Skip to main content

ಪ್ರಿಯರೇ,

ನನ್ನ ಹೊಸ ಚರ್ಚೆಯ ವಿಷಯ "ಚುನಾವಣೆ"

ಈ ನಾಲ್ಕು ಅಕ್ಷರಗಳ ಶಬ್ಧ ಎಷ್ಟೊಂದು ಮಾಯೆಯನ್ನುಂಟು ಮಾಡುವುದು ಈ ಕಾಲದಲ್ಲಿ, ಶಬ್ಧ ಚಿಕ್ಕದಾದರೂ ಅದರ ರೂಪ ಎಷ್ಟೊಂದು ಭೀಕರ, ಭಯಂಕರ.

ನಾವು ಆರಿಸುವ ನಮ್ಮ ಪ್ರತಿನಿಧಿಗಳನ್ನು ಐದು ವರ್ಷಕ್ಕೊಮ್ಮೆ ಕಾಣುವ ಸುವರ್ಣಾವಕಾಶ.. ಅಲ್ಲ., ಇತ್ತೀಚೆಗೆ ಕೇವಲ 3 ವರ್ಷಕ್ಕೊಮ್ಮೆ ನೋಡುವ ವಿಪರ್ಯಾಸ.. ಸಾವಿರಾರು ಆಶ್ವಾಸನೆಗಳನ್ನು ಕೊಡುವ, ಸಾವಿರಾರು ಆಸೆಗಳನ್ನು ಅಮಾಯಕರಲ್ಲಿ ಹುಟ್ಟಿಸುವ ಹುಂಬ ರಾಜಕೀಯ ಪಕ್ಷಗಳು, ರಾಜಕಾರಣಿಗಳು, ಅವರ ಎಂಜಿಲನ್ನು ತಿಂದು ಅವರಿಗಾಗಿ ದುಡಿಯುವ ಬೂತ್ ಏಜೆಂಟರು, ದುಡ್ಡು, ಸೀರೆ, ಮದ್ಯ ಹಂಚುತ್ತಾ ಅದೆಲ್ಲವನ್ನು ನೋಡುತ್ತಲಿದ್ದರೂ ನಿದ್ದೆ ಮಾಡುವ ಪೊಲೀಸ್ (ಪೋಲಿ) ಇಲಾಖೆ. ನೋಡಲು ಎಷ್ಟೊಂದು ವಿಹಂಗಮ ದೃಷ್ಯ.

ಇಲ್ಲಿ ಒಂದು ಮಾತು ಚರ್ಚಿಸಲು ಇಷ್ಟ ಪಡುತ್ತೇನೆ. ನಾವೆಲ್ಲರೂ ಅಮಾಯಕರೇ? ಅಥವಾ ಮೂರ್ಖರೆ? ಅಥವಾ ನಾವು ಈ ದೇಶದ ಪ್ರಜೆಗಳಲ್ಲವೆ?. ನಮಗೆ ಸಂಬಂಧವಿಲ್ಲದ ವಿಷಯವೇ?.

ದಿನದಿಂದ ದಿನಕ್ಕೆ ಪಕ್ಷದಿಂದ ಪಕ್ಷಕ್ಕೆ ಹಾರುವ ಭ್ರಷ್ಟ ರಾಜಕೀಯ ಕುತಂತ್ರಿಗಳಿಗೆ ಪಾಠ ಕಲಿಸುವ ಮನಸ್ಸು, ಬುದ್ಧಿ, ವಿವೇಚನೆ ನಮಗಿಲ್ಲವೆ? ಪುಡಿ ಕಾಸಿಗಾಗಿ ಆಸೆ ಪಟ್ಟು ನಮ್ಮ ಸ್ವಂತಿಕೆಯನ್ನು ಮರೆಯುತ್ತಿರುವ ನಾವೆಲ್ಲರೂ ಸತ್ಪಜೆಗಳೇ?

ಯುವಕರನ್ನು ತಮ್ಮ ಸ್ವಂತ ಕೆಲಸಗಳಿಗೆ ಬಳಸಿಕೊಂಡು ಮೆರೆದಾಡುತ್ತಿರುವ ಈ ರಾಜಕೀಯ ನೇತಾರರಿಗೆ ಹಾಕೋಣ "ಜೈಕಾರ". ಏಕೆಂದರೆ ಇವರೆಲ್ಲರೂ ಯುವಕರ ಬಗ್ಗೆ ಇರುವ ಕಾಳಜಿಗೆ ಜೈಕಾರ ಹಾಕಲೇ ಬೇಕು.

ಭಾಷೆ, ದೇಶ, ಸ್ವಾಭಿಮಾನ ಮರೆತು ಭೂಕಳ್ಳತನ ಮಾಡಿ ಕೋಟಿ ಕೋಟಿ ಹಣ ಬಾಚಿಕೊಂಡು, ಯುವ ಪೀಳಿಗೆಯ ಭವಿಷ್ಯದ ಜೊತೆ ಆಟ ಆಡುತ್ತಿರುವ ಇವರು ನಮ್ಮ ನೇತಾರರು. ಚುನಾವಣೆಗೆ ಖರ್ಚಾಗುವ ಹಣದಿಂದ ದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ, ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸುವ ಸ್ವಲ್ಪವಾದರೂ ಬುದ್ಧಿ ಇರುತ್ತಿದ್ದರೆ, ಈಗ ನಾವು ಚುನಾವಣೆ ಎಂಬ ನಾಟಕವನ್ನು ನೋಡುವ ಪ್ರಮೇಯವು ಇರುತ್ತಿರಲಿಲ್ಲವೆನೋ? ಅಲ್ಲವೆ? ಕಡೇಪಕ್ಷ ಒಂದಾದರೂ ರಾಜಕೀಯ ಪಕ್ಷವು "ನಾವು ಅಧಿಕಾರಕ್ಕೆ ಬಂದರೆ ಅಧಿಕಾರದ ಅವಧಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ, ಕನ್ನಡಿಗರಿಗೆ ಉದ್ಯೋಗ ಖಾತ್ರಿ" ಎಂದು ನುಡಿದಿದ್ದರೆ ಎಷ್ಟೊಂದು ನಿರುದ್ಯೋಗಿ ಬಡ ಯುವ ಜನಾಂಗ ನಿಟ್ಟುಸಿರು ಬಿಟ್ಟಿರೋದು.. ಅಲ್ಲವೇ?. ಯೋಚಿಸಲು ನಮ್ಮಲ್ಲು ಸ್ವಲ್ಪ ವಿವೇಚನೆ ಇದೆ ಎಂದು ಭಾವಿಸುವೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ...

ನಿಮ್ಮ ಗೆಳೆಯ.. ನಿರಂತರ.....
ಚಂದ್ರು..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Mithu ಶನಿ, 06/21/2008 - 17:50

ಇದರಲ್ಲಿ ನಡೆದಿದೆ ನೋಡಿ ಚರ್ಚೆ..

[url=http://]http://www.orkut.com/CommMsgs.aspx?cmm=11014318&tid=5200831574447165653[/url]

  • 1366 views