ಕಲ್ಲು
ದೀಕ್ಷಿತ್ ನೇರ ಆಸ್ಪತ್ರೆಯ ಒಳ ಹೋದ..
ರಿಸೆಪ್ಷನಿಸ್ಟ್: ಏನು?
ದೀಕ್ಷಿತ್: ಕಲ್ಲು
ರಿಸಪ್ಷನಿಸ್ಟ್: ಓಹೋ...! ಹಾಗಾದರೆ ಅಲ್ಲಿ ಹೋಗಿ ಚೀಟಿ ಮಾಡಿ, ಹೆಸರು ಅಡ್ರೆಸ್, ನೂರು ರುಪಾಯಿ ಕೊಟ್ಟು, ನಂತರ ಚೀಟನ್ನ, ನೋಡಿ..... ಓ ಅಲ್ಲಿ ಕೂತಿರುವ ಅಟೆಂಡರ್ನ ಕೈಯಲ್ಲಿ ಕೊಡಿ...
ದೀಕ್ಷಿತ್ ಹೋಗಿ ಚೀಟಿ ಪಡೆದು, ಅಟೆಂಡರ ಕೈಯಲ್ಲಿ ಕೊಟ್ಟ.
ಅಟೆಂಡರ್: ಏನು?
ದೀಕ್ಷಿತ್: ಕಲ್ಲು...
ಅಟೆಂಡರ್: ಷರ್ಟ್, ಪ್ಯಾಂಟ್ ಇಲ್ಲಿ ಬಿಚ್ಚಿಡಿ.
ದೀಕ್ಷಿತ್ ಷರ್ಟ್, ಪ್ಯಾಂಟ್ ಬಿಚ್ಚಿ ಕೇವಲ ಕಾಚದಲ್ಲಿ ನಿಂತ.
ಅಟೆಂಡರ್ ದೀಕ್ಷಿತ್ನ ಹೈಟ್, ವೈಟ್, ಎಲ್ಲ ನೋಡಿ ಒಂದು ರಿಜಿಸ್ಟರ್‌ನಲ್ಲಿ ಬರೆದಿಟ್ರು..
ಅರ್ಧ ಗಂಟೆ ಕಳೆದು ಒಬ್ಬಾಕೆ ನರ್ಸ್ ಬಂದು ದೀಕ್ಷಿತ್ನ ಬಿ.ಪಿ ಚೆಕ್ ಮಾಡಿದ್ಳು. ನಂತರ ಟೆಸ್ಟ್ ಮಾಡಲು ಬ್ಲಡ್ ತೆಗೆದುಕೊಂಡು ಹೋದಳು....
ನಂತರ ಎಕ್ಸರೇ, ಈ.ಸಿ.ಜಿಯೂ ತೆಗೆದರು...
ಒಂದು ಗಂಟೆ ಕಳೆದು ಡಾಕ್ಟರ್ ರೂಮಿಗೆ ಕರೆದ್ರು....
ಡಾಕ್ಟರ್: ಏನು?
ದೀಕ್ಷಿತ್: ಕಲ್ಲು
ಡಾಕ್ಟರ್: ಎಲ್ಲಿ?
ದೀಕ್ಷಿತ್: ಹೊರಗೆ ಲಾರಿಯಲ್ಲಿ.... ಅದೆಲ್ಲಿ ಇಳಿಸಬೇಕು?????
ಸಾಲುಗಳು
- Add new comment
- 468 views
ಅನಿಸಿಕೆಗಳು
ಸಖತ್ತಾಗೀದೆ
ಸಖತ್ತಾಗೀದೆ
https://www.youtube.com/watch
https://www.youtube.com/watch?v=FKqSdURl8Js&t=27s
nagisuva tonic Episodeಗಳನ್ನು ನೋಡಲು Youtube channel subscribe maadi