
ಮೂರು ಜೋಕುಗಳು
।ವಾಸ್ತುದೋಷ।
ಪಕ್ಕದ ಮನೆಯ ಕಿಟಕಿ ನಿಮ್ಮ ರೀಡಿಂಗ್ ರೂಮಿನ ಕಿಟಕಿಗೆ ಅಭಿಮುಖವಿದೆಯೇ?
ವಾಸ್ತು ದೋಷಕ್ಕೆ ಇದೇ ಮೂಲಹೇತು. ಪತ್ನಿಯು ಕಾರಣವಿಲ್ಲದೇ ನಿಮ್ಮ ಮೇಲೆ ಅಸಮಾಧಾನಗೊಂಡಾಳು, ಸಿಡಿಮಿಡಿಗೊಂಡಾಳು, ಮನೆಯ ಸದಸ್ಯರು ಪ್ರತೀದಿನ ಅಡುಗೆಯ ಉಪ್ಪು ಹುಳಿ ಖಾರದ ಮಾರ್ಕೆಟ್ ರೇಟಿನಲ್ಲಿ ಏರಿಳಿತ ಕಾಣಬೇಕಾದೀತು ಎಚ್ಚರಾ!!
ಕೂಡಲೇ ನಿಮ್ಮ ಕಿಟಕಿಯನ್ನು ಬೇರೆಡೆಗೆ ಶಿಫ್ಟ್ ಮಾಡಿ!!
*=*=*
॥ಮೋಕ್ಷ ಬೇಕು॥
ಎಳೆಯ ಪ್ರಾಯದ ಭಕ್ತನ ಕಠಿಣ ತಪಸ್ಸಿಗೆ ಕೊನೆಗೂ ಪ್ರತ್ಯಕ್ಷನಾದ ಭಗವಂತ
''ಕಂದಾ ನಿನಗೇನು ಬೇಕು? ಕೋರು" ಎಂದಾಗ ಭಕ್ತನು ವಿನಯದಿಂ ವಂದಿಸುತ
"ಪರಮಾತ್ಮಾ, ನನಗೆ ಮೋಕ್ಷ ಮಾತ್ರ ಬೇಕು. ಬೇರೇನು ಬೇಡ"
ಭಗವಂತ: ವಾವ್! ಮಾರ್ವೆಲಸ್!! ಎಕ್ಸೆಲೆಂಟ್!! ಫೆಂಟಾಸ್ಟಿಕ್!! ಈ ಎಳೆ ಪ್ರಾಯದಲ್ಲೇ ಪ್ರಾಪಂಚಿಕ ಭೋಗಲೋಲುಪತೆಯಿಂದ ವಿಮುಖನಾಗಿ ಸಾಯುಜ್ಯದೆಡೆ ಮುಖ ಮಾಡಿರುವ ನಿನಗಿದೋ ಹಾರ್ದಿಕ ಸ್ವಾಗತ..
ಬಾ, ನಿನ್ನನ್ನು ಸ್ವರ್ಗಲೋಕಕ್ಕೆ ಕರೆದೊಯ್ಯುತ್ತೇನೆ.
ಭಕ್ತ: ಅಯ್ಯೋ ದೇವಾ ನಿಮ್ಗೆ ಕನ್ಫ್ಯೂಷನ್ ಆದಂಗಿದೆ! ನಂಗೆ ನನ್ನ 'ಕ್ಲಾಸ್ಮೇಟ್ ಮೋಕ್ಷಾ' ಬೇಕು ಭಗವಂತಾ! ಅವಳಿಲ್ಲದೆ ನಾ ಬದುಕಲ್ಲ!
*=*=*
ತಾನು ತನ್ನ ಪತಿದೇವನನ್ನು ಅತಿಯಾಗಿ ಪ್ರೀತಿಸುತ್ತೇನೆಂದು ಯಾವ ಹೆಣ್ಣೂ ಬೀಗಬೇಕಿಲ್ಲ.
ಇದು ಹೆಣ್ಣಿಗೆ ದೇವರಿತ್ತ ವರ..
ಸಾಲುಗಳು
- 189 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ