Skip to main content

ಮೂರನೇ ಕಣ್ಣು ಧ್ವನಿಸುರುಳಿ ಬಿಡುಗಡೆ

ಮೂರನೇ ಕಣ್ಣು ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ
ಇಂದ prabhu
ಬರೆದಿದ್ದುAugust 7, 2019
noಅನಿಸಿಕೆ

ಎ.ಆರ್.ಎಸ್.ಸಿನಿ ಪ್ರೊಡಕ್ಷನ್ ಕೊಪ್ಪಳ ಅವರ ಮೂರನೇ ಕಣ್ಣು ಕನ್ನಡ ಚಲನ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಾಹಿತ್ಯ ಭವನ ಕೊಪ್ಪಳದಲ್ಲಿ ೪-೮-೨೦೧೯ರ ಭಾನುವಾರ ಜರುಗಿತು.ಅತಿಥಿಗಳಾಗಿ ಕೆ.ಎಂ.ಸೈಯದ್, ಯಮನೂರ ಹಾದಿಮನಿ, ವೀರೇಶ್ ಮಹಾಂತಯ್ಯನಮಠ, ಗೂಳಪ್ಪ ಹಲಗೇರಿ, ಅಮ್ಜದ್ ಪಟೇಲ್, ಮಹೇಂದ್ರ ಚೋಪ್ರಾ, ಸುರೇಶ್ ಭೂಮರಡ್ಡಿ, ಕಾಟನ್ ಭಾಷಾ, ಸುಧಾಕರ ಹೊಸಮನಿ, ಹೊನ್ನೂರಸಾಬ ಬೈರಾಪೂರ, ಅಜಿತ್ ಭಾಗ್ಯನಗರ, ಸಾದೀಕ್ ಅಲಿ, ಸಂತೋಷ ದೇಶಪಾಂಡೆ, ರಮೇಶ ಗಿಣಿಗೇರಿ, ಹೆಚ್.ವಿಶ್ವನಾಥ ಹಿರೇಗೌಡ್ರ, ಶಿವಾನಂದ ವಾಲಿಕಾರ, ಕೆ.ಎಸ್.ಕೊಡತಗೇರಿ, ನಾಸೀರ ಕಂಟಿ ಆಗಮಿಸಿದ್ದರು.ಈ ಸಂದರ್ಭದಲ್ಲಿ ಗೀತರಚನೆಕಾರ ಕಿನ್ನಾಳರಾಜ್, ಸಂಗೀತ ನಿರ್ದೇಶಕ ರಾಧಾಕೃಷ್ಣ ಬಸ್ರೂರ್, ಪತ್ರಿಕಾ ಪ್ರಚಾರಕ ಡಾ.ಪ್ರಭು ಅ ಗಂಜಿಹಾಳ ಅಲ್ಲದೆ ರಂಗಭೂಮಿಯ , ಚಿತ್ರರಂಗದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಗಳಮುಖಿ ನಾಯಕಿಯಾಗಿ ನಟಿಸಿದ ಮೊಟ್ಟಮೊದಲ ಸಿನಿಮಾ ಆಗಿದ್ದು ಕಥೆ,ಚಿತ್ರಕಥೆ, ಸಾಹಿತ್ಯ,ಸಂಭಾಷಣೆ, ಜೊತೆಗೆ ನಿರ್ದೇಶನವನ್ನು ಭಾಗ್ಯನಗರದ ಉತ್ಸಾಹಿ ಯುವ ನಿರ್ದೇಶಕ ನಜೀರ್.ಕೆ.ಎನ್ ವಹಿಸಿದ್ದು, ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಂಗೀತವನ್ನು ರಾಧಾಕೃಷ್ಣ ಬಸ್ರೂರ್, ಛಾಯಾಗ್ರಹಣ ಶರಣು ಸುಗ್ನಳ್ಳಿ, ಸಂಕಲನ ಪ್ರಕಾಶ್ ಡಿ, ನೃತ್ಯ ಸಂಜು,ಬ್ರೂಸ್ಲಿ,ಬಾಲು, ಸಾಹಸ ಸಂಜು, ಪ್ರಕಾಶ್ ಡಿಜೆ ಪ್ರಚಾರಕಲೆ ಡಾ.ಪ್ರಭು ಅ ಗಂಜಿಹಾಳ ಕಿನ್ನಾಳರಾಜು ಸಾಹಿತ್ಯ ನೀಡಿದ್ದು , ಈ ಚಿತ್ರವನ್ನು ಅಬ್ದುಲ್ ಸಮದ್ ಮತ್ತು ರಿಜ್ವಾನ್ ಬೇಪಾರಿ ನಿರ್ಮಿಸಿದ್ದು ಈಗಾಗಲೆ ಸೆನ್ಸಾರ್ ಮಂಡಲಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿದ್ದು ಸೆಪ್ಟಂಬರ್ ತಿಂಗಳಲ್ಲಿ ಚಿತ್ರವನ್ನು ಕರ್ನಾಟಕದಾದ್ಯಂತ ಬಿಡುಗಡೆ ಮಾಡುವದಾಗಿ ನಿರ್ಮಾಪಕರು ತಿಳಿಸಿದ್ದಾರೆ. ತಾರಾಗಣದಲ್ಲಿ ಸಚಿನ್ ನಾಯಕ್,ಶ್ರೇಯಾ,ವೀರು, ಪ್ರಕಾಶ್ ಡಿಜೆ, ತಾರಾ, ಕೊಟ್ರಯ್ಯಹಿರೇಮಠ,ಶಿವಕುಮಾರ್ ತಿಗರಿ, ಮಂಜು ಕುಕನೂರ್,ರೋಷಿನಿ,,ಅಂಜಲಿ,ಶರಣು ಕೂಕನಪಳ್ಳಿ,ಸಿಕಂದರ್,ಸಲೀಮ್ ಭಾನಾಪುರ್,ಪ್ರಕಾಶ್ ಮುಳ್ಳೊಳ್ಳಿ, ಶಿವು,ಸ್ನೇಹ, ಮುಸ್ತಕ್,ಶಶಿ ಮೊದಲಾದ ಕಲಾವಿದರು ಅಭಿನಯಿಸಿದ್ದಾರೆ.
ವರದಿ-ಡಾ.ಪ್ರಭು ಅ ಗಂಜಿಹಾಳ
ಮೊ-೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.