Skip to main content
ಫೇಸ್ ಬುಕ್ ಸ್ನೇಹ

ಫೇಸ್ ಬುಕ್ ಸ್ನೇಹ

ಫೇಸ್ ಬುಕ್ ಅಲ್ಲೂ ಪ್ರೇಮಾಂಕುರ ಆಗಬಹುದೇ? ಅದು ಹೇಗಿರಬಹುದು? ಈ ಲೇಖನ ಓದಿ.
ಇಂದ Nandini nanda
ಬರೆದಿದ್ದುAugust 4, 2017
2ಅನಿಸಿಕೆಗಳು

ಯಾರ ಗೊಡವೆಗೂ ಹೋಗದ ಅವಳು ತಾನಾಯ್ತು ತನ್ನ ಕೆಲಸ ಆಯಿತು ಅಂತ ಇದ್ದ ಹುಡುಗಿಗೆ ಅವತ್ತು ಅವಳ ಅದೃಷ್ಟವೋ ದುರಾದ್ರಷ್ಟವೋ ಎಂಬಂತೆ ಒಂದು ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು...ಅದನ್ನ ಓಪನ್ ಮಾಡಿ ರಿಕ್ವೆಸ್ಟ್ accept ಮಾಡಿದ್ದಾಯಿತು...ಆ ಕಡೆಯಿಂದ ಸಂದೇಶಗಳ ಸುರಿಮಳೆ ..ನಿಮ್ಮ ಹೆಸರು ಏನು..ನೀವು ಹುಡುಗಾ ನಾ ಹುಡುಗೀನಾ ಅಂತಾ..ನಾನು ನಿಮಗೆ ಹೋಗಲೋ ಬಾರಲೋ ಅಂತ ಕರೀಬಹುದುದಾ ಅಂತಾ..ಈ ಥರ ಸಂದೇಶ ನೋಡಿ ಅವಳು ಕ್ಷಣ ಕಾಲ ಅವಳು ವಿಚಲಿತಳಾದರು ಅವನಿಗೆ ಮರು ಉತ್ತರವಾಗಿ ಹೇಳಿದ್ದು ನಾನು ಹುಡುಗಿ ಕಂಡ್ರಿ ಅಂತ ..

ಅವನಿಗೆ ಒಳಗೊಳಗೇ ಖುಷಿ ..ಸ್ವಲ್ಪ ದಿನದಲ್ಲಿ ಬೇಗನೆ ಹತ್ತಿರವಾಗಿಬಿಟ್ಟ...ಮೊಬೈಲ್ ನಂಬರ್ ಕೊಡ್ತೀರಾ ಪ್ಲೀಸ್ ಯಾವಾಗ್ಲೂ ಫೇಸ್ಬುಕ್ ಅಲ್ಲಿ ಇರೋಕೆ ಆಗಒಲ್ಲ ಅಂತ ಅವಳ ನಂಬರ್ ಕೂಡ collect ಮಾಡಿದ..ಇವಳಿಗೆ ಏನೋ ಹೊಸತನ..ಹೊಸ ಮಾತು ಹೊಸ ಪರಿಚಯ..ಹೊಸ ಗೆಳೆತನ...ಕಚೇರಿಗೆ ಹೋದ ತಕ್ಷಣ ಮೊದಲು ಅವನಿಗೆ ಕರೆ ಮಾಡೋದು ಮತ್ತೆ ಮಧ್ಯಾಹ್ನ ಮತ್ತೆ ಸಂಜೆ ಮನೆಗೆ ಹೊರಡೋ ಮುಂಚೆ ಹರಟಿದ್ದೇ ಹರಟಿದ್ದು....ಮೊದ ಮೊದಲು ಪ್ರೀತಿ ಅಥವಾ ಸ್ನೇಹ ದಲ್ಲಿ ಎಲ್ಲ ಚಂದ ಅಲ್ವಾ....

ಅವತ್ತು ಶುಕ್ರವಾರ...ಸ್ವಲ್ಪ ಬೇಗನೆ ಕಚೇರಿಗೆ ಹೋಗಬೇಕು ಅಂತ ಮನೆಯಲ್ಲಿ ಹೇಳಿ...ಕಚೇರಿಗೆ ಬಂದು ಅವನಿಗೆ ಕರೆ ಮಾಡಿದ್ರೆ ಬಂದದ್ದು ಒಂದೇ ರಿಪ್ಲೈ...ದಯವಿಟ್ಟು ಸ್ವಲ್ಪ ಸಮಯದ ನಂತರ ಕರೆ ಮಾಡಿ..ಇವಳಿಗೇನು ಮಜುಗರ..ಅಸೂಯೆ..ಸಂಕಟ...ಸುಮಾರು ಹೊತ್ತಿನ ಬಳಿಕ ಅವನೇ ಕರೆ ಮಾಡಿ ಇಲ್ಲ ಕಣೆ ನನ್ನ ಬಾಸ್ ಫೋನ್ ಮಾಡಿದ್ರು ಏನೋ ಆಫೀಸ್ ಕೆಲಸ ಹಾಗೆ ಹೀಗೆ ಅಂತೆಲ್ಲ ಹೇಳಿ ಸಮಾಧಾನ ಮಾಡಿದ..ಅವತ್ತು ಫೇಸ್ ಬುಕ್ ಅಲ್ಲಿ ಅವಳ ಇನ್ನೊಬ್ಬ ಗೆಳತೀ ಜೊತೆ ಇವಳು ಹೀಗೆ ಹರಟುವಾಗ ಆ ಹುಡುಗ ಕೂಡ ಮೆಸೇಜ್ ಮಾಡಿದ..ಇವಳು ತನ್ನ ಗೆಳತಿಗೆ ನನ್ನ ಹುಡುಗ vikky ಮೆಸೇಜ್ ಮಾಡ್ತಿದ್ದಾನೆ ಕಣೆ...ಆಮೇಲೆ ಸಿಗ್ತೀನಿ ಅಂತ ಹೇಳಿದ ತಕ್ಷಣ ...ಆ ಗೆಳತೀ ಶಾಕ್ ಆಗಿ vikky ಅಂದ್ರೆ ಅವನೇ ವಿಕ್ರಾಂತ್ ತಾನೇ ಬೆಂಗಳೂರು ಅಲ್ಲಿ executive ಆಗಿ ಕೆಲಸ ಮಾಡ್ತಿದ್ದಾನೆ ಅವನಾ ಅಂತ ಕೇಳಿದ್ಲು...

ಇವಾಗ ಶಾಕ್ ಆಗಿದ್ದು ಇವಳು...ಎಲ್ಲ ಡೀಟೇಲ್ಸ್ ಇವಳಿಗೆ ಹೇಗೆ ಗೊತ್ತು..ಅಂತ...ಆಮೇಲೆ ಅವ್ಳ ಗೆಳತೀ ನಿಧಾನವಾಗಿ ಹೇಳೋಕೆ ಶುರು ಮಾಡಿದ್ಲು..ಸೇಮ್ ಟು ಸೇಮ್ ಇವಳ ಥರ ನೇ...ರಿಕ್ವೆಸ್ಟ್ ಬಂದಿದ್ದು accept ಮಾಡಿದ್ದು...ಆಮೇಲೆ ಸ್ನೇಹ ಪ್ರೀತಿ...ಹಾಗೆ ಹೀಗೆ ಅಂತೆಲ್ಲಾ...ಕ್ಷಣ ಕಾಲ ನಂಬೋಕೆ ಆಗಲಿಲ್ಲ.. ಏಷ್ಟೋಂದ್ ಸ್ನೇಹ ತೋರಿಸಿ ಪ್ರೀತಿಸಿ ಅದೇಗೆ ಹುಡುಗಿಯ ಭಾವನೆ ಜೊತೆ ಆಟ ಆಡ್ತಾರೆ ಅಂತ ...ಮನಸ್ಸಿನಲ್ಲಿ ಏನೋ ತಳಮಳ ಸಂಕಟ ವಿವರಿಸಲಾಗದ್ದು...

ಲೇಖನದ ಬಗೆ

ಲೇಖಕರು

ಅನಿಸಿಕೆಗಳು

ತ್ರಿನೇತ್ರ ಮಂಗಳ, 08/15/2017 - 16:53

ಪ್ರಥಮ ಪ್ರಯತ್ನ ವಾಗಿ ಬರೆದಿದ್ದೀರಿ ಅನ್ನಿಸುತ್ತಿದೆ. ಸಧ್ಯ ಫೇಸ್ ಬುಕ್ ನಲ್ಲಿ ಇಷ್ಟಕ್ಕೆ ನಿಂತಿತಲ್ಲಾ ಅದಕ್ಕೆ ಸಂತೋಷ ಪಡಿ..! ಮೊದಲ ಸ್ನೇಹ ಆದಾಗ ಸಿಗುವ ಪುಳಕ ರೋಮಾಂಚನ ಎಲ್ಲಾ ಅದು ಸುಳ್ಳೆಂದು ತಿಳಿದಾಗ ಆಗುವ ಮಾನಸಿಕ ಆಘಾತಗಳೇ ಹೆಚ್ಚು. ಅಂತೂ ನಿಮ್ಮ ಬರಹದಲ್ಲಿ ಪದಗಳ ಜೋಡಣೆ ಚೆನ್ನಾಗಿದೆ. ಸ್ವಲ್ಪ ಪ್ರಯತ್ನಿಸಿದರೆ ಉತ್ತಮ ಬರಹಗಾರ್ತಿ ಆಗಬಹುದು. 

Nandini nanda ಧ, 08/16/2017 - 11:28

ಧನ್ಯವಾದಗಳು 

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.