Skip to main content

ಇಂದಿನ ಮಕ್ಕಳಿಗೆ ಯಾವ ಪುಸ್ತಕ?

ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡುವ ಪುಸ್ತಕಗಳು
ಬರೆದಿದ್ದುNovember 27, 2017
noಅನಿಸಿಕೆ

ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತಿದು ಆಗ ಈಗಿನ ಹಾಗೆ ಟೀವಿ ಕಾರ್ಟೂನು ಕಾಮನ್ ಆಗಿರಲಿಲ್ಲ ಮೊಬೈಲ್ ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ಸಹ ಇರಲಿಲ್ಲ.  ಇಂಗ್ಲಿಷ್ ಮಾಧ್ಯಮ ಎನ್ನುವುದು ಇಷ್ಟೊಂದು ಸರ್ವವ್ಯಾಪಿ ಆಗಿರಲಿಲ್ಲ.

 ನಾನು ಎರಡನೇ ತರಗತಿ ಕೇಳುತ್ತಿರಬಹುದು. ಆಗ ನನಗೆ ಮೊದಲು ಓದಿನ ಹುಚ್ಚು ಹಬ್ಬಿಸಿದ್ದು ಅಮರ್ ಚಿತ್ರಕಥಾ ಮಹಾಭಾರತ ಪುಸ್ತಕ ಸರಣಿ. ಅಮರ ಚಿತ್ರಕಥಾದಲ್ಲಿ ಬರುವ ಕಣ್ಣಿಗೆ ಕಟ್ಟಿದಂತೆ   ನಮ್ಮ ಪುರಾಣಗಳು ತೆನಾಲಿರಾಮ ವಿವೇಕಾನಂದ ಬೀರಬಲ್ಲ ರಾಮಾಯಣದ ಪರಿಚಯ ನನಗೆ ಮೋಡಿ ಮಾಡಿತ್ತು. ಅತ್ಯಂತ ಸರಳ ಪದಗಳನ್ನು ಬಳಸಿ ಮಾಡಿದ ಶಿವರಾಮ ಕಾರಂತರ ಅನುವಾದ ನನಗೆ ಹಿಡಿಸಿತ್ತು.

ನಂತರ ನನ್ನ ಮನ ಸೆಳೆದ ಪುಸ್ತಕಗಳೆಂದರೆ ಚಂದಮಾಮ, ಬಾಲಮಿತ್ರ ಹಾಗು ಬೊಂಬೆಮನೆ. ಚಂದಮಾಮದ ವಿಕ್ರಮ ಬೇತಾಳ ಧಾರಾವಾಹಿಗಳು ಕಥೆಗಳು ಬಾಲಮಿತ್ರ ಮಿನಿ ಕಾದಂಬರಿ ಧಾರಾವಾಹಿ ಕಥೆಗಳನ್ನು ಮನಕ್ಕೆ ಮುಟ್ಟಿತ್ತು. ಪ್ರತಿ ತಿಂಗಳು ಜಾತಕ ಪಕ್ಷದಂತೆ ಕಾದಿರುತ್ತಿದ್ದೆ. ಇವೆರಡರ ಮುಖಪುಟ ಕೂಡ ನನಗೆ ತುಂಬಾ ಇಷ್ಟವಾಗಿತ್ತು. ಇದೇ ಸಂದರ್ಭದಲ್ಲಿ ಆರಂಭವಾಯ್ತು ಬಾಲಮಂಗಳ ಕೂಡ ಇದು ಕೂಡ ನನ್ನ  ದಿನಚರಿಯ ಭಾಗವಾಗಿ ಬಿಟ್ಟಿತ್ತು. ಅಂಗಡಿಯಿಂದ ತಂದ ಮೇಲೆ ಕುಳಿತು ಒಂದೇ ಗುಕ್ಕಿನಲ್ಲಿ ಓದುವುದು ನನ್ನ ರೀತಿಯಾಗಿತ್ತು. ಬಾಲಮಂಗಳದ ಡಿಂಗ, ಶಕ್ತಿಮದ್ದು, ಕೆಳಗಿನಮನೆ ಭೀಮ ಇನ್ನೂ ಹಲವು ಧಾರಾವಾಹಿಗಳು ನನ್ನ ಮನಪಟಲದಲ್ಲಿ ಹೊತ್ತಿರುವ ಪಾತ್ರಗಳು.

Dinga

ಪುಟಾಣಿ ಎಂಬ ಪತ್ರಿಕೆ ಕೂಡ ಅಂದು ಓದುತ್ತಿದ್ದೆ ಅದರಲ್ಲಿ ಗುರು ಶಿಷ್ಯರು, ಮರ್ಮ ವೀರನ ಸಾಹಸ ಕತೆಗಳು ಹಾಗೂ ಭಾಗವತ ತುಂಬಾ ಇಷ್ಟವಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಆ ಪತ್ರಿಕೆ ನಿಂತು ಹೋಯ್ತು. ಚಂಪಕ ಕೂಡ ಕೆಲವು ತಿಂಗಳು ಓದಿದ್ದೆ. ಇಂಗ್ಲಿಷಲ್ಲಿ  ಟಿಂಕಲ್  ಕೂಡ ಇಷ್ಟವಾಗಿತ್ತು. ಹೈಸ್ಕೂಲ್ ಮುಗಿಯುವರೆಗೆ ಇವುಗಳ ನಂಟು ಮುಂದುವರಿದಿತ್ತು.

ಇತ್ತೀಚೆಗೆ ಮಗನಿಗಾಗಿ ಸೂಕ್ತ ಪುಸ್ತಕಗಳ ಹುಡುಕುತ್ತಿದ್ದೆ ಅಮರಚಿತ್ರ ಕಥೆಯ ಕನ್ನಡ ಅವತರಣಿಕೆ ಎಲ್ಲೂ ಲಭ್ಯ ಇರಲಿಲ್ಲ ಇಂಗ್ಲಿಷ್ ಅವತರಣಿಕೆ ಮಾತ್ರ ಲಭ್ಯವಿತ್ತು. ಬಾಲಮಂಗಳ ಹಾಗೂ ತುಂತುರು ಮಾತ್ರ ಲಭ್ಯವಿತ್ತು. ಚಂದಮಾಮ ಮತ್ತು ಬೊಂಬೆ ಮನೆಯನ್ನು ಐಟಿ ಕಂಪನಿಗಳು ಹಕ್ಕು ಖರೀದಿಸಿ ಡಿಜಿಟಲೀಕರಣ ಮಾಡುತ್ತೇನೆಂದು ಹೋಗಿ ಅದನ್ನು ಮಾಡದೆ ಕೈಬಿಟ್ಟಿದ್ದರು. ನನ್ನ ಪ್ರಕಾರ ಚಂದಮಾಮ ಹಾಗೂ ಬಾಲಮಿತ್ರ ಪತ್ರಿಕೆಗಳ ಕನ್ನಡ ಅವತರಣಿಕೆಗಳನ್ನು ಪ್ರಿಂಟ್ ಸಂಕಲನ ರೂಪದಲ್ಲಿ ಮಾಡುವುದು ಒಳಿತು. ಅವು ತುಂಬಾ ಅಪರೂಪದ ವು. ಇಂಗ್ಲಿಷಿನಲ್ಲಿ ಟಿಂಕಲ್ ಹಾಗೂ ಮ್ಯಾಜಿಕ್ ಪಾಟ್ ಎಂಬ ಪತ್ರಿಕೆಗಳು ಲಭ್ಯವಿದೆ. ಇಂಗ್ಲಿಷ್ ಮಕ್ಕಳ ಪತ್ರಿಕೆಗಳು ಗಾತ್ರದಲ್ಲಿ ದೊಡ್ಡದಾಗಿದ್ದು ಮುದ್ರಣ ಗುಣಮಟ್ಟ ಚೆನ್ನಾಗಿರುತ್ತದೆ. ಕನ್ನಡದ ಪತ್ರಿಕೆಗಳು ಸಹ ಈ ಒಂದು ದಿಶೆಯಲ್ಲಿ ಗಮನ ಹರಿಸುವುದು ಒಳಿತು. ಹೆಚ್ಚಿನ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ತಮ ಗಾತ್ರದ ಪುಸ್ತಕದ ಒಂದು ಆಯ್ಕೆಯನ್ನು ಓದುಗರಿಗೆ ಕೊಡಬಹುದು. ಆಸಕ್ತಿವುಳ್ಳವರು ಅದನ್ನು ಪಡೆದುಕೊಳ್ಳಬಹುದು. 

Amar chitra katha
ಬಾಲಮಂಗಳ 
ಮಂಗಳಂ ಪಬ್ಲಿಕೇಷನ್ಸ್ ಈ ಪತ್ರಿಕೆ ಬಂದಾಗಿನಿಂದ ಡಿಂಗ ಹಾಗೂ ಅನೇಕ ಧಾರಾವಾಹಿಗಳು ಮಕ್ಕಳಿಗೆ ಇಷ್ಟವಾಗುವಂತೆ ಬಂದು ಗಮನ ಸೆಳೆದಿದೆ. ಅಷ್ಟೇ ಅಲ್ಲ ನೀತಿಯನ್ನು ಬೋಧಿಸುವ ಕತೆಗಳು ಸಹ ಇವೆ. 

Balamangala
ತುಂತುರು 
ತರಂಗ ಪತ್ರಿಕೆಯ ಈ ಮಕ್ಕಳ ಪುಸ್ತಕ ವಿದೇಶಿ ನೀತಿ ಕತೆಗಳು, ಪುರಾಣ ಕಥೆಗಳು ಹಾಗೂ ಮನರಂಜಿಸುವ ಕಾರ್ಟೂನ್ಗಳ ಮೂಲಕ ಗಮನ ಸೆಳೆಯುತ್ತದೆ. 

Tunturu
ಮ್ಯಾಜಿಕ್ ಪಾಟ್ 
ನಿಮ್ಮ ಮಗುವಿಗೆ ಇಂಗ್ಲಿಷ್ ಜ್ಞಾನ ಹೆಚ್ಚಿಸಲು ಈ ಪುಸ್ತಕ ಸಹಾಯಕವಾಗಿದೆ. ನರ್ಸರಿ ಹಾಗೂ ಎಲ್ ಕೆ ಜಿಗೆ ಮಕ್ಕಳ ಸೇರಲಿರುವ ಹಲವು ಚಟುವಟಿಕೆಗಳನ್ನು ಕವರ್ ಮಾಡುವ ಈ ಪುಸ್ತಕ ಅದರ ಜೊತೆಗೆ ಹಲವು ಮನೋರಂಜಕ ಕಥೆ ಗಳ ಮೂಲಕ  ಗಮನ ಸೆಳೆಯುತ್ತದೆ.

Magic pot
ಟಿಂಕಲ್ 
ಅಮರ್ ಚಿತ್ರಕಥಾ ಪಬ್ಲಿಕೇಷನ್ನ ಈ ಪುಸ್ತಿಕೆ ಇಂಗ್ಲಿಷ್ ಕಾರ್ಟೂನ್ಗಳು ಕಥೆಗಳ ಮೂಲಕ ಮನ ಸೆಳೆಯುತ್ತದೆ 

ಇಂದಿನ ಶಾಲಾ ಪಠ್ಯ ಪುಸ್ತಕಗಳನ್ನು ಸಹ ರಾಜಕೀಯ ಬಿಟ್ಟಿಲ್ಲ ಮಕ್ಕಳ ಹಲವು ಪುಸ್ತಕಗಳನ್ನು ನೋಡಿದಾಗ ಅವು ರಾಜಕೀಯ ಪ್ರೇರಿತ ಪಾಠಗಳು ಎಂದು ನೋಡಿದ ತಕ್ಷಣ ಗೊತ್ತಾಗುತ್ತೆ. ಇಂತಹ ರಾಜಕೀಯ ದೂರ ಇಡಲು ಹಾಗೂ ಪಕ್ಷಪಾತರಹಿತ ಮಾಹಿತಿಗಾಗಿ ಮಕ್ಕಳ ಪುಸ್ತಕ ಸಹಾಯಕ.
ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಗ್ಯಾಜೆಟ್ಗಳ ಚಟ ತಪ್ಪಿಸಲು ಪುಸ್ತಕ ಕೊಡಿಸಿ ಹುರಿದುಂಭಿಸಬೇಕಿದೆ.
ಅಷ್ಟೇ ಅಲ್ಲ ಇಂದಿನ ಇಂಗ್ಲಿಷ್ ಕೇಂದ್ರಿತ ವಿದ್ಯಾಭ್ಯಾಸದ ನಡುವೆ ಕನ್ನಡದ ಭಾಷಾ ಜ್ಞಾನ ಹೆಚ್ಚಿಸಲು ಸಹ ಇದು ತುಂಬಾ ಸಹಾಯಕಾರಿ. ನಮ್ಮ ಭಾರತೀಯ ಸಂಸ್ಕೃತಿ ಪರಿಚಯ ಮಾಡಿ ಉತ್ತಮ ಅಭಿರುಚಿ ಬೆಳೆಸಲು ಮಕ್ಕಳಲ್ಲಿ ಬೆಳೆಸಲು ಇವು ಸಹಾಯಕಾರಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ನೀವು ನಿಮ್ಮ ಮಕ್ಕಳಿಗೆ ಯಾವ ರೀತಿಯ ಪುಸ್ತಕ ಕೊಡಿಸುತ್ತೀರಾ?   ಅವರಿಗೆ ಕನ್ನಡ ಓದಲು ಬರುತ್ತದೆಯೇ ಅಥವಾ ಬರೀ ಇಂಗ್ಲಿಷ್ ಒಂದೇ? ಓದುಗರೇ ನಿಮ್ಮ ಅನಿಸಿಕೆ ಏನು ನಮ್ಮೊಂದಿಗೆ ಹಂಚಿ ಕೊಳ್ತೀರಾ ಅಲ್ವಾ?

ಲೇಖನದ ಬಗೆ

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.