ಪ್ರಕೃತಿ
ನೀಲಿಯ ಬಣ್ಣ ಅದರೊಳು ಕಣ್ಣ
ಸೆಳೆವನು ನವಿಲಣ್ಣ|
ಕರಿಯ ಬಣ್ಣ ಆದರೂ ಚಿನ್ನ
ಕೋಗಿಲೆ ಕಂಠವು ಬಲು ಚೆನ್ನ||೧||
ವಿಧ ವಿಧ ಹೂಗಳು ಅರಳಿದ ನೋಟವು
ಕಣ್ಣಿಗೆ ಎಂಥ ಚೆಂದ|
ಘಮ್ಮನೆ ಹೊಮ್ಮುವ ಪರಿಮಳವೆಲ್ಲ
ಆಘ್ರಾಣಿಸಲು ಆನಂದ||೨||
ಪಾತರಗಿತ್ತಿಯ ಬಣ್ಣದ ಪಕ್ಕವು
ಪಟ ಪಟ ಬಡೆವದು ಏನಂದ|
ಚಂಗನೆ ಜಿಗಿದು ಓಡುವ ಜಿಂಕೆಯ
ಓಟದ ನೋಟವೆ ಅತಿಚೆಂದ||೩||
ಸುಳು ಸುಳು ಸುಳಿವ ತಣ್ಣನೆ ಗಾಳಿ
ಸೋಕಲು ಖುಷಿ ಮನಸು|
ಜುಳು ಜುಳು ಹರಿವ ನೀರಲಿ ಆಟವು
ಆಡಲು ಬಲು ಸೊಗಸು||೪||
ಎಲ್ಲವೂ ಉಂಟು ಈ ಜಗದಲ್ಲಿ
ಮಣ್ಣಲಿ ಹೊನ್ನು ಸಿಗುವಲ್ಲಿ|
ಭಕ್ತಿಯ ಮಾರ್ಗದ ನೆಲೆಯಲ್ಲಿ
ಮುಕ್ತಿಯ ಪಡೆಯುವ ಛಲವಿಲ್ಲಿ||೫||
ಜಗದಲಿ ಎಲ್ಲಡೆ ಸುತ್ತಿ ಬಂದರೂ
ಭಾರತ ದೇಶವೆ ಸುಂದರ|
ಅದರಲೂ ನಮ್ಮ ಕರುನಾಡಂತೂ
ಸಿರಿಗಂಧದ ಚಂದದ ಮಂದಿರ||೬||
* ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 5 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ