ಪ್ಲಿಪ್ ಕಾರ್ಟ್ ಬೈ ಬೈ ಅಮೇಜಾನ್ ವೆಲ್ ಕಂ
ಪ್ಲಿಪ್ ಕಾರ್ಟ್ ಸಪ್ಟೆಂಬರ್ ನಿಂದ ಬರಿ ಮೊಬೈಲ್ ಆಪ್ ಮಾತ್ರ ಆಗಿರಲಿದೆ ಅಂದು ಕೇಳಿದಾಗ ನನಗೆ ಮನಸ್ಸಿಗೆ ಬಂದಿದೆ ಈ ಲೇಖನದ ಟೈಟಲ್. ಯಾಕೆಂದರೆ ಸಾಮಾನ್ಯವಾಗಿ ಯಾವುದೇ ವಸ್ತು ಆನ್ ಲೈನ್ ಖರೀದಿಸುವಾಗ ನಾನು ಹೆಚ್ಚು ಬಳಸುವದು ಡೆಸ್ಕ್ ಟಾಪ್ ಬ್ರೌಸರ್. ಆಪ್ ಅಲ್ಲಿ ಮಾಡಿದ್ದರೂ ಅದು ರಿಯಾಯ್ತಿ ಇದ್ದಾಗ ಮಾತ್ರ. ಡೆಸ್ಕ್ ಟಾಪ್ ಅಲ್ಲಿ ನಾಲ್ಕು ವೆಬ್ಸೈಟ್ ತೆಗೆದು ಬೆಲೆ ಹೋಲಿಕೆ ಮಾಡುವದು ಸುಲಭ. ಮೊಬೈಲ್ ಅಲ್ಲಿ ಕಷ್ಟ.
ಅಷ್ಟೇ ಯಾಕೆ ಪ್ರತಿ ಸಲ ಮೆಮರಿ ಕಡಿಮೆ ಆದಾಗ ಬೇಡದ ಆಪ್ ಅನ್ನು ಫೋನ್ ಇಂದ ಡಿಲೀಟ್ ಮಾಡಿ ಜಾಗ ಖಾಲಿ ಮಾಡುತ್ತೇನೆ. ಫ್ಲಿಪ್ ಕಾರ್ಟ್ ಆಪ್ ಗೆ ಈ ಗತಿ ಬರುವ ದಿನ ದೂರವಿಲ್ಲ. ಯಾಕೆಂದರೆ ಬೇರೆ ಆಪ್ ಇನ್ಸ್ಟಾಲ್ ಮಾಡಲು ಜಾಗ ಬೇಕಾದಾಗ ಉಳಿದ ಆಪ್ ಡಿಲೀಟ್ ಮಾಡುವದು ಅನಿವಾರ್ಯ!
ಇನ್ನು ಮೊಬೈಲ್ ಡಾಟಾ ಪ್ಲಾನ್ ಸಿಮೀತ, ಆಫೀಸಲ್ಲಿದ್ದಾಗ ಆಪ್ ತೆಗೆದು ಖರೀದಿಗಿಂತ ಡೆಸ್ಕ್ಟ್ ಟಾಪ್ ಅಲ್ಲೇ ಸುಲಭ. ಸಾಫ್ಟವೇರ್ ಕಂಪನಿಗಳಲ್ಲಿ ಸಾಮಾನ್ಯವಾಗಿ ಎಲ್ಲರ ಸ್ಮಾರ್ಟ್ ಫೋನಲ್ಲಿ ೩ಜಿ ಆನ್ ಆಗಿರುವದರಿಂದ ಇಂಟರ್ನೆಟ್ ತುಂಬ ನಿಧಾನವಾಗಿರುತ್ತದೆ. ಆಗ ಕೂಡಾ ಆಪ್ ಸೂಕ್ತವಲ್ಲ. ತಿಂಗಳ ಕೊನೆಯಲ್ಲಿ ಡಾಟಾ ಮುಗಿಯುತ್ತಾ ಬಂದಾಗ ಆಪ್ ಅಲ್ಲಿ ಶಾಪಿಂಗ್ ಕನಸು ಯಾಕೆಂದರೆ ಆಗ ಡಾಟಾ ಗೆ ಜಾಸ್ತಿ ಚಾರ್ಜ್ ಆಗುತ್ತೆ.
ಇನ್ನು ಡೆಸ್ಕ್ ಟಾಪ್ ನ ವಿಶಾಲವಾದ ಸ್ಕ್ರೀನ್ ಅಲ್ಲಿ ನೂರಾರು ಐಟೆಮ್ ಅನ್ನು ಒಟ್ಟಿಗೆ ನೋಡಬಹುದು. ಇದು ಸ್ಮಾರ್ಟ್ ಫೋನ್ ಅಲ್ಲಿ ಸಾಧ್ಯವಾಗದು.
ಆದರೂ ಪ್ಲಿಪ್ ಕಾರ್ಟ್ ಇರಲ್ಲ ಅಂತಾ ನನಗೇನೂ ಬೇಸರವಿಲ್ಲ. ಹೇಗಿದ್ದರೂ ಅಮೇಜಾನ್.ಇನ್ ಇದ್ದೇ ಇದೆ. ಶಾಪ್ ಕ್ಲೂಸ್, ಸ್ನ್ಯಾಪ್ ಡೀಲ್ ಕೂಡಾ ಇದೆ.ಹಾಗಾಗಿ ನೋ ವರ್ರೀಸ್!!
ಬಹುಶಃ ಇನ್ನು ನಾಲ್ಕೈದು ವರ್ಷಗಳ ನಂತರ ಫ್ಲಿಪ್ ಕಾರ್ಟ್ ಈ ನಿರ್ಧಾರ ತೆಗೆದುಕೊಂಡಿದ್ದರೆ ಸರಿಯಾಗಿತ್ತೇನೋ. ಆದರೆ ಈಗ ಇದು ಅತಿ ಆತುರದ ನಿರ್ಧಾರ ಅನ್ನುವದು ನನ್ನ ಅನಿಸಿಕೆ. ನಿಮ್ಮ ಅನಿಸಿಕೆ ಏನು?
ಸಾಲುಗಳು
- 716 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ