
ರವಿಕಿರಣ : ಮಕ್ಕಳ ಚಲನಚಿತ್ರದ ಚಿತ್ರೀಕರಣ
ಮೈತ್ರಾ ಫಿಲಂಸ್ ಹುಬ್ಬಳ್ಳಿಯವರ ರವಿಕಿರಣ ಮಕ್ಕಳ ಕನ್ನಡ ಚಲನಚಿತ್ರದ ಚಿತ್ರೀಕರಣ ಇತ್ತೀಚೆಗೆ ಹದಿನೈದು ದಿನಗಳ ಕಾಲ ಹುಬ್ಬಳ್ಳಿ ಸುತ್ತಮುತ್ತ ನಡೆಯಿತು. ನೇತ್ರದಾನ ಕುರಿತು ವಿಷಯವನ್ನೊಳಗೊಂಡಿದ್ದು ನಕಲಿ ವೈದ್ಯರ ಹುಳುಕು ಬಿಚ್ಚಿಡಲಾಗಿದ್ದು, ಎಳೆಯ ಮಕ್ಕಳ ಕನಸನ್ನು ಇಲ್ಲಿ ಬಿಂಬಿಸಲಾಗುತ್ತಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಈಗಾಗಲೇ ಹುಟ್ಟುಹಬ್ಬದ ಹಾಡಿನ ಚಿತ್ರೀಕರಣ ಮುಗಿಸಿದ್ದು ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ರೇಣುಕುಮಾರ್, ಸಾಕ್ಷಿ, ಅಷ್ಟವಿನ್, ನವೀನ, ಅಶ್ವಿನಿ, ಪ್ರಕಾಶ್ ಧೂಳೆ, ಶೇಖರ ಹುಬ್ಬಳ್ಳಿ, ಶೋಭಾ, ಭಾರತಿ, ಪೂಜಾ, ಸ್ನೇಹಾ, ರಾಜೇಶ್ವ್ರಿ, ವಿಜಯಲಕ್ಷ್ಮೀ, ಚಂದ್ರಶೇಖರ್, ಎನ್.ಭುಜಂಗ್ ಮೊಯ್ಲಿ, ಮಹಾಂತೇಶ್ ವಜ್ರಮಟ್ಟಿ ,ಡಾ.ಗೋವಿಂದ್ ಮಣ್ಣೂರ್ ಮೊದಲಾದವರಿದ್ದಾರೆ. ಜೆ.ಇ.ಶಂಕರ್ ಛಾಯಾಗ್ರಹಣ, ಆಕಾಶ್ ಸಂಗೀತ್, ಪ್ರಕಾಶ್ ನೃತ್ಯ, ಡಾ.ಪ್ರಭು.ಗಂಜಿಹಾಳ್ ಪ್ರಚಾರ ಕಲೆ, ಡಾ.ವೀರೇಶ್ ಹಂಡಗಿ ಪತ್ರಿಕಾ ಸಂಪರ್ಕ, ನಿರ್ಮಾಣ ನಿರ್ವಹಣೆ ವೀರಣ್ಣ ವಿಠಲಾಪೂರ, ದಾವಲಸಾಬ ಹಂಚಿನಾಳ್ ಇದ್ದು ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ, ನಿರ್ದೇಶನ್ ಗುರುರಾಜ್ ಕಾಟೆ ಅವರದಿದ್ದು ಈ ಚಿತ್ರವನ್ನು ಜೆ.ಜಿ. ಸಂಸ್ಥಾನಮಠ ನಿರ್ಮಿಸುತ್ತಿದ್ದಾರೆ. ಸಹ-ನಿರ್ಮಾಪಕರಾಗಿ ಮಹಾಂತೇಶ್ ವಜ್ರಮಟ್ಟಿ ಇದ್ದಾರೆ. -ವರದಿ-ಡಾ.ಪ್ರಭು.ಗಂಜಿಹಾಳ್-೯೪೪೮೭೭೫೩೪೬
ಸಾಲುಗಳು
- 228 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ