ಮ್ಯಾಗಿ ನೂಡಲ್ಸ್ ನಿಜಕ್ಕೂ ಹಾನಿಕಾರಕವೇ?
ಕೆಲವು ಮ್ಯಾಗಿ ನೂಡಲ್ಸ್ ಸ್ಯಾಂಪಲ್ ಅಲ್ಲಿ ಸೀಸ ಜಾಸ್ತಿ ಇದೆ ಅನ್ನುವ ವರದಿ ನೀವು ಪತ್ರಿಕೆಗಳಲ್ಲಿ ಓದುತ್ತಿರಬಹುದು. ಹಾಗಿದ್ದರೆ ಬೇರೆ ನೂಡಲ್ಸ್ ಉತ್ತಮ ಎಂದು ಅದನ್ನು ತಿನ್ನಲು ಹೊರಟಿದ್ದೀರಾ? ಸ್ವಲ್ಪ ನಿಲ್ಲಿ. ಈ ಬ್ಲಾಗ್ ಲೇಖನ ಓದಿ ಆಮೇಲೆ ಹೊರಡಿ.
ಈಗ ಡೆಲ್ಲಿಯಲ್ಲಿ ಸೀಸ ಜಾಸ್ತಿ ಇದೆ ಅನ್ನುವದು ಗೊತ್ತಾಗಿದ್ದರೆ ಕೇರಳ ಹಾಗೂ ಗೋವಾದಲ್ಲಿ ಸೀಸದ ಸಮಸ್ಯೆ ಇಲ್ಲ. ಹಾಗಿದ್ದರೆ ಇದು ಮ್ಯಾಗಿ ನೂಡಲ್ಸ್ ನ ತಯಾರಿಕಾ ವಿಧಾನದಲ್ಲಿರುವ ದೋಷಕ್ಕಿಂತ ಅದಕ್ಕೆ ಬಳಸುವ ಮೂಲ ಪದಾರ್ಥಗಳಲ್ಲಿನ ಸಮಸ್ಯೆ ಎಂಬುದು ನನ್ನ ಅನಿಸಿಕೆ. ಅದು ನಿಜವಾದಲ್ಲಿ ಬರಿ ಮ್ಯಾಗಿ ಅಷ್ಟೇ ಅಲ್ಲ ಬೇರೆ ನೂಡಲ್ಸ್ ಅಥವಾ ಬೇರೆ ಪ್ರಾಡಕ್ಟ್ ಗಳಲ್ಲೂ ಹಾನಿಕಾರಕ ಪದಾರ್ಥ ಇದ್ದು ನಮ್ಮ ದೇಹಕ್ಕೆ ಸೇರುತ್ತಿರಬಹುದು. ಅಷ್ಟೇ ಯಾಕೆ ಆ ಮೂಲ ಪದಾರ್ಥವನ್ನು ಬೇರೆ ರೂಪದಲ್ಲಿ ನಾವು ತಿನ್ನುತ್ತಿರಬಹುದು.
ಕೈಗಾರಿಕರಣದ ಪ್ರಭಾವದಿಂದ ಇಂದು ಪರಿಸರ ಕಲುಷಿತ ಗೊಂಡು ಯಾವ್ಯಾವ ರಾಸಾಯನಿಕ ನಮ್ಮ ದೇಹ ಸೇರುತ್ತಿದೆಯೋ ದೇವರೇ ಬಲ್ಲ.
ಇಂದು ಸೋಷಿಯಲ್ ನೆಟ್ ವರ್ಕ್ ಜಮಾನಾದಲ್ಲಿ ಈ ವಿಷಯ ಮಿಂಚಿನ ವೇಗದಲ್ಲಿ ಹರಡಿತು. ಎಲ್ಲ ಪತ್ರಿಕೆಗಳಲ್ಲೂ ಸೀಸ (ಲೆಡ್) ದ ಹಾನಿ ಬಗ್ಗೆ ಬರೆದದ್ದೇ ಬರೆದಿದ್ದು. ಬಹುಶಃ ಮ್ಯಾಗಿ ಬ್ರಾಂಡ್ ಗೆ ಈ ಸುದ್ಧಿಯಿಂದ ಆಗಿರುವ ಹಾನಿ ಸರಿಪಡಿಸಲು ನೆಸ್ಲೆ ಅವರು ಹರಸಾಹಸ ಮಾಡಬೇಕೆನೋ. ಈ ಹಿಂದೆ ಕ್ಯಾಡ್ ಬರಿ ಅವರು ಚಾಕಲೇಟುಗಳಿಗೆ ಹುಳಗಳಿಂದ ಬಂದ ಅಪವಾದ ಸರಿಪಡಿಸಿದ ಹಾಗೆ.
ಅಷ್ಟೇ ಅಲ್ಲ ಇಂದು ನಾವು ಪ್ರತಿದಿನ ತಿನ್ನುವ ಧಾನ್ಯ, ತರಕಾರಿ, ಹಣ್ಣು ಹಾಗೂ ಸೊಪ್ಪುಗಳಲ್ಲೂ ಅವೈಜ್ಞಾನಿಕ ಬಳಕೆಯಿಂದಾಗಿ ಇಂದು ಕ್ರಿಮಿನಾಶಕ ನಮ್ಮ ದೇಹ ಸೇರುತ್ತಿದೆ. ಅದಕ್ಕೆ ನಾವು ಯಾಕೆ ಮೌನರಾಗಿದ್ದೇವೆ? ಕ್ರಿಮಿನಾಶಕ ದೇಹಕ್ಕೆ ಉತ್ತಮ ಎಂದೆ?
ಇಂದು ಅಮೇರಿಕಕ್ಕೆ ಹೋಗುವ ಫಸ್ಟ್ ಗ್ರೇಡ್ ಸಾವಯವ ತರಕಾರಿ, ಹಣ್ಣು ಸಹ ರಾಸಾಯನಿಕ ಸಮಸ್ಯೆಯಿಂದ ವಾಪಸ್ ಬಂದು ಬಿಡುತ್ತದೆ. ಆದರೆ ಭಾರತದಲ್ಲಿ ಬಿಕರಿಯಾಗುವ ಹೆಚ್ಚಿನದು ಸೆಕಂಡ್ ಹಾಗೂ ಥರ್ಡ್ ಗ್ರೇಡ್ ತರಕಾರಿ, ಹಣ್ಣುಗಳು. ಅವುಗಳ ಕಥೆ ಹೇಗಿರಬೇಡ? ಹೆಚ್ಚಿನ ರಾಜ್ಯಗಳು ಮ್ಯಾಗಿ ಸಾಂಪಲ್ ತೆಗೆದುಕೊಂಡು ಪರೀಕ್ಷೆ ಮಾಡಿದ್ದು ಡೆಲ್ಲಿಯಲ್ಲಿ ನಡೆದ ಪರೀಕ್ಷೆಯಲ್ಲಿ ಗೊತ್ತಾದ ಮೇಲೆ. ಅಂದರೆ ಡೆಲ್ಲಿಯಲ್ಲಿ ಯಾವುದಾದರೂ ವಸ್ತು ಸರಿಯಾಗಿದ್ದು ಬೇರೆ ರಾಜ್ಯದಲ್ಲಿ ಸಮಸ್ಯೆ ಇದ್ದರೆ ತಿಳಿಯುತಿತ್ತೇ? ಯಾಕೋ ಅನುಮಾನ.
ವಾಸ್ತವ ಇಷ್ಟೇ ನಾವು ತಿನ್ನುವ ಪ್ರತಿ ಆಹಾರದಲ್ಲಿ ಸತು ಇದ್ದೇ ಇರುತ್ತದೆ. ಇದು ನಾವೇ ಪರಿಸರ ಕಲುಷಿತ ಮಾಡಿಕೊಂಡ ಪರಿಣಾಮ. ಮ್ಯಾಗಿಯ ಕೆಲವು ಸ್ಯಾಂಪಲ್ ಗಳಲ್ಲಿ ಸತು ಜಾಸ್ತಿ ಇರಬಹುದು. ಆದರೆ ಅದೇ ರೀತಿ ಬೇರೆ ಎಲ್ಲ ಪ್ರಾಡಕ್ಟ್ ಗಳು ಅಂದರೆ ಬೇರೆ ನೂಡಲ್ಸ್, ಹಾಲು ಅಷ್ಟೇ ಯಾಕೆ ಇನ್ನಾವುದೇ ತಿನ್ನುವ ಪದಾರ್ಥದಲ್ಲಿ ಅದಕ್ಕಿಂತ ಹೆಚ್ಚು ಸತು ನಾವು ತಿನ್ನುತ್ತಿರಬಹುದು. ಆದರೆ ಅದನ್ನು ಯಾರೂ ಟೆಸ್ಟ್ ಮಾಡುವದಿಲ್ಲ. ಅದು ಸುದ್ದಿ ಆಗದು. ಕೇವಲ ಮಾಧ್ಯಮ ಹಾಗೂ ಸೋಷಿಯಲ್ ನೆಟ್ ವರ್ಕ್ ಗಳ ಹೈಪ್ ಗೆ ಮ್ಯಾಗಿ ಎಂಬ ಬ್ರಾಂಡ್ ಬಲಿ ಆಗಿದೆ ಅಷ್ಟೇ.
ನಾವಿಲ್ಲಿ ಬರಿ ರಾಜಕೀಯ ಮಾಡದೇ ನಾವು ಉಳಿದ ವಸ್ತುಗಳ ರಾಸಾಯನಿಕಗಳ ಬಗ್ಗೆ ಕೂಡಾ ವಿಚಾರ ಮಾಡಬೇಕಿದೆ.ಎಲ್ಲದರ ಪರೀಕ್ಷೆ ಯಾವುದೇ ಬೇಧ ಭಾವ ಇಲ್ಲದೇ ಮಾಡಿ ಬ್ಯಾನ್ ಮಾಡಬೇಕಿದೆ. ಲಂಚ ಕೊಟ್ಟವರನ್ನು ಸುಮ್ಮನೆ ಬಿಟ್ಟು ಉಳಿದವರ ಬಗ್ಗೆ ಕೇಸ್ ಹಾಕುತ್ತಾ ಇದ್ದರೆ ಏನು ಪ್ರಯೋಜನ ಇಲ್ಲ.
ಸಾಲುಗಳು
- Add new comment
- 1620 views
ಅನಿಸಿಕೆಗಳು
ಪ್ರತಿಯೊಂದು ಪೇಸ್ಟ್ ಸೋಪ್ ನಾವು
ಪ್ರತಿಯೊಂದು ಪೇಸ್ಟ್ ಸೋಪ್ ನಾವು ನುಂಗುವ ಪೆಯ್ನ್ ಕಿಲ್ಲರ್ ಮೆಡಿಸಿನ್ ಎಲ್ಲವೂ ವಿಷಕಾರಿಯೇ ಆಗಿದೆ. ಮುಖಕ್ಕೆ ಹಾಕುವ ಪೌಡರ್ ಮಗುವಿಗೆ ಹಾಕುವ ಬೇಬಿ ಕ್ರೀಮ್ ಈ ಎಲ್ಲವುಗಳ ಬಗ್ಗೆ ನೀವು ಸರ್ಚ್ ಮಾಡಿದರೆ ನಿಮಗೆ ಭಯ ಆಗುವ ವರದಿಗಳೇ ಅದರಲ್ಲಿರುವುದು. ಪ್ರಿಯ ಗೆಳೆಯರೇ ನಿಮಗೆ ಇದೆಲ್ಲದರಿಂದ ಮುಕ್ತಿ ಬೇಕೆ? ದಯವಿಟ್ಟು ಮೋದಿಕೇರ್ ಸೇರಿರಿ. ನಿಮಗೆ ಸೇರಲು ಇಷ್ಟ ಇಲ್ಲದಿದ್ದಲ್ಲಿ ಮತ್ತು ನಿಮಗೆ ಪಕ್ಕಾ ನೂರು ಶೇಕಡಾ ಅವುಷದಿ ಗುಣವುಳ್ಳ ಸೋಪ್ ಪೇಸ್ಟ್ ಬೇಕಿದ್ದಲ್ಲಿ ನಿಮ್ಮ ಹತ್ತಿರದ ಮೋದಿಕೇರ್ ಷಾಪ್ಗೆ ಹೋಗಿ ನಿಮಗೆ ಬೇಕಾದ್ದು ಪಡೆಯಿರಿ.
ಬಟ್ ಎಂಸಿಎ ನಂಬರ್ ಇಲ್ಲದವರಿಗೆ ಅಲ್ಲಿ ಏನೂ ಸಿಗುವುದಿಲ್ಲ. ನೀವು
MCA 94957595 ಎಂದು ಹೇಳಿರಿ. ಪ್ರಾಡಕ್ಟ್ ಕೊಡ್ತಾರೆ.
ನೆನಪಿಡಿ ಕಣ್ಣು ಮಂಜಾದವರ ಕಣ್ಣು ಸರಿ ಆಗುತ್ತೆ. ಕೂದಲು ಕಪ್ಪಾಗುತ್ತೆ ಆರೋಗ್ಯ ವೃದ್ಧಿಸುತ್ತೆ. ಡೌಟಿದ್ದರೆ ಸ್ಯಾಂಪಲ್ ಲ್ಯಾಬ್ಗೆ ಕಲಿಸಿ. ಅದಕ್ಕೆ ಹೊಣೆ ನಾನಿದ್ದೇನೆ. ಪಕ್ಕಾ ಸ್ವದೇಶಿ. 100% ವೆಜ್. ರೇಟ್ ಈಗ ತುಂಬಾ ಕಡಿಮೆ ಆಗಿದೆ.
ನಮ್ಮ ದೇಶದಲ್ಲಿ
ನಮ್ಮ ದೇಶದಲ್ಲಿ ಮಾರಾಟವಾಗುತ್ತಿರುವ ಪ್ರತಿಯೊಂದು ಆಹಾರ ಪೊಟ್ಟಣಗಳನ್ನು ತಪಾಸಣೆಗೆ ಒಳಪಡಿಸಿದರೆ ನೂರರಲ್ಲಿ ತೊಂಬತ್ತೈದರಷ್ಟು ಕಂಪನಿಗಳು ನಿಷೇದವಾಗುವುದು ಖಚಿತ..! ಈ ವಿಷಯದಲ್ಲಿ ಕೇಂದ್ರ ಸರ್ಕಾರ ಕ್ರಾಂತಿಕಾರಿ ನಿರ್ಣಯ ಕೈಗೊಳ್ಳುವುದು ಸೂಕ್ತ..!
ನಿಜ.
ನಿಜ.
ನಾವು ತಿನ್ನುವ ಎಲ್ಲಾ ಆಹಾರ
ನಾವು ತಿನ್ನುವ ಎಲ್ಲಾ ಆಹಾರ ಪದಾರ್ತಗಳಲ್ಲೂ ವಿಶ ಇದೆ. ಎಲ್ಲಾ ವಸ್ತುಗ್ಳನ್ನು ಪ್ರರೀಕ್ಸೆಗೆ ಒಡ್ಡಬೇಕು.