Skip to main content

ಹೆಜ್ಜೆಗಳು

ಇಂದ anjali n n
ಬರೆದಿದ್ದುFebruary 10, 2017
noಅನಿಸಿಕೆ

ಕಲ್ಬೆಂಚಿನ ಮೇಲೆ ತುಸು ಅಂತರದಿ ಕುಳಿತು

ಕಾಲ್ಬೆರಳಿಂದ ಬರೆದದ್ದು

ಈಗ ಬರಿಯ ನೆನಪು....,

 

ತುಂಬು ಬೆಳದಿಂಗಳು

ಸರಿರಾತ್ರಿಯ ಹೊತ್ತು

ಜೊತೆಗೂಡಿ ಇಟ್ಟ ಪ್ರತಿ ಹೆಜ್ಜೆಗಳಿಗೂ 

ಚಂದ್ರನ ಸಾಕ್ಷಿಯುಂಟು...,

 

 

ಅದೊಂದು ದಿನ ;

ಬಿರಿ ಬಿಸಿಲು; ಬಾರದ ಉಸಿರು

ದಾರಿ ನೆಡೆದಷ್ಟು ದೂರ...;

ಎಡವಿದ ನೆಪದಲಿ

ಮತ್ತೇನೊ ನಿರೀಕ್ಷಿಸಿದ ಮನಸಿಗೆ

ಕವಲೊಡೆದ ದಾರಿಯೇ 

ಉತ್ತರಿಸಿತ್ತು..;

 

ಈಗ  ಅದೇ ಊರು; ಅದೇ ದಾರಿ

ಹಳೆ ಹೆಜ್ಜೆಗಳ ಕುರುಹುಗಳ ಮೇಲೆ

ಹೊಸ ಹೆಜ್ಜೆಗಳ ಮೆರವಣಿಗೆ 

ಹಂದರದಿ ಕೆಳಗೆ

ಅರಿಶಿಣದ ಸುರಿಗೆ

ಮೈಗೆ ಮೆರಗು ನೀಡಿತ್ತು

ಮನಸು ನಿರ್ಲೀಪ್ತವಾಗಿತ್ತು..,

 

ಗೋಧೂಳಿಯ ಲಗ್ನವಿದು;

ಚಂದಿರನ ಭಯವಿಲ್ಲ

ಒಡಲ ಉರಿ ಇರಲಿ ಅಲ್ಲೇ

ಕದಡದಿರಲಿ ಕುದಿಯುತಿರುವ 

ಕಣಕದೊಳಗಿನ ಹೂರಣ.

 

 

ಲೇಖಕರು

anjali n n

ಕೇದಿಗೆ ಪ್ರಿಯೆ

o

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.