Skip to main content

ನಮ್ಮ ಕನ್ನಡನಾಡಿಗೂ ಬೇಕಾಗಿದೆ ರಾಜ ಠಾಕ್ರೆ ಯಾಕೆಂದರೆ ಇಲ್ಲೂ
ಬೇರೆ ಜನ ಬಂದು ನಮ್ಮ ಊಟ ಕಿತ್ತು ಕೊಳ್ಳುತ್ತಿದ್ದಾರೆ.

ನಮ್ಮ ಬೆಂಗಳೂರು ನೋಡಿ. ಇಲ್ಲಿ ಹೆಚ್ಚಿನವರು ಹೊರಗಿನವರು ಇಲ್ಲಿ ಬಂದು ಸೈಟು, ಮನೆ ಮಾಡಿಕೊಂಡು ತಮ್ಮದೇ ಬಡಾವಣೆ ಮಾಡಿಕೊಂಡಿದ್ದಾರೆ. ನಾವು ಮಾತ್ರ ಅವರು ಕೊಡುವ ಬಾಡಿಗೆ ನೆಚ್ಚಿಕೊಂಡು ನಿಧಾನವಾಗಿ ನಮ್ಮ ನೆಲ ಜಲ ಅವರಿಗೆ ದಾನ ಮಾಡುತ್ತಿದ್ದೇವೆ.

ನನ್ನ ಉದ್ದೇಶ ಖಂಡಿತವಾಗಿ ಅನ್ಯ ಭಾಷಿಕರಿಗೆ ಹಾನಿ ಮಾಡುವುದಲ್ಲ.
ಆದರೆ ಮುಂದೊಂದು ದಿನ ನಮ್ಮ ಈ ಉದಾಸೀನತೆ ನಮಗೆ ಭಾರಿ ಬೆಲೆ
ಕೇಳಬಾರದು.

ನಿಮ್ಮ ಅನಿಸಿಕೆ ಏನು? ತಿಳಿಸಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರಾಜೇಶ ಹೆಗಡೆ ಮಂಗಳ, 11/04/2008 - 08:26

ನನ್ನ ಅನಿಸಿಕೆ ಪ್ರಕಾರ ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಅವರು ಈ ಕೆಲಸವನ್ನು ಚೆನ್ನಾಗಿ ಮಾಡುತಿದ್ದಾರೆ. :dance:

ಮೊನ್ನೆ ತಾನೆ ಕರ್ನಾಟಕ ರಾಜ್ಯೋತ್ಸವ ದಿನ ಹಿಂದಿ ಹಾಡುಗಳ ಪ್ರಸಾರ ಮಾಡುತ್ತಿದ್ದಾಗ ರೇಡಿಯೋ ಸ್ಟೇಶನ್ ಗೆ ದಾಳಿ ಮಾಡಿದ್ದಾರೆ. ಖಂಡಿತ ಪ್ರತಿ ಕನ್ನಡಿಗನೂ ಕನ್ನಡ ಬಳಸಿದಾಗ, ಕನ್ನಡಕ್ಕಾಗಿ ಹಾತೊರೆದಾಗ ಹೊರಗಿನವರೂ ಸಹ ಕನ್ನಡ ಕಲಿತು ನಮ್ಮಲ್ಲಿ ಒಂದಾಗುತ್ತಾರೆ. ಕನ್ನಡಿಗರು ಕನ್ನಡಿಗರಿಗೆ ಸಹಾಯ ಮಾಡಿದರೆ ಕನ್ನಡಿಗರಿಗೇ ಹೆಚ್ಚು ಅವಕಾಶ ದೊರೆಯುತ್ತದೆ. :)

ಸಿರಿರಮಣ ಮಂಗಳ, 11/04/2008 - 12:17

ಹುಬ್ಬಳ್ಳಿ ಭಾವೋರೇ,
ನಿಮ್ಮ ಶಿರ್ಷಿಕೆನಾ ಕದ್ದಾರಲ್ರೀ ನಮ್ಮ ಪ್ರತಾಪ ಸಿಂಹ ಅವ್ರು ?!

Ashwath Narayana (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 11/06/2008 - 19:09

ನಮ್ಮ ಕರ್ನಾಟಕ ರಾಜ್ಯಕೆ ಬಾಳ ತಾಕ್ರೇ ಅಂತಹವರು ನಿಜವಾಗಲೂ ಬೇಕೇ ಬೇಕು. ಏಕೆಂದರೆ ಇಲ್ಲಿನ ನಾಯಕರು ಇದುವರಿಗೆ (ನಾರಾಯಣ ಗೌಡ್ರನು ಬಿಟ್ಟು) ಯಾರು ಪ್ರಕ್ಯಾತರಗಿಲ್ಲ. ನಮಗೆ ನಿಜವಾಗಲೂ ನಿಷ್ಟಾವಂತ ನಾಯಕನ ಅಗತ್ಯವಿದೆ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 11/07/2008 - 14:41

1991 ರಲ್ಲಿ ಎಲ್ಲಾ ಕೊಂಗರನ್ನು ಬೆಂಗಳೂರಿನಿಂದ ಹೊಡೆದೋಡಿಸಿದ್ದರು ಅಂತಾ ಕೇಳಿದ್ದೀನಿ. ಅದೇ ತರಹ ಈಗ ಮತ್ತೊಂದು ಕ್ರಾಂತಿ ಪ್ರರಂಭವಾಗಬೇಕು. ಇಲ್ಲದಿದ್ದಲ್ಲಿ ಕನ್ನಡಿಗರಿಗೆ ಬೆಂಗಳೂರಲ್ಲಿ ಉಳಿಗಾಲವಿಲ್ಲಾ...

Kiran.baht ಧ, 01/14/2009 - 18:55

ಕನ್ನಡ ನಾಡಿಗೂ ಬೇಕು ರಾಜ ಠಾಕ್ರೆ....? ಯಾಕೆ ಸ್ವಾಮಿ, ನಮ್ಮ ಕನ್ನಡಿಗರು ಎಲ್ಲರೊಡನೆ ಒಂದಾಗಿ ಇರೋದು ಬೇಡವೇ?? ರಾಜ್ ಠಾಕ್ರೆ ಇಂದಾಗಿ ಮರಾಟಿಗರು ಕ್ರೂರಿಗಳು ಅಂತಾ ಹಣೆಪಟ್ಟಿ ಹೊತ್ತಿದ್ದಾರೆ...ನಮ್ಮ ನೆಲ, ಜಲ, ಇತ್ಯಾದಿಗಳನ್ನು ಬೇರೆ ನಾಡಿನವರು ಉಪಯೋಗಿಸುತ್ತಿದ್ದಾರೆ ನಿಜ, ಆದರೆ ನಿಜವಾದ ಕ್ರಾಂತಿ ಬೇಕಾಗಿರುವುದು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು.... ಪ್ರತಿ ರಾಜ್ಯದಲ್ಲಿ ಒಬ್ಬ ರಾಜ್ ಠಾಕ್ರೆ ಇದ್ದರೆ ಅವರವರ ರಾಜ್ಯಗಳಿಗೆ ಹೋರಾಡುವ ನೆಪದಲ್ಲಿ ಅಖಂಡ ಭಾರತ ಮತ್ತೆ ನರಳುತ್ತದೆ .... ನಮ್ಮ ನಮ್ಮಲ್ಲೇ ಜಗಳ, ಮನಸ್ತಾಪ, ವೈಮನಸ್ಸು ಏಕೆ?? ಕನ್ನಡಿಗರು ಉದಾರಿಗಳು..
ನಮ್ಮಲ್ಲಿರುವುದನ್ನು ಇತರರೊಡನೆ ಹಂಚಿಕೊಳ್ಳೋಣ...ನಾವು ಭಾರತೀಯರು ಅನ್ನುವ ಮನೋಭಾವ ಬೆಳೆಸಿಕೊಳ್ಳೋಣ....ದೇಶಕ್ಕಾಗಿ ಸೇವೆ ಮಾಡೋಣ...

  • 1352 views