Skip to main content
bmtc

ಬಿಎಂಟಿಸಿ ಬಸ್ ಮೇಲಿನ ಜಾಹೀರಾತಲ್ಲಿ ಕನ್ನಡದ ಕಣ್ಣಿಗೆ ಸುಣ್ಣ ಯಾಕೆ

ಬರೆದಿದ್ದುAugust 8, 2015
noಅನಿಸಿಕೆ

ಬೆಂಗಳೂರನಲ್ಲಿ ನಾನು ಬೈಕಲ್ಲಿ ಓಡಾಡುವಾಗ ಟ್ರಾಫಿಕ್ ಅಲ್ಲಿ ಕಾಯುತ್ತಿರುವಾಗ ನನ್ನ ಗಮನ ಸೆಳೆಯುವದು ಈ ಕನ್ನಡಕ್ಕೆ ದ್ರೋಹ ಬಗೆಯುವ ಬಿ.ಎಂ.ಟಿ.ಸಿ ಬಸ್ಸಿನ ಹಿಂದೆ ಹಾಕಿರುವ ಜಾಹೀರಾತುಗಳು.

ಇಂಗ್ಲೀಷ್ ಅಲ್ಲಿ ಲೋಗೋ, ಮಾಹಿತಿ ಎಲ್ಲ ನೀಡುವ ಈ ಜಾಹೀರಾತುಗಳು ಕನ್ನಡದಲ್ಲಿ ಆ ಸಂದರ್ಭದಲ್ಲಿ ಅಗತ್ಯವೂ ಇಲ್ಲದ ಹಿತ ನುಡಿಗಳನ್ನು, ಸಾದಾ ಫಾಂಟಲ್ಲಿ ಕಂಪನಿ ಹೆಸರನ್ನು ಕನ್ನಡದಲ್ಲಿ ಬರೆದು ಮುಗಿಸುತ್ತಿವೆ.

ಕನ್ನಡದಲ್ಲಿ ಬರೆಯುವ ಕೆಲವು ಗಾದೆ ಮಾತುಗಳು ಹೀಗಿವೆ.

ವಿದ್ಯಾ ದಾನ ಮಹಾ ದಾನ,

ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ,

ಗಿಡಮರ ಬೆಳೆಸಿ ಪರಿಸರ ಉಳಿಸಿ,

ಕೈ ಕೆಸರಾದರೆ ಬಾಯಿ ಮೊಸರು  

ನನ್ನ ಪ್ರಶ್ನೆ ಇಷ್ಟೇ. ಕನ್ನಡದಲ್ಲಿ ಜಾಹೀರಾತಿನ ಮಾಹಿತಿ ಬರೆಯುವದನ್ನು ಬಿಟ್ಟು ಇವುಗಳನ್ನು ಬರೆಯುವದು ಯಾಕೆ? ನಾವು ಮುಂದಿನ ಪೀಳಿಗೆಗೆ ಈ ಮೂಲಕ ಏನು ಸಂದೇಶ ಕೊಡ ಬಯಸುತ್ತೇವೆ? ಕನ್ನಡ ಕೇವಲ ಗಾದೆ ಮಾತು, ಸಾಹಿತ್ಯದ ಭಾಷೆ. ಇಂಗ್ಲೀಷ್ ಮಾಹಿತಿ ಭರಿತ ಭಾಷೆ ಎಂದೇ? ಕನ್ನಡ ಹೋರಾಟಗಾರರು ಎಲ್ಲಿದ್ದಾರೆ?

ಪ್ರಾಮಾಣಿಕವಾಗಿ ವಿಚಾರ ಮಾಡಿ. ಈ ತರಹ ನಡವಳಿಕೆ ನಮ್ಮ ಕನ್ನಡವನ್ನು ಅಪ್ರಸ್ತುತ ಭಾಷೆಯಾಗಿ ಮಾಡುತ್ತದೆ. ಓದದಿದ್ದರೂ ಯಾವುದೇ ನಷ್ಟ ಇರದ ಮಾಹಿತಿ ಕನ್ನಡದಲ್ಲಿದೆ. ಇಂಗ್ಲೀಷ್ ಅಲ್ಲಿ ಮಾಹಿತಿಯ ಕಣಜವೇ ಈ ಜಾಹೀರಾತಲ್ಲಿದೆ.

ನಿಮ್ಮ ಅನಿಸಿಕೆ ಏನು? ಕನ್ನಡದಲ್ಲಿ ಟೈಪ್ ಮಾಡೋದು ಕಷ್ಟ ಆದ್ರೆ ಇಂಗ್ಲೀಷ್ ಅಲ್ಲಾದ್ರೂ ವ್ಯಕ್ತಪಡಿಸಿ ಪರವಾಗಿಲ್ಲ.

ಬೈಕ್ ಇಂದ ಮೊಬೈಲ್ ಅಲ್ಲಿ ತೆಗೆದ ಒಂದೆರಡು ಜಾಹೀರಾತಿನ ಸ್ಯಾಂಪಲ್ ನೀಡಿದ್ದೇನೆ.ಇಂತಹ ಹಲವಾರು ಜಾಹೀರಾತಿದೆ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.