Skip to main content

ಒಂದು ಪ್ರೀತಿಯ ನಿವೇದನೆ..

ಬರೆದಿದ್ದುNovember 16, 2008
7ಅನಿಸಿಕೆಗಳು

[img_assist|nid=3049|title=ನವಿಲು ಗರಿ|desc=|link=none|align=left|width=180|height=128]ಇಬ್ಬರ ಮನಸ್ಸಿನಲ್ಲಿದ್ದದ್ದು ಒಂದೇ 'ಪ್ರೀತಿ'. ಆದರೆ ಭಯದ ಬಾಗಿಲ ಹಿಂದೆ ನಿಂತು ಇಣುಕಿ ನೋಡುತ್ತಿದ್ದೆವು! ಆಸೆಗಳ ಮಳೆಹನಿಗಳಲ್ಲಿ ತೋಯ್ದು ಹೆದರುತ್ತಿದ್ದೆವು. ಪ್ರೀತಿಯನ್ನು ನಾಲಿಗೆಯ ತುದಿಯಲ್ಲಿಯೇ ತಡೆದು ಬೇರೇನೋ.. ಒದರುತ್ತಿದ್ದೆವು. ಆಗಾಗ ಇಬ್ಬರ ಕಣ್ಣುಗಳು ಒಂದಾಗುತ್ತಿದ್ದವು.

ತುಟಿಗಳ ಅಂಚಲ್ಲಿ ಸಣ್ಣದೊಂದು ನಗೆಯ ಮಿಂಚು ಮೂಡುತಿತ್ತು. ಮುಜುಗರದ ಮಂಜುಗಡ್ಡೆಗಳಾಗಿದ್ದೆವು. ಬೇರೆ ವಿಷಯಗಳಲ್ಲಿ ಮುಂದಿದ್ದೆವು. ಇಂದು ಎಲ್ಲಾ ಬಂಧನಗಳಿಂದ ದೂರವಾಗಿ 'ಪ್ರೀತಿ' ಹೃದಯವನ್ನು ತುಂಬಿದೆ.. ನಮ್ಮಿಬ್ಬರ ಒಂದು ತಿಂಗಳ ದೀರ್ಘ ಮೌನಾಚರಣೆಯಿಂದ!

ನನ್ನ ಬರ್ತಡೆಗೆ ನೀನು ಕೊಟ್ಟಿದ್ದ ನವಿಲುಗರಿಯನ್ನು ನಾ ಮತ್ತೆ ಹಿಂದಿರುಗಿಸಿಬಿಟ್ಟಿದ್ದಕ್ಕೆ, ನೀನು ಎಷ್ಟು ಅತ್ತು ಬಿಟ್ಟೆ?? ಮಾತೂ ಬಿಟ್ಟೆ!! ನಿನ್ನಷ್ಟೇ ನಾನೂ ಕೂಡ ನೊಂದು ಕೊಂಡೆ. :( ಆದರೂ ಏನೋ.... ಸೆಳೆತ, ಮನದ ಕಡಲಲ್ಲಿ ಏನೊ.... ಮೊರೆತ, ಬಿರುಗಾಳಿಗೆ ಸಿಕ್ಕಂತೆ ಭಾಸ, ರುಚಿಸದ ಊಟ, ಬಾರದ ನಿದ್ದೆ, ಕನಸುಗಳಿಗೂ ರಜಾ. ಆ ನೀರವ ಮೌನದ ರಾತ್ರಿಗಳಲ್ಲಿ ಕೇಳಿಸಿದ್ದು ನನ್ನೆದೆಯರಾಗ ಒಂದೇ.. ಡವ, ಡವ, ಡವ, ಡವ........

ದೂರದಲ್ಲಿದ್ದರೂ.. ಕಂಗಳು ಹುಡುಕುತ್ತಿದ್ದವು. ನೋಡದೇ ಮರುಗುತ್ತಿದ್ದವು. ಮನಸ್ಸು ಯಾವಾಗ ನಿನ್ನ ಸೇರುವುದೆಂದು ಕಾಯುತ್ತಿತ್ತು. ನಿನ್ನ ನೋಡುವ ತವಕ, ಒಂಟಿಯಾದ ಬಗ್ಗೆ ಮರುಕ. ಎಲ್ಲವೂ ಇದ್ದು ಕಳೆದು ಕೊಂಡ ಪ್ರೀತಿ. ಬಿಗುಮಾನದ ಬಣ್ಣ ಹಚ್ಚಿಕೊಂಡು ಇಬ್ಬರೂ ಎದುರಾಗುತ್ತಿದ್ದೆವು. ಮನಸ್ಸಿನಲ್ಲಿ ಒಂದಾಗುವ ಆಸೆಯಿದ್ದರೂ, ನೀನೇ ಮೊದಲು ಮಾತನಾಡಿಸಬೇಕೆಂಬ ಗರ್ವದಿಂದ ನಿಂತಿರುತ್ತಿದ್ದೆವು. ಇಬ್ಬರ ಮನಸ್ಸಿನಲ್ಲೂ ದ್ವೇಷವಿರಲಿಲ್ಲ. ಪೊರೆ ಕಳಚದ ಹಿಂಜರಿಕೆ, ಸಮಯಕ್ಕೆ ಕಾದು ಕುಳಿತಿತ್ತು.

ವಿಷಯ ತಿಳಿದು ಆನಂದದ ಜೊತೆಗೆ ಪ್ರಶ್ನೆಯು ಮೂಡಿತ್ತು? ನಾನು ನಿನಗಿಂತ ಒಂದು ವರುಷ ದೊಡ್ಡವನು. ನೀನು ದೊಡ್ಡವಳಾದೆ ಎಂಬ ಸುದ್ದಿ! ನೀನು ಒಂದು ತಿಂಗಳು ಮನೆಯ ಒಳಗೆ ಬರುವಂತಿಲ್ಲವಂತೆ. ಎಲ್ಲೂ ತಿರುಗಾಡುವಂತಿಲ್ಲವಂತೆ. ನಿನಗಾಗೆ ಒಂದು ತೆಂಗಿನ ಗರಿಯಲ್ಲಿ ಕಟ್ಟಿದ್ದ ಸಣ್ಣದಾದ ಗೂಡಿನಲ್ಲೆ ಇರಬೇಕಿತ್ತು.

ಸಿಹಿಸುದ್ದಿಯ ಜೊತೆಗೆ, ಗೆಳತಿಯ ಜೊತೆಯಲ್ಲಿ ನೀ ಕಳಿಸಿದ್ದ ಸ್ವೀಟನ್ನು ನಾ ತೆಗೆದು ಕೊಳ್ಳುತ್ತೇನೆಯೊ ಇಲ್ಲವೊ ಎಂದು, ನಮ್ಮ ಮನೆಯಿಂದ ಅಣತಿ ದೂರದಲ್ಲಿರುವ ನಿಮ್ಮ ಮನೆಯಿಂದ ನೋಡುತ್ತಿದ್ದೆ.. ಬೇಡ ಎಂದು ಹೇಳಿದರೂ ನಿನ್ನ ನೋಡಿದಾಕ್ಷಣ.. ತೆಗೆದು ಕೊಂಡು ಮನೆ ಒಳ ಹೊಕ್ಕೆ.!

ಒಂದು ದಿನ ನನ್ನ ನೋಡಲು ನೀ ಬಂದೆ. ತೇಯ್ದ ಗಂಧದ ಹಾಗಿರುವ ಆ ನಿನ್ನ ಕೆನ್ನೆ, ಎಳೆ ಬಿಸಿಲಿನಲ್ಲಿ ಹೊಳೆಯುತ್ತಿದ್ದ ನಿನ್ನ ಚೆಲುವು, ಕಂಗಳಲ್ಲಿ ಹೊಸಕಾಂತಿ, ಸಂಜೆಯಾರತಿ ಮಾಡಿ ಕಳಿಸಿದ್ದ ನೇಸರ, ಹೊಸ ಮಣ್ಣಿನ ಧೂಳಿನ ಮೈ ಬಣ್ಣ, ರೇಷಿಮೆಯ ಹೊಳಪಿನ ಗರಿಗೆದರಿದ್ದ ನವಿರಾದ ಕೂದಲು, ಕಾಮನ ಬಿಲ್ಲಿನ ಎಲ್ಲಾ ಬಣ್ಣಗಳನ್ನು ಒಟ್ಟಿಗೆ ಕುಡಿದು ಕಂಗೊಳಿಸುತ್ತಿದ್ದ ನಿನ್ನ ಅಂದ-ಚೆಂದಗಳನ್ನೆಲ್ಲ ನೋಡಿ ಮೈ ಮರೆತು ನಿಂತು ಬಿಟ್ಟೆ..!!

ಬಳಿ ಬಂದು ನಿಂತು ಹೇಗಿದ್ದೀಯ? ಎಂಬ ನಿನ್ನ ಪ್ರಶ್ನೆಗೆ, ನೀರವ ಮೌನ!! ಹಕ್ಕಿಗಳ ಇಂಚರವು ನಿಶ್ಶಬ್ದ. ಮಳೆ ಹನಿಗಳು ಒಗ್ಗೂಡಿ ತಂದ ತಂಪು, ಆ ತಂಪಲ್ಲು ಬೆವರ ಹನಿಯೊಂದು ಜಾರುತ್ತ ಅಲ್ಲೆ ಹೆಪ್ಪುಗಟ್ಟಿ ನವಿರಾದ ರೋಮಾಂಚನ! ತಣ್ಣನೆಯಗಾಳಿ ಮೆಲ್ಲನೆ ಸೋಕಿ ನಿಜ ಹೇಳಿಬಿಡು ಎಂದಂತೆ. ಪ್ರಕೃತಿಯೇ ಹೊಸ ಜೋಡಿಗಳನ್ನು ಆಗಮಿಸಿ ಒಂದುಗೂಡಿಸಲು ಕರೆತಂದಿದ್ದ ಈ ಕ್ಷಣಕ್ಕೆ ನಿಬ್ಬೆರಗಾಗಿ ನಿನ್ನನ್ನೆ ನೋಡುತ್ತ ನಿನ್ನ ಪ್ರಶ್ನೆಗೆ ಧೈರ್ಯಮಾಡಿ 'ಐ ಲವ್ ಯು' ಅಂದು ಬಿಟ್ಟೆ!!!

ಕೇವಲ ಈ ಒಂದು ಮಾತಿನಿಂದ ಇಷ್ಟು ದಿನಗಳ ಕಾಲ ಹೊತ್ತ ಭಾರ ಕಮ್ಮಿ ಆದಂತೆನಿಸಿತು!! ಹತ್ತಿಗಿಂತಲೂ ಹಗುರವಾಗಿ ಹೋದ ಕ್ಷಣಗಳನ್ನ ನೆನೆದು ಇಬ್ಬರೂ.. ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು. :) ಅಲ್ಲೆ ಇದ್ದ ದೇವರ ಗುಡಿಯ ಮುಂದೆ ನಿಂತು ಕೈ ಮುಗಿದು, ಇಬ್ಬರು ಜೊತೆಯಲ್ಲಿಯೇ.. ಪ್ರಕೃತಿಯ ಚಲನ-ವಲನಗಳನ್ನು ನೋಡುತ್ತ ಕೆಲ-ಕಾಲ ಅಲ್ಲಿಳಿದ ಸ್ವರ್ಗದಲ್ಲೊಂದು ಸುತ್ತೊಡೆದು, ನಮ್ಮಿಬ್ಬರ ಪಯಣವು ಪ್ರೀತಿಯ ದಾರಿಯಲ್ಲಿ ಮುಂದೆ ಸಾಗಿತು...

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ಸುಧೀರ ಸೊನ್ನದ ಸೋಮ, 11/17/2008 - 15:31

ಯೋಗೇಶ್,
ನಿಮ್ಮ ಲೇಖನ ಮನಸೆಳೆಯಿತು . ಇಬ್ಬರು ಸಂಗಾತಿಗಳ ಮದ್ಯೆ ಪ್ರೀತಿಯು ಮನೆ ಮಾಡಿದಾಗ ಅಗುವ ಭಾವನೆಗಳ ತಾಕಲಾಟ ಇಲ್ಲಿ ಚೆನ್ನಾಗಿ ವರ್ಣಿಸಿದ್ದೀರಿ..ನಿಮ್ಮ ಲೇಖನಗಳು ಹೀಗೆ ಬರುತ್ತಿರಲಿ ..

ರಾಜೇಶ ಹೆಗಡೆ ಧ, 11/19/2008 - 15:01

ಹಾಯ್ ಯೋಗೇಶ್,
ತುಂಬಾ ಚೆನ್ನಾಗಿದೆ. ಅದರಲ್ಲೂ ಮುಂದಿನ ಸಾಲುಗಳು ಇನ್ನೂ ಇಷ್ಟವಾದವು. :)

[quote]ಬಿಗುಮಾನದ ಬಣ್ಣ ಹಚ್ಚಿಕೊಂಡು ಇಬ್ಬರೂ ಎದುರಾಗುತ್ತಿದ್ದೆವು.

ಆ ತಂಪಲ್ಲು ಬೆವರ ಹನಿಯೊಂದು ಜಾರುತ್ತ ಅಲ್ಲೆ ಹೆಪ್ಪುಗಟ್ಟಿ ನವಿರಾದ ರೋಮಾಂಚನ!

ಹತ್ತಿಗಿಂತಲೂ ಹಗುರವಾಗಿ ಹೋದ ಕ್ಷಣಗಳನ್ನ ನೆನೆದು ಇಬ್ಬರೂ.. ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು. [/quote]

vedamurthy (ಪ್ರಮಾಣಿಸಲ್ಪಟ್ಟಿಲ್ಲ.) ಧ, 10/07/2009 - 17:53

PLZ

CONTUNU
SIR

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 02/25/2010 - 13:58

ನಿಮ್ಮಿಬ್ಬರ ಮನಸ್ಸಿನ ಭಾವನೆಗಳು ತುಂಬಾ ಚೆನ್ನಾಗಿ ವಿವರಿಸಿದ್ದೀರಿ.

shobha ಶನಿ, 04/16/2011 - 15:50

MANADA MATUGALIGE JEEVE TUMBIDDEERI GREAT  

ಭರತ್ ಕುಮರ್. (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 04/22/2011 - 17:32

nanage nimma varnane thumba ishtavayithu nanu eshto sari nimmanthe nanna hrudayake helabeku anusthe adre heloke nimma rithi varnane madalu sadyavillananna hrudaya andre nanu preethisuthirava hudugi avalu andre nange prana nimmathara varnane madodu thumbane kasta ide nivu thumbane thumbane great 

ಭರತ್ ಕುಮರ್.ಎಮ್ ಶನಿ, 04/23/2011 - 14:11

ನಿಮ್ಮ ವರ್ಣನೆ ತು೦ಬ ಚನ್ನಗಿತ್ತು ಆ ಕಲ್ಪನೆಯ ಬಗ್ಗೆ ಎನು ಹೆಳಲು ಆಗೊದಿಲ್ಲ ಯಕ೦ದರೆ ನಿಮ್ಮ ಕಲ್ಪನೆ ಅ೦ತದ್ದು ನಿವು ಕವಿಯ ರೀತಿ ಎಷ್ಟು ಹೊಗಳೀದರು ಕಮ್ಮಿನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.