Skip to main content

ಉಪೇಂದ್ರ ಅವರ ಬುದ್ದಿವಂತ ನೋಡಿ ಹೊಳೆದ ವಿಚಾರಗಳು

ಬರೆದಿದ್ದುOctober 13, 2008
9ಅನಿಸಿಕೆಗಳು

[img_assist|nid=2862|title=ಉಪೇಂದ್ರ - ಬುಧ್ಧಿವಂತ|desc=|link=none|align=left|width=250|height=185]ಹಾಯ್ ಫ್ರೆಂಡ್ಸ್.. ಇತ್ತೀಚೆಗೆ ಉಪೇಂದ್ರ ಅವರ ಬುದ್ದಿವಂತ ಫಿಲಂ ನೋಡಿದ ಮೇಲೆ ನನ್ನ ಮನಸ್ಸಿನಲ್ಲಿ ಹೊಳೆದ ಕೆಲವು ವಿಚಾರಗಳನ್ನು ನಿಮಗೆ ತಿಳಿಸಬೇಕೆಂದು ಅನಿಸಿ ಬರೆದಿದ್ದೇನೆ.

ಯಾಕೆ ನಾವು ಎಲ್ಲವನ್ನೂ ಜೀವನದಲ್ಲಿ ಯಾಕೆ ಜಯಿಸಲು ಸಾಧ್ಯವಿಲ್ಲ? ಎನ್ನುವ ಕೆಲವು ಅಭಿಪ್ರಾಯಗಳಿಗೆ ನಾನಿಲ್ಲಿ ಸ್ವಲ್ಪಮಟ್ಟಿಗೆ ತಿಳಿಸಿದ್ದೇನೆ.

ಮೊದಲು ನಮ್ಮ ಜೀವನವನ್ನು ಮೂರು ವಿಂಗಡನೆಗಳಾಗಿ ಮಾಡೋಣ 1) ಆಸೆ 2) ಬಯಕೆ) ಮುಕ್ತಿ

1) ಆಸೆ:- 10 ರಿಂದ 20 ರ ವರೆಗೆ ಮಾಡೊ ಹಠ.

2) ಬಯಕೆ:- 20 ರಿಂದ 40 ರ ವರೆಗೆ ಹುಟ್ಟಿಕೊಳ್ಳೊ ಚಟ.

3) 40 ರ ಮೇಲೆ ಅವರು ಮಾಡಿರೊ ಒಳ್ಳೆಯ ಅಥವಾ ಕೆಟ್ಟ ಕೆಲಸಗಳಿಗೆ ಇಲ್ಲೇ ಅದರ ಫಲಾನುಭವಗಳನ್ನು ಅನುಭವಿಸಿ ಕೊನೆಯಲ್ಲಿ ಹತ್ತೋದು ಚಟ್ಟ.

ಉದಾ: 1) ಆಸೆ:- ಮರದಲ್ಲಿರೊ ಹಣ್ಣನ್ನು ನೋಡಿ, ಅದನ್ನು ಪಡೆದುಕೊಳ್ಳುವ ಬುದ್ದಿವಂತಿಕೆಯಾಗಲಿ, ಅಥವ ತಾಳ್ಮೆಯಾಗಲಿ, ಮನಸ್ಸಿನಲ್ಲಿ ಮೂಡುವುದೇ ಇಲ್ಲ. ಅಂದರೆ ನಮಗೆ ಗುರಿ ತಲುಪಲು ಬೇಕಾಗಿರುವುದು ದಾರಿ. ದಾರಿಯೇ ಇಲ್ಲದೆ ಹೇಗೆ ಗುರಿತಲುಪಲು ಸಾಧ್ಯ?

2) ಬಯಕೆ:- ನಾವು ನೋಡುವ ಕಣ್ಗಳಿಂದ, ಆಸೆಗಳೆಲ್ಲವನ್ನು ಬಯಕೆಗಳನ್ನಾಗಿ ತೀರಿಸಿಕೊಳ್ಳುವ ಒಂದೇ ಒಂದು ದಾರಿಯನ್ನು ಕಂಡು ಹಿಡಿದುಕೊಳ್ಳುವುದು. ಸೋ.. ಮಾಡುವ ಎಲ್ಲಾ ಕೆಲಸಗಳು ಫಲಕಾರಿಯಾಗದೆ. ಮತ್ತೆ ಮತ್ತೆ ತಪ್ಪುಮಾಡುವುದು. ಅಥವ ತಪ್ಪು ದಾರಿ ಹಿಡಿಯುವುದು.

3) ಮುಕ್ತಿ:- ನಾವು ಹೊಡೆದ ಗೋಲು ಗುರಿ ತಲುಪದಾಗ ಮಿಸ್ಸಾದ ಗುರಿಗಳನ್ನು ನೆನಪಿನಲ್ಲಿ ತಂದುಕೊಳ್ಳುತ್ತ ಛೇ.. ನಾ ಹಾಗೆ ಮಾಡಬಾರದಿತ್ತು. ನಾ ಹೀಗೆ ಮಾಡಬೇಕಿತ್ತು. ಅಂಥಾ ಪಶ್ಚಾತಾಪ ಪಡುತ್ತಾ ನೊಂದು ಕೊಳ್ಳುವದು.

10 ರಿಂದ 20 ರ ವರೆಗಿನವರ ಮನಸ್ಸನ್ನ ಯಾರೂ ಹಿಂತಿರುಗಿ ನೋಡಲ್ಲ ಯಾಕೆಂದರೆ, 20 ರಿಂದ 40 ರ ವರೆಗಿನವರಿಗಿರುವ ಬಯಕೆ ಇವರನ್ನ ಹಿಂತಿರುಗಿ ನೋಡೊಕೆ ಬಿಡೊದಿಲ್ಲ. ಇನ್ನು 40 ರ ಮೇಲಿರುವವರು ಇವರನ್ನು ಕಂಟ್ರೋಲ್ ಮಾಡೋಕೆ ಸಾಧ್ಯಾನೆ ಇಲ್ಲ, ಯಾಕೆ ಗೊತ್ತ, ಯೂತ್ ಇಸ್ ಹಾಟ್ ಅಂಡ್ ಹಾಟ್ ಇಸ್ ನೆವರ್ ಛೇಂಜ್. ಬೆಂಕಿಯಾಗಿ ಉರಿಯುತ್ತಿದ್ದರೆ ಪರವಾಗಿಲ್ಲ ಅದು ಜ್ವಾಲೆಯಾದಾಗ..??

ಒಂದು ಸತ್ಯ ಏನೆಂದರೆ ಮನುಷ್ಯನ ಎಲ್ಲಾ ಬಯಕೆಗಳಿಗೆ ಮಿಗಿಲಾಗಿದ್ದು ಕಾಮ. ಈ ಕಾಮತ್ವವೆ ವ್ಯಕ್ತಿಯ ವ್ಯಕ್ತಿತ್ವವನ್ನೆಲ್ಲಾ ಮುಚ್ಚಿಬಿಡೋದು.

ಹೊಟ್ಟೆಯ ಮೇಲ್ಬಾಗದಲ್ಲಿ ತುಂಬಿಕೊಳ್ಳುತ್ತ ಹೋದರೆ ಅದು ಪ್ರೀತಿ, ಅದು ಕೆಳಭಾಗಕ್ಕೆ ಜಾರೇ ಬಿಡ್ತು ಅಂದ್ರೆ ಅದು ಕಾಮ. ಯಾಕೆ ಅಂದ್ರೆ, ಯೂ ಕ್ಯಾನಾಟ್ ಕಂಟ್ರೋಲ್ ಎನಿತಿಂಗ್ ಆಫ್ಟರ್ ಆಕ್ಶಿಡೆಂಟ್. ಈ ಸೃಷ್ಟಿಗೆ ಹೆಣ್ಣೆ ಕಾರಣ, ಅದನ್ನ ಮುಷ್ಟಿಯಲ್ಲಿ ಹಿಡಿಯೋದು ಮೂರ್ಖತನ. ಹೆಣ್ಣನ್ನು ಪ್ರೀತಿಯಿಂದ ನೋಡ್ತಾ ಹೋಗು. ನಿನ್ನ ಎಲ್ಲಾ ಗುಣಗಳನ್ನು ಪಾಸಿಟಿವ್ ಆಗಿ ಥಿಂಕ್ ಮಾಡ್ತಾ ಹೋಗು. ಪ್ರತಿಯೊಂದು ಹೆಜ್ಜೆಯಲ್ಲೂ, ಪ್ರತಿಫಲದ ಸುಳಿವು ಸಿಗ್ತಾನೆ ಹೋಗುತ್ತೆ.. ಕಾಮದಿಂದ ನೋಡ್ತಾ ಹೋಗು. ಆಗ ಎಲ್ಲಾ ಗೆಲುವು ನಾಶವಾಗ್ತಾ ಹೋಗುತ್ತೆ. ಯಾಕೆ ಅಂದ್ರೆ ದೈಹಿಕವಾಗೂ, ಮಾನಸಿಕ ವಾಗೂ ಬಲಹೀನಗೊಳ್ಳುವ ಬುದ್ದಿ, ಮತ್ತು ಶಕ್ತಿ ನಮಗೆ ಗೊತ್ತಿಲ್ಲದೆ ಪ್ರತಿ ಕೆಲಸದಲ್ಲೂ ಎಡವಟ್ಟನ್ನು ತಂದುಕೊಡುತ್ತೆ.

ನೋಡಿ ಮಲ್ಲ ಫಿಲಂ ಎಲ್ಲರೂ ನೋಡಿದ್ದಾರೆ. ಅದರಲ್ಲಿ ನಮ್ಮ ರವಿಚಂದ್ರನ್ ಅವರು ಪ್ರಿಯಾಂಕ ಅವರನ್ನು ಮುದ್ದಿಸಿರುವ ಕೆಲವು ಸೀನರಿಗಳನ್ನು ನೋಡಿದ ಎಲ್ಲರ ಮನಸ್ಸಿನಲ್ಲೂ ಆಹಾ.. ಎಂಬ ಮನೋದ್ವೇಗ ಹಾಗೂ ತಲ್ಲಣ ಉಂಟಾಗಿರುವುದರಲ್ಲಿ ಎರಡು ಮಾತಿಲ್ಲ. ಆದರೆ ರವಿಚಂದ್ರನ್ ಅವರು ಎರಡು ಮಾತಾಡ್ತಾರೆ. ಅದು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೋಡಿ. ಅದೇನೆಂದರೆ ಹೆಣ್ಣು, ಹೊನ್ನು, ಮಣ್ಣಿಗೆ ನಾನು ಎಂದೂ ಆಸೆ ಪಟ್ಟವನಲ್ಲ. ಅದು ತಾನೆ ನನ್ನ ಬಳಿಗೆ ಬರುವ ಹಾಗೆ ಮಾಡಬಲ್ಲೆ. ನೀನು ನನ್ನ ಮನೆಗೆ ನುಗ್ಗಿ ನಾನು ಬೆಳೆಸಿರುವ ಹೂವುಗಳನ್ನೆಲ್ಲ ದ್ವಂಸ ಮಾಡಿ ಬಂದೆ. ನಾನು ಕೂಡ ನಿನ್ನ ಹಾಗೆ ಮನಸ್ಸು ಮಾಡಿದ್ದರೆ.. ನಿನ್ನನ್ನು ಅದೇ ಸ್ಥಿತಿಗೆ ತಂದುಬಿಡುತ್ತಿದ್ದೆ. ಆದರೆ ನಾನು ಅಂತವನಲ್ಲ ಎಂದು ಹೇಳುತ್ತಾರೆ. ಇಲ್ಲಿ ನಾವು ಗ್ರಹಿಸಬೇಕಾದ ಅರ್ಥ. ಪ್ರತಿಯೊಂದು ನಮ್ಮ ಕೈಗೆಟುಕುತ್ತದೆ ಇಲ್ಲಿ ನಮ್ಮ ತಾಳ್ಮೆಯೇ. ನಮ್ಮ ಎಲ್ಲಾ ಗುಣಗಳಿಗೂ ಗುರುವಾಗಿರುತ್ತದೆ. ಇಲ್ಲದಿದ್ದರೆ ಎಲ್ಲವು ಅನಾಹುತವೇ.

ಯಾಕೆ ಹೀಗೆ ನಮ್ಮ ಪರಿಸ್ಥಿತಿ ಇದೆ ಅಂದ್ರೆ ನಾವಿರುವ ಪರಿಸರವೇ ಆಗಲಿ, ಅಥವಾ ನಮ್ಮ ಬೆಳವಣಿಗೆಯೇ ಆಗಲಿ, ಹಾಗು ನಮ್ಮೊಂದಿಗಿರುವ ನಮ್ಮವರ ಗುಣಗಳಾಗಲಿ, ಸರಿಯಿಲ್ಲದಿದ್ದರೆ ನಾವೂ ಕೂಡ ಹಾಗೆ ಆಗಿಬಿಡುತ್ತೇವೆ. ಆದರೆ ನಾವು ಯೋಚಿಸುವ ಚಿಂತನೆ ಸರಿಯಿಲ್ಲದಿದ್ದರೆ ಬಾರಲ್ಲಿ, ಹೋಟೆಲಲ್ಲಿ, ಪಬ್ಬು, ಕ್ಲಬ್ಬುಗಳಲ್ಲಿ, ಕೂಲಿ ಕೆಲಸದವರಾಗಿ.. ಅವರಿವರ ಕಾಲಿನ ಮೆಟ್ಟುಗಳಾಗಿ ಉಳಿಯುತ್ತೇವೆ. ಇನ್ನು ನಾವು ಎಲ್ಲಾ ದೊಡ್ಡವರ ವ್ಯಕ್ತಿತ್ವದಂತೆ ಮುಂದೆ ಬರಲು ಹೇಗೆ ಸಾಧ್ಯ?

ಈ ಬಡತನ, ಶ್ರೀಮಂತಿಕೆ ಎಲ್ಲಾ ಸುಳ್ಳು. ನಮ್ಮ ಗೆಲುವಿಗೆ ನಾವು ಮಾಡುತ್ತಿರುವ ಪ್ರಯತ್ನವಷ್ಟೆ. ನಮಗೆ ತಂದುಕೊಡುವ ಜಯ.

ಲೈಫಲ್ಲಿ ಫಾಸ್ಟ್ ಮೂವ್ ಮೆಂಟ್ ಇರಲೇ ಬಾರದು. ಯಾಕೆಂದ್ರೆ ನಾವು ಮಾಡ್ಬೇಕಾಗಿರೊ ಕೆಲ್ಸ ಸರಿಯಾಗಿ ಮಾಡಿರೊಲ್ಲ. ಉಳಿದಿರೊ ಟೈಮಲ್ಲಿ ಏನೂ ಮಾಡೊಕಾಗಲ್ಲ. ನಿಧಾನವೆ ಪ್ರಧಾನ ಅನ್ನೊದು ಅದಕ್ಕೆ. ಇದು ಪ್ರತಿಯೊಂದು ಸಿಚುವೇಶನ್ನಲ್ಲು ಅನ್ವಯಿಸುತ್ತೆ.

10 ರಿಂದ 20 ರವರೆಗಿನವರು ಇರೋದನ್ನ ಖಾಲಿ ಮಾಡೋದು.
20 ರಿಂದ 40 ರವರೆಗಿನವರು ಇನ್ನೊಬ್ಬರಿಂದ ಹೆಚ್ಚು ಪಡೆದು ಕೊಳ್ಳುವ ಬಯಕೆಯಿಂದ ಇರೋದನ್ನು ಕಳೆದು ಕೊಳ್ಳೊದು.
40 ರ ಮೇಲೆ ಅಳಿದಿರೊ, ಉಳಿದಿರೊದೆಲ್ಲಾನು ಮುಚ್ಚಿಟ್ಟು ಕೊನೆಗೆ ಅನುಭವಿಸಲಾಗದೆ ಅದನ್ನು ಕಳೆದು ಕೊಳ್ಳೊದು.

ಹುಟ್ಟಿದಾಗಿನಿಂದ 10 ರವಯಸ್ಸಿನವರೆಗೆ ನೋಡಿ ಕಲಿಯುತ್ತೇವೆ. ಆ ಕಲಿಕೆ ಯಾವ ತರಾ ಇರುತ್ತೋ?? ಗೊತ್ತಿಲ್ಲ. 10 ರಿಂದ 20 ರವರೆಗೆ ಕಲಿತಿರೋದನ್ನ ಸಾಧರಪಡಿಸಲು ಹೋಗ್ತೇವೆ. ರಿಸಲ್ಟ್ ಝೀರೊ. 20 ರಿಂದ 40 ಎಲ್ಲಾ ಒಡನಾಟಗಳಿಂದ ಭಾರವಾಗಿರುತ್ತಾರೆ. ಇನ್ನು ಹಕ್ಕಿಯಂತೆ ಹಾರೋದೆಲ್ಲಿಂದ ಬಂತು.!?

ನಿಮಗೆ ಗೊತ್ತಾ? ನಾವು ನಮ್ಮನ್ನೆ ಡ್ರೈವ್ ಮಾಡಬಹುದು. ನಮ್ಮಲ್ಲು ಕಂಟ್ರೋಲ್ ಇದೆ, ಬ್ರೇಕ್ ಇದೆ, ಗೇರ್ ಇದೆ, ದಾರಿನೂ ಇದೆ. ಮನಸ್ಸನ್ನು ಆ ಮಾರ್ಗದಲ್ಲಿ ನಡೆಸೋ ಬುದ್ದಿವಂತಿಕೇನೂ ಇದೆ.

ಎಲ್ಲಾ ಇದೆ! ಮತ್ತೆ ಪ್ರಾಬ್ಲಮ್ಮು ಏನು??

ಸಾಕ್ ಸುಮಿರಯ್ಯ ಎಲ್ಲಾ ದಾರಿ ಮೇಲ್ ಹೋಗ್ ಬಿಟ್ರೆ??

ಹಲೋ.. ಎಲ್ಲಾ ಸುತ್ತುತ್ತಿರಬೇಕು. ಇದೇ ವಿಧಿಲಿಖಿತ. ಯಾಕೆಂದ್ರೆ ಈ ಭೂಮಿನು ತಿರುಗ್ತಾ ಇಲ್ವ? ನಿಂತೋದ್ರೆ, ಕಥೆ ಮುಗಿದೋಗಲ್ವ??
ಹ್ಹ..ಹ್ಹ..ಹ್ಹ

ಸೋ.. ಎಂಜಾಯ್ ಯುವರ್ ಲೈಪ್..!

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ರಾಜೇಶ ಹೆಗಡೆ ಧ, 10/15/2008 - 10:48

ತುಂಬಾ ಚೆನ್ನಾಗಿದೆ ಯೋಗೇಶ್ ಒಂದು ರೀತಿಯಲ್ಲಿ ಮನುಷ್ಯ ಜೀವನವೇ ಆಸೆಯೆಂಬ ಮಾಯೆಯ ಸೆಳೆತಕ್ಕೆ ಸಿಲುಕಿರುತ್ತದೆ. ಅದಕ್ಕೆ ಅಲ್ವೇ ಆಸೆಯೇ ದುಃಖಕ್ಕೆ ಮೂಲ ಕಾರಣ ಅಂತಾ ಹೇಳಿರುವದು.

ಬುದ್ಧಿವಂತ ಚಿತ್ರ ಚೆನ್ನಾಗಿದೆ ಅಂತಾ ಕೇಳ್ದೆ. ಉಪೇಂದ್ರ ಅವರ ಡೈಲಾಗ್ಸ ಚೆನ್ನಾಗಿದೆಯಂತೆ. ವಿಸ್ಮಯ ಸಮೀಕ್ಷೆಯಲ್ಲೂ ಬುದ್ಧಿವಂತಕ್ಕ ಹೆಚ್ಚು ಓಟು ಸಿಕ್ಕಿದೆ. :) ಇನ್ನೂ ನೋಡಿಲ್ಲ ನೋಡಬೇಕು.

ಬುದ್ಧನು ಹೇಳಿದನು ಆಸೆಯೇ ದುಖಕ್ಕೆ ಮೂಲ ಎಂದು ಆದ್ರೆ ಆಳವಾಗಿ ಯೋಚಿಸಿದರೆ ದುಖವೇ ಆಸೆಗೆ ಮೂಲ !!

Prashanth Hebbar (ಪ್ರಮಾಣಿಸಲ್ಪಟ್ಟಿಲ್ಲ.) ಧ, 10/22/2008 - 11:11
Prashanth Hebbar (ಪ್ರಮಾಣಿಸಲ್ಪಟ್ಟಿಲ್ಲ.) ಧ, 10/22/2008 - 11:38

ಪ್ರಶಾ0ತ ಹೆಬ್ಬಾರ ಉತ್ತಮವಾದ ವಿಚಾರ

Mallanagouda … (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 10/24/2008 - 16:47
manoranjan (ಪ್ರಮಾಣಿಸಲ್ಪಟ್ಟಿಲ್ಲ.) ಧ, 11/26/2008 - 18:17

:) ಉಪೆನ್ದ್ರ ಅವರ ಅಭಿನಯ ತುಮ್ಬ ಚೆನ್ನಗಿದೆ

harish njd (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 12/04/2009 - 15:22

upendra the best man

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.