Skip to main content

ಮಾತುಗಾರ ಮಲ್ಲಣ್ಣ...!! :)

ಬರೆದಿದ್ದುJune 11, 2008
6ಅನಿಸಿಕೆಗಳು

[b]ಮಾತುಗಾರ ಮಲ್ಲಣ್ಣ ಎಂಬ ಹಾಸ್ಯಕಲಾವಿದನ "ಮಾತುಗಾರ ಮಲ್ಲಣ್ಣ" ಎಂಬ ಕ್ಯಾಸೆಟ್ ನಿಂದ "ಸುಳ್ಳುವಾರ್ತೆಗಳು" ಎಂಬ ಈ ತುಣುಕು ನಮ್ಮೆಲ್ಲರನ್ನು ಹಾಸ್ಯಮಯ ಲೋಕಕ್ಕೆ ಕರೆದೊಯ್ಯುತ್ತದೆ.....[/b]

* ಆಕಾಶವಾಣಿ ಸುಳ್ಳುವಾರ್ತೆಗಳು, ಓದುತ್ತಿರುವವರು ಸತ್ಯಹರಿಶ್ಚಂದ್ರನ ಮೊಮ್ಮಗ,

ಇತ್ತೀಚಿಗೆ ಬಿದ್ದ ಭಾರಿ ಮಳೆಯಿಂದಾಗಿ ಭೂಮಿಮೇಲಿನ ಸೇತುವೆಗಳೆಲ್ಲ ಮುರ್ಕಬಿದ್ದಿರುವುದರಿಂದ, ಇನ್ನು ಮುಂದೆ ಎಲ್ಲಾ ವಾಹನಗಳು ಆಕಾಶದ ಮೇಲೆ ಚಲಿಸಬೇಕೆಂದು ಕಾಮಗಾರಿ ಸಚಿವರು ಆದೇಶ ಹೊರಡಿಸಿದ್ದಾರೆ....

* ರಾತ್ರೀ ವೇಳೆಯಲ್ಲಿ ನಮಗೆ ಸರಿಯಾಗಿ ಆಹಾರ ದೊರಕದೇ ಇರುವುದರಿಂದ ಇನ್ನುಮುಂದೆ ರಾತ್ರೀವೇಳೆಯಲ್ಲಿ ಜನಗಳು ಸೊಳ್ಳೆಪರದೆ ಕಟ್ಟಿಕೊಂಡು ಮಲಗಬಾರದೆಂಬುದಾಗಿ ಸೊಳ್ಳೆಗಳ ಸಂಗದ ಮಹಾಧ್ಯಕ್ಷರಾದ ಡಾ. ಅನುಪೀಲಿಯಸ್ ಸೊಳ್ಳೆಯವರು ರಾತ್ರಿ 12 ಘಂಟೆ ವೇಳೆಯಲ್ಲಿ ಪ್ರಧಾನಿಯವರ ಜೊತೆ ಚರ್ಚಿಸಿತೆಂದು ತಿಳಿಸಲಾಗಿದೆ. ಈ ಸೊಳ್ಳೆಗಳ ಮನೋಭಿಲಾಶೆಗಳನ್ನರಿತ ಪ್ರಧಾನಿಯವರು, ಇನ್ನು ಮುಂದೆ ಭಾರತದಲ್ಲಿರುವ ಎಲ್ಲಾ ಸೊಳ್ಳೆಪರಧೆಗಳ ಖಾರ್ಕಾನೆಗಳನ್ನು ಮುಚ್ಚಿಸುವುದಾಗಿ ಸೊಳ್ಳೆಗಳ ಸಂಗದ ಅಧ್ಯಕ್ಷರಿಗೆ ಭರವಸೆ ಕೊಟ್ಟಿದ್ದಾರೆ.

* ಭಾರತದ ಹೆಂಗಸರಲ್ಲಿ ಇತ್ತೀಚೆಗೆ, ಹೆಚ್ಚಾಗಿ ತಲೆಕೂದಲು ಉದುರುವಿಕೆಯು ಕಂಡು ಬಂದಿದ್ದು, ಈ ತಲೆ ಕೂದಲು ಉದುರುವಿಕೆಯನ್ನೆಲ್ಲ ತಡೆಗಟ್ಟಲು ಅತಿ ವಿಭಿನ್ನವಾದ ರೀತಿಯ ಸೋಪನ್ನೆ ಕಂಡುಹಿಡಿದಿರುವುದಾಗಿ ಅಕಿಲ ಭಾರತದ ಬುದ್ದಿಜೀವಿಗಳ ಸಂಗದ ಮಹಾಧ್ಯಕ್ಷರಾದ ಡಾ. ಸನ್ಮಾನ್ಯ ಶ್ರೀ ಬೋಳ್ಗುಂಡಪ್ಪನವರು ತಮ್ಮ ಸಂಶೋಧನೆಯಿಂದ ಹೊಸ ಸೋಪನ್ನು ಕಂಡುಹಿಡಿದಿರುತ್ತಾರೆ.

* ಮಂಡ್ಯದ ಆನೇಕೆರೆ ಬೀದಿಯಲ್ಲಿ ನೆನ್ನೆ ಮಧ್ಯಾಹ್ನ ಭಾರಿಗಾತ್ರದ ಕೋಣವೊಂದು ಕಾಣಿಸಿಕೊಂಡಿದ್ದು, ಆ ಕೋಣಕ್ಕೆ ಹಿಂದುಗಡೆ ಎರಡು ಕೊಂಬು ಮೂಡಿವೆಯಿಂದು ಭಯಬೀತ ಆನೆಕೆರೆಬೀದಿಯ ಗ್ರಾಮಸ್ಥರು ಪಕ್ಕದ ಪೋಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಮತ್ತು ಆ ಕೋಣಕ್ಕೆ ಕೊಂಬಿನ ಜೊತೆಗೆ ಭಾರಿಗಾತ್ರದ ಹೊಟ್ಟೆಯಿದ್ದು ಅದು ನಾಳೆ ಅಥವ ನಾಡಿದ್ದು ಕರು ಆಕುವ ಸಾಧ್ಯತೆ ಇದೆ ಎಂದು ಜಿಲ್ಲಾ ಪಶುವೈಧ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

* ಮದ್ದೂರಿನ ಮಹೇಶ ಎಂಬ 25 ವರ್ಷದ ಯುವಕನು ರಾತ್ರಿ 12 ಘಂಟೆ ವೇಳೆಯಲ್ಲಿ ಶಿವಪುರದ ಭಶವೇಶ್ವರ ಚಿತ್ರಮಂದಿರದಿಂದ ಸೆಕೆಂಡ್ ಶೋ ಸಿನಿಮಾ ನೋಡಿಕೊಂಡು ಮನೆಗೆ ಮರಳುತ್ತಿದ್ದಾಗ, ಕೊಲ್ಲಿ ಸರ್ಕಲ್ಲಿನ ಬಳಿ ಅವನನ್ನು ಕಚ್ಚಲು ನಾಲ್ಕು ನಾಯಿಗಳು ಓಡಿಸಿಕೊಂಡು ಬಂದವೆಂಬ ಒಂದೇ ಒಂದು ಸಣ್ಣಕಾರಣದಿಂದ ಮದ್ದೂರು ಮಹೇಶನಿಗೆ ಕೋಪತ್ತಿ ಅವನೇ ತಿರುಗಿ ಒಂದು ಹೆಣ್ಣುನಾಯಿಗೆ ಹೊಟ್ಟೆಯ ಭಾಗದಲ್ಲಿ ಬಲವಾಗಿ ಕಚ್ಚಿಬಿಟ್ಟಿದ್ದಾನೆ. ಅವನು ಆ ನಾಯಿಗೆ ಕಚ್ಚಿದ ತಕ್ಷಣ ಆ ನಾಯಿಯು ಸ್ಥಳದಲ್ಲೆ ದುರ್ಮರಣವನ್ನಪ್ಪಿದ್ದು, ಈ ದುಸ್ಕೃತ್ಯವನ್ನೆಸಗಿದ ಮದ್ದೂರಿನ ಮಹೇಶನಿಗೆ ಜಿಲ್ಲಾ ಸೆಶೆನ್ಸ್ ನಾಯಿ ಆಲಯವು 501 ರೂ ದಂಡವಿಧಿಸಿದೆ...!

* ಈ ವಾರ್ತೆಗಳನ್ನು ಬಾಯಿಂದ ಕೇಳುತ್ತಿದ್ದೀರಿ...!!!

* ಕೇಂದ್ರ ಸರಕಾರವು ಇತ್ತೀಚೆಗೆ ತಂದಿರುವ ಬಜೇಟ್ನಲ್ಲಿ ಶೇವಿಂಗ್ ಸೋಪು ಮತ್ತು ಶೇವಿಂಗ್ ಬ್ಲೇಡಿನ ಬೆಲೆ ಏರಿಸಿರುವುದರಿಂದ, ಈ ಶೇವಿಂಗ್ ಸೋಪು ಮತ್ತು ಶೇವಿಂಗ್ ಬ್ಲೇಡಿನ ಬೆಲೆ ಏರಿಕೆಯನ್ನು ವಿರೋಧಿಸಿ ನಾಳೆ ಭಾರತಾಧ್ಯಂತ ಎಲ್ಲ ಮಹಿಳೆಯರು ಮತ್ತು ಎಲ್ಲ ಮಹಿಳ ಸಂಘಟನೆಗಳು ಉಗ್ರವಾದ ಪ್ರತಿಭಟನಾ ಚೆಳುವಳಿಯನ್ನು ಹಮ್ಮಿಕೊಳ್ಳುವುದಾಗಿ ಅಕಿಲ ಭಾರತ ಮಹಿಳಾ ಒಕ್ಕೂಟದ ಮಹಾಧ್ಯೆಕ್ಷೆಯಾದ ಕುಮಾರಿ ಜಯ್ ಲಲಿತರವರು ತಿಳಿಸಿರುತಾರೆ. ಅವರು ನೆನ್ನೆ ಪತ್ರಕರ್ತರೊಂದಿಗೆ ಮುಶ್ಕರಕ್ಕೆ ಕಾರಣವನ್ನು ತಿಳಿಸುತ್ತ, ರೋಷವಾಗಿ ಕಂಡಿಸುತ್ತ ಮತ್ತು ಟೀಕಿಸುತ್ತ, ಈ ಕೇಂದ್ರ ಸರಕಾರವು ಏರಿಸಿರುವ ಶೇವಿಂಗ್ ಸೋಪು ಮತ್ತು ಶೇವಿಂಗ್ ಬ್ಲೇಡಿನ ಬೆಲೆ ಏರಿಕೆಯಿಂದ ನಮ್ಮ ಗಂಡಂದಿರ ಗಡ್ಡಗಳನ್ನು ನೋಡಲು ನಮ್ಮ ಕಣ್ಣಿಂದ ಸಾಧ್ಯವಾಗುತ್ತಿಲ್ಲ; ಈ ಕೇಂದ್ರ ಸರ್ಕಾರವೇನಾದರು ಇವುಗಳ ಬೆಲೆಗಳನ್ನು ಇಳಿಸದಿದ್ದರೆ ನಾವೇ ಸ್ವತಃ ನಾಳೆಯಿಂದ ನಮ್ಮ ಗಂಡಂದಿರಿಗೆ ಕುಡ್ಲು ಮತ್ತು ಮೊಚ್ಚಿನಿಂದ ಶೇವಿಂಗ್ ಮಾಡಿ ಕೊಡುತ್ತೇವೆ ಎಂದು ಪಣ ತೊಟ್ಟಿರುವುದಾಗಿ ಅವರು ತಿಳಿಸಿರುತ್ತಾರೆ..

* ಈಗ ಕ್ರೀಡಾವರದಿ...

* ಭಾರತದ ಕ್ರೀಡಾಪಟುಗಳು ಎಲ್ಲಾ ಒಲಂಪಿಕ್ಸ್ ಮತ್ತು ಏಶಿಯನ್ ಕ್ರೀಡೆಗಳಲ್ಲು ಸೋಲುತ್ತಲೆ ಬರುತ್ತಿರುವುದರಿಂದ ಇನ್ನು ಮುಂದೆ ಅವರಿಗೆ ಈ ಬಾರಿಯ ನೋಬೆಲ್ ಬಹುಮಾನವನ್ನು ಕೊಟ್ಟು ಅವರನ್ನು ಪುನಶ್ಚೇತನಗೊಳಿಸಬೇಕೆಂದು ಅಕಿಲ ಭಾರತದ ಕ್ರೀಡಾ ಒಕ್ಕೂಟದ ಮಹಾಧ್ಯಕ್ಶರಾದ ಶ್ರೀ ಕುಂಟಣ್ಣ ನವರು ನೆನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

* ಈಗ ರಾಜಕೀಯ ಅವ್-ಮಾನ ವರದಿ...

* ರಾಜ್ಯದ ರಾಜಕೀಯ ಪಕ್ಷಗಳಲ್ಲಿ ಮೋಡ ಕವಿದ ವಾತಾವರಣವಿದ್ದು ನಾಳೆ ಅಥವ ನಾಳಿದ್ದು ಬಾರಿ ಮತ್ತು ತುಂತುರು ರಾಜಿನಾಮೆಗಳಾಗುವ ಸಾಧ್ಯತೆ ಇದೆ.

* ಇಲ್ಲಿಗೆ ವಾರ್ತಾಪ್ರಸಾರ ಶುರುವಾಯ್ತು ನಮಸ್ಕಾರ...!!!

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ರಾಜೇಶ ಹೆಗಡೆ ಗುರು, 06/12/2008 - 13:37

ಹಾಯ್ ಯೋಗೇಶ್,

ಹಾಸ್ಯ ತುಂಬಾ ಚೆನ್ನಾಗಿದೆ.... :)

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/12/2008 - 16:11

ಸಖತ್ತಾಗಿದೆ.

ಗುರುದತ್ತ ಪೈ ಗುರುಪುರ

krishnamurthy v (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/19/2008 - 16:21

ಈ ಹಾಸ್ಯ ವು ಒಂದು "ಮಾತುಗಾರ ಮಲ್ಲಣ್ಣ "ಎಂಬ ದ್ವನಿಸುರುಳಿಯದ್ದು ಇದರ ರಚನೆಕಾರ ಎಂ ಎಸ್ ರವಿಗೌಡ ತುಂಬಾ ಚೆನ್ನಾಗಿದೆ.ನಾನು ಇದನ್ನು ಕೇಳಿಆನಂದಿಸಿದ್ದೇನೆ.ಜೊತೆಗೆ ಈಗ ಓದಿ ಸಂತೋಷವಾಯಿತು ದನ್ಯವಾದಗಳು.
-ಕೃಷ್ಣ

ಈ ಹಾಸ್ಯ ವು ಒಂದು "ಮಾತುಗಾರ ಮಲ್ಲಣ್ಣ "ಎಂಬ ದ್ವನಿಸುರುಳಿಯದ್ದು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/24/2008 - 12:56

ಬಹಳ ಚನ್ನಾಗಿದೆ...! ಸೊಪರ್..!

Mallanagouda … (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 10/24/2008 - 16:39

:D Thumba Chennagide. Kushiyaythu.

Aravinda N ಗುರು, 03/15/2012 - 12:24

ಹಾಸ್ಯ ಚೆನ್ನಾಗಿದೆ!!!!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.