
ಅಮ್ಮಾ ನೀ ಡಿಫೆರೆಂಟ್
ಅಮ್ಮನ ಪ್ರೀತಿಗೆ ಸಾಟಿ ಇಲ್ಲ. ಅದನ್ನೇ ನಿರೂಪಿಸುತ್ತಿದೆ ಈ ಕವಿತೆ.
ನಾನು ಇಡಿಯಾಗಿ ನೆಂದ
ಜೋರು ಮಳೆಯ ರಾತ್ರಿ
ಮನೆಯೊಳಗೆ ಕಾಲಿಡುತ್ತಲೆ
ಕೇಳಿದ ಅಣ್ಣ "ಒಯ್ಯಬಾರದಿತ್ತೇ ಛತ್ರಿ"
ದಾವಣಿ ಸರಿಪಡಿಸುತ್ತಾ ಬಂದು
ಪಿಸುಗುಟ್ಟಿದಳು ತಂಗಿ
“ಮಳೆ ನಿಲ್ಲುವವರೆಗೆ ತಡೆದು
ಬರಬಾರದಿತ್ತೇ ಕಮಂಗಿ"
ಅಷ್ಟರಲ್ಲಿ ಗುಡುಗುಟ್ಟಿತು
ಅಪ್ಪನ ಘಡಸು ಧ್ವನಿ
" ಶೀತಜ್ವರ ಬಂದರೆ ದುಡ್ದಿಡಬೇಕು
ಹುಡುಗಾಟ ಬಿಡೋ ಶನಿ"
ಮೃದು ಕೈಯಲಿ ತಲಿ ಒರೆಸುತ್ತಾ
ಅಮ್ಮ ದೂರಿದಳು ಮಮತೆಯಲಿ
"ಹಾಳು ಮಳೆಯೇ ತಡಿಯಬಾರದಿತ್ತೇ
ಮಗ ಕಾಲಿಡುವ ತನಕ ಮನೆಯಲಿ"
ಲೇಖನದ ಬಗೆ
ಸಾಲುಗಳು
- Add new comment
- 372 views
ಅನಿಸಿಕೆಗಳು
mast kavan
mast kavan