Skip to main content

ನಮಸ್ಕಾರ ..............ವಿಸ್ಮಯ ನಗರಿಯ ನನ್ನೆಲ್ಲ ಆತ್ಮೀಯ ಸ್ನೇಹಿತರಿಗೆ ...........
ಸ್ನೇಹಿತರೇ... ಕಡಲ ಕೊರೆತ,ನಕ್ಸಲ್ ಸಮಸ್ಯೆ, ಸರಿಯಿಲ್ಲದ ರಸ್ತೆ ಸಂಪರ್ಕ, ಇವೆ ಮೊದಲಾಗಿ ಒಂದಿಲ್ಲೊಂದು ಸುದ್ದಿಗಳಿಂದ ಸುದ್ದಿ ಮಾಡಿದ್ದ ಕರಾವಳಿ ಹಾಗು ಮಲೆನಾಡಿನಲ್ಲಿ ಈಗ ಇನ್ನೊಂದು ಸಮಸ್ಯೆ ತಲೆ ಎತ್ತಿದೆ-ಅದೇ ಚಿಕನ್ ಗುನ್ಯ.
ಪತ್ರಿಕೆಯೊಂದರ ವರದಿಯಂತೆ ಇದಾಗಲೇ ಸುಮಾರು ೪ ಲಕ್ಷಕ್ಕೂ ಅಧಿಕ ಮಂದಿ ಈಗಾಲೇ ಚಿಕನ್ ಗುನ್ಯ ದಿಂದ ದಕ್ಷಿಣ ಕನ್ನಡದ ವಿವಿಧೆಡೆ ಬಳಲುತ್ತಿದ್ದಾರೆ.ಇಂದಲ್ಲ ನಾಳೆ ಇದೆ ಚಿಕನ್ ಗುನ್ಯ ದೇಶದ ಇತರ ಕಡೆ ಸಹ ತನ್ನ ಪರಾಕ್ರಮವನ್ನು ತೋರಿಸುವ ಮಾತನ್ನು ಅಲ್ಲಗೆಲೆಯಲಾಗದು.ಇಷ್ಟಾದರೂ ಎಷ್ಟೋ ಜನರಿಗೆ ಚಿಕನ್ ಗುನ್ಯದ ಬಗ್ಗೆ ಸಾಮಾನ್ಯ ಅರಿವೂ ಇದ್ದಂತಿಲ್ಲ. ಚಿಕನ್ ಗುನ್ಯದ ಲಕ್ಷಣಗಳು,ಹರಡುವ ವಿಧಾನ,ಪ್ರಥಮ ಚಿಕಿತ್ಸೆ,ಹಾಗು ಇನ್ನಿತರ ಯಾವುದೇ ರೀತಿಯ ವಿಷಯಗಳನ್ನು ನಮ್ಮ ನಡುವೆ ಚರ್ಚಿಸೋಣವೇ? ಯಾವುದೇ ರೀತಿಯ ಔಷಧ ಕ್ರಮ ತಮಗೆ ತಿಳಿದಿದ್ದರೆ ದಯವಿಟ್ಟು ಇಲ್ಲಿ ಚರ್ಚಿಸಿ ನಮ್ಮ ಒಂದು ಪುಟ್ಟ ಅಳಿಲು ಸೇವೆಯನ್ನು ಸಲ್ಲಿಸೋಣವೇ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Dr Goutam k (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 05/08/2011 - 19:08

there is very effective treatment for chikungunya in Ayurveda.so go ahead and contact nearest Ayurvedic doctor.

  • 1215 views