ಕನ್ನಡದಲ್ಲಿ ಎಚ್ ಡಿ ಚಾನೆಲ್ ಯಾಕಿಲ್ಲ?
ಕನ್ನಡದಲ್ಲಿ ಎಚ್ ಡಿ ಚಾನೆಲ್ ಯಾಕಿಲ್ಲ? ಈ ಪ್ರಶ್ನೆ ಹಲವು ವರ್ಷಗಳಿಂದ ನನ್ನ ಕೊರೆಯುತ್ತಿದೆ. ಹಿಂದಿಯಲ್ಲಿ, ತಮಿಳಲ್ಲಿ ಎಚ್ ಡಿ ಚಾನೆಲ್ ಆರಂಭವಾಗಿ ೫ ವರ್ಷ ಆಯ್ತು. ಆದರೂ ಕನ್ನಡದಲ್ಲಿ ಎಚ್ ಡಿ ಚಾನೆಲ್ ಬರುವ ಸುಳಿವು ಕಾಣಿಸುತ್ತಿಲ್ಲ.
ಇಂದು ನ್ಯಾಶನಲ್ ಜಿಯಾಗ್ರಾಫಿಕ್ , ಹಿಂದಿ ಎಚ್ ಡಿ ಸಿನಿಮಾ ಎಚ್ ಡಿ ಯಲ್ಲಿ ನೋಡಿದ ಮೇಲೆ ಕನ್ನಡ ಚಾನೆಲ್ ಗಳು ಅದರ ಮುಂದೆ ಮಂಕಾಗಿ ಕಾಣಿಸುತ್ತವೆ. ಆ ಅದ್ಭುತ ಅನುಭವ ಕನ್ನಡದ ಸಾದಾ ಚಾನೆಲ್ ಗಳಲ್ಲಿಲ್ಲ.
ಇದೇ ರೀತಿ ಯೂ ಟ್ಯೂಬ್ ಅಲ್ಲಿ ಇತರ ಭಾಷೆಯ ಚಾನೆಲ್ ಗಳು ೧೦೮೦ಪಿ ಎಚ್ ಡಿ ಯಲ್ಲಿ ಬರುತ್ತಿದೆ. ಕನ್ನಡ ೩೨೦ಪಿ ಇದ್ದರೆ ನಮ್ಮ ಪುಣ್ಯ.
ಎಚ್ ಡಿ ಚಾನೆಲ್ ಲಾಭಗಳು
- ೫ ಅಥವಾ ೧೦ ಪಟ್ಟು ಕ್ಲಿಯರ್ ಚಿತ್ರಗಳು
- ೭.೧ ಅಥವಾ ೫.೧ ಸೌಂಡ್
- ಅಗಲವಾದ ಸಿನಿಮಾ ಸ್ಕೋಪ್ ಮಾದರಿ ಚಿತ್ರಗಳು
ಈಗ ಭಾರತದಲ್ಲಿ ಲಭ್ಯವಿರುವ ಎಚ್ ಡಿ ಚಾನೆಲ್ ಇಲ್ಲಿವೆ. ನೋಡಿ.
https://en.wikipedia.org/wiki/List_of_HD_channels_in_India
ಬಹುಶಃ ಕನ್ನಡದ ಮಾರುಕಟ್ಟೆ ಕಡಿಮೆ ಇರುವದು ಟಿವಿ ಚಾನೆಲ್ ಅವರನ್ನು ಎಚ್ ಡಿ ಚಾನೆಲ್ ಗೆ ಬಂಡವಾಳ ಹೂಡದಂತೆ ಮಾಡಿದೆಯೆ?
ಸಾಲುಗಳು
- Add new comment
- 1262 views
ಅನಿಸಿಕೆಗಳು
ಕಲರ್ಸ್ ಮತ್ತು ಜೀ ಕನ್ನಡ
ಕಲರ್ಸ್ ಮತ್ತು ಜೀ ಕನ್ನಡ ವಾಹಿನಿಗಳು ಹೆಚ್.ಡಿ. ಇವೆಯೆಲ್ಲ ?
ನಿಜ ಕನ್ನಡದಲ್ಲಿ ಈಗ ಎಚ್ ಡಿ
ನಿಜ ಕನ್ನಡದಲ್ಲಿ ಈಗ ಎಚ್ ಡಿ ಚಾನೆಲ್ ಗಳು ಎರಡು ಬಂದಿವೆ. ಆದರೆ ಎಚ್. ಡಿ ಟಿವಿ ಕ್ರಾಂತಿ ಆಗಿ ದಶಕಗಳ ನಂತರ. ಇನ್ನೇನು ೪ಕೆ ಟಿವಿ ಚಾನೆಲ್ ಇತರ ಭಾಷೆಗಳಲ್ಲಿ ಆರಂಭವಾಗುವ ಲಕ್ಷಣ ಕಾಣಿಸುತ್ತಿದೆ. ಇಷ್ಟು ನಿಧಾನಗತಿ ಇರಬಾರದು. ತಡ ಆದರೂ ಬಂತು ಅನ್ನುವದೇ ನೆಮ್ಮದಿ.