ನಿಂಬೆ ಹಣ್ಣು / ಲಿಂಬೆ ಹಣ್ಣು / ನಿಂಬಿ / ಲಿಂಬಿ / ಲೇಮನ್ / ಲೈಮ್ / ನಿಂಬು

ಅರ್ಥ: ತಿಳಿ ಹಳದಿ ಅಥವಾ ಹಸಿರು ಬಣ್ಣದ ಗಾತ್ರದಲ್ಲಿ ಚಿಕ್ಕದಾಗಿದ್ದು ದಪ್ಪನೆ ಸಿಪ್ಪೆ ಇದ್ದು ಎಸಳುಗಳನ್ನು ಹೊಂದಿದ್ದು ರುಚಿಯಲ್ಲಿ ಹುಳಿಯಾಗಿರುವ ಆಮ್ಲಭರಿತ ಹಣ್ಣು. ಇದರ ರಸದಲ್ಲಿ ಸುಮಾರು 5% ಸಿಟ್ರಿಕ್ ಆಸಿಡ್ ಇರುತ್ತದೆ ಹಾಗೂ ಇದು ವಿಟಮಿನ್ ಸಿ ಭರಿತ ಕೂಡಾ.
ಉದಾಹರಣೆ: ನಿಂಬೆ ಹಣ್ಣಿನ ಜ್ಯೂಸ್ ಅನ್ನು ಕೂಡಿದ ಮೇಲೆ ಸ್ವಲ್ಪ ಆರಾಮ ಎನಿಸಿತು.
ಇದೇ ಅರ್ಥದ ಪದಗಳು: ಲಿಂಬೆ, ಜಂಬೀರ, ನಿಂಬಿ, ಲಿಂಬಿ, ನಿಂಬು, ಲೇಮನ್, ಲೈಮ್
ಮೂಲ: ಬಹುಶಃ ಹಿಂದಿಯಿಂದ ಈ ಪದ ಕನ್ನಡಕ್ಕೆ ಬಂದಿರ ಬಹುದು. ಯಾಕೆಂದರೆ ಹಿಂದಿಯಲ್ಲಿ ನಿಂಬು, ನೀಬು ಅಂದರೆ ನಿಂಬೆ ಹಣ್ಣು.
ಬೇರೆ ಭಾಷೆಗಳಲ್ಲಿ
ಇಂಗ್ಲೀಷ್: ಲೆಮನ್ ಫ್ರೂಟ್, ಲೈಮ್
ಹಿಂದಿ: ನೀಬು, ನಿಂಬು
ಸಂಸ್ಕೃತ: ಜಂಬೀರ
Nimbe hannu in English
Kannada | English Meaning |
---|---|
nimbe hannu | Lemon fruit |
निंबे हन्नु हिन्दी मे अर्थ
कन्नडा | हिन्दी मे अर्थ |
---|---|
निंबे हन्नु | नीबू, निम्बु |
ನಿಂಬೆ ಹಣ್ಣಿಗೆ ಬೇರೆ ಪದ ನಿಮ್ಮ ಕಡೆ ಬಳಕೆಯಲ್ಲಿದೆಯಾ? ಇದ್ದರೆ ಕಮೆಂಟಲ್ಲಿ ತಿಳಿಸಿ.
ಸಾಲುಗಳು
- 295 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ