ಹೊಳೆಆಲೂರಲ್ಲಿ ಜನ ಮನ ಸೆಳೆದ ಗದಗ ಜಿಲ್ಲಾ ಮಟ್ಟದ ಯುವಜನೋತ್ಸವ-೨೦೧೯
ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಕಲಾ ವಿಜ್ಞಾನ ,ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಕವಿವಿ ವ್ಯಾಪ್ತಿಯ ಗದಗ ಜಿಲ್ಲಾ ವಲಯ ಮಟ್ಟದ ಪದವಿ ಮಹಾವಿದ್ಯಾಲಯಗಳ ಯುವಜನೋತ್ಸವ-೨೦೧೯ ದಿ. ೧೧ ಮತ್ತು ೧೨ ರಂದು ನಡೆದು ಶನಿವಾರ ಸಮಾರೋಪಗೊಂಡಿತು.
ಮಹಾವಿದ್ಯಾಲಯದ ರಜತಮಹೋತ್ಸವ ಭವನದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ ವಹಿಸಿದ್ದರು.ಅತಿಥಿಗಳಾಗಿ ಶ್ರೀ ಕವಿಪ್ರ ಸಮಿತಿಯ ಆಡಳಿತ ಮಂಡಳಿ ಸದಸ್ಯರಾದ ಎಂ.ಬಿ.ಕೋಳೇರಿ, ಎಂ.ಎನ್.ತೇಜಿಗೌಡ್ರ, ಪಿ.ಕೆ.ಪಾಟೀಲ್, ಬಿ.ಎಲ್.ಬದಾಮಿ ಆಗಮಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಜಿಲ್ಲೆಯ ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಜಾನಪದ ನೃತ್ಯ್, ಜಾನಪದ ವಾದ್ಯಗೋಷ್ಟಿ, ಏಕಾಂಕ ನಾಟಕ, ಹಾಸ್ಯನಾಟಕ, ಮೂಕಾಭಿನಯ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಸಮೂಹ ಗೀತೆ, ಪಾಶ್ಚಿಮಾತ್ಯ ವಾದ್ಯಗೋಷ್ಟಿ, ರಸಪ್ರಶ್ನೆ, ಸಿದ್ದಭಾಷಣ, ಚರ್ಚಾಸ್ಪರ್ಧೆ, ಲಲಿತ ಕಲೆಗಳಾದ ರಂಗೋಲಿ, ಮಣ್ಣಿನ ಮೂರ್ತಿ ತಯಾರಿಕೆ, ಸ್ಥಳಾದಲ್ಲೆ ಚಿತ್ರ ಬಿಡಿಸುವದು, ತೇಪೆಚಿತ್ರ, ಭಿತ್ತಿಚಿತ್ರ, ಇನ್ಸ್ ಸ್ಟಾಲೇಶನ್, ವ್ಯಂಗ್ಯಚಿತ್ರ, ಮದರಂಗಿ, ಛಾಯಾಚಿತ್ರ ಮುಂತಾದ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಅನಾವರಣಾಗೊಳಿಸಿ ನೆರೆದಿದ್ದ ಜನರ ಕಣ್ಮನ ಸೆಳೆದರು. ವಿವಿಧ ಸ್ಪರ್ಧೆಗಳನ್ನು ಪ್ರೊ.ಎಂ.ಸಿ.ಹುಲ್ಲಣ್ಣವರ, ಪ್ರೊ.ಎನ್.ಎರ್.ಹಿರೇಸಕ್ಕರಗೌಡರ, ಡಾ.ಎಂ,ಎನ್.ಕಡಪಟ್ಟಿ, ಪ್ರೊ.ಗಂಗಾಧರ ಚಕ್ರಸಾಲಿ, ಡಾ.ಎಸ್.ಬಿ.ಸಜ್ಜನರ್, ಡಾ.ಪ್ರಭು ಗಂಜಿಹಾಳ, ಪ್ರೊ.ಎಂ.ಕೆ.ರೊಟ್ಟಿ, ಪ್ರೊ.ಪಿ.ಆರ್.ಸದುಗೋಳ,ಪ್ರೊ.ಗಂಗಾಧರ ಬೀಳಗಿ, ಪ್ರೊ.ಆರ್.ಎಸ್.ಪಾಟೀಲ್,ಪ್ರೊ.ರೇಶ್ಮಾ ಟೆಕ್ಕೇದ, ಪ್ರೊ.ಕುಮಾರ ಹಂಜಗಿ, ಪ್ರೊ.ವಿ.ಪಿ.ಪಾಟೀಲ್, ಪ್ರೊ.ಮಲ್ಲಿಕಾರ್ಜುನ ಬೇವೂರ್, ಎಂ.ವಿ.ಪಾಟೀಲ್ ನಿರ್ವಹಿಸಿದರು. ಮಹಾವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮರಡಿ, ಮಹಿಳಾ ಪ್ರತಿನಿಧಿ ಸರಸ್ವತಿ ಬೋಗಾರ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಯುವಜನೋತ್ಸವದಲ್ಲಿ ಗದಗ ಎ.ಎಸ್.ಎಸ್.ವಾಣಿಜ್ಯ ಮಹಾವಿದ್ಯಾಲಯವು ವೀರಾಗ್ರಣಿ ಪ್ರಶಸ್ತಿಗೆ ಭಾಜನವಾಯಿತು. ಗದಗ ಕೆ.ಎಲ್.ಇ ಎಸ್.ಜಗದ್ಗುರು ತೋಂಟದಾರ್ಯ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ದ್ವಿತೀಯ(ರನ್ನರ್ ಅಪ್) ಹಾಗೂ ಅತಿಥೇಯ ಶ್ರೀ ಕವಿಪ್ರ ಸಮಿತಿಯ ಕಲಾ ವಿಜ್ಞಾನ ,ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರ ತೃತೀಯ ಸ್ಥಾನ ಪಡೆದುಕೊಂಡವು.
ಇತ್ತೀಚೇಗೆ ಎರಡು ಮೂರು ಸಲ ಮಲಪ್ರಭೆ-ಬೆಣ್ಣೆಹಳ್ಳದ ನೆರೆ ಪ್ರವಾಹಕ್ಕೆ ಸಿಲುಕಿ ನಲುಗಿದ ಹೊಳೆಆಲೂರಲ್ಲಿ ಯುವಜನೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಸಿದ್ದು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು. ಡಾ..ಬಿ.ಎ.ಬೆಳವಟಗಿ ಸ್ವಾಗತಿಸಿದರು. ಸಾಂಸ್ಕೃತಿಕ ವಿಭಾಗದ ಚೇರಮನ್ ಡಾ.ಎಸ್.ಎಸ್.ಹುರಕಡ್ಲಿ ವಂದಿಸಿದರು. ಪ್ರೊ.ಎನ್.ಎಸ್.ಹುಣಸಿಕಟ್ಟಿ ನಿರೂಪಿಸಿದರು.
-ವರದಿ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 28 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ