ, ಆರ್ಥಿಕ ದಿವಾಳಿತನವು ಹೀಗೆ 3 ವರ್ಷ ಇದ್ದರೆ ಭಾರತದಂತಹ ದೇಶದಲ್ಲಿ ಐ.ಟಿ. ಬಿ.ಟಿ. ಅವಲಂಬಿತ ರಾಷ್ಟ್ರಗಳ ಪರಿಸ್ಥಿತಿ ಏನಾಗಬಹುದು? ಕರ್ನಾಟಕದಲ್ಲಿಯೇ ಪ್ರತಿ ವರ್ಷ 50000 ಕ್ಕಿಂತ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೇವಲ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಕನಸನ್ನು ಹೊತ್ತು ತಮ್ಮ ಪದವಿಯನ್ನು ಮುಗಿಸಿ (ಅದೂ ಕೈಗೆಟುಕದ ಹಣವನ್ನು ಬ್ಯಾಂಕಿನಿಂದ ಸಾಲ ಪಡೆದು) ಕೆಲಸವಿಲ್ಲದೇ ಕೂತರೆ? ಏಕೆಂದರೆ ಇತ್ತೀಚಿಗೆ ಕೇವಲ ಇಂಜಿನಿಯರಿಂಗ್ ಮಾಡಿದವರನ್ನಷ್ಟೇ ಮನುಷ್ಯರನ್ನಾಗಿ ಕಾಣುವ ಪ್ರವೃತ್ತಿ ನಮ್ಮ ದೇಶದಲ್ಲಿರುವುದು ಕಾಣುತ್ತೇವೆ. ನಮ್ಮ ದೇಶಕ್ಕೆ ಅವರಿಗೆ ಕೆಲಸ ಕೊಡುವ ಶಕ್ತಿ ಇದೆಯೇ?

ಅಮೇರಿಕಾದಂತಹ ಬೃಹತ್ ರಾಷ್ಟ್ರಗಳು ತಮ್ಮ ಉಳಿವಿಗಾಗಿ ಏನಾದರೂ ಮಾಡಲು ಶಕ್ತರು., ಹಾಗೇನಾದರೂ ಮುಂದುವರೆದಲ್ಲಿ, ತಮ್ಮ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಭಾರತೀಯರನ್ನು ಹೊರದೂಡಿ, ತಮ್ಮ ಜನಗಳಿಗೆ ಆಗುವಷ್ಟು ಮಾತ್ರ ಕೆಲಸ ಕಾರ್ಯಗಳನ್ನು ಮಾಡಿಕೊಂಡರೆ? ಅವರೆಲ್ಲರೂ ತಮ್ಮ ದೇಶದಲ್ಲಿ ದುಡಿಯುತ್ತಿರುವ ಭಾರತೀಯರನ್ನು ಹಿಂದಕ್ಕೆ ಕಳುಹಿಸಿದರೆ? ಅವರೆಲ್ಲರಿಗೂ ಉದ್ಯೋಗ ಸೃಷ್ಟಿ ಮಾಡುವ ತಾಕತ್ತು ನಮ್ಮ ದೇಶಕ್ಕಿದೆಯೇ?

ಭಾರತದಲ್ಲಿ ಷೇರುಪೇಟೆಯನ್ನು, ಹಣಕಾಸಿನ ಸಂಸ್ಥೆಗಳನ್ನು, ದೊಡ್ಡ ದೊಡ್ಡ ಸ್ಟೀಲ್, ಕಬ್ಬಿಣ, ಸಿಮೆಂಟ್, ಹಾಗೂ ಅದನ್ನವಲಂಬಿಸಿರುವ ಸಣ್ಣಪುಟ್ಟ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕೋಟಿಗಟ್ಟಲೆ ಜನರಿಗೆ ಧಿಡೀರನೆ ಕೆಲಸವಿಲ್ಲವಾದರೆ?.,

ಪ್ರಪಂಚವು ಗ್ಲೋಬಲ್ ಎಕಾನಮಿ ಎನ್ನುವ ಪುಟ್ಟ ಪದದ ಮೇಲೆ ನಿಂತಿದೆ., ಅದು ಹದಗೆಟ್ಟರೆ ಮುಂದಾಗಬಹುದಾದ ಅನಾಹುತಗಳನ್ನು ನಮ್ಮಂತಹ ಯುವಕರು ಯೋಚಿಸಲೇ ಬೇಕಲ್ಲವೇ? ದೇಶ ನಿಂತಿರುವುದು ಸೈನ್ಸ್, ಟೆಕ್ನಾಲಜಿ ಅನ್ನುವ ತೀರ ಇತ್ತೀಚಿನ ಪದಗಳಿಂದಲ್ಲ., ಹಿಂದಿನಿಂದಲೂ ಬಳಕೆಯಲ್ಲಿರುವ ಹಾಗೂ ಕಾಣದೇ ತನ್ನ ಕೆಲಸ ಮಾಡುತ್ತಿರುವ ಆರ್ಥಶಾಸ್ತ್ರದ ಮೇಲೆ. ಏನಂತೀರಾ?

ಭಾರತವು ಮೊದಲಿನಿಂದಲೂ ಹೋಪ ಫಾರ್ ದ ಬೆಸ್ಟ್, ಮುಂದೆ ಬಂದಾಗ ನೋಡೋಣ ಎನ್ನುವ ತತ್ವಪದಗಳ ಮೇಲೆ., ವಾಸ್ತವಿಕವಾಗಿ ಇಂಥ ಸಮಸ್ಯೆಗಳು ದಿಢೀರನೆ ಮುಂದೆ ಹೀಗೆ ಬಂದರೆ?.. ನಿಮ್ಮಗಳ ಅಭಿಪ್ರಾಯವನ್ನು ನಿರೀಕ್ಷಿಸುತ್ತೇನೆ..

ವಂದನೆಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಶ್ರೀಕಾಂತ ಹೆಗಡೆ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 11/23/2008 - 23:44

ಮುಂದೇನಾಗುತ್ತದೋ ಕಾದು ನೋಡಬೇಕು , ಒಂದು ನೀರಿನ ಗುಳ್ಳೆ ಒಡೆದಂತೆ ಕಾಣುತ್ತದೆ.ಒಂದೆರಡು ವರ್ಷದಿಂದ ನಮ್ಮ ರೈತರು ಆತ್ಮಹತ್ಯೆ ಮಡಿಕೊಳ್ಳೂತ್ತಿದ್ದಾಗ ಯಾರೂ ಮಾತಾಡಿರಲಿಲ್ಲ, ಈಗ ಯಾವಾಗ ಈ ಐಟಿ ,ಬಿಟಿ ಜನ ,ಕೈಗಾರಿಕೊದ್ಯಮಿಗಳು, ಖಾಸಗಿ ಬ್ಯಾಂಕು ಬೊಬ್ಬೆ ಇಡಲು ಸುರು ಮಾಡಿದಂತೆ ಎಲ್ಲರೂ ಗಾಭರಿಯಾಗಿದ್ದಾರೆ. ಈ ಹಿಂಜರಿತ ಇನ್ನೂ ೨-೩ ವರ್ಷ ಇರಬಹುದು, ಕಾದು ನೋಡಬೇಕು, ನಮ್ಮ ದೇಶ ಇದನ್ನೂ ಸಹಿಸಿಕೊಳ್ಳುತ್ತದೆ ಮತ್ತು ಅಷ್ಟು resilience ಇನ್ನೊ ನಮ್ಮ ವ್ಯವಸ್ಥೆಯಲ್ಲಿದೆ. ಭಾರತ ಎಷ್ಟು ಬರಗಾಲ ನೋಡಿದೆ ಎಂಬುದು ಎಷ್ಟು ಜನ ರೈತರಲ್ಲದವರಿಗೆ ಗೊತ್ತು?ಈಗ ೪ ವರ್ಷದ ಹಿಂದೆ ಸೆನ್ಸೆಕ್ಸ್ ೨೦೦೦ ದ ಆಜು ಬಾಜಿನಲ್ಲಿತ್ತು, ಈಗ ಕೆಲವು ವರ್ಷದ ಹಿಂದೆ BPO ಅಂದರೆ ಏನೂ ಎಂದು ಕೋಡ ಗೊತ್ತಿರಲಿಲ್ಲ ,ಆದರೂ ಈ ದೇಶ ನಡೆದಿತ್ತು( ಹೇಗೋ ಇರಲಿ), ನೋಡೋಣ ,ಈ ವಿಪತ್ತನ್ನು ನಿಭಾಯಿಸಿದರೆ ಇಂಡಿಯಾ ಜಗತ್ತಿನ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬಹುದು

  • 1083 views