"ಪರಮಾತ್ಮ"
"ಪರಮಾತ್ಮ"
ಮನದ ಗಡಿಯೊಳಗೆ
ದೇವರಿಗೆ ಗುಡಿ ಕಟ್ಟಲು ಹೆದರಿಕೆ
ದೇವರ ಹೆಸರಲಿ ಮಾಂಸಖಂಡಗಳೇ
ಕಿತ್ತಾಡಿ ಸಾಯುವ ಭೀತಿಗೆ
ಹೆಣ್ಣು ಹೊನ್ನು ಮಣ್ಣು
ಕಾರಣವೆನ್ನುತ್ತಿದ್ದರು
ಲೋಕದ ಸಕಲ ಕಲಹಗಳಿಗೆ
ದೇವರು ಹೊಸ ಸೇರ್ಪಡೆ
ಇವುಗಳ ಸಾಲಿಗೆ
ನಮ್ಮ ದೇವರು ನಿಮ್ಮ ದೇವರು
ಸಿಗಲಾರನು ಎಲ್ಲೇ ಹೋದರೂ
ಎಲ್ಲೆಗಳ ದಾಟಿ ಹುಡುಕಾಡಿದರೂ
ತಡಕಾಡಿದರೂ
ಬಡಿದಾಡಿದರೂ
ಕನಕ ಕಬೀರ ಪುರಂದರ
ಎಲ್ಲರೂ ದಾಸರಾಗಿದ್ದು
ತಮ್ಮ ದೇವರಿಗಲ್ಲ
ಎಲ್ಲರ ದೇವನೂ ಒಬ್ಬನೇ
ಎಂಬ ಭಾವಕ್ಕೆ ಭಕುತಿಗೆ
ಆಗಲೇ ಕಿಂಡಿಯೊಂದು ದೊರೆತಿದ್ದು
ಅವನ ಸಾಕ್ಷಾತ್ಕಾರವಾಗಿದ್ದು
'ಪರ'ಮಾತ್ಮನವನು
'ಪರ'ರಲ್ಲಿಯೇ ಇರುವವನು
'ಪರ'ರನ್ನು ಪ್ರೀತಿಸಿರೆಂಬುವವನು
'ಪರ'ಕೀಯತೆಯ ಪೊರೆಯದವನು
'ಪರ'ಮಾತ್ಮನವನು
- ಸ.Kha.
ಸಾಲುಗಳು
- 189 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ