ಟೇಲರಣ್ಣ
ಬಟ್ಟೆಯ ಹೊಲೆಯುವ ಟೇಲರಣ್ಣ
ಹೇಳಿದ ಹಾಗೆ ಹೊಲೆಯುವೆಯಣ್ಣ |
ಹೊಸ ಹೊಸ ಬಟ್ಟೆಯ ತಂದು ಕೊಟ್ಟರೆ
ಹೊಲಿದು ಕೊಡುವೆ ಅಂಗಿ-ಚೊಣ್ಣ ||೧||
ಅಳತೆಯ ಟೇಪಲಿ ದೇಹವ ಅಳೆದು
ಬಟ್ಟೆಲಿ ಚಾಕಿಂದ ಗೆರೆಯ ಎಳೆವೆ |
ಕೊರಳು ತೋಳು ಜೇಬುಗಳನ್ನು
ಕತ್ತರಿಯಲಿ ಕತ್ತರಿಸಿ ತೆಗೆವೆ ||೨||
ಕಾಲನು ತುಳಿಯಲು ಬರ್ ನೇ ತಿರಗುವ
ರಾಟಿಯ ಬರ ಬರ ಸಪ್ಪಳವು |
ದಾರವ ಬಿಚ್ಚುತ ಸೂಜಿಯ ಚುಚ್ಚುತ
ಹೊಲಿವುದು ಹೊಸದು ಅನುದಿನವು ||೩||
ಚೊಣ್ಣ ಅಂಗಿ ಪೈಜಾಮ ಪ್ಯಾಂಟು
ಲಂಗಾ ಜಂಪರ್ ಎಲ್ಲ ಹೊಲೆವೆ |
ಕಾಜಿಯ ಮಾಡಿ ಗುಂಡಿಯ ಹಚ್ಚಿ
ಗರಿ ಗರಿ ಇಸ್ತ್ರೀಯ ತೀಡುವೆ ||೪||
ಹೇಳಿದ ವೇಳೆಗೆ ಕೊಡಲು ಆಗದೆ
ಸುಳ್ಳನು ಸೃಷ್ಠಿಸೋ ಜಾಣನು |
ಏನೇ ಆಗಲಿ ಹೊಸ ಹೊಸ ರೂಪವ
ಬಟ್ಟೇಲಿ ಸೃಷ್ಠಿಸೋ ಬ್ರಹ್ಮನು ||೫||
-ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 50 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ