Skip to main content

ಮುದ್ದು ಕಂದ

ಬರೆದಿದ್ದುOctober 29, 2016
1ಅನಿಸಿಕೆ


ಹೇಳಿದ ಮಾತನು ಕೇಳದೆಯೇ 

ಅಮ್ಮಗೆ ಕೋಪವ ಬರಿಸುವೆಯಾ !

 

ಉಣ್ಣಲು ತಿನ್ನಲು ಒಲ್ಲದೆಯೇ 

ಅವಳಿಗೆ ಬೇಸರ ತರಿಸುವೆಯಾ !

 

 ದೂರದಿ ಅಣಕಿಸೆ ನಿಲ್ಲುವೆಯಾ 

ಹಿಡಿಯಲು ಬಂದರೆ ಓಡುವೆಯಾ !

 

ಕಾಡಿಸಿ ಪೀಡಿಸಿ ದಣಿಸುವೆಯಾ 

ಓಡಿಸಿ ಬಳಲಿಸಿ ಅಳಿಸುವೆಯಾ !

 

ಸಹಿಸಲು ಸಾಧ್ಯವೇ ಆಗದಿರೆ 

ಬಿಸಿ ಬಿಸಿ ಕಜ್ಜಾಯ ನೀಡಿದರೆ 

 

ಗೋಳಾಡುತ ಕಂಬನಿ ಸುರಿಸುವೆಯಾ !

ಆಯಾಸದಿ ನಿದ್ದೆಗೆ ಜಾರುವೆಯಾ !

 

ಏನೇ ಉಪಟಳ ನೀಡಿದರೂ

ಅಮ್ಮಗೆ ನೀನೇ ಚಂದಿರನು 

 

ಗಲ್ಲವ ಹಿಡಿದು ಮುದ್ದಿಸುತಾ 

ಹೇಳುವಳು ನಿನ್ನನೇ ದಿಟ್ಟಿಸುತಾ 

 

ತುಂಟತನವನು ನೀನಲ್ಲದೇ 

ನರೇಂದ್ರನು ಮಾಡುವನೇನು...?!! 

ಲೇಖಕರು

ಅನಿಸಿಕೆಗಳು

ಚನ್ನಾಗಿದೆ

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.