
ಮಕ್ಕಳಿರಲವ್ವ ಮನೆ ತುಂಬಾ!!
ಮಕ್ಕಳಿರಲವ್ವ ಮನೆ ತುಂಬಾ!!
****
ಭಾರತ ನಮ್ಮ ದೇಶ. ಇದರ ವಿಸ್ತೀರ್ಣ ಇದ್ದಷ್ಟೇ ಇರುತ್ತದೆ ಹೊರತು ಅದು ಮತ್ತಷ್ಟು ವಿಸ್ತಾರಗೊಳ್ಳುವ ಸಾಧ್ಯತೆ ತೀರಾ ಕಡಿಮೆ.
ಹಾಗಂತ ಚಿಂತಿಸಬೇಕಿಲ್ಲ. ಜೇಸೀಬಿ ಹಿಟ್ಯಾಚಿ ಯಂತ್ರಗಳ ಮೂಲಕ ಪಶ್ಚಿಮ ಘಟ್ಟಗಳ ಬೆಟ್ಟಗಳನ್ನು ತಟ್ಟಿ ಕುಟ್ಟಿ ಪುಡಿ ಮಾಡಿ ಸಮುದ್ರಕ್ಕೆ ತುಂಬಿದರೆ ಸಾವಿರಾರು ಎಕರೆ ಹೊಸ ಭೂಮಿ ನಮಗೆ ದೊರೆಯುವುದು ಆಗ ಭಾರತದ ಚಿತ್ರ ಬಿಡಿಸಲೂ ತುಂಬಾ ಸುಲಭ.
ಒಂದು ಸುಂದರವಾದ ತ್ರಾಪಿಜ್ಯವನ್ನು ರಚಿಸಿ ಇದು ಭಾರತದ ನಕಾಶೆ ಎಂದು ಯಾರಿಗೂ ಹೆದರದೆ ತೋರಿಸಬಹುದು. ಗಿಡ ಮರಗಳ ಸಂಖ್ಯೆ ಕಡಿಮೆ ಆಗುತ್ತಿದೆ!
ಪರಿಣಾಮ?
ಅರಣ್ಯ ವಾಸಿಗಳ ಸರ್ವನಾಶ!!
ಅದರಿಂದಲೂ ಲಾಭವೇ. ಕಾಡು ಕಡಿದು ಅಲ್ಲಿ ರಬ್ಬರ್ ಕಂಗು ತೆಂಗು ಗಣಿಗಾರಿಕೆ ಅಥವಾ ಕಾಂಪ್ಲೆಕ್ಸ್ ದೊಡ್ಡ ದೊಡ್ಡ ಫ್ಯಾಕ್ಟರಿ ಅಗಲಗಲದ ರಸ್ತೆ ಹೀಗೆ ನಾವು ಮುಂದುರಿಯಲು ಅಡ್ಡಿಯೇನಿಲ್ಲ.
ಬೇಕಾದಷ್ಟು ನೀರನ್ನು ಉಪಯೋಗಿಸಬಹುದು. ಮಳೆ ನೀರೇ ಬೇಕೆಂದೇನೂ ಇಲ್ಲ. ಬೋರ್ವೆಲ್ ನೀರೇ ಆಧಾರ ಎಂಬ ಆಧಾರರಹಿತ ಮಾತು ಬೇಕಾಗಿಲ್ಲ. ದಟ್ಟವಾದ ಹಿಮವಿದೆ. ಅದನ್ನು ಕರಗಿಸಿ ಪೈಪ್ಲೈನ್ ಮೂಲಕ ಸಪ್ಲಾಯಿ ಮಾಡಬಹುದು. ಪ್ರಾಣಿಗಳ ನಾಶದಿಂದ ಕಾಡಿನ ಸಮತೋಲನ ತಪ್ಪಬಹುದೇ? ಚೆ ಚೇ ಇಲ್ಲಪ್ಪಾ! ಸೊಳ್ಳೆ ನೊಣಗಳು ಮಿತಿ ಮೀರಿ ಬೆಳವಣಿಗೆ ಕಂಡಿವೆ.
ಊಂಹೂಂ ಸೊಳ್ಳೆ ಕಚ್ಚದಂತೆ ಕ್ರಮ ಕೈಗೊಳ್ಳುವುದೇನೂ ಕಷ್ಟವಿಲ್ಲ. ಗದ್ದೆ ತೋಟದಲ್ಲಿ ಕೆಲಸ ಮಾಡುವಾಗ ಕಾಯಿಲ್ ಉರಿಸಿ ಇಡಬಹುದು. ಅಥವಾ ಸೊಳ್ಳೆ ಪರದೆ ಹೊದ್ದುಕೊಳ್ಳಬಹುದು. ಭೂಮಿಯ ಶಾಖವನ್ನು ತಡೆದುಕೊಳ್ಳಲು ನಾವು ಪ್ರತಿ ಮನೆಗು ಏಸಿ ಅಳವಡಿಸಬಹುದು. ಅಷ್ಟೇ ಅಲ್ಲ ಗದ್ದೆ ತೋಟಗಳನ್ನು ಏಸೀಕರಣಗೊಳಿಸುವ ಮೂಲಕ ನಾವು ಇಡೀ ಜಗತ್ತೇ ನಮ್ಮತ್ತ ನೋಡುವಷ್ಟು ಬೆಳವಣಿಗೆ ಕಾಣಬಹುದು. ಆಕ್ಸಿಜೆನ್ ಕೊರತೆ ಎದುರಾದರೆ ಪ್ರತಿ ಮನೆಗು ಆಧಾರ್ ಆಧಾರದಲ್ಲೇ ಆಕ್ಸಿಜನ್ ಕಿಟ್ ವಿತರಿಸಬಹುದು. ಒಟ್ಟಿನಲ್ಲಿ ನಮಗೆ ಯಾವ ಕಷ್ಟವೂ ಬಾರದಂತೆ ಈ ದೇಶದಲ್ಲಿ ಮಕ್ಕಳನ್ನು ಪಡೆದೂ ಪಡೆದೂ ಪುಣೀತರಾಗೋಣ!
ಸಾಲುಗಳು
- Add new comment
- 1295 views
ಅನಿಸಿಕೆಗಳು
ಹೌದು ಸಾರ್.. ನಿಮ್ಮ ಸಲಹೆ
ಹೌದು ಸಾರ್.. ನಿಮ್ಮ ಸಲಹೆ ಚೆನ್ನಾಗಿದೆ..! ತೀರ ತೊಂದ್ರೆಯಾದ್ರೆ ನಮ್ಮ ದೇಶದ ಭೂಭಾಗದ ಮೇಲೊಂದು ಫಸ್ಟ್ ಫ್ಲೊರ್ ನಿರ್ಮಾಣ ಮಾಡಿಯಾದ್ರೂ ಜಾಗ ಹುಟ್ಟು ಹಾಕಬಹುದು... ಯಾವುದಕ್ಕೂ ಜನ ಸಂಖ್ಯೆ ಹೆಚ್ಚಾಗಬೇಕಾಗಿರೊದು ಮುಖ್ಯ ನೋಡಿ..!
ಮತ್ತೆ ಏನು ಬರೆಯೋಣ ಸರ್!
ಮತ್ತೆ ಏನು ಬರೆಯೋಣ ಸರ್!
ನಮ್ಮ ದೇಶದ ಬರಗಾಲಕ್ಕೆ ಅನಾರೋಗ್ಯಕ್ಕೆ ಮೂಲ ಕಾರಣ ಏರುತ್ತಿರುವ ಜನನ ಸಂಖ್ಯೆ ಎಂದು ಮೂರನೇ ತರಗತಿಯ ಪಾಠದಲ್ಲೇ ಬರೆದಿದ್ದಾರೆ!
ಆದರೂ ಜನನ ನಿಯಂತ್ರಣಕ್ಕೆ ಕಡ್ಡಾಯ ಕಾನೂನು ಇಲ್ಲ.
ಚೈನಾ ಇದೇ ರೀತಿ ಉದಾಸೀನ ಮಾಡಿದ್ದರೆ ಇಂದು ಸಾಲಗಳ ಮೇಲೆ ಸಾಲ ಮಾಡಿ ಅಮೆರಿಕಾದ ಅಡಿಯಲ್ಲಿ ನಲುಗಿರುತ್ತಿತ್ತು. ಏನಂತೀರೀ?
ಎಲ್ಲಾ ನಮ್ಮ ಪ್ರಜಾಪ್ರಭುತ್ವದ
ಎಲ್ಲಾ ನಮ್ಮ ಪ್ರಜಾಪ್ರಭುತ್ವದ ಮಹೀಮೆ ಸಾರ್..! ಯಾರು ಏನ್ ಬೇಕಾದ್ರೂ ಮಾಡಬಹುದು..ಏಲ್ಲಾರಿಗೂ ಮುಕ್ತವಾದ ಸ್ವಾತಂತ್ಯ್ರ... ಲೂಟಿ,ಕಳ್ಳತನ,ಮೋಸ ವಂಚನೆ ಏನ್ ಮಾಡಿದ್ರೂ ಪರವಾಗಿಲ್ಲ... ಆದ್ರೆ ಪ್ರಾಮಾಣಿಕವಾಗಿ ಮಾತ್ರ ಇರ್ಬಾದು...! ಅದೆ ನೋಡಿ ನಮ್ಮ ಪ್ರಜಾಪ್ರಭುತ್ವದ ಪಾಲಿಸಿ..!