Skip to main content

ಎಷ್ಟು ಪ್ರೀತಿಸ್ತಾ ಇದ್ದೆ ಅವಳನ್ನ..???

ಬರೆದಿದ್ದುMay 20, 2008
3ಅನಿಸಿಕೆಗಳು

[b] ಎಷ್ಟು ಪ್ರೀತಿಸ್ತಾ ಇದ್ದೆ ಅವಳನ್ನ..?!
ಹೃದಯದತ್ರಾನೆ ಇಟ್ಕೊಳ್ತಿದ್ದೆ ಅವಳನ್ನ..!!

ಅವಳ ನನ್ನ ಒಡನಾಟ ಬಹಳ ಇತ್ತು..
ರಾತ್ರಿ ಮಾತ್ರ ಅವಳ - ನನ್ನ ಅಂತರವಿತ್ತು..?!

ಎಲ್ಲರ ಸಂಪರ್ಕವನ್ನ ಮಾಡಿಕೊಡ್ತಾ ಇದ್ಲು..
ಈಗ ಅವಳ ಸಂಪರ್ಕಾನೇ.. ಇಲ್ದೆ ಇರೊಹಾಗೆ,
ಕೈ ಜಾರಿ ಹೋದ್ಲು..!!!

ಒಂದ್-ವಾರ ಬಹಳ ನರಳಾಡಿದೆ..
ಅವಳ ನೆನಪಲ್ಲೆ ಗೋಳಾಡಿದೆ..

ಎಷ್ಟು ದಿನಾ ಅಂತ ಒಂಟಿ ಜೀವನ??
ಬೇರೆಯವಳ ಜೊತೆ ಆಗಬೇಕಿದೆ ಮಿಲನ..!

ಅವಳ ನೆನಪಲ್ಲೆ ಕಳೆದೋದ ದಿನವೆಲ್ಲ ಮರೆತು..
ಮತ್ತೆ ಹೃದಯದ ಸ್ಥಾನ ತುಂಬಿದ ಮತ್ತೊಬ್ಬಳ ಕಂಡು..
ಕಿರುನಗೆಯೊಂದಿಗೆ...
ಸ್ವಲ್ಪ ಶ್ರೀಮಂತರ ಮಗಳಾಗಿದ್ದರಿಂದ ಹಿರಿ ಹಿರಿ ಹಿಗ್ಗಿದೆ..!!

ಮೊದಲನೆಯವಳು - Nokia 2600
ಎರಡನೆಯವಳು - Nokia 2600C-Z

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ವಿ.ಎಂ.ಶ್ರೀನಿವಾಸ ಮಂಗಳ, 05/20/2008 - 18:36

[b]ಶ್ರೀ[/b]
ಮೊಬೈಲ್ miss ಆದ ಬಗೆಯನ್ನು ತಿಳಿಹಾಸ್ಯದೊಂದಿಗೆ ಉತ್ತಮ ರೀತಿಯಲ್ಲಿ ಪ್ರಸ್ತುತ ಪಡಿಸಿರುವಿರಿ ಸಾರ್

ಕಳೆದುಹೋದ ಮೊಬೈಲ್ ಗಿಂತ ಅದರಲ್ಲಿನ contacts ತುಂಬಾ ಹಿಂಸೆ ಕೊಡುತ್ತವೆ ಸಾರ್,
ಮೊನ್ನೆ ನನ್ನ ಮೊಬೈಲ್ ಕಳೆದು ಹೋಯಿತು, ಮಾರನೇ ದಿನ ನಾನು ಕಳೆದುಕೊಂಡ ಜಾಗದಲ್ಲಿ ಈ ರೀತಿ ಬೋರ್ಡ ಅಂಟಿಸಿದೆ.

ನೆನ್ನೆ ಇದೇ ಜಾಗದಲ್ಲಿ ನನ್ನ ಮೊಬೈಲ್ ಕಳೆದುಹೋಗಿದೆ.
ಅದರ ಬೆಲೆ 10,000/- ಕ್ಕೂ ಜಾಸ್ತಿ, ಆದರೆ ಅದನ್ನು ನೀವೇ ಇಟ್ಟುಕೊಳ್ಳಿ
ಆದರೆ ನನಗೆ ದಯವಿಟ್ಟು ಅದರಲ್ಲಿನ contacts ಅನ್ನು ಬರೆದು
ಈ ಕೆಳಗಿನ ವಿಳಾಸಕ್ಕೆ ಕಳಿಸಿಕೊಡಿ.
ನಿಯತ್ತಿಲ್ಲದ ಜನ ಸಾರ್ ಇವತ್ತಿನವರೆಗೂ ಕಳಿಸಿಕೊಟ್ಟಿಲ್ಲ.

ಯೋಗೇಶ್ ಮಂಗಳ, 05/20/2008 - 19:33

ಯೋಗೇಶ್...

ನಾನು ಮಾಡಿದ್ದ ಉಪಾಯವೇನೆಂದರೆ... ನನ್ನ Contacts ಎಲ್ಲಾ ನನ್ನ ಚಿಕ್ಕ ಡೈರಿಯಲ್ಲಿ ಬರೆದಿಟ್ಟದ್ದು... ಆದ್ದರಿಂದ ತೊಂದರೆಯಾಗಲಿಲ್ಲ...

ಅಂದಹಾಗೆ.. ನಿಮ್ಮ ಚಟುವಟಿಕೆಗಳನ್ನ ನಾನು ವಿಸ್ಮಯನಗರಿಯಲ್ಲಿ ಗಮನಿಸಿದ್ದೇನೆ.. ಬಹಳ ಉತ್ಸಾಹವಿದೆ ನಿಮ್ಮಲ್ಲಿ..
ಜಾಣನಿಗೆ ಅತೀವ ಮಾತು ಸಲ್ಲ...

ನಿಮ್ಮ ಎಲ್ಲಾಕೆಲಸಗಳಿಗು ಜಯವಿರಲಿ..

ನಿಮ್ಮ ಯೋಗೇಶ್..

[b]ಶ್ರೀ[/b]

ನೀವು ನಮ್ಮನ್ನು ಇನ್ನು ಗಮನಿಸಿಲ್ಲ ಅಂದುಕೊಂಡಿದ್ದೆ, ಆದರೆ ನೀವು ಎಲ್ಲಾ ಗೊತ್ತಿದ್ದು, ಸುಮ್ಮನಿದ್ದವರು ಅಂತ ಈಗ ಅರ್ಥವಾಯಿತು. ನಿಮ್ಮ ಅಭಿಪ್ರಾಯ ನನಗೆ ಖುಷಿ ನೀಡಿದೆ ಬೇರೆ ಏನು ಹೇಳಬೇಕೆನಿಸುತ್ತಿಲ್ಲ, ಏಕೆ ಗೊತ್ತಾ ಸಾರ್ "ಕೆಲವೊಮ್ಮೆ ಭಾಷೆಗಿಂತ ಭಾವನೆಗಳು ಉತ್ತಮವಾಗಿರುತ್ತವೆ."

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.