Skip to main content

ದಿನಕ್ಕೊಂದು ಹಿತನುಡಿಗಳು

ಬರೆದಿದ್ದುApril 20, 2008
noಅನಿಸಿಕೆ

[b]ದೈನ್ಯತೆಯಿಲ್ಲದೆ ನೂರ್ಕಾಲ ಬಾಳೋಣ.[/b][quote]

ನಮ್ಮ ಕರ್ಮಗಳಿಗನುಗುಣವಾಗಿ ನಮ್ಮ ಜನ್ಮವಿರುತ್ತದೆ. ಹಿಂದಿನ ಕರ್ಮಗಳಿಗನುಸಾರವಾಗಿ ಈಗ ಮಾನವ ಜನ್ಮ ಸಿಕ್ಕಿದೆ. ಈ ಮಾನವಜನ್ಮದ ವಿಶೇಷತೆಯೇನು? ಪ್ರಾಣಿಗಳಿಗಿಂತ ಉತ್ತಮ ಜೀವನ ನಡೆಸುವುದು. ನಿದ್ರೆ, ಆಹಾರ, ಭಯ, ಸಂತಾನೋತ್ಪತ್ತಿ ಇದು ಪ್ರಾಣಿ ಜೀವನ. ಜ್ನ್ಯಾನ ಸಂಪಾದನೆ, ಆತ್ಮನ ಉನ್ನತಿಗಾಗಿ ಸಾಧನೆ ಮಾಡುವ ಅವಕಾಶವೇ ವಿಶೇಷ. ಇದಕ್ಕೆ ದೀರ್ಘವಾದ ಆಯಸ್ಸು ಬೇಕು. ನೂರೂ ಸಾಲದು, ನೂರಕ್ಕಿಂತ ಹೆಚ್ಚು ಬೇಕು. ಆದರೆ, ಆ ಜೀವನ ದೈನ್ಯತೆಯಿಲ್ಲದೆ ಇರಬೇಕು. ಕಣ್ಣು ಕಾಣದು, ಕಿವಿ ಕೇಳದು, ಓಡಾಡಲಾಗದು, ಮಾತಾಡಲು ಆಗದು. ಈ ಸ್ಥಿತಿಯಲ್ಲಿ ಸಾಧನೆ ಮಾಡುವುದೆಂತು?! ದೀರ್ಘಕಾಲ ಇರಬೇಕು, ಶರೀರ ಸಾಧನೆಗೆ ಒದಗುವಂತೆ ಸುಸ್ಥಿತಿಯಲ್ಲಿರಬೇಕು. ಸತ್ಕಾರ್ಯಗಳನ್ನು ಮಾಡುತ್ತಿರಬೇಕು. ಈ ಧನಾತ್ಮಕ ಚಿಂತನೆ (Positive Attitude) ಬಾಳನ್ನು ಬೆಳಗಿಸುತ್ತದೆ, ಆರೋಗ್ಯಕರ ಆಚರಣೆಗೆ ಅನುವು ಮಾಡಿಕೊಡುತ್ತದೆ. ದೈನ್ಯತೆಯಿಲ್ಲದೆ ನೂರ್ಕಾಲ ಬಾಳುವ ಸಂಕಲ್ಪ ಸಾಧ್ಯವಾಗುತ್ತದೆ.

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.