
ಕನಸುಗಳು ಕಾಡಿವೆಯೇ ?,,,,,,,,,
ಕನಸುಗಳ ಇರುಳಲ್ಲೇ ಬರಬೇಕು, ಅಂತ ರೂಲ್ಸ್ ಏನೂ ಇಲ್ಲ, ಆದರೂ ಕನಸುಗಳು ಇರುಳಲ್ಲೇ ಬರಬೇಕು. ಇಲ್ಲ ಅಂದರೆ ತುಂಬಾ ತೊಂದರೆ, ಹಗಲಲ್ಲಿ ಕಾಣೋ ಕನಸುಗಳು ಹಗಲುಗನಸ್ಸಾಗುತ್ತೆ, ಆದರೆ ಈ ಹಗಲುಗನಸು ಕಾಣೋದು ಕೆಲವರಿಗೆ ಮಾತ್ರ ಸೀಮಿತ, ಯಾರಿಗೆ ಅಂತ ? ಕೇಳ್ಬೇಡಿ, ನನಗೆ ಗೊತ್ತಿಲ್ಲ, ಆದರೆ ರಾತ್ರಿ ಕಾಣೊ ಕನಸು ಹಗಲಲ್ಲಿ ಬಂದು ಕಾಡುದ್ರೆ ಹೇಗಿರುತ್ತದೆ. ನಿಮಗೂ ಆ ಅನುಭವ ಆಗಿದ್ಯಾ ?
ಬೆಳಗ್ಗೆ ಕಾಫೀ ಕುಡಿತಾ, ಪೇಪರ್ ತಿರುವುತ್ತಿದ್ದಾಗ, ಯಾರೋ ಪಕ್ಕದಲ್ಲಿ ಕುಳಿತು ನಕ್ಕಂತಾಯಿತು, ಯಾರು ಅಂತ ತಿರುಗಿ ನೋಡಿದರೆ, ಅದೇ ,,,,,,,,,,, ರಾತ್ರಿಯೆಲ್ಲಾ ಕಾಡಿ ನನ್ನ ನಿದ್ದೆ ಕೆಡಿಸಿದ ಕನಸು, ನನ್ನ ಕನಸು........... ನಗುತ್ತಿದೆ. ಅತ್ತ ತಿರುಗಿ ನೋಡಿ ಅದರೊಂದಿಗೆ ಮಾತಾಡುದ್ರೆ, ನನ್ನ ಹುಚ್ಚಿ ಅಂತಾರೆ, ಯಾಕೆಂದರೆ ಒಬ್ಬೊಬ್ಬಳೆ ಮಾತಾಡುತಿದ್ದರೆ, ಇನ್ನೇನು ಅನ್ನೋಕೆ ಸಾದ್ಯ, ಆದರೆ ನನ್ನ ಕನಸಲ್ಲಾ ಅಂತ ಸುಮ್ಮನಿರಲು ಸಾದ್ಯವಿಲ್ಲ, ಯಾಕೆಂದರೆ ಅದು ನನ್ನದು, ನಾನೇ ಕಂಡ ಕನಸು, ನನ್ನದಲ್ಲ ಅಂದರೆ, ತಾಯಿ ತನ್ನ ಮಗುವನ್ನು ತನ್ನ ದಲ್ಲ ಅಂದ ಹಾಗೆ ಆಗುತ್ತಲ್ಲಾ, ಅದು ಸಾದ್ಯವಿಲ್ಲ, ಇದು ಸಾದ್ಯವಿಲ್ಲ, ಅದು ನನ್ನದೇ, ನಾ ಕಂಡ ಕನಸೇ.
ನಾನು ಕುಳಿತ ಸೋಫಾದಲ್ಲಿ ನನ್ನ ಪಕ್ಕದಲ್ಲಿ ಕುಳಿತು ನಗುತ್ತಿದೆ. ಯಾರಾದರೂ ಬಂದು ಅದರ ಮೇಲೆ ಕುಳಿತು ಬಿಟ್ಟರೆ, ಆಗೋ ಬಂದ್ರು, ಅಯ್ಯೊ ನನ್ನ ಕನಸು ಅಪ್ಪಚ್ಚಿ,,,,,,,,,,,,, ಆದರೆ ಹಾಗೆ ಕಿರಲಾರೆ, ಕಿರಿದರೆ ಮತ್ತದೇ ವಿಚಾರಣೆ, ಯಾಕೆ ?, ಏನು ?, ಉತ್ತರಿಸಲಾರೆ.
ಇನ್ನೂ ಕೆಲಸಕ್ಕೆ ಹೊರಟ್ರೆ ಅಲ್ಲೂ ಬೆನ್ನು ಬಿಡುವುದಿಲ್ಲ ಜೊತೆಯಲ್ಲೇ ಬರಬೇಕಂತೆ, ಬಂದತೆ ನನ್ನ ಕೆಲಸ ಕೆಡುತ್ತದೆ, ಅಷ್ಟೆ, ಮತ್ತಿನ್ನೇನು ಮಾಡುವುದು, ನನ್ನ ಕನಸಿಗೆ ನಾನೇ ತಿಳಿಹೇಳುಬೇಕು. ಆದರೆ ನನ್ನ ಕನಸಿಗೆ ಸದಾ ನನ್ನೊಂದಿಗೆ ಇರಬೇಕಂತೆ, ಮುನಿಸು ತೋರಿಸುತ್ತಿದೆ. ಅದಕ್ಕೆ ಹೇಳಿ ಬಿಟ್ಟಿದ್ದೇನೆ, ನನ್ನೊಂದಿಗೆ ಇರಬೇಕಾದರೆ ಇರುಳಿನ ಕಲ್ಪನೆಯಲ್ಲಿ ಕತ್ತಲಾಗುವವರಿಗೆ ಕಾದಿರು, ಇಲ್ಲವಾದರೆ ನನ್ನಿಂದ ದೂರ ಹೋಗು ಅಂತ, ಸಿಟ್ಟು ಬಂತು ಅನ್ನಿಸುತ್ತೆ, ಹೊರಟು ಹೋಗಿದೆ ನನ್ನ ಕನಸು 2-3 ದಿನದಿಂದ ಪತ್ತೆಯಿಲ್ಲ.
ಎಲ್ಲೋ ಕೇಳಿದ ಮಾತು " ಬೆಳಕೇ ಇಲ್ಲದ ಕಾರಿಯಲ್ಲಿ ನೆಡೆಯಬಲ್ಲೆ, ಕನಸುಗಳಿಲ್ಲದ ದಾರಿಯಲ್ಲಿ ಹೇಗೆ ನಡೆಯಲಿ", ಎಂದು, ಈ ಸಾಲುಗಳು ಪೂರ್ಣಗೊಳ್ಳುವ ಮುಂಚೆಯೇ ಅದೆಲ್ಲಿತ್ತೊ ಸೋತಂತೆ ಬಂದು ಸೇರಿದೆ ನನ್ನ ಬಳಿ ನನ್ನ ಕನಸು, ಆದರೆ ಸೋತಿದ್ದು ಅದಲ್ಲಾ ನಾನು, ಸೋತು ಗೆದ್ದಿದ್ದು, ನನ್ನ ಕನಸು, ಹೌದು ಕನಸುಗಳಿಲ್ಲದೇ ಬದುಕಲ್ಲಿ ಏನು ಇಲ್ಲ ? ಆ ಬದುಕೇ ಇಲ್ಲ ಬಿಡಿ,
ನನ್ನ ಆತ್ಮೀಯರೊಬ್ಬರು ಹೇಳಿದ ಮಾತು ನೆನಪಿಗೆ ಬಂತು " ಜೀವನ ಪೂರ್ತಿ ಕನಸು ಕಟ್ಟುವುದೇನ ಕೆಲಸಾ ಅಂತ" ನಾನು , ಈ ಮಾತು ಹೇಳುತ್ತೇನೆ, ಆದರೆ ಅವರಷ್ಟು ಅನುಭವ ನನಗಾದ ಮೇಲೆ, ಜೀವನದಲ್ಲಿ ಕನಸ್ಸನ್ನೇ ಕಾಣದ ವ್ಯಕ್ತಿ ಯಾರೂ ಇಲ್ಲ ಬಿಡಿ, ಜಾಸ್ತಿ ಆಗದಿದ್ದರೂ ಸ್ವಲ್ಪವಾದರೂ ಕನಸ್ಸನ್ನ ಕಂಡಿರುತ್ತಾರೆ, ಆ ಕನಸುಗಳೂ ಅವರನ್ನು ಕಾಡಿರುತ್ತೆ, ಹಾಗೆ ನಾವುಗಳೂ ಎಷ್ಟೋ ಜನರ ಕನಸುಗಳ ಮೇಲೆ[b] ಕುಳಿತು ಅರಿವಿಲ್ಲದೆ ಅಪ್ಪಚ್ಚಿ ಮಾಡಿರುತ್ತೇವೆ, ಆಗ ಅವರು ಕಿರುಚಲಾಗಿರುವುದಿಲ್ಲ ಬಿಡಿ.
ಬರೆದಷ್ಟು ಮುಗಿಯದು ಇವುಗಳ ಬಗ್ಗೆ ಯಾಕೆಂದರೆ, ಎಷ್ಟೇ ಆದರೂ ಇವು ಕನಸುಗಳು,,,,,,,,,,,,,,,,,
ನೋಡಿ ಹೇಗೆ ಕುಳಿತಿದೆ ನಗುತ್ತಾ ನನ್ನ ಸಾಲುಗಳನ್ನು ಓದುತ್ತಾ, ಯಾರೆಂದು ಕೇಳಬೇಡಿ ? ಓ. ಕೆ.
ಯಾಕೆಂದರೆ, ನಿಮಗೆ ಗೊತ್ತು ಅದು ನನ್ನ ಕನಸು,
ಜೀವನದಲ್ಲಿ ಬರೀ ಕನಸನ್ನು ಕಾಣುವುದಲ್ಲ, ಸಾಕಾರ ಗೊಳ್ಳುವಂತ ಕನಸುಗಳು ನಮ್ಮೆಲ್ಲರದ್ದಾಗಲಿ,
" ಮನದ ಕನಸದು ಸೊಗಸು, ಸೊಗದ ಕನಸು ನನಸಾಗೆ ಇನ್ನೂ ಸೊಗಸು"
ಶುಭ ವಿದಾಯ, ಸುಂದರ ಸ್ವಪ್ನಗಳೂ ನಿಮ್ಮದಾಗಲಿ,
ಸಾಲುಗಳು
- Add new comment
- 2111 views
ಅನಿಸಿಕೆಗಳು
ಅದೃಷ್ಟವಂತ
ಅದೃಷ್ಟವಂತರು ನೀವು ಹಗಲಲ್ಲೂ ನಿಮ್ಮ ಕನಸೂ ನಿಮ್ಮ ಜೊತೆ ಇರುತ್ತೆ ,ನಮಗೆಲ್ಲ ರಾತ್ರಿ ಕಾಣೋ ಕನಸು ಎಚ್ಚರಿಕೆ ಆದ ತಕ್ಷಣ ಎಲ್ಲಿಗೋ ಹೊರಟು ಹೋಗಿರುತ್ತೆ ....ಕನಸನ್ನು ದಿನವೆಲ್ಲ ಅನುಭವಿಸೋ ಸುಖ ನಿಮ್ಮನ್ನ ಕೀಲಿ ತಿಳ್ಕೊಬೋದ?
ತುಂಬ ಚೆನ್ನಾಗಿ ಬರೆದಿದೀರ , ಹೀಗೆ ಬರೀತಾ ಇರಿ