
ಹೊಳೆಆಲೂರಲ್ಲಿ ಕವಿವಿ ೨ನೇ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ
ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರ ಶ್ರೀ ಕವಿಪ್ರ ಸಮಿತಿಯ ಕಲಾ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಕವಿವಿ ೨ನೇ ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ದಿ.೧೦ರಂದು ಶ್ರೀ ಯಚ್ಚರೇಶ್ವರ ಸ್ವಾಮಿಗಳು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಸಮಿತಿ ಆಡಳಿತ ಮಂಡಳಿ ಸದಸ್ಯ ಕೆ.ಪಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಆಡಳಿತ ಮಂಡಳಿ ಸದಸ್ಯರಾದ ಎಂ.ಸಿ.ಬ್ಯಾಡಗಿ,ಬಿ.ಬಿ.ಸಾಸಳ್ಳಿ, ಎಂ.ಬಿ.ಕೋಳೇರಿ, ಬಿ.ಎಲ್.ಬದಾಮಿ ಆಗಮಿಸಿದ್ದರು.ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ ಪ್ರಾಸ್ತಾವಿಕವಾಗಿ ಮಾತನಾಡಿ ಒಟ್ಟು ೧೬ ತಂಡಗಳು ಭಾಗವಹಿಸಿದ ಬಗ್ಗೆ ತಿಳಿಸಿದರು.ಕ್ರೀಡಾವಿಭಾಗದ ಚೇರಮನ್ ಡಾ.ಬಸವರಾಜ ಬೆಳವಟಗಿ, ಸ್ವಾಗತಿಸಿದರು. ಪ್ರೊ.ಎನ್.ಎಸ್.ಹುಣಶೀಕಟ್ಟಿ ನಿರೂಪಿಸಿದರು.ದೈಹಿಕ ನಿರ್ದೇಶಕ ಮಂಜುನಾಥ ಸೋಮನಕಟ್ಟಿ ವಂದಿಸಿದರು. ನಿರ್ಣಾಯಕರಾಗಿ ದೇವೇಂದ್ರ ಯರಗುದರಿ, ಮುತ್ತಣ್ಣ ಪ್ರಧಾನಿ,ಎಸ್.ಎಸ್.ಗುಳೇದಗುಡ್ಡ, ಎ.ಕೆ.ಅರಹುಣಸಿ, ರಾಜೇಂದ್ರ ಮೆಲ್ಮನಿ,ಮೋಹನ ಹೊಸಕೋಟೆ,ಲಕ್ಷ್ಮಣ ಹುಲ್ಲೂರ್,ಪ್ರವೀಣ ಕಗದಾಳ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಡಾ.ಎಂ.ಎನ್.ಕಡಪಟ್ಟಿ,ಡಾ.ಪ್ರಭು ಗಂಜಿಹಾಳ,ಡಾ.ಪಿ.ಎಸ್.ಕಣವಿ,ಡಾ.ಎಸ್.ಬಿ.ಸಜ್ಜನರ್, ಡಾ.ಎಸ್.ಎಸ್.ಹುರಕಡ್ಲಿ, ಪ್ರೊ.ಆರ್.ಎಸ್.ಪಾಟೀಲ್, ಪ್ರೊ.ಎಂ.ಸಿ.ಹುಲ್ಲಣ್ಣವರ್, ಪ್ರೊ.ಎನ್.ಆರ್.ಹಿರೇಸಕ್ಕರಗೌಡರ್,ಪ್ರೊ.ಗಂಗಾಧರ ಚಕ್ರಸಾಲಿ, ಪ್ರೊ.ಗಂಗಾಧರ ಬೀಳಗಿ,ಪ್ರೊ.ಎಂ.ಕೆ.ರೊಟ್ಟಿ, ಪ್ರೊ.ರೇಶ್ಮಾ ಟಕ್ಕೇದ್ ಪ್ರೊ.ಪಿ.ಆರ್.ಸದುಗೋಳ,ಪ್ರೊ.ಎಚ್.ಕೆ.ರಾಜೂರ್, ಪ್ರೊ.ಎಸ್.ವಾಯ್.ಪೂಜಾರ್ ,ಅಧೀಕ್ಷಕ ಎಂ.ವಿ.ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಅತಿಥೇಯ ಕಲ್ಮೇಶ್ವರ ಕಾಲೇಜಿನ ತಂಡ ಮತ್ತು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನ ತಂಡದ ನಡುವೆ ನಡೆದ ಆರಂಭಿಕ ಪಂದ್ಯದಲ್ಲಿ ಹೊಳೆಆಲೂರ ಕಾಲೇಜಿನ ತಂಡ ೩೯ ಅಂಕಗಳಿಂದ ಗೆಲವು ಪಡೆದುಕೊಂಡಿತು.
-ಡಾ.ಪ್ರಭು ಅ ಗಂಜಿಹಾಳ್
ಮೊ:೯೪೪೮೭೭೫೩೪೬
ಸಾಲುಗಳು
- 66 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ