ದೀಪಾವಳಿ
ಅರ್ಥ:
ದೀಪ ಎಂದರೆ ಬೆಳಕನ್ನು ಕೊಡುವ ವಸ್ತು. ಅದು ಎಣ್ಣೆಯ ದೀಪ ಇರಬಹುದು. ಅಥವಾ ವಿದ್ಯುತ್ ದೀಪ ಸಹ ಇರಬಹುದು. ಎಲ್.ಇ.ಡಿ ದೀಪ ಸಹ ಆಗಿರಬಹುದು.
ಅವಲೀ ಎಂದರೆ ಸಂಸ್ಕೃತದಲ್ಲಿ ಸಾಲು ಎಂದರ್ಥ. ಸಾಲು ಸಾಲಾಗಿ ಹಚ್ಚಿದ ದೀಪಗಳನ್ನು ದೀಪ + ಅವಲೀ = ದೀಪಾವಲೀ ಅನ್ನುತ್ತಾರೆ. ಹಿಂದೂ ಸಂಸ್ಕೃತಿಯಲ್ಲಿ ನರಕ ಚತುರ್ದಶಿ/ ಅಮಾವಾಸ್ಯೆ / ಬಲಿ ಪಾಡ್ಯಮಿ ಈ ಮೂರು ದಿನಗಳನ್ನು ಸಾಲು ದೀಪ ಹಚ್ಚಿ ಇನ್ನಿತರ ಪೂಜೆ ಮೂಲಕ ಆಚರಿಸುತ್ತಾರೆ. ಅದನ್ನು ದೀಪಾವಲೀ ಹಬ್ಬ ಎಂದು ಕರೆಯುತ್ತಾರೆ. ಈ ದೀಪಾವಲೀ ಪದವು ಕನ್ನಡದಲ್ಲಿ ದೀಪಾವಳಿ ಎಂದಾಗಿದೆ. ಭಾರತ ದೇಶದಲ್ಲಿ ಹಿಂದೂಗಳು ಆಚರಿಸುವ ಅತಿ ಮುಖ್ಯ ಹಬ್ಬ.
ಉದಾಹರಣೆ:
ದೀಪಾವಳಿ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸಲಾಯ್ತು.
ಇದೇ ಅರ್ಥದ ಪದಗಳು:
ದಿವಾಲಿ
ಮೂಲ:
ಸಂಸ್ಕೃತ
ಬಳಕೆ:
ಈ ಪದವನ್ನು ಆಡು ಭಾಷೆಯಲ್ಲಿ ಹಾಗೂ ಬರಹ ಎರಡರಲ್ಲೂ ಯಥೇಚ್ಛವಾಗಿ ಬಳಸುತ್ತಾರೆ.
ಈ ಪದ ಆಧಾರಿತ ಪದಗಳು:
ಬೇರೆ ಭಾಷೆಗಳಲ್ಲಿ
ಇಂಗ್ಲೀಷ್: ದಿವಾಲಿ
ಹಿಂದಿ: ದಿವಾಲಿ / ದೀಪಾವಲೀ
ಸಂಸ್ಕೃತ: ದೀಪಾವಲೀ
Deepavali in English
Kannada | English Meaning |
---|---|
Deepavali | Diwali / Deepavali / A Hindu Festival / Festival of lights |
दीपावलि हिन्दी मे अर्थ
कन्नडा | हिन्दी मे अर्थ |
---|---|
दीपावलि | दीपावलि / दीवाली / दिवाली |
ಸಾಲುಗಳು
- 75 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ