ಯಾರಂತೆ ನಾನು?
ಅಮ್ಮ ನೀನು ನಿಜ ಹೇಳು
ನಾನು ಯಾರ ಹಾಗಿರುವೆ?|
ನಿನ್ನ ಮುದ್ದು ಮಗಳಾದರೂ
ಏಕೆ ಹೀಗೆ ಕಾಡುತಿರುವೆ||೧||
ನನ್ನ ಮೂಗು ಹಿಡಿದು ನೀ
ಅಜ್ಜಿಯದೆನ್ನುವೆ|
ಕಣ್ಣುಗಳೆಲ್ಲ ಥೇಟ್
ಅವರಜ್ಜನವೆನ್ನುವೆ||೨||
ಮಾತಾಡೋದೆಲ್ಲ
ದೊಡ್ಡಮ್ಮನಂತೆಯೇ|
ನಡೆವ ನಡಿಗೆಯೆಲ್ಲ
ಚಿಕ್ಕಮ್ಮನಂತೆಯೇ||೩||
ಸಿಟ್ಟು ಸೆಡವು ಎಲ್ಲ
ಸೋದರ ಮಾವನಂತೆ |
ತಿನ್ನೋದರಲ್ಲಿ ಎಲ್ಲವೂ
ಅವರ ಅತ್ತೆಯಂತೆ||೪||
ಬಣ್ಣ ಎಲ್ಲವೂ
ಅವರಪ್ಪನದೇ ಎನ್ನುವೆ|
ನನ್ನ ಗುಣಗಳೆಲ್ಲ
ನಿನ್ನವೇ ಎನ್ನುವೆ||೫||
ಎಷ್ಟು ಸುಳ್ಳು ಹೇಳುವಿಯಮ್ಮ
ನಾನು ನಾನಾಗಿರುವೆ|
ನಿನ್ನ ಖುಷಿಯ ಮನಕೆ
ಹಾಲು ಜೇನಾಗಿರುವೆ||೬||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 5 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ